Testimony #702 - ಕೆಲವು ವರ್ಷಗಳ ಹಿಂದೆ ಎರಡು ಸಲ ನನ್ನ ಕಾಲು ಆಪರೇಷನ್ ಆಗಿತ್ತು
ನನ್ನ ಹೆಸರು ಅಪ್ಪು,
ದೇವರ ನಾಮಕ್ಕೆ ಮಹಿಮೆ ಉಂಟಾಗಲಿ.
ಕೆಲವು ವರ್ಷಗಳ ಹಿಂದೆ ಎರಡು ಸಲ ನನ್ನ ಕಾಲು ಆಪರೇಷನ್ ಆಗಿತ್ತು, ಈಗ ಎರಡು ವರ್ಷಗಳಿಂದ ಮತ್ತೆ ಪದೇ ಪದೇ ನೋವು ಕಾಣಿಸುತ್ತಿತ್ತು, ಕೀವು ಸೋರುತ್ತಿತ್ತು, ಹೆಚ್ಚು ಹೊತ್ತು ನಿಂತುಕೊಂಡು ಕೆಲಸ ಮಾಡಲು ಆಗುತ್ತಿರಲಿಲ್ಲ, ತುಂಬಾ ಉರಿಯುತ್ತಿತ್ತು, ಸಹಿಸಲು ಅಸಾಧ್ಯವಾದ ನೋವಿನಿಂದ ರಾತ್ರಿಯಲ್ಲಿ ಮಲಗಲು ಸಾಧ್ಯವಾಗುತ್ತಿರಲಿಲ್ಲ.
ಡಾಕ್ಟರ್ ಗೆ ತೋರಿಸುವಾಗ ಅವರು ನೀನು ಅಡ್ಮಿಟ್ ಆಗಬೇಕು ಎಂದು ಹೇಳಿದರು, ಆದರೆ ನಾನು ಪ್ರಾರ್ಥನೆ ಕೂಟವನ್ನು ಮುಗಿಸಿಕೊಂಡು ಹೋಗಬೇಕು ಅಂದುಕೊಂಡೆ.
ಅಕ್ಟೋಬರ್ 11 ಮತ್ತು 12 ರಂದು ಬೆಳಗಾವಿಯಲ್ಲಿ ನಡೆದ ಪ್ರವಾದನೆಯ ಸಮ್ಮೇಳನದಲ್ಲಿ ಭಾಗವಹಿಸಿದೆ. ಪಾಸ್ಟರ್ ಬಿಡುಗಡೆ ಮಾಡುವ ಎಲ್ಲಾ ವಾಕ್ಯಗಳನ್ನು ಆಸಕ್ತಿಯಿಂದ ಕೇಳಿದೆ ಮತ್ತು ಹೊಂದಿಕೊಂಡೆ.
ಅದರ ನಿಮಿತ್ತವಾಗಿ ಕಾಲಿನಲ್ಲಿ ಕೀವು ಸೋರುವುದು ನಿಂತುಹೋಗಿ, ನೋವು ಕ್ರಮೇಣವಾಗಿ ಕಡಿಮೆಯಾಗುತ್ತಾ ಬಂತು. ಈಗ ಯಾವ ನೋವು ಇಲ್ಲದೆ ಪೂರ್ತಿ ಗಾಯ ಒಣಗಿಹೋಗಿದೆ. ಹೊಲದಲ್ಲಿ ಎಷ್ಟೇ ಕೆಲಸ ಮಾಡಿದರೂ ಯಾವ ನೋವೂ ಇಲ್ಲ. Amen 🙏
ನಾನು ಹಾಸ್ಪಿಟಲ್ ಗೆ ಹೋಗಲಿಲ್ಲ, ಯಾವ ಮಾತ್ರೆಯನ್ನು ನುಂಗಲಿಲ್ಲ.
ವಾಕ್ಯದ ಆತ್ಮ ನನ್ನಲ್ಲಿ ಇಂಥ ಅದ್ಭುತವಾದ ಕಾರ್ಯವನ್ನು ಮಾಡಿ ನನ್ನನ್ನು ಸಾಕ್ಷಿಯಾಗಿ ನಿಲ್ಲಿಸಿದ್ದಕ್ಕಾಗಿ ದೇವರಿಗೆ ಕೃತಜ್ಞತೆಯಿಂದ ಕೋಟಿ ಕೋಟಿ ಸ್ತೋತ್ರವನ್ನು ಸಲ್ಲಿಸುತ್ತೇನೆ. Amen 🙏🏻
ಫಾಲೋ ಮಾಡಿ, ಲೈಕ್ ಮಾಡಿ, ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory to God 🙏
ReplyDeleteGlory to god 🙏Powerful Testimony 👏👏👏🔥
ReplyDeleteGlory Glory to Jesus only 🙏🏻🎉🎉🎉🥳🥳🥳
ReplyDelete