Testimony # 758 -- ಮದುವೆ ಇನ್ನೂ ಎರಡು ದಿವಸ ಇದೆ ಎನ್ನುವಾಗ...
ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏 ನನ್ನ ಹೆಸರು: ಸರೋಜಿನಿ ನಮ್ಮ ಊರು: ದಡೆರಕೊಪ್ಪ. ನನ್ನ ಸಾಕ್ಷಿ ಏನೆಂದರೆ ನಮ್ಮ ಅಣ್ಣನ ಮಕ್ಕಳ ಮದುವೆ ಇತ್ತು. ಮದುವೆ ಇನ್ನೂ ಎರಡು ದಿವಸ ಇದೆ ಎನ್ನುವಾಗ ತುಂಬಾ ಮಳೆ ಬರುತ್ತಿತ್ತು. ಎಲ್ಲರೂ ಖುಷಿಯಿಂದ ಮದುವೆ ಮಾಡುತ್ತಿದ್ದಾರೆ. ಹೊಲಕ್ಕೆ ಕಾಳು ಹಾಕುವುದು, ಸುಗ್ಗಿ ಇದೆ ಮಳೆ ಆಗಬಾರದೆಂದು ಭರಮು ಬ್ರದರ್ ಕಡೆ ಪ್ರೇಯರ್ ಮಾಡಿಸಿದೆ. ಅದೇ ತರಹ ಮದುವೆ ಮುಗಿಸಿ ಎರಡು ದಿನದ ನಂತರ ಮಳೆ ಆಯಿತು . ದೇವರ ನಾಮಕ್ಕೆ ಮಹಿಮೆ ಉಂಟಾಗಲಿ 🙏 ನನಗೆ ಕಟ್ಟಿಸಿದ ಮನೆ ಬೇಕು ಎನ್ನುವಾಗ ದೇವರು ನನಗೆ ಮನೆ ಕೊಟ್ಟರು. ದೇವರ ನಾಮ ಕ್ಕೆ ಸ್ತೋತ್ರ ವಾಗಲಿ 🙏 ಪಗಾರ್ ಬರುತ್ತಿಲ್ಲ ಎಂದು ಪಾಸ್ಟರ್ ಹತ್ತಿರ ಪ್ರೇಯರ್ ಮಾಡಿಸಿದ್ದೆ. ಆದರೆ ಒಂದು ವರ್ಷದ ಹಣವೆಲ್ಲ ಜಮಾ ಆಗಿದೆ. ನಾನು ಇನ್ನೂ ದೀಕ್ಷಾಸ್ನಾನ ತೆಗೆದುಕೊಂಡಿಲ್ಲ, ಆದರೆ ನಾನು ದೇವರ ಮಗಳಾಗಿದ್ದೇನೆ. ನಮ್ಮವರು ನಮ್ಮನ್ನು ಕೈಬಿಟ್ಟರು, ನಮ್ಮ ಅಪ್ಪ ಎಂದಿಗೂ ನಮ್ಮನ್ನು ಕೈಬಿಡುವುದಿಲ್ಲ. ನಾನು ಈ ಲೋಕದವಳಲ್ಲ, ನಾನು ಪರಲೋಕಕ್ಕೆ ಸೇರಿದವಳಾಗಿದ್ದೇನೆ. ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏 Thank you pastor 🙏 ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ! Rev John Ebenezer - Youtube Rev John Ebenezer - Instagram Rev John Ebenezer - Fac...