Posts

Showing posts from January, 2026

Testimony #728 - ನಮ್ಮ ಅಕ್ಕನಿಗೆ ಮೂತ್ರಕೋಶದ ಕಲ್ಲು {ಕಿಡ್ನಿ ಸ್ಟೋನ್ }ಆಗಿದೆ ಆಪರೇಷನ್ ಹೇಳಿದ್ದರು...

Image
  ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻  ನನ್ನ ಹೆಸರು ಸಂಗೀತ,  ಬೀದರ್ ನಿಂದ,   ದೇವರಿಗೆ ಕೋಟಿ ಕೋಟಿ ಸ್ತೋತ್ರ  ಈ ತಿಂಗಳಿನ ಎಲ್ಲಾ ವಾಗ್ದಾನಗಳಿಗಾಗಿ ದೇವರಿಗೆ ಮಹಿಮೆ ಉಂಟಾಗಲಿ .  ನಮ್ಮ ಅಕ್ಕನಿಗೆ   ಮೂತ್ರಕೋಶದ ಕಲ್ಲು {ಕಿಡ್ನಿ ಸ್ಟೋನ್ }ಆಗಿದೆ, ಆಪರೇಷನ್ ಹೇಳಿದ್ದರು, ಆದರೆ ಪಾಸ್ಟರ್ ಗೆ ಕಾಲ್ ಮಾಡಿ ಪ್ರೇಯರ್ ಮಾಡಿಸಿಕೊಂಡಿದ್ದೆ.  ಆಪರೇಷನ್ ಆಗೋದಿಲ್ಲ ಎಂದು ನೀವು ಡಿಕ್ಲೇರ್  ಮಾಡಿದ್ದೀರಿ ಪಾಸ್ಟರ್.   ಈಗ ನಮ್ಮ ಅಕ್ಕ ಆರಾಮಾಗಿದ್ದರೆ.  ಮತ್ತೆ ನಮ್ಮ ಭಾವನವರಿಗೆ ಮೂತ್ರಕೋಶದ ಕಲ್ಲು ಆಗಿದೆ ಎಂದು ಡಾಕ್ಟರ್ ಹೇಳಿದರು. " ಒಬ್ಬ ಶತಾಧಿಪತಿ ಹೇಗೆ ಒಂದು ಮಾತು ಸಾಕು"  ಎಂದು ಹೇಳಿದರು ಹಾಗೆ, ನಿಮ್ಮ ಒಂದು ಪ್ರಾರ್ಥನೆಯ ಅವಶ್ಯಕತೆ ನನಗಿದೆ ಎಂದು ಅವರಿಗೆ ಕೇಳಿಕೊಂಡಿದ್ದೆ. ನಮ್ಮ ಭಾವನವರು , " ನೀನು ಪ್ರಾರ್ಥನೆಯನ್ನು ಕೇಳುತ್ತಿಯಲ್ಲ, ಆ ಪಾಸ್ಟರ್ ಗೆ ಹೇಳಿ ಪ್ರೇಯರ್ ಮಾಡಿಸು" ಎಂದು ಹೇಳಿದ್ದರು. ಅದೇ ರೀತಿ ಇಬ್ಬರಿಗೂ ಆರಾಮಾಗಿದೆ ಪಾಸ್ಟರ್ .  ನಾನು ಸತ್ಯವನ್ನು ಕೇಳುತ್ತಾ ಆರು ತಿಂಗಳಾಯಿತು. ನನ್ನೊಳಗೆ ಸತ್ಯ ಪ್ರಕಟಣೆಯಾದ ಹಾಗೆ ಇವರಲ್ಲಿಯೂ ಪ್ರಕಟಣೆ ಆಗಲಿ ಎಂದು ಕೇಳುತ್ತಿದ್ದೆ.   ಪಾಸ್ಟರ್  ಗೆ ಹೇಳಿದಾಗ ತಕ್ಷಣ ಪ್ರೇಯರ್ ಮಾಡಿದರು. ನಮ್ಮ ಭಾವನವರು, ಬಹಳ ಬಿಜಿ ಇರುತ್ತಾರೆ, ಎಷ್ಟು ಬೇಗ ಪ್...

Testimony #727 - ಇನ್ನೊಂದು ಕಂಪನಿಯಿಂದ ಕೆಲಸ ಬಂದಿತ್ತು...

Image
  ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻   ನನ್ನ ಹೆಸರು ಸವಿತಾ    2026 ಸ್ಟಾರ್ಟ್ ಆಗಿದೆ, ಒಂದು ಕುತೂಹಲ, ಆತ್ಮದಲ್ಲಿ ಸಂತೋಷ ಜಾಸ್ತಿ ಆಗಿದೆ, ದೇವರು ನೋಡುತ್ತಾರೆ, ದೇವರು ಮಾತಾಡುತ್ತಾರೆ ಮತ್ತು ದೇವರೇ ಮಾಡುತ್ತಾರೆ ಎಂಬ ನಂಬಿಕೆ ಬಲವಾಗಿದೆ. ಏನೇ ಆದರೂ ದೇವರಿದ್ದಾನೆ ಎಂಬ ನಂಬಿಕೆ, ಅವರು ಈಗಾಗಲೇ ಎಲ್ಲವನ್ನು ಮಾಡಿ ಮುಗಿಸಿದ್ದಾರೆ, ಏನಾಗುತ್ತದೆ ಆಗಲಿ ದೇವರಿದ್ದಾರೆ ಎಂಬ ನಂಬಿಕೆ ಹೆಚ್ಚಾಗಿದೆ.  ದೇವರು ಪಾಸ್ಟರ್ ಮೂಲಕ ವಾಕ್ಯದಿಂದ ನಮ್ಮನ್ನು ಬಲಪಡಿಸುತ್ತಿದ್ದಾರೆ. ದೇವರು ವಾಕ್ಯದ ಮೂಲಕ ಮಾತಾಡುತ್ತಿದ್ದಾರೆ.  ಹೆಚ್ಚಾಗಿದೆ ವಾಕ್ಯವನ್ನು ಓದಬೇಕು, ದೇವರ ವಾಕ್ಯವನ್ನು ಕೇಳಬೇಕು ಎಂಬ ಹಂಬಲ 2026 ರಲ್ಲಿ ಇನ್ನು ಜಾಸ್ತಿ ಆಗುತ್ತಿದೆ.  ನನ್ನ ಜೀವನದ ಸಾಕ್ಷಿ ಏನೆಂದರೆ -- ಈಗ ನಾನು ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ, ಇನ್ನೊಂದು ಕಂಪನಿಯಿಂದ ಕೆಲಸ ಬಂದಿತ್ತು.  ನಾನು ಯೋಚಿಸುವುದಕ್ಕಿಂತಲೂ ಹೆಚ್ಚಾದ ಪೇಮೆಂಟ್ ಇರುವ ಕೆಲಸ ಸಿಕ್ಕಿದೆ. ಜನವರಿ 10 ಕ್ಕೆ ಹೊಸ ಕೆಲಸಕ್ಕೆ ಜಾಯಿನ್ ಆಗಬೇಕಿತ್ತು. ನಾನು ಮೊದಲಿನ ಕೆಲಸಕ್ಕೆ ರಾಜಿನಾಮೆ ಕೊಟ್ಟೆ. ಆದರೂ ಅವರು ಜನವರಿ 31 ರ ವರೆಗೆ ಮಾಡಲೇಬೇಕು ಎಂದು ಕಂಡಿಷನ್ ಹಾಕಿದ್ದರು. " ದೇವರೇ ನಿನ್ನ ಚಿತ್ತ ಏನಿದೆಯೋ, ನಾನು ಇಲ್ಲೇ ಕೆಲಸ ಮಾಡಬೇಕು ಅಂದರೆ ಇಲ್ಲೇ ಮಾಡುತ್ತೇನೆ, ನಾನು ಬೇರೆ ಕಂಪನಿಗೆ ಹೋಗಬೇಕೆಂಬುದು ನಿನ್ನ ಉದ್ದೇಶ...

Testimony #726 - ಹೊಸ ವರ್ಷಕ್ಕೆ ದೇವರು ಕೊಟ್ಟ ವಾಗ್ದಾನ...

Image
  ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻   ನನ್ನ ಹೆಸರು ದ್ರಾಕ್ಷಾಯಿಣಿ.  ಈ ದಿನಗಳಲ್ಲಿ ದೇವರು ಸರಿಯಾದ ಸತ್ಯಕ್ಕೆ ನಮ್ಮನ್ನು ಕನೆಕ್ಟ್ ಮಾಡಿ ನಡೆಸುತ್ತಿದ್ದಾರೆ.  ಅದಕ್ಕಾಗಿ ದೇವರಿಗೆ ಸ್ತೋತ್ರ.  ಇಂಥ ಸರಿಯಾದ ಸತ್ಯದ ತಿಳುವಳಿಕೆ ಅನೇಕರಲ್ಲಿ ಇಲ್ಲದೆ ಇರುವುದರಿಂದ, ದೇವರ ಆಶೀರ್ವಾದವನ್ನು ಅನುಭವಿಸಲು ಆಗುತ್ತಿಲ್ಲ. ಆದರೆ ನಮಗಾದರೋ ದೇವರು  ಸರಿಯಾದ ಸತ್ಯದಲ್ಲಿ ನಡೆಯುವಂತೆ ಮಾಡಿದ್ದಾರೆ.    ಹೊಸ ವರ್ಷಕ್ಕೆ ದೇವರು ಕೊಟ್ಟ ವಾಗ್ದಾನ ಅದ್ಬುತ ರೀತಿಯಾಗಿ ಇತ್ತು. ಅದಕ್ಕಾಗಿ ದೇವರಿಗೆ ಸ್ತೋತ್ರ.  ಏದೆನ್ ನಲ್ಲಿ ಒಂದು ನದಿ ಹುಟ್ಟಿ, ಅದು ತೋಟದ ಕಡೆಗೆ ಹರಿದು, ಅಲ್ಲಿ ಸಮೃದ್ಧಿ ಗೊಳಿಸಿ, ತೋಟವನ್ನು ತೋಯಿಸಿ, ತನ್ನ ಉದ್ದೇಶವನ್ನು ನೆರವೇರಿಸಿ, ಸಮೃದ್ಧಿ ಗೊಳಿಸಿ,  4 ಶಾಖೆಗಳಾಗಿ ಹರಿಯಿತು ಎಂಬುದಾಗಿ ಹೇಳಿದ್ದೀರಿ ಪಾಸ್ಟರ್. ನಿಮ್ಮ ಕುರಿತಾಗಿ ದೇವರು ನನಗೆ ಒಂದು ಪ್ರಕಟಣೆಯನ್ನು ಕೊಟ್ಟರು.  ಏನೆಂದರೆ "ದೇವರ ವಾಕ್ಯ" ಎಂಬ ನದಿ, "ನೀವು" ಎಂಬ ತೋಟದ ಕಡೆಗೆ ಹರಿದು, ನಿಮ್ಮನ್ನು ತೃಪ್ತಿಗೊಳಿಸಿ, ನಿಮ್ಮನ್ನು ತೋಯಿಸಿ, ನಿಮ್ಮನ್ನು ಸಮೃದ್ಧಿ ಗೊಳಿಸಿ, ನಿಮ್ಮನ್ನು ಬಲಗೊಳಿಸಿ, ವಾಕ್ಯದಿಂದ ನಿಮ್ಮನ್ನು ಅಭಿಷೇಕ ಮಾಡಿ, ಅದರ ಫಲವಾಗಿ ಮುಂದೆ ಅದು ನಾಲ್ಕು ಶಾಖೆಗಳಾಗಿ ಹರಿದು ಇಲ್ಲಿ ಸೇರಿರುವ ಪ್ರತಿಯೊಬ್ಬರ ಕಡೆಗೆ ಹರಿದು ಬರುತ್ತಿದೆ.  ನಮ್ಮನ್...

Testimony #725 - ನಮ್ಮ ಊರಿನಲ್ಲಿ ಕ್ರಿಸ್ಮಸ್ ಆಚರಣೆ ಮಾಡಬಾರದು ಎಂದು...

Image
  ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ. 🙏🏻🙏🏻🙏🏻  ನನ್ನ ಹೆಸರು ಜಯಶ್ರೀ  ನಮ್ಮ ಊರಿನಲ್ಲಿ ಕ್ರಿಸ್ಮಸ್ ಆಚರಣೆ ಮಾಡಬಾರದು ಎಂದು ಕೆಲವು ಜನರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ನಮ್ಮ ಮನೆಗೆ ಬಂದು ವಿಚಾರಣೆ ಮಾಡಿದರು. "ನೀವು ಇದನ್ನೆಲ್ಲಾ ಮಾಡಬಾರದು, ನಿಮ್ಮನ್ನು ಜೈಲಿಗೆ ಹಾಕುತ್ತೇವೆ, 7 ವರ್ಷ ಶಿಕ್ಷೆ ಆಗುತ್ತದೆ" ಎಂದು ನಮಗೆ ಜೋರು ಮಾಡಿದರು.  ಅದಕ್ಕೆ ನಾವು ಅವರಿಗೆ ಹೇಳಿದೆವು, " ಭಾರತದ ಸಂವಿಧಾನದಲ್ಲಿ ಯಾರು ಯಾವ ದೇವರನ್ನು ಬೇಕಾದರೂ ಆರಾಧನೆ ಮಾಡಬಹುದೆಂದು ಬರೆದಿದೆ, ನಮ್ಮ ಹತ್ತಿರ ಸರ್ಕಾರದಿಂದ ಅಪ್ಪಣೆ ಪಡೆದ ಒಪ್ಪಿಗೆ  ಪತ್ರಗಳು ಇವೆ, ನಾವು ಯಾವ ಧರ್ಮಕ್ಕೆ ವಿರುದ್ಧವಾದ ಕಾರ್ಯಗಳನ್ನು ಮಾಡುತ್ತಿಲ್ಲ, ಈಗಲೇ ನಿಮ್ಮೊಂದಿಗೆ ಬರುತ್ತೇನೆ, ನಾನೇನು ಕೊಲೆ ಮಾಡಿಲ್ಲ, ಕಳ್ಳತನ ಮಾಡಿಲ್ಲ, ಆರೋಗ್ಯವಿಲ್ಲದವರು ತಾವೇ ಬಂದು ನಮ್ಮೊಂದಿಗೆ ಸೇರಿಕೊಳ್ಳುತ್ತಿದ್ದಾರೆ, ಬೇಕಿದ್ದರೆ ನೀವು ಬನ್ನಿ ನಿಮ್ಮನ್ನು ಸೇರಿಸಿಕೊಳ್ಳುತ್ತೇವೆ  " ಎಂದು ಅಷ್ಟೇ ಜೋರಾಗಿ ಉತ್ತರ ಕೊಟ್ಟೆವು.  ಅದಕ್ಕೆ ಅವರು ಹಾಗಿದ್ದರೆ, ನೀವು ಕ್ರಿಸ್ಮಸ್ ಆಚರಣೆ ಮಾಡಿ, ನಾವೇ ನಿಮಗೆ ರಕ್ಷಣೆ ಕೊಡುತ್ತೇವೆ ಎಂದು ಹೇಳಿದರು.  ಅದರಂತೆಯೇ ಈ ವರ್ಷದ ಕ್ರಿಸ್ಮಸ್ ಆಚರಣೆ, ಪ್ರತಿ ವರ್ಷಕ್ಕಿಂತ ಜೋರಾಗಿತ್ತು, ಹೋಟೆಲ್ ನಲ್ಲಿ ಹಾಲ್ ಬುಕ್ ಮಾಡಿಕೊಂಡು, ಸುಮಾರು 200 ಜನರೊಂದಿಗೆ, ಹಾಡಿ, ಕುಣಿದು ಹಬ್ಬವನ್ನ...

Testimony #724 - ಸಾಲ ಕೊಟ್ಟವರು ಮನೆ ಮುಂದೆ ಬಂದು...

Image
  ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ಉಂಟಾಗಲಿ 🙏🏻🙏🏻🙏🏻  ನನ್ನ ಹೆಸರು ರೇಖಾ   ನಮ್ಮ ತಂದೆಯವರಿಗೆ ಸಾಲದ ಸಲುವಾಗಿ ತುಂಬಾ ಸಮಸ್ಯೆ ಆಗಿತ್ತು. ಸಾಲಗಾರರು ತುಂಬಾ ಕಾಟ ಕೊಡುತ್ತಿದ್ದರು. ಅವರು ಕಾಳಿನ ವ್ಯಾಪಾರ ಮಾಡುತ್ತಿದ್ದರು. ಆ ವ್ಯಾಪಾರವನ್ನು ಮತ್ತೆ ಮುಂದುವರಿಸಲು ಸಹ ದುಡ್ಡು ಬೇಕಿತ್ತು.  ಒಂದು ದಿನ ನಮ್ಮ ತಾಯಿ ನನಗೆ ಕಾಲ್ ಮಾಡಿ ಅಳುತ್ತಿದ್ದರು. ಸಾಲ ಕೊಟ್ಟವರು ಮನೆ ಮುಂದೆ ಬಂದು ಗಲಾಟೆ ಮಾಡಿದರು ಎಂದು ಹೇಳಿದರು. ನಾನು ನಿಮಗೆ ಕಾಲ್ ಮಾಡಿ ಪ್ರೇಯರ್ ಮಾಡಿಸಿದೆ ಪಾಸ್ಟರ್ " ಅವರ ನಿಂತಿದ್ದ ಎಲ್ಲಾ ಕೆಲಸ ಕಾರ್ಯಗಳು ಅದ್ಭುತವಾಗಿ ನಡೆಯುತ್ತವೆ ಅವರು ಇನ್ನು ಮುಂದೆ ಸಾಲದಲ್ಲಿ ಇರುವುದಿಲ್ಲ ಕೊರತೆಯಲ್ಲಿ ಇರುವುದಿಲ್ಲ ಅವರು ನಡೆಯುವುದಿಲ್ಲ ಇನ್ನು ಮುಂದೆ ದೇವರ ಆತ್ಮನೆಯವರನ್ನು ನಡೆಸುತ್ತಾರೆ" ಎಂದು ಪ್ರವಾದನೆ ಮಾಡಿದ್ದೀರಿ ಪಾಸ್ಟರ್.  ಅದರಂತೆಯೇ ಒಂದು ದಿನ ಇಬ್ಬರು ಬಂದು ನೀವು ಕಾಳಿನ ವ್ಯಾಪಾರ ಚೆನ್ನಾಗಿ ಮಾಡುತ್ತೀರಿ, ಎಂದು ಹೇಳಿ,  ಎರಡು ಚೀಲ ಕಾಳು ಕೊಟ್ಟು, ದುಡ್ಡು ಆಮೇಲೆ ಕೊಡಿ ಅಂದರಂತೆ .ಅದರಂತೆ ಮೂರು ಗಾಡಿ ಲೋಡ್ ಕಳಿಸಿದ್ದಾರೆ. ನೀವು ಪ್ರವಾದಿಸಿದ ಪ್ರಕಾರವೇ 15 ದಿನದಲ್ಲಿ ಅವರು ಕೆಲಸವನ್ನು ಶುರು ಮಾಡಿದ್ದಾರೆ.   ದೇವರ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ. 👏🏻👏🏻👏🏻   ದೇವ ಮನುಷ್ಯನ ಬಾಯಿಂದ ಬಂದ ಮಾತು ಅದು ನೆರವೇರದೆ ಇರಲು ಸಾಧ್ಯವಿಲ್ಲ ಎಂದು ನಮ್ಮ ಜ...

Testimony #723 - ಹಾಸ್ಪಿಟಲ್ ಗೆ ಕರ್ಕೊಂಡ್ ಹೋಗುವಾಗ...

Image
 Praise the lord pastor    ನನ್ನ ಹೆಸರು ದೀಪಾ.  ನಾವು ಇರುವ ಅಪಾರ್ಟ್ಮೆಂಟ್ ನಲ್ಲಿ ಒಬ್ಬ ಅಜ್ಜಿಗೆ ಆರಾಮ ಇರ್ಲಿಲ್ಲ. ಅವರಿಗೆ ವಯಸ್ಸು 70 ರ ಮೇಲೆ ಇರಬಹುದು ಪಾಸ್ಟರ್. ಊಟಾನೇ ಬಿಟ್ಟಿದ್ರು, ಅವರನ್ನು ಹಾಸ್ಪಿಟಲ್ ಗೆ ಕರ್ಕೊಂಡ್ ಹೋಗುವಾಗ ಆ ಅಜ್ಜಿ ನನ್ನ ಕೈ ಹಿಡಿದು ನನ್ನ ಜೊತೆ ಬಾ ಅಂತ ಕೈನೆ ಬಿಡುತ್ತಿರಲಿಲ್ಲ.  ಅವಾಗ ನಾನು, " ಅಪ್ಪ ಈ ಕೈ ಹಿಡಿದಿದ್ದು ನನ್ನ ಕೈ ಅಲ್ಲ, ನಿನ್ನ ಕೈ ಅಪ್ಪ ನೀವು ಯಾವತ್ತಿದ್ದರೂ ಕೈ ಬಿಡುವುದಿಲ್ಲ, ತೊರೆಯುವುದಿಲ್ಲ ಅಂತ ವಾಗ್ದಾನ ಮಾಡಿದ್ದೀರಪ್ಪ ಆ ವಾಗ್ದಾನವನ್ನು ಈ ಅಜ್ಜಿ ಮೇಲೆ ರಿಲೀಸ್ ಮಾಡ್ತೀನಿ ಯೇಸುವಿನ ನಾಮದಲ್ಲಿ ಗುಣವಾಗಿ ಮನೆಗೆ ಬರ್ಲಿ" ಅಂತ ನನ್ ಮನಸಲ್ಲಿ ಡಿಕ್ಲೇರ್ ಮಾಡಿದೆ ಪಾಸ್ಟರ್.  ಆಮೇಲೆ ನಾಲ್ಕು ದಿವಸ ಆದ್ಮೇಲೆ ಅಜ್ಜಿನ ಕರ್ಕೊಂಡು  ಮನೆಗೆ ಬಂದ್ರು. ಅವರ ಸೊಸೆ ನನ್ನ ಜೊತೆ ಮಾತಾಡುವಾಗ ಮನೆಗೆ ಬನ್ನಿ ಅಂದ್ರು ಬರ್ತೀನಿ ಅಂತ ಸಾಯಂಕಾಲ ಹೋದೆ  ಪಾಸ್ಟರ್. ಅವಾಗ ಅಜ್ಜಿ ಅವರಿಗೆ ಅರಿವು ಇಲ್ಲದೆ ಏನೇನು ಮಾತಾಡ್ತಿದ್ರು. ಅವಾಗ ದೇವರ ಬಗ್ಗೆ ಹೇಳಿದೆ, ಅವಾಗ ನಿಮ್ಮ ಬಗ್ಗೆ ಹೇಳಿದೆ ಪಾಸ್ಟರ್.  ನಮ್ಮ ಪಾಸ್ಟರ್ ಪ್ರೇಯರ್ ಮಾಡ್ತಾರೆ, ಆರಾಮ ಆಗ್ತೀರಾ ಅಂತ ಹೇಳಿದೆ. ಹೇಳಿದ ತಕ್ಷಣನೆ  ಮಾಡಿಸ್ರಿ ಅಂದ್ರು. ಆದರೆ ಅವರು ಪ್ರೇಯರ್ ಮಾಡ್ಸು ಅಂತ ಅಂದಿದ್ದೆ ದೊಡ್ಡ ವಿಷಯ ಪಾಸ್ಟರ್, ಯಾಕಂದ್ರೆ ಅವರು ಬ್ರಾಹ್ಮಿನ್ಸ್ ಪಾಸ...

Testimony #722 - ಎದ್ದೇಳಲು ಆಗುತ್ತಿರಲಿಲ್ಲ...

Image
  ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರವಾಗಲಿ 🙏🏻🙏🏻🙏🏻.   ನನ್ನ ಹೆಸರು ಭಾಗ್ಯಲಕ್ಷ್ಮಿ   ನಮ್ಮ ಪರಿಚಯದ ಆಂಟಿ ಒಬ್ಬರು ಗಾಡಿಯಿಂದ  ಬಿದ್ದಿದ್ದರು, ಎದ್ದೇಳಲು ಆಗುತ್ತಿರಲಿಲ್ಲ, ಅವರ ಮಗಳು ನನಗೆ ಕಾಲ್ ಮಾಡಿ ಪ್ರೇಯರ್ ಮಾಡಿಸಿದಳು, ನಂತರ ಐದು ನಿಮಿಷದಲ್ಲಿ ಅವರು ಎದ್ದು ನಡೆದಾಡಲು ಶುರು ಮಾಡಿದರು ಎಂದು ಹೇಳಿದರು. ದೇವರಿಗೆ ಕೋಟಿ ಕೋಟಿ ಸ್ತೋತ್ರ!!!  ಅದೇ ರೀತಿ ಅವರ ಮಗನು ಪೀಜಿ ಯಲ್ಲಿ ಇರುತ್ತಾನೆ. ಕೆಲಸಕ್ಕೆ ಹೋಗುತ್ತಾನೆ. ಆದರೆ ರಾತ್ರಿಯೆಲ್ಲ ನಿದ್ದೆ ಬರುತ್ತಿರಲಿಲ್ಲ, ಸಮಾಧಾನ ಇರಲಿಲ್ಲ, ಏನಾದರೂ ಮಾಡಿಕೊಂಡು ಸಾಯಬೇಕು ಅನಿಸುತ್ತಿತ್ತಂತೆ, ಒಂದು ದಿನ ಕಾಲ್ ಮಾಡಿ ಪ್ರೇಯರ್ ಮಾಡಿಸಿಕೊಂಡ. ಮರುದಿನ ಕಾಲ್ ಮಾಡಿ  ನೆಮ್ಮದಿಯಾಗಿ ನಿದ್ದೆ ಮಾಡಿದೆ ಎಂದು ಹೇಳಿದ. ದೇವರ ನಾಮಕ್ಕೆ ಮಹಿಮೆ ಉಂಟಾಗಲಿ. 👏🏻👏🏻👏🏻 ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್  ಮಾಡಿ ! Rev John Ebenezer - Youtube Rev John Ebenezer - Instagram Rev John Ebenezer - Facebook                SCAN FOR THE LOCATION  For Prayer Request WhatsApp: 9880516003 GOOGLE MEET LINK - TO JOIN MORNING PRAYER @6 AM from MONDAY TO FRIDAY Morning Prayer Link-1 -> Go...

Testimony #721 - ನಮ್ಮ ಪಕ್ಕದ ಮನೆಯಲ್ಲಿ ಒಬ್ಬರಿಗೆ ಪಿಟ್ಸ್ ಬರುತ್ತಿತ್ತು....

Image
 ದೇವರ ಪರಿಶುದ್ಧವಾದ ನಾಮಕ್ಕೆ  ಮಹಿಮೆ ಉಂಟಾಗಲಿ. 🙏🏻🙏🏻🙏🏻   ನನ್ನ ಹೆಸರು ರೇಣುಕಾ.  ನಿನ್ನೆ ರಾತ್ರಿ ನನ್ನ ಮೊಬೈಲ್ , " ಪವಿತ್ರಾತ್ಮನೇ ಮಾರ್ನಿಂಗ್ ಪ್ರೇಯರ್ ಜಾಯಿನ್ ಆಗಬೇಕು, ಪವಿತ್ರಾತ್ಮನ ಶಬ್ದವನ್ನು ಕೇಳಬೇಕು, ನೀನೇ ಇದನ್ನು ಸ್ಟಾರ್ಟ್ ಮಾಡಬೇಕು " ಎಂದು ಪ್ರೇಯರ್ ಮಾಡಿದೆ.   ಎಲ್ಲರೂ ಫೋನ್ ಸತ್ತು ಹೋಗಿದೆ ಎಂದು ಹೇಳುತ್ತಿದ್ದರು. ಇಲ್ಲ ನನ್ನ ತಂದೆ ಜೀವ ಕೊಟ್ಟೆ ಕೊಡುತ್ತಾರೆ ಎಂದು ಡಿಕ್ಲೇರ್ ಮಾಡಿದೆ. ಅದರಂತೆ ಇಂದು ಈಗ ಮಾರ್ನಿಂಗ್ ಜಾಯಿನ್ ಆಗುವಂತೆ ದೇವರು ಸಹಾಯ ಮಾಡಿದ್ದಾರೆ .   ದೇವರ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ.  ನಮ್ಮ ಪಕ್ಕದ ಮನೆಯಲ್ಲಿ ಒಬ್ಬರಿಗೆ ಪಿಟ್ಸ್ ಬರುತ್ತಿತ್ತು. ಎಂ ಆರ್ ಐ ಸ್ಕ್ಯಾನಿಂಗ್ ಮಾಡಬೇಕೆಂದು ಹೇಳಿದ್ದರು. ನಾನು ಅವರಿಗಾಗಿ ಪ್ರಾರ್ಥಿಸುತ್ತಿದ್ದೆ. ನಮ್ಮ ದೇವರ ಕೃಪೆಯಿಂದ ಆರಾಮಾಗುತ್ತಾರೆ, ಎಲ್ಲಾ ಬಿಡುಗಡೆ ಕೊಡುತ್ತಾರೆ, ನಮ್ಮ ದೇವರು ಸ್ವಸ್ಥತೆಯನ್ನು ಕೊಡುತ್ತಾರೆ ಎಂದು ಹೇಳಿ ಪ್ರೇಯರ್ ಮಾಡಿದೆ. ಈಗ ಅವರು ಆರಾಮಾಗಿ ನಡೆದಾಡುತ್ತಿದ್ದಾರೆ.   ಈ ದಿನಗಳಲ್ಲಿ ದೇವರು ನನ್ನನ್ನು ಅದ್ಭುತವಾಗಿ ನಡೆಸುತ್ತಾ ಇದ್ದಾರೆ.  ದೇವರನಾಮಕ್ಕೆ ಸ್ತೋತ್ರ. ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್  ಮಾಡಿ ! Rev John Ebenezer - Youtube Rev John Ebenezer - Instagram Rev John Ebenezer - Face...

Testimony #720 - ಬರೆದು ಇಡಿ ಹೊಂದಿಕೊಳ್ಳುತ್ತೀರಿ ಎಂದು ಹೇಳಿದ್ದರು...

Image
 ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ಉಂಟಾಗಲಿ 🙏🏻🙏🏻   ನನ್ನ ಹೆಸರು ಸುನಿತಾ    ಕಳೆದ ವರ್ಷ 2024ರಲ್ಲಿ ಡಿಸೆಂಬರ್ 28ರಂದು ಪಾಸ್ಟರ್ ಹೇಳಿದರು, ಒಬ್ಬೊಬ್ಬರಿಗೆ ಒಂದೊಂದು ವರಗಳು ಇರುತ್ತವೆ ಎಂದು. ನಿಮಗೆ ಏನು ಬೇಕು ಎನ್ನುವುದನ್ನು ಬರೆದು ಇಡಿ ಹೊಂದಿಕೊಳ್ಳುತ್ತೀರಿ ಎಂದು ಹೇಳಿದ್ದರು. ನಾನು ಆ ಡೇಟ್ ಹಾಕಿ ನನ್ನ ಅಕ್ಕನಿಗೆ ಕಡಿಮೆ ಬಾಡಿಗೆ ಇರುವ, ಮನೆಯ ಹತ್ತಿರದಲ್ಲೇ ಒಂದು ಅಂಗಡಿ ಸಿಗಬೇಕು ಎಂದು ಬರೆದು ಇಟ್ಟಿದ್ದೆ. ಅದೇ ರೀತಿ ನಾನು ಒಂದು ಮಷೀನ್ ತೆಗೆದುಕೊಳ್ಳಬೇಕು ಎಂದು ಬರೆದಿಟ್ಟಿದ್ದೆ. ಅದೆಲ್ಲವೂ ನನ್ನ ಜೀವಿತದಲ್ಲಿ ಇವತ್ತು ನೆರವೇರಿದೆ. ಅದಕ್ಕಾಗಿ ದೇವರನಾಮಕ್ಕೆ ವಂದನೆ.  ಹೊಸ ಮಷೀನ್ ತೆಗೆದುಕೊಳ್ಳಲು ಆಗುವುದಿಲ್ಲ, ಸೆಕೆಂಡ್ ಹ್ಯಾಂಡ್ ಮಷೀನ್ ತೆಗೆದುಕೊಳ್ಳೋಣ ಸಾಕು ಎಂದು ತುಂಬಾ ದಿನದಿಂದ ಯೋಚನೆ ಮಾಡುತ್ತಿದ್ದೆ. 4000 ಅಮೌಂಟ್ ಗೆ ಬರುವಂತದನ್ನೇ ತೆಗೆದುಕೊಳ್ಳೋಣ, ಅಷ್ಟೇ ಅಮೌಂಟ್ ಹೊಂದಿಸಲು ನನ್ನಿಂದ ಸಾಧ್ಯ ಎಂದು ಅಂದುಕೊಳ್ಳುತ್ತಿದ್ದೆ. ಆದರೆ ಜಿಗ್ ಜಾಗ್, ವರ್ಲ್ಯಾಕ್, ಎಂಬ್ರಾಯ್ಡರಿ ಕೆಲಸ ಮಾಡುವಂತ ಒಂದು ಮಷೀನ್ ಹೊಸದಾಗಿ ತೆಗೆದುಕೊಳ್ಳುವ ಹಾಗೆ ದೇವರು ಕೃಪೆ ಕೊಟ್ಟಿದ್ದಾರೆ. ಅದಕ್ಕಾಗಿ ದೇವರ ನಾಮಕ್ಕೆ ಸ್ತೋತ್ರ.  ಅದರಂತೆ ನನ್ನ ಅಕ್ಕನಿಗೆ  ಒಂದು ಬೋನಸ್ ಸಿಕ್ಕು, ಒಂದು ಸ್ವಂತ  ಅಂಗಡಿಯನ್ನು ನಡೆಸುವಂತೆ ದೇವರು ಕೃಪೆ ಕೊಟ್ಟಿದ್ದಾರೆ. ಅದಕ...

Testimony # 719 - ಒಂದು ದಿನ ಪಕ್ಕದ ಮನೆಯಲ್ಲಿ.........

Image
  ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻.  ನನ್ನ ಹೆಸರು ನಿರ್ಮಲ   ದೇವರಿಗೆ ಕೋಟಿ ಕೋಟಿ ಸ್ತೋತ್ರ ವಾಗಲಿ . ನಾವು ಮಾರ್ನಿಂಗ್ ಪ್ರೇಯರ್ ಗೆ ಜಾಯಿನ್ ಆಗಿ ಒಂದು ವಾರ ಅಷ್ಟೇ ಆಯ್ತು   . ದೇವರು ನಮ್ಮನ್ನು ತುಂಬಾ ಅದ್ಭುತವಾಗಿ ನಡೆಸುತ್ತಿದ್ದಾರೆ, ನಾನು ಮಾತ್ರ ಅಲ್ಲ ನನ್ನ ಫ್ರೆಂಡ್ಸ್ ಗಳಿಗೆ ಸಹ ಇದನ್ನು ಕಳಿಸುತ್ತೇನೆ, ಎಲ್ಲರೂ ತುಂಬಾ ಖುಷಿಪಡುತ್ತಾ ಇದ್ದಾರೆ ಎಲ್ಲರ ಜೊತೆಯಲ್ಲಿ ಅದ್ಭುತ ಆಗುತ್ತಿದೆ.  ಒಂದು ದಿನ ಪಕ್ಕದ ಮನೆಯಲ್ಲಿ ತುಂಬಾ ಜೋರು ಜಗಳ ಆಗುತ್ತಿತ್ತು, ಪಾಸ್ಟರ್ ಮೆಸೇಜ್ ಸ್ಟಾರ್ಟ್ ಮಾಡಿ ಇದನ್ನು ಕೇಳಿಸಿಕೊಳ್ಳಿ ಎಂದು ಹೇಳಿದೆ, ಸಲ್ಪ ಸಮಯದಲ್ಲಿಯೇ ಅವರು ನನಗೆ ನೆಮ್ಮದಿ ಸಿಕ್ಕಿತು. ಇನ್ನು ಮೇಲೆ ನಾನು ಜಗಳ ಮಾಡುವುದಿಲ್ಲ ಎಂದು ಹೇಳಿದರು., ಮಾರ್ನಿಂಗ್ ಪ್ರೇಯರ್ ಜಾಯಿನ್ ಆಗಲು ಎಲ್ಲರೂ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ನಮಗೆ ಏನು ಬೇಕೋ ಅದನ್ನು ದೇವರು ಅನುಗ್ರಹಿಸುತ್ತಿದ್ದಾರೆ. ಪ್ರತಿದಿನ ವಾಕ್ಯ ಸಿಗುತ್ತದೆ.   ದೇವರ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ .  ನನಗೆ ಅನ್ಯ ಭಾಷೆ ಮಾತಾಡಲು ಬರುತ್ತಿರಲಿಲ್ಲ. ಮೈಸೂರಿನಿಂದ ಒಬ್ಬ ಬ್ರದರ್ ಹೇಳಿಕೊಟ್ಟರು. ನಿಜವಾಗಲೂ ತುಂಬಾ ಬಲ ಕೊಡ್ತಾ ಇದೆ.  ನಮಗೆ ಬೇಕಾಗಿರುವ ಪಾಸ್ಟರ್ ಅನ್ನು ದೇವರೇ ಒದಗಿಸಿ ಕೊಟ್ಟಿದ್ದಾರೆ.   ಬ್ರದರ್ ಫೋನ್ ಕಾಲ್ ಮೂಲಕ ಬಲಪಡಿಸುತ್ತಿರುತ್ತಾರೆ.  ತುಂಬಾ ಸಂತೋಷವಾಗುತ್ತಿದೆ...

Testimony # 718 - ರಾಜಿನಾಮೆಯನ್ನು ಹರಿದು ಹಾಕಿ......

Image
  ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻.  ನನ್ನ ಹೆಸರು ಲಕ್ಷ್ಮಿ   ಕೆಲವು ದಿನಗಳಿಂದ ನನ್ನ ಕೆಲಸದಲ್ಲಿ ಏರುಪೇರಾಗಿ ತುಂಬಾ ಬೇಜಾರಿನಲ್ಲಿದ್ದೆ. ಸಿಸ್ಟಮ್ ಅಪ್ಡೇಟ್ ಮಾಡಲು, ಹೊಸಹೊಸ ಮೆಡಿಸಿನ್ ಆಪರೇಟ್ ಮಾಡಲು ಬರುವುದಿಲ್ಲ, ಅದರಲ್ಲಿ ನನಗೆ ಯಾವುದೇ ಅನುಭವ ಇಲ್ಲ. ಹೇಳಿಕೊಟ್ಟದ್ದನ್ನು ಮಾಡಲು ಆಗುತ್ತಿಲ್ಲ ಎಂದು ಪದೇಪದೇ ಬಯ್ಯುತ್ತಿದ್ದರು, ಸ್ವಲ್ಪ ದಿನಗಳಿಂದ ಯಾವ ಮೀಟಿಂಗಿಗೂ ಕರೆಯುತ್ತಿರಲಿಲ್ಲ. ಶನಿವಾರ ದಿನ ಪಾಸ್ಟರ್ ಬರುತ್ತಾರೆ ಎಂದು ರಜೆ ಕೇಳಲು ನಮ್ಮ ಮನೆಯವರು ಹೋದರು, ಅವರನ್ನೇ ಕಳಿಸಿ ಎಂದು ಹೇಳಿ ಕಳುಹಿಸಿದರು, ಕೆಲಸ ಸೆಟ್ ಆಗಲಿಲ್ಲ ಅಂದರೆ ರಾಜೀನಾಮೆ ಕೊಟ್ಟುಬಿಡೋಣ ಎಂದು ಹೋದೆ, ಅವರು ಕೊಡು ನಾನು ಅಕ್ಸೆಪ್ಟ್ ಮಾಡಿಕೊಳ್ಳುತ್ತೇನೆ ಅಂದರು, ತುಂಬಾ ಅಳುತ್ತಿದ್ದೆ, ನಮ್ಮ ಮನೆಯವರು ಹೇಳುತ್ತಿದ್ದರು ದೇವರು ಏನಾದರೂ ದಾರಿ ತೋರಿಸುತ್ತಾನೆ ಎಂದು.  ನಿಮ್ಮ ದುಃಖ ಹೋಗಿ ಆನಂದ ಬರುವುದು ಎಂಬ ವಾಕ್ಯ ನನ್ನಲ್ಲಿ ಬೇರೂರಿರುವಾಗ ನಾನು ಸಂತೋಷವಾಗಿರುತ್ತೇನೆ ಎಂದು ಅರಿಕೆ ಮಾಡುತ್ತಿದ್ದೆ. ರಾಜೀನಾಮೆ ಪತ್ರವನ್ನು ಬರೆದುಕೊಂಡು ಹೋದೆ, ಅವರಿಗೆ ಕೊಟ್ಟೆ, ತೆಗೆದುಕೊಂಡರು ಮತ್ತು ಅಕ್ಸೆಪ್ಟ್ ಅಂತ ಬರೆದರು, ಅವರ ಮನಸ್ಸಿನಲ್ಲಿ ಏನು ಅನ್ನಿಸಿತ್ತೋ ಕೌನ್ಸೆಲಿಂಗ್ ಮಾಡಿ, ನಿ ಜವಾಗಲೂ ನನ್ನ ಮೇಲೆ ಪ್ರೀತಿ ಇದ್ದರೆ ಈ ರಾಜೀನಾಮೆಯನ್ನು ಹರಿದು ಹಾಕಿ ಮತ್ತೆ ಕೆಲಸಕ್ಕೆ ಜಾಯಿನ್ ಆಗು ಅಂದರು.   ದೇವರ ನಾ...

2026ರ ಜನವರಿ ತಿಂಗಳಿಗೆ ದೇವರು ಕೊಟ್ಟ ಹೊಸ ವರ್ಷದ ಪ್ರವಾದನೆಯ ವಾಗ್ದಾನವು " ಪುನಸ್ಥಾಪನೆಯ ಏದೆನ್"

Image
  2026ರ ಜನವರಿ ತಿಂಗಳಿಗೆ ದೇವರು ಕೊಟ್ಟ  ಹೊಸ ವರ್ಷದ  ಪ್ರವಾದನೆಯ ವಾಗ್ದಾನವು  " ಪುನಸ್ಥಾಪನೆಯ  ಏದೆನ್ "  ಯೇಸುವಿನ ನಾಮದಲ್ಲಿ ಇದನ್ನು ಓದುತ್ತಿರುವ ಪ್ರತಿಯೊಬ್ಬ ಸಹೋದರ ಮತ್ತು ಸಹೋದರಿಯರಿಗೆ ಮೊದಲನೆಯದಾಗಿ ಹೊಸ ವರ್ಷದ ಶುಭಾಶಯಗಳು. ಈ ಸಂದೇಶವನ್ನು ಓದುವುದರ  ಮೂಲಕ ದೇವರು ನಿಮಗಾಗಿ ಇಟ್ಟಿರುವ ಜೀವಿತವನ್ನು, ಯಾವ ಪ್ರಯಾಸವು ಇಲ್ಲದೆ ತೃಪ್ತಿಯಾಗಿ ಅನುಭವಿಸುವಂತೆ ನಿಮ್ಮ ನಂಬಿಕೆಯನ್ನು ಹೆಚ್ಚಿಸಲಿ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ. 2026ರಲ್ಲಿ ನಾವು ಅನುಭವಿಸಬೇಕಾಗಿರುವ ಕಾರ್ಯಗಳನ್ನು ಮತ್ತು ಪ್ರಕಟಣೆಗಳನ್ನು ನೋಡಿಕೊಳ್ಳೋಣ. ಇದರ ಬಗ್ಗೆ ನೀವು ಏನನ್ನು ಮಾಡುವ ಅವಶ್ಯಕತೆ ಇಲ್ಲ, ಆದರೆ ಈ ಕಾರ್ಯಗಳು ನಿಮ್ಮಲ್ಲಿ ಹೇಗೆ ಕೆಲಸ ಮಾಡುತ್ತದೆ? ಮತ್ತು ನಿಮ್ಮ ಜೀವಿತದಲ್ಲಿ ಹೇಗೆ ಅನುಭವಿಸಬೇಕು? ಎನ್ನುವ ಸತ್ಯವನ್ನು ಈಗ ನಿಮಗೆ ತಿಳಿಸುತ್ತೇನೆ.  ಈ ವರ್ಷದ ವಾಗ್ದಾನದ ವಚನ: ಯೆಹೆಜ್ಕೇಲ 47:9 ಈ ತೊರೆಯು ಎಲ್ಲೆಲ್ಲಿ ಹರಿಯುತ್ತದೋ ಅಲ್ಲಲ್ಲಿ ಗುಂಪುಗುಂಪಾಗಿ ಚಲಿಸುವ ಸಕಲವಿಧ ಜಲಜಂತುಗಳು ಬದುಕಿಬಾಳುವವು; ಮೀನುಗಳು ತಂಡೋಪತಂಡವಾಗಿರುವವು. ಈ ನೀರು ಸಮುದ್ರಕ್ಕೆ ಬೀಳಲು [ಆ ನೀರೂ] ಸಿಹಿಯಾಗುವದು; ಈ ತೊರೆಯು ಎಲ್ಲೆಲ್ಲಿ ಹರಿದರೂ ಅಲ್ಲಲ್ಲಿ ಜೀವವುಂಟಾಗುವದು.  ಈ ವಚನದ ಪ್ರಕಟಣೆಗಿಂತ ಮೊದಲು ಮೂಲ ಏನು ಎಂದು ತಿಳಿದುಕೊಳ್ಳೋಣ.  ದೇವರ ಮೂಲ ಉದ್ದೇಶ ಹೇಗಿತ್ತು?...