Posts

Testimony # 765 -- ನಿನ್ನೆ ಅವರದ್ದು ಬೋನ್ ಮ್ಯಾರೋ ಟೆಸ್ಟ್ ಇತ್ತು...

Image
  ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏 ನನ್ನ ಹೆಸರು: ಲಕ್ಷ್ಮಿe  ನಮ್ಮ ಊರು: ಮೈಸೂರು ನನಗೆ ಪರಿಚಯ ಇರುವ ಚಂದನ ಎನ್ನುವವರು ಮಾರ್ನಿಂಗ್ ಪ್ರೇಯರ್ ಗೆ ಕನೆಕ್ಟ್ ಆಗುತ್ತಿದ್ದರು. ನಿನ್ನೆ ಅವರದ್ದು ಬೋನ್ ಮ್ಯಾರೋ ಟೆಸ್ಟ್ ಇತ್ತು. ಆಗ ಅವರು ತುಂಬಾ ಯೋಚನೆ ಮಾಡುತ್ತಿದ್ದರು, ಭಯಪಡುತ್ತಿದ್ದರು. ಪಾಸ್ಟರ್ ಅವರಿಗೆ ಪ್ರೇಯರ್ ಮಾಡಿದರು.   ನಿನ್ನೆ ಟೆಸ್ಟ್ ಗೆ ಹೋಗಿದ್ದಾಗ, ನಿಮಗೆ ಯಾವ ಟೆಸ್ಟ್ ಬೇಡ, ಬರಿ ಇಂಜೆಕ್ಷನ್, ಟ್ಯಾಬ್ಲೆಟ್ ನಲ್ಲಿ ಕ್ಯೂರ್ ಆಗುತ್ತದೆ ಎಂದು ಹೇಳಿ, ಡಾಕ್ಟರ್ ಅವರನ್ನು ಮನೆಗೆ ಕಳುಹಿಸಿದರು.   ನಮ್ಮ ಹಾಸ್ಪಿಟಲ್ ಗೆ ಒಂದು ಮುಸ್ಲಿಂ ಹುಡುಗಿಯನ್ನು, ಮಗುವಿನಂತೆ ಕೈಯಲ್ಲಿ ಎತ್ತಿಕೊಂಡು ಬಂದರು. ಅವಳಿಗೆ ನಡೆಯಲು ಶಕ್ತಿ ಇಲ್ಲ, ತುಂಬಾ ಬಲಹೀನ ಆಗಿದ್ದಳು. ಅವಳಿಗೆ ಈಗ 21 ವರ್ಷ. ನಾನು ಪಾಸ್ಟರ್ ಮೆಸೇಜ್ ಹಾಕಿಕೊಂಡು ಕೇಳುತ್ತಿರುವಾಗ ದೇವರ ಪ್ರಸನ್ನತೆ ಆ ವಾರ್ಡ್ ನಲ್ಲಿ ಇಳಿದು ಬಂದು, ನಾನು ಆ ಮಗಳಿಗೆ ಇಂಜೆಕ್ಷನ್ ಕೊಡುವಾಗ ಪ್ರೇಯರ್ ಮಾಡಿ ಕೊಡುವಾಗ, ದೇವರು ಆ ಮಗಳಿಗೆ ಬಲ ಕೊಟ್ಟರು. ಅವರ ತಂದೆ ತಾಯಿ ನೀವು ಪ್ರೇಯರ್ ಮಾಡಿದ್ದಕ್ಕೆ, ನನ್ನ ಮಗಳು ಗುಣವಾಗಿದ್ದಾಳೆ. ಈಗ ಎದ್ದು ಓಡಾಡುತ್ತಿದ್ದಾಳೆ ಎಂದರು.   ದೇವರ ನಾಮಕ್ಕೆ ಸ್ತೋತ್ರ ಉಂಟಾಗಲಿ 🙏 ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ! Rev John Ebenezer - Youtube Rev John Ebenezer - Instagram ...

2026 ಜೂನ್ ತಿಂಗಳ ಪ್ರವಾದನೆಯ ವಾಗ್ದಾನ - MONTH ೦F ENLIGHTENMENT

Image
  2026 ಜೂನ್ ತಿಂಗಳ ಪ್ರವಾದನೆಯ ವಾಗ್ದಾನ ಜ್ಞಾನೋದಯದ ತಿಂಗಳು THE MONTH ೦F ENLIGHTENMENT  ಇದನ್ನು ಓದುತ್ತಿರುವ ಪ್ರೀತಿಯ ಸಹೋದರ ಸಹೋದರಿಯರೇ,   ನಾವು ಪ್ರತಿ ತಿಂಗಳ ಮೊದಲನೇ ದಿನ ದೇವರ ವಾಗ್ದಾನಕ್ಕೋಸ್ಕರ  ನಾವು ಆಸಕ್ತಿಯಿಂದ ಇದ್ದು,  ಪ್ರತಿಯೊಂದು ತಿಂಗಳು ದೇವರು  ಕೊಡುವ ವಾಕ್ಯದಂತೆ ಆ ತಿಂಗಳ ಒಂದೊಂದು ದಿನವೂ ನಮ್ಮನ್ನು ದೇವರ ವಾಕ್ಯದ ಆತ್ಮ ನಮ್ಮನ್ನು ನಡೆಸುತ್ತಾ ಇರುವುದಕ್ಕೆ ಸ್ತೋತ್ರ. ಈ ವರ್ಷ ಜನವರಿ 2026 ದೇವರು ಈ  ವರ್ಷಕ್ಕೆ ನಮಗೆ ಕೊಟ್ಟ ವಾಗ್ದಾನ "ಏದೆನ್ ಪುನಃ ಸ್ಥಾಪನೆ" ಆಗಿದೆ. ಎಲ್ಲೆಲ್ಲಿ ಈ ತೊರೆಯು ಹರಿಯುತ್ತದೋ ಅಲ್ಲಲ್ಲಿ  ಜೀವ ಉಂಟಾಗುತ್ತಾ ಇದೆ. ಅದರಂತೆಯೇ ಇದುವರೆಗೂ ಒಂದೊಂದು ದಿನವೂ ದೇವರು ನಮ್ಮ ಜೀವಿತದಲ್ಲಿ ಅವರ ಜೀವವನ್ನು  ಪ್ರಕಟಿಸುತ್ತಾ ಇದ್ದಾರೆ.  ಫೆಬ್ರವರಿ ತಿಂಗಳಲ್ಲಿ  ನಮ್ಮನ್ನು ವಾಕ್ಯದ ಮೂಲಕ ನಮ್ಮನ್ನು  ಪರಿಪೂರ್ಣ ಮಾಡಿ, "ಸ್ಥಿರಪಡಿಸಿ" , ಬಲಪಡಿಸಿ ನಮ್ಮನ್ನು ನೆಲೆಗೊಳಿಸಿದ್ದಾರೆ.   ಮಾರ್ಚ್ ತಿಂಗಳಲ್ಲಿ  ಕೃಪೆಯಿಂದಲೇ ನಾವು " ಬೆಳೆಯು ವಾಗ "   ಪರಲೋಕವೇ  ನಮ್ಮನ್ನು  ನೋಡಿ ಕೊಂಡಾಡುತ್ತಾ ಇ ರು ತ್ತ ದೆ.    ಏಪ್ರಿಲ್ ತಿಂಗಳಲ್ಲಿ " ಪುನರುತ್ಥಾನ"   ಎ ನ್ನುವುದು ಯೇಸು ವಿ ಗೆ  ನಡೆದ  ಒಂದು  ಕಾರ್ಯ ಅಲ್ಲ, ಅದು ನಮಗೆ ನಡೆದ ಕಾರ್ಯ....

Testimony # 764 -- ಆರು ತಿಂಗಳಿಗೆ ಬರುವ ಬಿಲ್.....

Image
 ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏. ನನ್ನ ಹೆಸರು: ಸರೋಜಿನಿ  ನಮ್ಮ ಊರು: ದಡೆರಕೊಪ್ಪ  ನನ್ನ ಸಾಕ್ಷಿ ಏನೆಂದರೆ ಸಿದ್ದವ್ವ ಹೊರಕೇರಿ ಅವರ ಮನೆ ಬಿಲ್ ಬಹಳ ದಿನದಿಂದ ಬಂದಿರಲಿಲ್ಲ, ಅವರು ಆಫೀಸಿಗೆ ಹೋಗಿ ಕೇಳಿದಾಗ ಆರು ತಿಂಗಳು ಆಗುತ್ತದೆ ಎಂದರು. ಅದಕ್ಕೆ ನಾನು ಪ್ರೇಯರ್ ಮಾಡಿದೆ. ಆರು ತಿಂಗಳಿಗೆ ಬರುವ ಬಿಲ್ ಮೂರು ತಿಂಗಳಿನಲ್ಲಿ ಬಂದಿದೆ.  ಬೆಂಗಳೂರಿಗೆ ಹೋಗಿ ಕ್ಯಾಂಪ್ ಮೀಟಿಂಗ್ ಮುಗಿಸಿಕೊಂಡು ಬಂದ ಮೇಲೆ ನನ್ನ ಜೀವಿತದಲ್ಲಿ ದೇವರು ದೊಡ್ಡ ಅದ್ಭುತಗಳನ್ನು ಮಾಡಿದ್ದಾರೆ. ನನಗೆ ಸಮಾಧಾನ, ಸಂತೋಷ, ಐಶ್ವರ್ಯವನ್ನು ಕೊಟ್ಟಿದ್ದಾರೆ. ನನ್ನ ಜೊತೆ ಮಾತನಾಡದವರೆಲ್ಲರೂ ನಮ್ಮ ಮನೆಗೆ ಬಂದು ನನ್ನ ಜೊತೆ ಮಾತನಾಡಿದ್ದಾರೆ. ವೈರಿಗಳ ಮುಂದೆ ನಾನು ತಲೆ ಎತ್ತುವಂತೆ ಮಾಡಿದ್ದಾರೆ. ನಾನು ಸಂತೆಯಲ್ಲಿ ಮೊಬೈಲ್ ಕಳೆದುಕೊಂಡಿದ್ದನ್ನು ಮತ್ತೆ ಸಿಗುವಂತೆ ದೇವರು ಸಹಾಯ ಮಾಡಿದ್ದಾರೆ.  ದೇವರ ನಾಮಕ್ಕೆ ಸ್ತೋತ್ರವಾಗಲಿ 🙏 ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ! Rev John Ebenezer - Youtube Rev John Ebenezer - Instagram Rev John Ebenezer - Facebook                SCAN FOR THE LOCATION  For Prayer Request WhatsApp: 9880516003 GOOGLE MEET LINK - TO JOIN MORNING PRAYER @6 AM from MO...

Testimony # 763 -- ರಿಸೈನ್ ಕ್ಯಾನ್ಸಲ್ ಮಾಡುವಾಗ.....

Image
  ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏    ನನ್ನ ಹೆಸರು: ಹರೀಶ್    ನಮ್ಮ ಊರು: ಮೈಸೂರು ಮೂರು ವರ್ಷದಿಂದ ನನಗೆ ಸ್ಯಾಲರಿ ಹೈಕ್ ಆಗಿರಲಿಲ್ಲ. ಅದಕ್ಕೆ ನಾನು ಕೆಲಸ ಬಿಡಬೇಕು ಎಂದುಕೊಂಡಾಗ, ಅಣ್ಣನ ಸ್ಥಾನದಲ್ಲಿ ಪಾಸ್ಟರ್ ಅವರು ನನಗೆ ಕೊಟ್ಟ ಕೌನ್ಸಿಲಿಂಗ್ ಪವಿತ್ರಾತ್ಮನೇ ಕೊಟ್ಟ ಹಾಗೆ ಇತ್ತು. ರಿಸೈನ್ ಕ್ಯಾನ್ಸಲ್ ಮಾಡುವಾಗ, ಪಾಸ್ಟರ್ ಪ್ರವಾದನೆಯಾಗಿ ಒಂದು ಮಾತು ಹೇಳಿದರು. "ಯಾರಿಗೆ ಸಂಬಳ ಹೈಕ್ಆಗುತ್ತದೆಯೋ ಗೊತ್ತಿಲ್ಲ, ನಿಮಗೆ ಮಾತ್ರ ಆಗಿಯೇ ಆಗುತ್ತದೆ" ಎಂದು ಹೇಳಿದರು.   ಅದೇ ಪ್ರಕಾರ ನನಗೆ ಸ್ಯಾಲರಿ ಹೈಕ್ ಆಗಿದೆ. ದೇವರ ವಾಕ್ಯ ನನ್ನ ಜೀವಿತದಲ್ಲಿ ಕಾರ್ಯನಿರ್ವಹಿಸಿದೆ. ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏 Thank you pastor❤️❤️❤️ ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ! Rev John Ebenezer - Youtube Rev John Ebenezer - Instagram Rev John Ebenezer - Facebook                SCAN FOR THE LOCATION  For Prayer Request WhatsApp: 9880516003 GOOGLE MEET LINK - TO JOIN MORNING PRAYER @6 AM from MONDAY TO FRIDAY Morning Prayer Link-1 -> Google Meet   Morning Prayer Link-2 -> Google Meet  

Testimony # 762 -- ಊಟ ಮಾಡುವುದಕ್ಕೆ ಬಾರದ ಹಾಗೆ......

Image
  ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏    ನನ್ನ ಹೆಸರು: ಲಕ್ಷ್ಮಿ  ನಮ್ಮ ಊರು : ಮೈಸೂರು  ನನಗೆ ಮಂಡಿ ನೋವು ಇತ್ತು. ದಿನಾಲು ಟ್ಯಾಬ್ಲೆಟ್ ತೆಗೆದುಕೊಂಡರೂ ನೋವು ಕಡಿಮೆಯಾಗುತ್ತಿರಲಿಲ್ಲ, ಆದರೆ ಕ್ಯಾಂಪ್  ಮೀಟಿಂಗ್ ಬಂದಾಗಿನಿಂದ ಈಗ ಯಾವುದೇ ನೋವು ಇಲ್ಲ. ನಾನು ಕ್ಯಾಂಪ ಮೀಟಿಂಗ್ ಸಲುವಾಗಿ ರೂಮ್ ಮಾಡಿದ್ದೆ. ರೂಮ್ ಬಾಡಿಗೆ ಕೊಡುವಾಗ, ಅಪ್ಪ ಈ ಹಣವನ್ನು  ಬಾಡಿಗೆ ಕೊಡುವ ಬದಲು ನಿನ್ನ ರಾಜ್ಯಕ್ಕಾಗಿ ಬಿತ್ತಬೇಕು ಎನ್ನುವಾಗ, ದೇವರ ನಾಮಕ್ಕೆ ಸ್ತೋತ್ರ ವಾಗಲಿ ಒಂದೇ ದಿನದ ಬಾಡಿಗೆ ಮಾತ್ರ ತೆಗೆದುಕೊಂಡರು.  ಇನ್ನೊಂದು ದಿನದ ಬಾಡಿಗೆಯನ್ನು ಬೀಜ ಬಿತ್ತುವಂತೆ ದೇವರು ಸಹಾಯ ಮಾಡಿದರು. ನನ್ನ ಪರಿಚಯ ಇರುವವರಿಗೆ ಊಟ ಮಾಡುವುದಕ್ಕೆ ಬಾರದ ಹಾಗೆ ತುಂಬಾ ಗಂಟಲು ನೋವು ಇತ್ತು. ನೀರು ಸಹ ಕುಡಿಯಲು ಬರುತ್ತಿರಲಿಲ್ಲ, ಅಷ್ಟೊಂದು ಗಂಟಲು ನೋವು ಇತ್ತು. ಆಗ ಪಾಸ್ಟರ್ ಹತ್ತಿರ ಪ್ರೇಯರ್ ಮಾಡಿಸಿತು. ಅವರು ಒಂದು ಗ್ಲಾಸ್ ನೀರು ತೆಗೆದುಕೊಳ್ಳಿ, ಇದು ಯೇಸುವಿನ ರಕ್ತ ಎಂದು ಹೇಳಿ ಪ್ರೇಯರ್ ಮಾಡಿದರು.  ಆದರೆ  ಈಗ ಅವರು ತುಂಬಾ ಚೆನ್ನಾಗಿ ಊಟ ಮಾಡುತ್ತಿದ್ದಾರೆ. ಎಲ್ಲಾ ತರಹದ ಆಹಾರವನ್ನು ತೆಗೆದುಕೊಳ್ಳುತ್ತಿದ್ದಾರೆ. ಕ್ಯಾಂಪ್ ಮೀಟಿಂಗ್ ನಲ್ಲಿ ನನಗೆ ಬಂದ ವಾಗ್ದಾನದ ಪ್ರಕಾರ ನನ್ನ ಜೀವಿತದಲ್ಲಿ ಎಲ್ಲವೂ ನೆರವೇರುತ್ತ ಇದೆ. ದೇವರನಾಮಕ್ಕೆ ಸ್ತೋತ್ರ ವಾಗಲಿ 🙏🙏🙏 ಫಾಲೋ ಮಾಡಿ, ಲೈಕ್ ಮಾಡಿ, ಕ...

Testimony # 761 -- ಮದುವೆ ಕ್ಯಾನ್ಸಲ್ ಮಾಡುವಾಗ....

Image
 ದೇವರ ನಾಮಕ್ಕೆ ಸ್ತೋತ್ರವಾಗಲಿ 🙏  ನನ್ನ ಹೆಸರು: ತ್ರಿಜಾ  ನಮ್ಮ ಊರು : ಬೀದರ್    ನನ್ನ ಮಗನ ಮದುವೆ ಮೇ 4 ಫಿಕ್ಸ್ ಆಗಿತ್ತು. ಮದುವೆ ಕಾರ್ಡ್ ಎಲ್ಲವು ತಯಾರಿಯಲ್ಲಿ ಇರುವಾಗ, ನನ್ನ ಮಗ ನನಗೆ ಮದುವೆ ಬೇಡ ಎಂದನು. ಅದಕ್ಕೆ ನಾನು ಅವನೇ ಬೇಡ ಎನ್ನುತ್ತಿರುವಾಗ, ನಾವು ಏನು ಮಾಡಲು ಸಾಧ್ಯವಿಲ್ಲ ಎಂದು ಮದುವೆ ಕ್ಯಾನ್ಸಲ್ ಮಾಡುವಾಗ, ನಮ್ಮ ನಾದಿನಿ ಈ  ಪ್ರೇಯರ್  ಗೆ ಕನೆಕ್ಟ್ ಮಾಡಿದರು. ಪಾಸ್ಟರ್ ಹತ್ತಿರ ಪ್ರೇಯರ್ ಮಾಡಿಸಿದೆ.  ಈ ಪ್ರೇಯರ್ ಗೆ   ಕನೆಕ್ಟ್ ಆದ ಮೂರು ದಿನಗಳಲ್ಲಿ ನನ್ನ ಮಗನ ಮನಸ್ಥಿತಿಯೇ ಬದಲಾಯಿತು.  ನಾನು ಮದುವೆ ಮಾಡಿಕೊಳ್ಳುತ್ತೇನೆ ಎಂದನು. ನನ್ನ ಸಣ್ಣ ಮಗನಿಗೂ ಕೂಡ ಮದುವೆಗೆ ರಜೆ ಕೊಡುತ್ತಿರಲಿಲ್ಲ, ಆಗ ಕೂಡ ಪಾಸ್ಟರ್ ಪ್ರೇಯರ್ ಮಾಡಿದರು. ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏 ಅವನು ಕೂಡ ಮೇ 3 ಕ್ಕೆ ಮದುವೆಗೆ ಬರುವಂತೆ  ದೇವರು ಸಹಾಯ ಮಾಡಿದರು.    ಮದುವೆಯಲ್ಲಿ ಕೂಡ ನಮಗೆ ಏನೇನು ಅಗತ್ಯ ಇದೆಯೋ ಅದನ್ನೆಲ್ಲ ದೇವರು ಒದಗಿಸಿ ಕೊಟ್ಟರು. ಮದುವೆ ತುಂಬಾ ಶಾಂತಿ, ಸಂತೋಷ,ಸಮಾಧಾನ  ಸಂಭ್ರಮದಿಂದ ನಡೆಯಿತು. ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🙏🙏 ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ! Rev John Ebenezer - Youtube Rev John Ebenezer - Instagram Rev John Ebenezer - Facebook  ...

Testimony # 760 -- ನನ್ನ ಮಗಳ ಬಂಗಾರ ಚೈನ್, ಉಂಗುರ ಕಳೆದಿತ್ತು. ......

Image
 ದೇವರ ನಾಮಕ್ಕೆ ಸ್ತೋತ್ರವಾಗಲಿ🙏 ನನ್ನ ಹೆಸರು: ಗಂಗು   ನಮ್ಮ ಊರು :ಬೆಳಗಾವಿ   ನಾನು ಫೆಬ್ರುವರಿ ತಿಂಗಳಿನಿಂದ ಈ ಪ್ರೇಯರ್ ಗೆ ಜಾಯಿನ್ ಆಗುತ್ತಿದ್ದೇನೆ. ಏಪ್ರಿಲ್ 14ರಲ್ಲಿ ನನ್ನ ಮಗಳ ಬಂಗಾರ ಚೈನ್, ಉಂಗುರ ಕಳೆದಿತ್ತು. ನಾನು ಕಷ್ಟಪಟ್ಟು ಮನೆ ಕೆಲಸ ಮಾಡಿ ತೆಗೆದುಕೊಂಡಿದ್ದ ಬಂಗಾರ ಅದು ಎಂದು ತುಂಬಾ ದುಃಖದಿಂದ ಅಳುತ್ತಿದ್ದೆ. ನಾನು ನಮ್ರತಾ  ಸಿಸ್ಟರ್ ಗೆ ಕಾಲ್ ಮಾಡಿ ಹೇಳಿದೆ. ಅವರು ಪ್ರೇಯರ್ ಮಾಡೋಣ ಸಿಗುತ್ತದೆ. ದೇವರು ನಿಮ್ಮನ್ನು ಸಾಕ್ಷಿಯಾಗಿ ನಿಲ್ಲಿಸುತ್ತಾರೆ ಎಂದರು.  ನಮ್ಮ ಮೈದುನನ ಹೆಂಡತಿ ಬೇರೆ ಕಡೆ ಹೋಗಿ ಕೇಳಿಸಿ ನೋಡೋಣ ಗೊತ್ತಾಗುತ್ತದೆ ಎಂದು ಹೇಳುವಾಗ, ನಮ್ರತಾ ಸಿಸ್ಟರ್  "ಯಾರ ಮಾತು ಕೇಳಬೇಡಿ. ದೇವರ ಚಿತ್ತ, ದೇವರ ಉದ್ದೇಶ ಏನು ಇದೆಯೋ ಅದೇ ನೆರವೇರುವುದು" ಎಂದು ಹೇಳುವಾಗ ನಾನು ನಂಬಿಕೆಯಿಂದ ಪ್ರೇಯರ್ ಮಾಡಲು ಶುರು ಮಾಡಿದೆ. ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏    ಇದೇ ತಿಂಗಳು 15ಕ್ಕೆ ಯಾವ ಜಾಗದಲ್ಲಿ ಕಳೆದಿದೆಯೋ ಅದೇ ಜಾಗದಲ್ಲಿ ಸಿಗುವಂತೆ ದೇವರು ಅದ್ಬುತವನ್ನು ಮಾಡಿದ್ದಾರೆ.  ನಮ್ಮ ಮನೆಯಲ್ಲಿ ನಾನು ಒಬ್ಬಳೇ ರಕ್ಷಣೆ ಹೊಂದಿದ್ದೇನೆ. ನಮ್ಮ ಕುಟುಂಬದವರೆಲ್ಲರೂ ರಕ್ಷಣೆಯ ಮಾರ್ಗದಲ್ಲಿ ಬರಬೇಕು ಎಂದು ದಿನಾಲು ಅವರೆಲ್ಲರಿಗೋಸ್ಕರ ಪ್ರೇಯರ್ ಮಾಡುತ್ತೇನೆ. Thank you pastor 🙏 ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್  ಮಾಡಿ...