Testimony #703 - ನನ್ನ ಶರೀರದಲ್ಲಿ ತುಂಬಾ ರೋಗಗಳಿದ್ದವು
ದೇವರ ನಾಮಕ್ಕೆ ಮಹಿಮೆ ಉಂಟಾಗಲಿ. ನನ್ನ ಹೆಸರು ಈರಮ್ಮ. ನನ್ನ ಶರೀರದಲ್ಲಿ ತುಂಬಾ ರೋಗಗಳಿದ್ದವು, ಒಂದಕ್ಕೆ ಚಿಕಿತ್ಸೆ ತೆಗೆದುಕೊಳ್ಳಲು ಹೋದರೆ ಇನ್ನೊಂದು ಖಾಯಿಲೆ ಕಂಡು ಬರುತ್ತಿತ್ತು. ಗಂಟಲು, ಬೆನ್ನು, ಭುಜದಲ್ಲಿ, ಹೊಟ್ಟೆ, ಗರ್ಭಕೋಶ, ಪಿತ್ತಕೋಶ, ಹೃದಯ ಒಂದೊಂದು ಅಂಗಗಳಲ್ಲಿ ಒಂದೊಂದು ರೀತಿಯ ಸಮಸ್ಯೆ ಇರುತ್ತಿತ್ತು. ಡಾಕ್ಟರ್ ಮತ್ತು ಜನರು ಹೇಳಿದಾಗ ಸ್ಕ್ಯಾನಿಂಗ್ ಮತ್ತು ಎಂಆರ್ ಐ ಮಾಡಿಸಿಕೊಂಡು ಮೆಡಿಸಿನ್ ತೆಗೆದುಕೊಳ್ಳುತ್ತಿದ್ದೆ. ಪಾಸ್ಟರ್ ನನಗಾಗಿ ಪ್ರಾರ್ಥಿಸಿದರು ಮತ್ತು ಅವರು ಹೇಳಿದಂತೆ ಗುಣುಗುಟ್ಟುವುದನ್ನು ಬಿಟ್ಟು, ಎಲ್ಲರನ್ನೂ ಕ್ಷಮಿಸಿ, ನನ್ನ ತಪ್ಪುಗಳನ್ನು ಒಪ್ಪಿಕೊಂಡು, ಮನಸ್ಸಿನಲ್ಲಿ ಯಾವ ಕಹಿ ಭಾವನೆಯನ್ನು ಇಟ್ಟುಕೊಳ್ಳದೆ, ಎಲ್ಲರಿಗೂ ಪ್ರಾರ್ಥಿಸುತ್ತಾ, ಎಲ್ಲರನ್ನೂ ಆಶೀರ್ವದಿಸುತ್ತಾ ಪ್ರಾರ್ಥಿಸುತ್ತಿದ್ದೆ. ಪಾಸ್ಟರ್ ಬಿಡುಗಡೆ ಮಾಡುವ ವಾಕ್ಯಗಳನ್ನು ಸ್ವೀಕರಿಸುತ್ತೇನೆ ಮತ್ತು ರವಿವಾರ ಸಂಜೆ ಪಾಸ್ಟರ್ ಅಮ್ಮ ನಡೆಸುವ ಮಹಿಳೆಯರ ಕೂಟದಲ್ಲಿ ಭಾಗವಹಿಸುತ್ತೇನೆ. ಈಗ ಮೂರು ತಿಂಗಳಿಂದ ಈ ಎಲ್ಲಾ ಕಾಯಿಲೆಗಳು ಮತ್ತೆ ಬಂದಾಗ ಬೆಂಗಳೂರಿನಲ್ಲಿ ಒಂದು ಹಾಸ್ಪಿಟಲ್ ಗೆ ಹೋದೆ, ಅವರು 8 ರಿಂದ 10 ದಿನ ಇಲ್ಲೇ ಇರಬೇಕು ಅಂದರು, ಆದರೆ ಪಾಸ್ಟರ್ ನನಗಾಗಿ ಪ್ರಾರ್ಥಿಸಿ, ಇನ್ನು ಮುಂದೆ ಈ ಶರೀರದಲ್ಲಿ ಯಾವ ಸ್ಕ್ಯಾನಿಂಗ್, ಎಂಆರ್ ಐ...