Testimony # 718 - ರಾಜಿನಾಮೆಯನ್ನು ಹರಿದು ಹಾಕಿ......

 ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻.

 ನನ್ನ ಹೆಸರು ಲಕ್ಷ್ಮಿ 

 ಕೆಲವು ದಿನಗಳಿಂದ ನನ್ನ ಕೆಲಸದಲ್ಲಿ ಏರುಪೇರಾಗಿ ತುಂಬಾ ಬೇಜಾರಿನಲ್ಲಿದ್ದೆ. ಸಿಸ್ಟಮ್ ಅಪ್ಡೇಟ್ ಮಾಡಲು, ಹೊಸಹೊಸ ಮೆಡಿಸಿನ್ ಆಪರೇಟ್ ಮಾಡಲು ಬರುವುದಿಲ್ಲ, ಅದರಲ್ಲಿ ನನಗೆ ಯಾವುದೇ ಅನುಭವ ಇಲ್ಲ. ಹೇಳಿಕೊಟ್ಟದ್ದನ್ನು ಮಾಡಲು ಆಗುತ್ತಿಲ್ಲ ಎಂದು ಪದೇಪದೇ ಬಯ್ಯುತ್ತಿದ್ದರು, ಸ್ವಲ್ಪ ದಿನಗಳಿಂದ ಯಾವ ಮೀಟಿಂಗಿಗೂ ಕರೆಯುತ್ತಿರಲಿಲ್ಲ. ಶನಿವಾರ ದಿನ ಪಾಸ್ಟರ್ ಬರುತ್ತಾರೆ ಎಂದು ರಜೆ ಕೇಳಲು ನಮ್ಮ ಮನೆಯವರು ಹೋದರು, ಅವರನ್ನೇ ಕಳಿಸಿ ಎಂದು ಹೇಳಿ ಕಳುಹಿಸಿದರು, ಕೆಲಸ ಸೆಟ್ ಆಗಲಿಲ್ಲ ಅಂದರೆ ರಾಜೀನಾಮೆ ಕೊಟ್ಟುಬಿಡೋಣ ಎಂದು ಹೋದೆ, ಅವರು ಕೊಡು ನಾನು ಅಕ್ಸೆಪ್ಟ್ ಮಾಡಿಕೊಳ್ಳುತ್ತೇನೆ ಅಂದರು, ತುಂಬಾ ಅಳುತ್ತಿದ್ದೆ, ನಮ್ಮ ಮನೆಯವರು ಹೇಳುತ್ತಿದ್ದರು ದೇವರು ಏನಾದರೂ ದಾರಿ ತೋರಿಸುತ್ತಾನೆ ಎಂದು. 

ನಿಮ್ಮ ದುಃಖ ಹೋಗಿ ಆನಂದ ಬರುವುದು ಎಂಬ ವಾಕ್ಯ ನನ್ನಲ್ಲಿ ಬೇರೂರಿರುವಾಗ ನಾನು ಸಂತೋಷವಾಗಿರುತ್ತೇನೆ ಎಂದು ಅರಿಕೆ ಮಾಡುತ್ತಿದ್ದೆ.

ರಾಜೀನಾಮೆ ಪತ್ರವನ್ನು ಬರೆದುಕೊಂಡು ಹೋದೆ, ಅವರಿಗೆ ಕೊಟ್ಟೆ, ತೆಗೆದುಕೊಂಡರು ಮತ್ತು ಅಕ್ಸೆಪ್ಟ್ ಅಂತ ಬರೆದರು, ಅವರ ಮನಸ್ಸಿನಲ್ಲಿ ಏನು ಅನ್ನಿಸಿತ್ತೋ ಕೌನ್ಸೆಲಿಂಗ್ ಮಾಡಿ, ನಿಜವಾಗಲೂ ನನ್ನ ಮೇಲೆ ಪ್ರೀತಿ ಇದ್ದರೆ ಈ ರಾಜೀನಾಮೆಯನ್ನು ಹರಿದು ಹಾಕಿ ಮತ್ತೆ ಕೆಲಸಕ್ಕೆ ಜಾಯಿನ್ ಆಗು ಅಂದರು.

 ದೇವರ ನಾಮಕ್ಕೆ ಮಹಿಮೆ ಉಂಟಾಗಲಿ.


ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR THE LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY


 

Comments

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)