Testimony #707 - ನನ್ನ ಜೀವಿತದಲ್ಲಿ ಮಾಟ ಮಂತ್ರಗಳಿಂದ ಶೋಧನೆಯಲ್ಲಿ ಹಾದು ಹೋಗಬೇಕಾಯಿತು...
ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ 🙏🏻 ನನ್ನ ಹೆಸರು ರೂಪಾ ದೇವರಿಗೆ ಕೋಟಿ ಸ್ತೋತ್ರಗಳು 🙏🏻 . ದೇವರು ಈ ವಾರದಲ್ಲಿ ಮಾಡಿದ ಅದ್ಭುತಕ್ಕಾಗಿ ಸ್ತೋತ್ರ 🙏🏻 . ನನ್ನ ಜೀವಿತದಲ್ಲಿ ಮಾಟ ಮಂತ್ರಗಳಿಂದ ಶೋಧನೆಯಲ್ಲಿ ಹಾದು ಹೋಗಬೇಕಾಯಿತು, ತರಕಾರಿ ಬಿಸಿನೆಸ್ ತುಂಬಾ ನಷ್ಟ ಆಯಿತು, ನಾನು ತರಕಾರಿ ಅಂಗಡಿ ಮುಚ್ಚಬೇಕು ಅಂದುಕೊಂಡೆ , ಏನಾದರೂ ಕೆಲಸ ಮಾಡಿದರೆ ಆಯ್ತು ಅಂದುಕೊಂಡೆ, ಆದರೆ ಯಾವುದು ಸಕ್ಸಸ್ ಆಗ್ತಿರಲಿಲ್ಲ, ನನ್ನ ಗಂಡನ ಆರೋಗ್ಯದಲ್ಲಿ ತುಂಬಾ ಏರುಪೇರು ಆಯಿತು. ಹೇಳಿಕೊಳ್ಳುವುದಕ್ಕೂ ಆಗದಷ್ಟು ಅನಾರೋಗ್ಯದ ಸಮಸ್ಯೆಗಳು ಕಾಡುತ್ತಿದ್ದವು. ಅವರ ಮೈ ಮೇಲೆಲ್ಲಾ ಸುಟ್ಟ ಗಾಯದ ಹಾಗೆ ಗುಳ್ಳೆಗಳು ಎದ್ದಿದ್ದವು. ಅವರ ಕಿಡ್ನಿಯಲ್ಲಿ ಸ್ಟೋನ್ ಆಗಿದ್ದವು. 7-8 ತೊಂದರೆ ಇತ್ತು, ಅದು ಈಗ ಜಾಸ್ತಿ ಆಗಿತ್ತು. ಎಲ್ಲಿದ್ದಾನೆ ನಿನ್ನ ದೇವರು ? ಎಂದು ಪ್ರಶ್ನೆ ಮಾಡಿದರು, ಸಭೆಗೆ ಬರುವುದಿಲ್ಲ ಅಂದರು. ಇದಕ್ಕೆ ದೇವರೇ ಉತ್ತರ ಕೊಡುತ್ತಾನೆ ಎಂದೇ ಹೇಳಿದೆ. ದೇವರಾತ್ಮನು ಒಂದು ವಾಕ್ಯ ಕೊಟ್ಟು, " ನಿನ್ನನ್ನು ತಾಕುವವನು ಕಣ್ಣು ಗುಡ್ಡೆಯನ್ನು ತಾಕುವವನು" ಸೇವಕರ ಮೂಲಕ ಈ ವಾಕ್ಯದ ಮೂಲಕ ಬಲಪಡಿಸಿ ದ್ದ ಕ್ಕಾಗಿ ಸ್ತೋತ್ರ. "ಬೇಗನೆ ಅಲ್ಲ, ತಡ ಮಾಡುವುದಿಲ...