Posts

Showing posts from March, 2026

Testimony # 751 -- ಕೆಲಸ ಇರುತ್ತಿರಲಿಲ್ಲ...

Image
  ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏 ನನ್ನ ಹೆಸರು ಭಾಗ್ಯ.  ನಮ್ಮ ಊರು ಮೈಸೂರು. ನನ್ನ ಗಂಡನಿಗೆ ಕೆಲಸ ಇಲ್ಲ ಎಂದು ಪಾಸ್ಟರ್ ಹತ್ತಿರ ಪ್ರೇಯರ್ ಮಾಡಿಸಿದೆ. ಅವರಿಗೆ ಒಂದು ವಾರ ಕೆಲಸ ಇದ್ದರೆ ಮತ್ತೊಂದು ವಾರ ಕೆಲಸ ಇರುತ್ತಿರಲಿಲ್ಲ, ಆದರೆ ಈಗ, 'ಒಂದು ಕೆಲಸ ಮುಗಿಯುತ್ತದೆ' ಅನ್ನುವಷ್ಟರಲ್ಲಿ ಮತ್ತೊಂದು ಕೆಲಸ ಬರುತ್ತಿದೆ.  ಫಾರಿನ್ಸ್ ಎಲ್ಲಾ, ನಮಗೆ ಇದೇ ತರಹ ಬೇಕು, ಹೀಗೆ ಮಾಡಬೇಕು, ನೀವೇ ಮಾಡಿಕೊಡಬೇಕೆಂದು ಸ್ಕೆಚ್ ಹಾಕುತ್ತಾರಂತೆ. ಸಾಲ ಮಾಡಿ ಮನೆ ಕಟ್ಟಿದ್ದೇವೆ. ಅದಕ್ಕೆ ಏನು ಮಾಡಬೇಕು ಎಂದು ಯೋಚಿಸುತ್ತಿರುವಾಗ, ದೇವರು ಸರಿಯಾದ ಸಮಯಕ್ಕೆ ಹಣ ಒದಗಿಸಿ ಕೊಡುತ್ತಿದ್ದಾರೆ. ನಮ್ಮ ಸಾಲಗಳು ತೀರುತ್ತಾ ಬರುತ್ತಿವೆ.. ನಮ್ಮ ಮನೆಯಲ್ಲಿ ನನಗೆ ನನ್ನ ಗಂಡನಿಗೆ  ಪದೇ ಪದೇ ಜಗಳ, ಮುನಿಸು ಕೋಪ, ಮಾತು-ಮಾತಿಗೆ ಜಗಳ ಆಗಿ, ಒಬ್ಬರ ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ, ಆದರೆ ನಿಮ್ಮ ವಾಕ್ಯ ಕೇಳುತ್ತಿರುವಾಗಿನಿಂದ ಈಗ ನಾವು ಸುಖವಾಗಿ, ಸಂತೋಷವಾಗಿ ನೆಮ್ಮದಿಯಿಂದ ಖುಷಿಖುಷಿಯಾಗಿ ಇರುತ್ತೇವೆ. ನನ್ನ ಮಗಳಿಗೆ ಸ್ಕೂಲ್ ನಿಂದ ಬರುವಾಗ, ತುಂಬಾ ಸುಸ್ತು ಎನ್ನುತ್ತಿದ್ದಳು. ಆಗ ಪಾಸ್ಟರ್ ಕಡೆ ಪ್ರೇಯರ್ ಮಾಡಿಸಿದೆ. ಈಗ ಅವಳಿಗೆ  ಯಾವುದೇ ಸುಸ್ತು ಇಲ್ಲ, ತುಂಬಾ ಲವಲವಿಕೆಯಿಂದ ಇರುತ್ತಾಳೆ.  ದೇವರ ನಾಮಕ್ಕೆ ಮಹಿಮೆ ಉಂಟಾಗಲಿ 🙏 Thank you pastor 🙏 ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್...

Testimony # 750 -- ನನಗೆ ಕಿಡ್ನಿ ಸ್ಟೋನ್ ಆಗಿತ್ತು...

Image
 ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏  ನನ್ನ ಹೆಸರು ಯೋಗರಾಜ್.   ನಮ್ಮ ಊರು ಸವದತ್ತಿ.  ನಮ್ಮ ತಂದೆಯವರು ನಮ್ಮ ಜಾಗದ ಮೇಲೆ ಲೋನ್ ತೆಗೆದುಕೊಂಡಿದ್ದರು. ನನಗೆ ಗೊತ್ತಿಲ್ಲದೆ ಅದನ್ನು ಸೇಲ್ ಗೆ ಇಟ್ಟಿದ್ದರು. 5 ಲಕ್ಷ ಲೋನ್ ತೆಗೆದಿದ್ದರಿಂದ ಎರಡು ವರ್ಷದಿಂದ ಅದನ್ನು ತುಂಬಿರಲಿಲ್ಲ, ಅದರ  ಇಂಟರೆಸ್ಟ್ ಡಬಲ್ ಆಗಿತ್ತು..  ನಾನು ಬೆಂಗಳೂರಿಂದ ಸವದತ್ತಿಗೆ ಬಂದೆ. ಆಗ ನಮ್ಮ ತಂದೆಯವರು ಜಾಗ ಸೇಲ್ ಮಾಡುವುದು ಎಂದು ಹೇಳಿದಾಗ, ನಾನು ಕಸ್ಟಮರ್ ಗೆಲ್ಲ ಹೇಳಿದೆ ಆದರೂ ಅದು ಸೇಲ್ ಆಗಲಿಲ್ಲ, ಏಕೆಂದರೆ ದೇವರು ಉದ್ದೇಶ ಬೇರೆ ಇದೆ. ಅದಕ್ಕೆ ಎರಡು ವರ್ಷದಿಂದ ಇಂಟರೆಸ್ಟ್ ತುಂಬದೇ ಇರುವುದನ್ನು ಕ್ಲಿಯರ್ ಮಾಡುವಂತೆ, ಜಾಗ ಸೇಲ್ ಮಾಡದಂತೆ ದೇವರು ಸಹಾಯ ಮಾಡಿದರು. ನನಗೆ ಕಿಡ್ನಿ ಸ್ಟೋನ್ ಆಗಿತ್ತು.  ಹಾಸ್ಪಿಟಲ್ ಗೆ ತೋರಿಸಿದರು ಕಡಿಮೆಯಾಗಿರಲಿಲ್ಲ, ನಮ್ಮ ಅಂಗಡಿಗೆ ಬಂದ ಕಸ್ಟಮರ್ ನ ಕೇಳಿದೆ. ಕಿಡ್ನಿ ಸ್ಟೋನ್ ಆದರೆ ಏನು ಮಾಡಬೇಕು ಎಂದು. ಅವರು ನನಗೂ ಕಿಡ್ನಿ ಸ್ಟೋನ್ ಆಗಿತ್ತು 1 ಲಕ್ಷ ಖರ್ಚು ಮಾಡಿ ಆಪರೇಷನ್ ಮಾಡಿಸಿಕೊಂಡೆ ಎಂದಾಗ, ನನಗೆ ತುಂಬಾ ಭಯ ಉಂಟಾಯಿತು. ಇವತ್ತು ಮಾರ್ನಿಂಗ್ ಪ್ರೇಯರ್ ದಲ್ಲಿ ದೇವರ ವಾಕ್ಯ ಕೇಳುವಾಗ, ಕಿಡ್ನಿ ಸ್ಟೋನ್ ಹೊರಗೆ ಬಂತು. ದೇವರು ನನಗೆ ಸಂಪೂರ್ಣವಾಗಿ ಬಿಡುಗಡೆ ಕೊಟ್ಟರು.   ದೇವರ ನಾಮಕ್ಕೆ ಸ್ತೋತ್ರ ವಾಗಲಿ.  ಸಲೂನ್ ಓಪನ್ ಮಾಡಿ 9 ತಿಂಗಳು ಆಯಿತು. ಬಾಡಿಗೆ ಕಟ...

Testimony # 749 -- ಅಮ್ಮ ನನಗೆ ಎಲ್ಲ ನೋವು ಹೋಗಿದೆ...

Image
  ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ.    🙏🏻🙏🏻🙏🏻   ನನ್ನ ಹೆಸರು   ಭಾಗ್ಯ . ನಮ್ಮ ಊರು  ಮೈಸೂರು.. ನನ್ನ ಮಗಳ ಹೆಸರು ಹರಿಣಿ. ಅವಳಿಗೆ ಮೋಷನ್ ಮಾಡುವ ಜಾಗದಲ್ಲಿ ಮಾಂಸ ಬೆಳೆದು ತುಂಬಾ ನೋವು ಇತ್ತು. ಆಗ ಪಾಸ್ಟರ್ ಗೆ ವಾಯ್ಸ್ ಮೆಸೇಜ್ ಹಾಕಿದೆ. ಅವರು ಪ್ರೇಯರ್ ಮಾಡಿ ರೆಕಾರ್ಡ್ ಕಳಿಸಿದರು. ನನ್ನ ಮಗಳು ಅದನ್ನು ಎರಡು ಮೂರು ಸಲ ಕೇಳಿ ಅಲ್ಲೇ ನೋವು ಎಂದು ಮಲಗಿದ್ದಳು.  ದೇವರ ನಾಮಕ್ಕೆ ಸ್ತೋತ್ರ ವಾಗಲಿ ಮಲಗಿ ಎದ್ದೇಳುವ ತಕ್ಷಣ ಅವಳು, "ಅಮ್ಮ ನನಗೆ ಎಲ್ಲ ನೋವು ಹೋಗಿದೆ. ನಾನು ನಾರ್ಮಲ್ ಆಗಿದ್ದೇನೆ. ನಾನು ಚೆನ್ನಾಗಿದ್ದೇನೆ. ದೇವರು ನನ್ನನ್ನು ಗುಣಪಡಿಸಿದ್ದಾರೆ"   ಎಂದಳು.   ಮುಂಚೆ ಎದ್ದು ನಡೆದಾಡಲು ಬರುತ್ತಿರಲಿಲ್ಲ, ಮಲಗಲು ಬರುತ್ತಿರಲಿಲ್ಲ, ಆದರೆ ನಿಮ್ಮ ಪ್ರೇಯರ್ ಕೇಳುತ್ತಾ ಮಲಗಿ ಎದ್ದ ತಕ್ಷಣವೇ ನನ್ನ ಮಗಳಿಗೆ ದೇವರು ಬಿಡುಗಡೆ ಕೊಟ್ಟಿದ್ದಾರೆ.  ಪಾಸ್ಟರ್ ನಾವು ಕಾಲ್ ಮಾಡಿದಾಗಲೆಲ್ಲ ನೀವು ಪ್ರೇಯರ್ ಮಾಡಿದ್ದೀರಿ ಅದರಿಂದ ನಮಗೆ ಬಿಡುಗಡೆಯಾಗಿದೆ. ದೇವರು ನಮ್ಮ ಕುಟುಂಬವನ್ನು ಎಲ್ಲಾ ವಿಷಯದಲ್ಲೂ ಅಭಿವೃದ್ಧಿಪಡಿಸುತ್ತಿದ್ದಾರೆ.   ದೇವರ ನಾಮಕ್ಕೆ ಮಹಿಮೆ ಉಂಟಾಗಲಿ🙏🏼 Thank you pastor🙏🏼 ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್  ಮಾಡಿ ! Rev John Ebenezer - Youtube Rev John Ebenezer - Instagra...

Testimony # 748 -- ನಾನು 3000 ರೂಪಾಯಿ ಹಣ ಕಳೆದುಕೊಂಡಿದ್ದೆ...

Image
  ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻. ನನ್ನ ಹೆಸರು    ರೇಖಾ ..  ನಮ್ಮ ಊರು  ಸವದತ್ತಿ..   ಕಳೆದ ವಾರ ನಾನು 3000 ರೂಪಾಯಿ ಹಣ ಕಳೆದುಕೊಂಡಿದ್ದೆ. ಅದನ್ನು ಡಬ್ಬಿಯಲ್ಲಿ ಹಾಕಿ  ಲಾಕರ್ ನಲ್ಲಿ ಇಟ್ಟಿದ್ದೆ. ಆದರೆ ಅದನ್ನು ಮತ್ತೆ ನೋಡುವಾಗ, ಆ ಲಾಕರ್ ನಲ್ಲಿ ಹಣ ಇರಲಿಲ್ಲ, ಈ ಹಣವನ್ನು ಜಮಖಂಡಿಯಲ್ಲಿ ನಡೆಯುವ ಕೂಟಕ್ಕೆ ಸಭಾ ಪಾಲಕರು ಕೊಟ್ಟಿದ್ದರು.  ಅದಕ್ಕೆ,- "ಅಪ್ಪ  ಇದು ನನಗೆ ಕೊಟ್ಟ ಜವಾಬ್ದಾರಿ, ಈ ಹಣವು ನಿನ್ನದು ಕಳೆದು ಹೋದ ಹಣವು ಮತ್ತೆ ಸಿಗುವಂತೆ ನೀನು ಮಾಡುತ್ತೀಯಾ ಅಪ್ಪ" ಎಂದು ಡಿಕ್ಲೇರ್ ಮಾಡಿ, ಒಬ್ಬರ ಮನೆಗೆ  ಪ್ರೇಯರ್ ಗೆ ಹೋಗಿದ್ದೆ.. ಆದರೆ ನನಗೆ ಯಾವುದು ಗಲಿಬಿಲಿ ಆಗಲಿಲ್ಲ, ನಾನು ಖುಷಿಯಿಂದ ಪ್ರೇಯರ್ ಮುಗಿಸಿಕೊಂಡು ಮನೆಗೆ ಬರುವ ಸಂದರ್ಭದಲ್ಲಿ, ಅಲ್ಲಿ ನನಗೆ ಮತ್ತೆ ಹಣ ಕೊಟ್ಟರು. ಆ ಹಣವನ್ನು  ಲಾಕರ್ ನಲ್ಲಿ ಇಡಲು ಹೋದಾಗ ಅಲ್ಲಿ ಕಳೆದು ಹೋದ ಹಣ ಇತ್ತು. ಮೊದಲು ಅಲ್ಲೇ ಹುಡುಕಿದಾಗ ಅದು ಸಿಕ್ಕಿರಲಿಲ್ಲ, ಆದರೆ ಈಗ ಹಣ ಸಿಗುವಂತೆ ದೇವರು ಅದ್ಭುತವನ್ನು ಮಾಡಿದ್ದಾರೆ. ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏼  ಪಾಸ್ಟರ್ ನನ್ನ ಮಗನ ಎಕ್ಸಾಮ್ ಸಲುವಾಗಿ ನೀವು ಪ್ರೇಯರ್ ಮಾಡಿದ್ದೀರಿ. ಅದೇ ತರ ನನ್ನ ಮಗ ಸೈನಿಕ್ ಎಕ್ಸಾಮ್ ಅನ್ನು ತುಂಬಾ ಅದ್ಭುತವಾಗಿ ಬರೆಯುವಂತೆ ದೇವರು ಮಾಡಿದ್ದಾರೆ. ಅವರ ತಂದೆಯ ಆಸೆಯಂತೆ ನನ್ನ ಮಗನ ಫೋಟೋ ಬ್ಯಾನರ...

Testimony # 747 -- ಪಾಸ್ಟರ್ ನಿಮ್ಮ ಹತ್ತಿರ ಬೆನ್ನು ನೋವು ಎಂದು ಪ್ರೇಯರ್ ಮಾಡಿಸಿಕೊಂಡ ನಂತರ...

Image
  ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ.    🙏🏻🙏🏻🙏🏻   ನನ್ನ ಹೆಸರು   ಭಾಗ್ಯ . ನಮ್ಮ ಊರು  ಮೈಸೂರು.  ನನಗೆ  ಸ್ಟ್ರೈಟ್ ಆಗಿ ಕುಳಿತುಕೊಳ್ಳಲು ಬರುತ್ತಿರಲಿಲ್ಲ,  ಪಾಸ್ಟರ್ ನಿಮ್ಮ ಹತ್ತಿರ ಬೆನ್ನು ನೋವು ಎಂದು ಪ್ರೇಯರ್ ಮಾಡಿಸಿಕೊಂಡ ನಂತರ, ಈಗ ಸ್ಟ್ರೈಟಾಗಿ ನಾನು ಕುಳಿತುಕೊಳ್ಳುತ್ತಿದ್ದೇನೆ. ನನ್ನ ಗಂಡನಿಗೆ ಕೆಲಸ ಇಲ್ಲ, ಹಣ ಕೊಡಬೇಕಾದವರು ಕೊಡುತ್ತಿಲ್ಲ, ಎಲ್ಲ ಮೋಸ ಮಾಡುತ್ತಿದ್ದಾರೆ ಎಂದು ನಿಮ್ಮ ಹತ್ತಿರ ಪ್ರೇಯರ್ ಮಾಡಿಸಿಕೊಂಡ ನಂತರ ಈಗ ನನ್ನ ಗಂಡನಿಗೆ 20 ದಿನಗಳ ಕೆಲಸದ ಹಣ  ಕೊಡುವುದಿಲ್ಲ ಎಂದವರು ಹಣ ಕೊಟ್ಟರು.  ನನ್ನ ಗಂಡನಿಗೆ ಕೆಲಸ ಇರುತ್ತಿರಲಿಲ್ಲ, ಎರಡು ದಿನ ಕೆಲಸ ಮಾಡಿ ಮನೆಯಲ್ಲಿ ಇರುವವರು, ಆದರೆ ಈಗ ಒಂದು ದಿನವೂ ಕೆಲಸಕ್ಕೆ ಹೋಗದೆ ಇರುವುದಿಲ್ಲ. ಈಗ ಕೆಲಸದವರೇ ಬಂದು ಕೆಲಸಕ್ಕೆ ಬನ್ನಿ ಎಂದು ಕರೆಯುತ್ತಾರೆ.  ದೇವ ರ  ನಾಮಕ್ಕೆ ಮಹಿಮೆ ಉಂಟಾಗಲಿ 🙏🏼  ನಾನು ಮೂರು ತಿಂಗಳುಗಳಿಂದ ಮಾರ್ನಿಂಗ್ ಪ್ಲೇಯರ್ ಗೆ  ಜಾಯಿನ್ ಆಗುತ್ತಾ ಇದ್ದೇನೆ. ಈಗ ನಾನು ಆತ್ಮದಲ್ಲಿ ಬಲಹೊಂದಿದ್ದೇನೆ. ನನ್ನಲ್ಲಿ ಏನೋ ಒಂದು ಬಲ ಧೈರ್ಯ ಉಂಟಾಗಿದೆ. ನನ್ನ ನಡವಳಿಕೆ ಸಂಪೂರ್ಣವಾಗಿ ಬದಲಾವಣೆಯಾಗಿದೆ.  ಆದರೂ ಇನ್ನೂ ನಾನು ಬಲ ಹೊಂದಬೇಕು, ಸತ್ಯವಾದ ದೇವರ ವಾಕ್ಯವನ್ನು ಮತ್ತೊಬ್ಬರಿಗೆ ಹೇಳಬೇಕು,  ಈ ಸತ್ಯದಿಂದ ಕಷ್ಟದಲ್ಲಿರು...

Testimony # 746 -- ಪಾಸ್ಟರ್ ನಿಮ್ಮ ಪರಿಚಯ ಅದಾಗಿನಿಂದ...

Image
  ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ.    🙏🏻🙏🏻🙏🏻   ನನ್ನ ಹೆಸರು   ಉಮಾಶಂಕರ . ನಮ್ಮ ಊರು ಧಾರವಾಡ    ನಾನು ದೇವರ ವಾಕ್ಯವನ್ನು ತಿಳಿದುಕೊಂಡು ಅನೇಕರಿಗೆ ಸುವಾರ್ತೆ ಹೇಳುತ್ತಿದ್ದೆ. ನಾನು ಸೇವೆಯಲ್ಲಿ ಅನೇಕರಿಗೆ ಪ್ರಾರ್ಥನೆ ಮಾಡುವಾಗ ಎಲ್ಲರಿಗೂ ಬಿಡುಗಡೆಯಾಗುತ್ತಿತ್ತು. ಆದರೆ ನನ್ನ ಜೀವಿತದಲ್ಲಿ ನೋಡುವಾಗ ಏನು ಆಗುತ್ತಾ ಇರಲಿಲ್ಲ. ದೇವರು ವಾಗ್ದಾನ ಮಾಡುವಾಗ ತಕ್ಕಮಟ್ಟಿಗೆ ಸಮಾಧಾನ ಆಗುತ್ತಿತ್ತು, ಆದರೆ ಏನು ಅನುಭವಿಸುತ್ತಿರಲಿಲ್ಲ. ನನಗೆ ಕೆಟ್ಟ ಆಲೋಚನೆಗಳು ಬರುತ್ತಿದ್ದವು. ನನ್ನ ಕೆಟ್ಟ ಆಲೋಚನೆಗಳಿಂದ ಈ ಜೀವಿತ ಬೇಡ ಅನ್ನುವಷ್ಟರ ಮಟ್ಟಿಗೆ ಆಗುತ್ತಿತ್ತು. ಆದರೆ ದೇವರ ಮೇಲೆ ಬಲವಾಗಿ ನಂಬಿಕೆ ಇತ್ತು.     ಪಾಸ್ಟರ್ ನಿಮ್ಮ ಪರಿಚಯ ಅದಾಗಿನಿಂದ ಈ ಪ್ರೇಯರ್ ಗೆ ಕನೆಕ್ಟ್ ಆದಾಗಿನಿಂದ ಇಲ್ಲಿ ಕೇಳುವ ಅನೇಕ ಸಾಕ್ಷಿಗಳ ಮೂಲಕ, ನಿಮ್ಮ ವಾಕ್ಯಗಳನ್ನು ಕೇಳುವುದರ ಮೂಲಕ ನನ್ನ ಕೆಟ್ಟ ಆಲೋಚನೆಗಳು ಬದಲಾಗಿವೆ. ಈಗ ನನ್ನ ಯೋಚನೆ ಏನಾಗಿದೆ ಅಂದರೆ, ದೇವರು ಎಲ್ಲವನ್ನು  ನೋಡಿಕೊಳ್ಳುತ್ತಾರೆ. ಇದು ನನಗೆ ಸಂಬಂಧವಿಲ್ಲ, ಎಂದು ಹೇಳುವಾಗ ನಾನು ಅದರಿಂದ ಶಿಫ್ಟ್ ಆಗುತ್ತಿದ್ದೇನೆ. ಈಗ ಕೆಟ್ಟ ಆಲೋಚನೆ ಬಂದರೂ ಅದನ್ನು ಯೇಸುವಿನ ನಾಮದಲ್ಲಿ, ದೇವರ ವಾಕ್ಯವನ್ನು ಹೇಳಿ ಅದನ್ನು ಮುರಿದು ಹಾಕುತ್ತೇನೆ ಎಂದು ಅದನ್ನು ಗದರಿಸುತ್ತೇನೆ.   ಈಗ ನಾನು 100% ಗುಣವಾಗಿದ್ದೇನೆ...

Testimony # 745 -- ಮಾಟ ಮಂತ್ರ ಪೂಜೆ ಮಾಡುವವರ ಹತ್ತಿರ ಹೋದರೂ...

Image
  ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ.    🙏🏻🙏🏻🙏🏻  ನನ್ನ ಹೆಸರು   ರೇಖಾ  .. ನಮ್ಮ ಊರು   ಸವದತ್ತಿ..   ನಮ್ಮ ಸಭೆ ಚಿಕ್ಕದು, ಆದರೆ ಅಲ್ಲಿ ಬರುವ ವಿಶ್ವಾಸಿಗಳು ಬಹಳ. ನಮ್ಮ ಸಭೆಗೆ ಬರುವ ಭರಮು ಬ್ರದರ್,  ಪಾಸ್ಟರ್ ನಮ್ಮ ಸಭೆಯ ವಿಶ್ವಾಸಿಗಳನ್ನು ತುಂಬಾ ಪ್ರೋತ್ಸಾಹಿಸುತ್ತಾರೆ. ಅವರ ಸ್ವಂತ ಹಣದಿಂದ ಖರ್ಚು ಮಾಡಿ ಸಭೆ ಬೆಳೆಯಬೇಕು, ಅಲ್ಲಿರುವ ಎಲ್ಲರೂ ಬೆಳೆಯಬೇಕು ಎಂದು ಸಭೆಗೆ ಬೇಕಾಗಿರುವ ಎಲ್ಲವನ್ನು  ತರುತ್ತಾರೆ. ದೇವರ ಉದ್ದೇಶದ ಪ್ರಕಾರ ಅಲ್ಲಿ ಬರುವ ಪ್ರತಿಯೊಬ್ಬರಿಗೂ ಪ್ರೇಯರ್ ಮಾಡುತ್ತಾರೆ. ಮಹಾದೇವಿ ಎನ್ನುವರು ಎರಡು ತಿಂಗಳುಗಳಿಂದ ದುರಾತ್ಮ ಪೀಡಿತರಾಗಿದ್ದರು.. ಅವರು ಈ ಲೋಕದ ರೀತಿಯಲ್ಲಿ ನೋಡುವಾಗ ಎಷ್ಟೆಷ್ಟೋ ದೇವರಿಗೆ ಹೋದರೂ, ಮಾಟ ಮಂತ್ರ ಪೂಜೆ ಮಾಡುವವರ ಹತ್ತಿರ ಹೋದರೂ ಅವರಿಗೆ ವಾಸಿಯಾಗಲಿಲ್ಲ.  ಅವರಲ್ಲಿರುವ ನಂಬಿಕೆ, ಪಾಸ್ಟರ್ ಮತ್ತು ಭರಮು ಬ್ರದರ್  ಇವರೆಲ್ಲರೂ ಮಾಡಿರುವ ಪ್ರಾರ್ಥನೆಯಿಂದ  ಈಗ ಅವರು ಸಂಪೂರ್ಣವಾಗಿ ದುರಾತ್ಮನಿಂದ ಬಿಡುಗಡೆಯಾಗಿದ್ದಾರೆ . ದೇವರ ನಾಮಕ್ಕೆ ಮಹಿಮೆ ಉಂಟಾಗಲಿ 🙏🏼   ನನ್ನ ಮಗನಿಗೋಸ್ಕರ ಪಾಸ್ಟರ್ ಪ್ರೇಯರ್ ಮಾಡಿದ್ದರು. ಅವನು ಕೂಡ ಪರೀಕ್ಷೆಯಲ್ಲಿ ಔಟ್ ಆಫ್ ಔಟ್  ತೆಗೆದುಕೊಳ್ಳುವಂತೆ ದೇವರು ಸಹಾಯ ಮಾಡಿದ್ದಾರೆ. ಮೊದಲು ನಾನು ಪ್ರಾರ್ಥನೆ ಅಂದರೆ ಶರೀರ ಪ್ರಕಾರ ನನಗೆ ಬೇಕಾಗಿರು...

Testimony # 744 -- ಈಗ ದೇವರಲ್ಲಿ ಬೆಳೆಯುತ್ತಿರುವುದೇ ನನ್ನ ದೊಡ್ಡ ಸಾಕ್ಷಿಯಾಗಿದೆ...

Image
  ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻. ನನ್ನ ಹೆಸರು  ಸಂಗೀತಾ .. ನಮ್ಮ ಊರು  ಬೀದರ್     .   ನಾನು ಈ ಪ್ರೇಯರ್ ಗೆ ಜಾಯಿನ್ ಆಗಿ ಈಗ ದೇವರಲ್ಲಿ ಬೆಳೆಯುತ್ತಿರುವುದೇ ನನ್ನ ದೊಡ್ಡ ಸಾಕ್ಷಿಯಾಗಿದೆ. ದೇವರ ಕೃಪೆಯಿಂದ ಪಾಸ್ಟರ್ ನನಗೆ ಸಿಕ್ಕಿದ್ದಾ ರೆ  .   ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏼..  ಪಾಸ್ಟರ್ ಬೀದರ್ ಗೆ ಬಂದು ಒಂದು ತಿಂಗಳಾಯಿತು. ಅಲ್ಲಿ ಒಬ್ಬರು  ತಮ್ಮ ಮಗನ ಫೋಟೋ ತೋರಿಸಿ  ಇವನು ಮದುವೆಗೆ ಒಪ್ಪುತ್ತಿಲ್ಲ, ಎಂದು ಹೇಳಿದಾಗ ಪಾಸ್ಟರ್ ಅವನಿಗೆ ಪ್ರೇಯರ್ ಮಾಡಿದರು. ಅವನು ಈಗ ಮದುವೆಗೆ ಒಪ್ಪಿಕೊಂಡಿದ್ದಾನೆ. ಅವನಿಗೆ ತುಂಬಾ ತಲೆನೋವು, ನಿದ್ರೆ ಕೂಡ ಬರುತ್ತಿರಲಿಲ್ಲ. ಆದರೆ ಈಗ ಮಾರ್ನಿಂಗ್ ಪ್ರೇಯರ್ ದಲ್ಲಿ ಪಾಸ್ಟರ್ ಹೇಳುವ ವಾಕ್ಯದ ಮುಖಾಂತರ ಅವನಿಗೆ ಬಿಡುಗಡೆ ಆಯಿತು.   ದೇವರ ನಾಮಕ್ಕೆ ಮಹಿಮೆ ಉಂಟಾಗಲಿ 🙏🏼.. ಊರಲ್ಲಿ ನಮ್ಮ ದೊಡ್ಡಪ್ಪನ ಮಗನಿಗೆ ಹುಷಾ ರಲಿಲ್ಲ, ಆಗ ಪಾಸ್ಟರ್ ಪ್ರೇಯರ್ ಮಾಡಿದರು ಮತ್ತು ಭರಮು ಬ್ರದರ್ ಕೂಡ ದೇವರ ವಾಕ್ಯ ಹೇಳಿ ಸಂತೈಸಿದರು. ಈಗ ಅವರು ಗುಣವಾಗಿದ್ದಾರೆ. ನನ್ನ ಕುಟುಂಬದವರು ದೇವರಲ್ಲಿ ಬರಬೇಕು, ಮತ್ತು ದೇವರ ಪ್ರೀತಿಯಲ್ಲಿ, ಅನ್ಯೋನ್ಯತೆಯಲ್ಲಿ ಇರಬೇಕು ಎಂಬುವುದು ನನ್ನ ಆಸೆಯಾಗಿತ್ತು. ಮತ್ತು ಅದು ದೇವರ ಉದ್ದೇಶವಾಗಿತ್ತು. ದೇವರ ಉದ್ದೇಶದಂತೆ ಅವರು ಈಗ ದೇವರ ವಾಕ್ಯ ಕೇಳುತ್ತಿದ್ದಾರೆ. ಮಾರ್ನಿಂಗ್ ...

Testimony # 741 -- ಮೂರು ನರಗಳು ಬ್ಲಾಕ್ ಆಗಿವೆ. ಸ್ಟಂಟ್ ಹಾಕಿಸಲೇಬೇಕು ಎಂದು...

Image
  ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻. ನನ್ನ ಹೆಸರು    ಭರಮು ..  ನಮ್ಮ ಊರು  ಸವದತ್ತಿ..  ನನ್ನ ಸಾಕ್ಷಿ ಏನು ಅಂದರೆ 15 ದಿನಗಳ ಹಿಂದೆ ನಮ್ಮ ತಂದೆಯವರಿಗೆ ಮೈನರ್ ಹಾರ್ಟ್ ಅಟ್ಯಾಕ್ ಆಗಿತ್ತು.  ಆಗ ನಾವು ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಮಾಡಿದ್ದೀವಿ.  " ಮೂರು ನರಗಳು ಬ್ಲಾಕ್ ಆಗಿವೆ , ಸ್ಟಂಟ್ ಹಾಕಿಸಲೇಬೇಕು" ಎಂದು  ಡಾಕ್ಟರ್ ಹೇಳಿದರು..   ಆಗ ಏನು ಮಾಡಬೇಕು? ಎಂದು ಚಿಂತೆಯಲ್ಲಿ ಇರುವಾಗ, ಪಾಸ್ಟರ್ ಗೆ ಫೋನ್  ಮಾಡಿ ಹೇಳಿದೆ, ಅವರು ನನ್ನನ್ನು ಬಲಪಡಿಸಿ, ಪ್ರಾರ್ಥಿಸಿ, "ನಿಮ್ಮ ತಂದೆಯವರಿಗೆ ಚಾಕು ಹಾಕುವುದಿಲ್ಲ, ಏನು ಆಗುವುದಿಲ್ಲ, ಅವರು ಆರಾಮಾಗಿ ಡಿಸ್ಚಾರ್ಜ್ ಆಗುತ್ತಾರೆ" ಎಂದು ಹೇಳಿದರು.    ಮೂರು ರೀತಿಯಾಗಿ ರಕ್ತವನ್ನು ಪರೀಕ್ಷಿಸಿದ್ದರು. ನಿನ್ನೆ  ಎಲ್ಲಾ ಬ್ಲಡ್ ರಿಪೋರ್ಟ್ ನಾರ್ಮಲ್ ಆಗಿ ಬಂದಿದೆ. "ಯಾವುದೇ ಸ್ಟಂಟ್ ಹಾಕುವ ಅವಶ್ಯಕತೆ ಇಲ್ಲ. ಬರೀ ಟ್ಯಾಬ್ಲೆಟ್ ಮೇಲೆ ಗುಣವಾಗುತ್ತದೆ." ಎಂದು ಹೇಳಿದರು.  ದೇವ ಮನುಷ್ಯರ ಬಾಯಿಂದ ಬರುವ ಪ್ರತಿಯೊಂದು ಮಾತು ಆತ್ಮವೂ, ಜೀವವೂ ಆಗಿರುವದರಿಂದ ಇಲ್ಲದೇ ಇರುವುದನ್ನು ಇರುವ ಹಾಗೆ ಮಾಡುವುದಕ್ಕೆ ದೇವರು ಶಕ್ತರಾಗಿದ್ದಾರೆ. ಎಂದು ಈ ಸಾಕ್ಷಿಯ ಮುಖಾಂತರ ತಿಳಿಯಿತು. ದೇವರ ನಾಮಕ್ಕೆ ಮಹಿಮೆ ಉಂಟಾಗಲಿ.🙏🏼  ನಾನು ಕೆಲಸ ಮಾಡುವ ಶುಗರ್ ಫ್ಯಾಕ್ಟರಿಯಲ್ಲಿ ಎಲ್ಲ...

Testimony # 743 -- ಈ ವರ್ಷದ ದೇವರ ವಾಗ್ದಾನ ಮಾಡಿದ ಪ್ರಕಾರ...

Image
  ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ.    🙏🏻🙏🏻🙏🏻   ನನ್ನ ಹೆಸರು  ಮಹಿಮ  .. ನಮ್ಮ ಊರು ಬೆಳಗಾವಿ.  ಈ ವರ್ಷದ ದೇವರ ವಾಗ್ದಾನ ಮಾಡಿದ ಪ್ರಕಾರ ಏದೆನ್ ಪುನಃ ಸ್ಥಾಪನೆಯಾಗಿದೆ. ಈ ವಾಕ್ಯ ನನ್ನ ಜೀವಿತದಲ್ಲಿ ಅದ್ಭುತವಾಗಿ ಕಾರ್ಯ ಮಾಡುತ್ತಿದೆ.  ನಾನು ವರ್ಕ್ ಪ್ರಾಮ್ ಹೋಮ್ ಎಂದು ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಕಂಪ್ಯೂಟರ್ ಪದೇ ಪದೇ ರಿಪೇರಿಗೆ ಬರುತ್ತಿತ್ತು. ಆದರೆ ದೇವರು ಜನೆವರಿ ತಿಂಗಳಲ್ಲಿ ಹೊಸ ಕಂಪ್ಯೂಟರ್, ಪ್ರಿಂಟರ್ ಮಷೀನ್ ತೆಗೆದುಕೊಳ್ಳುವಂತೆ ಮಾಡಿದ್ದಾರೆ. ಈ ಫೆಬ್ರುವರಿ ತಿಂಗಳಿನಲ್ಲಿ ನಾನು ಜ್ಯೂಸ್ ಸೆಂಟರ್ ಓಪನ್ ಮಾಡಿದ್ದೇನೆ. ಹಿಂದೆ ಇದೆ ಜ್ಯೂಸ್ ಸೆಂಟರ್ ಇಟ್ಟಿದ್ದಾಗ ನನಗೆ ತುಂಬಾ ನಷ್ಟ ಆಗಿತ್ತು. ಆದರೆ ಈ ಸಲ ನಾನು ಫಸ್ಟ್ ದೇವರಿಗೆ ಕಾಣಿಕೆಯನ್ನು ಎತ್ತಿ ಇಡುವಾಗ ಉಳಿದ ಒಂಬತ್ತು ಭಾಗಗಳು ಆಶೀರ್ವಾದವಾಗುವಂತೆ ದೇವರು ಮಾಡಿದ್ದಾರೆ.  ದೇವರು ಅದ್ಭುತವಾಗಿ 9 ದಿನಗಳಲ್ಲಿ 21,000 ಆದಾಯ ಬರುವಂತೆ ಮಾಡಿದ್ದಾರೆ. ಹತ್ತು ವರ್ಷದಿಂದ ಫ್ರಿಜ್ ತೆಗೆದುಕೊಳ್ಳಬೇಕು ಎಂದಾಗ ಆ ಹಣ ಎಲ್ಲೆಲ್ಲೋ ಖರ್ಚು ಆಗುತ್ತಿತ್ತು. ಆದರೆ ಈ ಸತ್ಯಕ್ಕೆ ಕನೆಕ್ಟ್ ಆಗಿ ಏಳು ತಿಂಗಳು ಆಯಿತು. ಈಗ ಫ್ರಿಜ್  ತೆಗೆದುಕೊಳ್ಳುವಂತೆ ದೇವರು ಸಹಾಯ ಮಾಡಿದ್ದಾರೆ. ನಾವು ಊಹಿಸುವುದಕ್ಕಿಂತಲೂ, ಯೋಚಿಸುವುದಕ್ಕಿಂತಲೂ ಹೆಚ್ಚಾದದನ್ನು ದೇವರು ನಮಗೆ ಕೊಟ್ಟಿದ್ದಾರೆ .  ...

2026ರ ಮಾರ್ಚ್ ತಿಂಗಳ ಪ್ರವಾದನೆಯ ವಾಗ್ದಾನ...

Image
  2026ರ ಮಾರ್ಚ್  ತಿಂಗಳ ಪ್ರವಾದನೆಯ ವಾಗ್ದಾನ   ಆತ್ಮಿಕ ಬೆಳವಣಿಗೆಯ ತಿಂಗಳು { Month of Growth }              ಇದನ್ನು ಓದುತ್ತಿರುವ ಪ್ರತಿಯೊಬ್ಬ ಸಹೋದರ ಸಹೋದರಿಯರೇ ನಿಮ್ಮ ಶರೀರದ ಪರಿಸ್ಥಿತಿಗಳನ್ನು ಇಟ್ಟುಕೊಂಡು ವಾಕ್ಯವನ್ನು ಓದದೆ, ನಾನು ಪರಲೋಕದ ಪ್ರಜೆ, ಉನ್ನತದಲ್ಲಿ ಕುಳಿತಿದ್ದೇನೆ, ನಾನು ಆತ್ಮದ ವ್ಯಕ್ತಿ, ನನ್ನ ಇರುವಿಕೆಯೇ ಯೇಸುಕ್ರಿಸ್ತನಲ್ಲಿ  ಎಂಬ ಪ್ರಜ್ಞೆಯಿಂದ ಓದುವಾಗ ಮಾತ್ರವೇ ವಾಕ್ಯವನ್ನು ಹೊಂದಿಕೊಂಡು ವಾಕ್ಯದ ಬಲ, ಶಕ್ತಿ, ಸಾಮರ್ಥ್ಯ ಮತ್ತು ಮಹಿಮೆಯನ್ನು ನಿಮ್ಮ ಶರೀರದಲ್ಲಿ ಅನುಭವಿಸಲು ಸಾಧ್ಯವಾಗುತ್ತದೆ.. ಜನವರಿ ತಿಂಗಳಿನಲ್ಲಿ ಏದೆನ್ ನಲ್ಲಿ ಪುನ:ಸ್ಥಾಪನೆ ಮಾಡಿರುವುದನ್ನು, ಫೆಬ್ರುವರಿ ತಿಂಗಳಿನಲ್ಲಿ ನಿಮ್ಮನ್ನು ಕ್ರಿಸ್ತನಲ್ಲಿ ನೆಲೆಯಾಗಿಟ್ಟಿದ್ದಾರೆ, ಈಗ ಮೂರನೆಯ ತಿಂಗಳಿನಲ್ಲಿ ಕ್ರಿಸ್ತನಲ್ಲಿ ನೀವು ಬೆಳೆಯುತ್ತಲೇ ಇರುತ್ತೀರಿ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.    ವಾಗ್ದಾನದ ವಾಕ್ಯ: ( 2 ಪೇತ್ರನು 3 : 18 ) ನಿಮ್ಮ ಪ್ರಭುವಾದ ಮತ್ತು ರಕ್ಷಕನಾದ ಯೇಸು ಕ್ರಿಸ್ತನ ಕೃಪೆಯಲ್ಲಿಯೂ ತಿಳುವಳಿಕೆಯಲ್ಲಿಯೂ ಬೆಳೆಯುತ್ತಲೇ ಇರಿ . ಆತನಿಗೆ ಈಗಲೂ ಎಂದೆಂದಿಗೂ ಮಹಿಮೆಯಾಗಲಿ! ಆಮೆನ್.  ಬೆಳವಣಿಗೆಯ ಬಗ್ಗೆ ಮಾತನಾಡುವಾಗ ನಿಮ್ಮ ಆತ್ಮದ ಮನುಷ್ಯನ ಬಗ್ಗೆ ಮಾತನಾಡುತ್ತಿದ್ದೇನೆ. ನಿಮ್ಮ...