Posts

Showing posts from December, 2025

Testimony #715 - ನೀನು ಅವರ ಮನೆಗೆ ಹೋಗು...

Image
  ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ🙏🏻🙏🏻🙏🏻.  ನನ್ನ ಹೆಸರು ರೇಖಾ  ನಮ್ಮ ಮನೆಗೆ ಸ್ವಲ್ಪ ಹತ್ತಿರದಲ್ಲಿ ಒಂದು ಪಂಜಾಬಿ ವಿಶ್ವಾಸಿ ಕುಟುಂಬ ಇತ್ತು. ಅವರು ನಮ್ಮ ಮನೆಯವರಿಗೆ ಪರಿಚಯವಾಗಿದ್ದರಿಂದ ಒಂದು ದಿನ ಅವರ ಮನೆಗೆ ಹೋಗಿ ಪ್ರಾರ್ಥನೆ ಮಾಡಿ ಬಂದೆವು. ಅವರು ಬೇರೆ ಸಭೆಗೆ ಹೋಗುತ್ತೇನೆ ಎಂದು ಹೇಳಿದರು, ಆದ್ದರಿಂದ  ನಮ್ಮ ಅವರ ಸಂಪರ್ಕ ಇಲ್ಲದೇ ಹೋಯಿತು. ಎಂಟು ತಿಂಗಳ ನಂತರ ಮೊನ್ನೆ ಅವರ ಸೊಸೆ ನಮ್ಮ ಮನೆಗೆ ಬಂದು ಹೋದಳು. ಅದೇ ದಿನ ರಾತ್ರಿ ಪವಿತ್ರಾತ್ಮನು ನನಗೆ  " ನೀನು ಅವರ ಮನೆಗೆ ಹೋಗು" ಎಂದು  ಹೇಳಿದರು. ನಮ್ಮ ಮನೆಯವರಿಗೆ ಹೇಳಿ ಹೋದೆ. ಆದರೆ ನನಗೆ ಅವರ ಮನೆ ಗೊತ್ತಿರಲಿಲ್ಲ. ಪವಿತ್ರಾತ್ಮನೇ ದಾರಿ ತೋರಿಸುತ್ತಾರೆ ಎಂದು ಹೋದೆ. ಅವರೇ ಹೊರಗಡೆ ಬಂದರು, ಅವರ ಮನೆಗೆ ಹೋಗಿ ನೋಡಿದೆ, ಅವರಿಗೆ ಊಟಕ್ಕೂ ಇರಲಿಲ್ಲ, ನಾಲ್ಕು ತಿಂಗಳ ಮಗುವಿಗೆ ಹಾಸ್ಪಿಟಲ್ ಗೆ ತೋರಿಸಲು ಸಹ ದುಡ್ಡು ಇರಲಿಲ್ಲ. ಅದು ಅಳುತ್ತಿತ್ತು, ನಮ್ಮ ಮನೆಯವರು ತೀರಿ ಹೋದರು ಎಂದು ಅಳುತ್ತಿದ್ದರು, ನಾನು ಪ್ರಾರ್ಥನೆ ಮಾಡಿ, ನಮ್ಮ ಪಾಸ್ಟರ್ ಬಗ್ಗೆ ಹೇಳಿ, ಅವರ ವಿಡಿಯೋ ಕೇಳಿ ಎಂದು ಹೇಳಿ ಬಂದೆ , ಅವರಿಗೆ ಕನ್ನಡ ಬರದೇ ಇದ್ದರೂ, ಕನ್ನಡ ಅರ್ಥವಾಗದಿದ್ದರೂ  ಅವರ ಸೊಸೆ ಇನ್ನು ಹೆಚ್ಚಾದ ವಿಡಿಯೋಗಳನ್ನು ಕಳಿಸಿ ಎಂದು ಹೇಳಿದರು. ನಾನು ವಿಡಿಯೋ ಕಳಿಸಿದೆ, ಅವರ ಮಗಳಿಗೆ ಹೊರದೇಶದಲ್ಲಿ ಕೆಲಸ ಸಿಕ್ಕಿತು ಎಂದು ಹ...

Testimony #714 - ನಾಲ್ಕು ತಿಂಗಳಲ್ಲಿ ಮಾರಾಟವಾಗಬೇಕಿದ್ದ ದ್ರಾಕ್ಷಿ ಹಣ್ಣು, ಈ ವರ್ಷದಲ್ಲಿ ...

Image
  ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ. 🙏🏻🙏🏻🙏🏻  ನನ್ನ ಹೆಸರು ಜ್ಯೋತಿ.   ದ್ರಾಕ್ಷಿ ಹಣ್ಣಿನ ವ್ಯಾಪಾರಕ್ಕಾಗಿ ನಾವು ಪಾಸ್ಟರ್ ಕಡೆಯಿಂದ ಪ್ರಾರ್ಥನೆ ಮಾಡಿಸಿಕೊಂಡಿದ್ದೆವು. ಶನಿವಾರ ರವಿವಾರ ಎರಡು ದಿನ ಸತತವಾಗಿ ತೆಗೆದುಕೊಂಡು ಮಾರಾಟ ಮಾಡುವುದಕ್ಕೆ ಹೋದರು. ಬೆಳಗಿನ 10:30 ಅಷ್ಟರಲ್ಲಿ ಎಲ್ಲವನ್ನು ಮಾರಾಟ ಮಾಡಿ ಬಂದರು. ನಾಲ್ಕು ತಿಂಗಳಲ್ಲಿ ಮಾರಾಟವಾಗಬೇಕಿದ್ದ ದ್ರಾಕ್ಷಿ ಹಣ್ಣು, ಈ ವರ್ಷದಲ್ಲಿ  ಒಂದೇ ತಿಂಗಳಲ್ಲಿ  ಮಾರಾಟವಾಗಿದೆ.!!!!!   ದೇವರು ಎಲ್ಲಾದರಲ್ಲಿಯೂ ಸಹಾಯ ಮಾಡುತ್ತಿದ್ದಾರೆ. ನಾನು ದೇವರಲ್ಲಿ ಬಂದ ಮೇಲೆ ಬಹಳ ಅನುಕೂಲವಾಗಿದೆ. ದೇವರಿಗೆ ಎಷ್ಟು ಸ್ತೋತ್ರ ಹೇಳಿದರು ಕಡಿಮೆ. ಎಲ್ಲಾ ರೀತಿಯಿಂದಲೂ ಒಳ್ಳೆಯದಾಗಿ ನಡೆಸುತ್ತಾ ಇದ್ದಾರೆ.   ನಾವು 20 ವರ್ಷದಿಂದ ದ್ರಾಕ್ಷಿ ಬೆಳೆಯನ್ನು ಬೆಳೆಯುತ್ತಿದ್ದೇವೆ. ಯಾವಾಗಲೂ 20 ರೂಪಾಯಿ 30 ರೂಪಾಯಿ ಮಾರಾಟವಾಗುತ್ತಿದ್ದ ದ್ರಾಕ್ಷಿ ಈ ಸಲ 90 ರೂಪಾಯಿಗೆ ಮಾರಾಟವಾಗಿದೆ.🥳🥳🎉🎉   ದೇವರಿಗೆ ಮಹಿಮೆ ಉಂಟಾಗಲಿ. ದೇವರಿಗೆ ಕೋಟಿ ಕೋಟಿ ಸ್ತೋತ್ರ. ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್  ಮಾಡಿ ! Rev John Ebenezer - Youtube Rev John Ebenezer - Instagram Rev John Ebenezer - Facebook                SCAN FOR THE L...

Testimony #713 - ನನ್ನ ಕುಟುಂಬದ ಮೇಲೆ ಮಾಡಿದ ಅದ್ಭುತಗಳನ್ನು ಹಂಚಿಕೊಳ್ಳಲು...

Image
  ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻   ನನ್ನ ಹೆಸರು ರೇಖಾ   ದೇವರ ನಾಮಕ್ಕೆ ಕೋಟಿ ಕೋಟಿ ಸ್ತೋತ್ರಗಳು. ಕಳೆದ ಕೆಲವು ವಾರಗಳಲ್ಲಿ ದೇವರು ನನ್ನ ಕುಟುಂಬದ ಮೇಲೆ ಮಾಡಿದ ಅದ್ಭುತಗಳನ್ನು ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ. 1. ನನ್ನ ಮಗನಿಗೆ ದೇವರು ಮಾಡಿದ ಅದ್ಭುತ ನನ್ನ ಮಗನು ಹಾಸ್ಟೆಲ್‌ನಲ್ಲಿ ಇದ್ದಾಗ ಅವನಿಗೆ ತುಂಬಾ ಜ್ವರ ಇತ್ತು. ನಾನು ಭರತ್ ಅಣ್ಣನಿಂದ ಪ್ರಾರ್ಥನೆ ಮಾಡಿಸಿಕೊಂಡೆ. ಮುಂದಿನ ದಿನ ನಾನು ವಾರ್ಡನ್‌ಗೆ ವಿಚಾರಿಸಿದಾಗ, “ರಾತ್ರಿ ಒಂದು ಮಾತ್ರೆ ಕೊಟ್ಟಿದ್ದೇವೆ, ಹೇಗೆ ಜ್ವರ ಇಳಿಯಿತು  ನಮಗೆ ಗೊತ್ತಿಲ್ಲ” ಎಂದು ಆಶ್ಚರ್ಯದಿಂದ ಹೇಳಿದರು. ಪ್ರಾರ್ಥನೆಯ ಮೂಲಕ ಜ್ವರ ಒಂದೇ ರಾತ್ರಿ ಸಂಪೂರ್ಣವಾಗಿ ಹೋಗಿತ್ತು. ದೇವರಿಂದ ಬಂದ ಆ ಮಾತು ಮತ್ತು ಪ್ರಾರ್ಥನೆ ನನ್ನ ಮಗನಿಗೆ ಪರಿಪೂರ್ಣ ಗುಣವಾಗುವಂತೆ ಮಾಡಿತು. ನನ್ನ ಮಗನಿಗೆ  ಸೈನಿಕ ಶಾಲೆಗೆ ಎಕ್ಸಾಮ್ ಬರೆಯಲು ಅರ್ಜಿ ಹಾಕುತ್ತಿದ್ದೆವು, ಎಷ್ಟೋ ದಿನದಿಂದ ಹಾಕುತ್ತಿದ್ದರು ಕೂಡ ಸರ್ವರ್ ಬಿಜಿ ಎಂದು ತೆಗೆದುಕೊಳ್ಳುತ್ತಿರಲಿಲ್ಲ, ಆದರೆ ಪ್ರಾರ್ಥನೆ ಮಾಡಿದ ರಾತ್ರಿಯೇ ನಾವು ಹಾಕಿದ ಅರ್ಜಿ ತೆಗೆದುಕೊಂಡು ಪರೀಕ್ಷೆಯನ್ನು ಬರೆಯಲು ನನ್ನ ಮಗನಿಗೆ ಅವಕಾಶ  ಸಿಕ್ಕಿತು. ದೇವರಿಗೆ ಕೋಟಿ ಸ್ತೋತ್ರ! 2. ನನ್ನ ಕಾಲಿನ ನೋವಿಗೆ ಬಂದ ಬಿಡುಗಡೆ ಹಿಂದಿನ ವಾರ ನನಗೆ ಕಾಲು ನೋವು, ಊತ  ನಡೆಯಲು ಆಗದ ಸ್ಥಿತಿ. ಆ ಸಮಯದಲ್ಲಿ ...

Testimony #712 - ಒಂದು ಹುಡುಗನಿಗೆ ಇತ್ತೀಚೆಗೆ ಭೀಕರವಾದ ಅಪಘಾತವಾಗಿತ್ತು...

Image
  ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರವಾಗಲಿ. 🙏🏻🙏🏻🙏🏻 ನನ್ನ ಹೆಸರು ಶಿಲ್ಪ  ನಮ್ಮ ಮನೆ ಹತ್ತಿರ ಇರುವ ಒಂದು ಹುಡುಗನಿಗೆ ಇತ್ತೀಚೆಗೆ ಭೀಕರವಾದ ಅಪಘಾತವಾಗಿತ್ತು. ಅವನ ತಲೆಗೆ ತುಂಬಾ ಗಂಭೀರ ಪೆಟ್ಟು ಆಗಿತ್ತು. ನಾವು ಅವರಿಗೆ ಪರಿಚಯವಿರಲಿಲ್ಲ. ಒಂದು ಭಾನುವಾರ ಪ್ರಾರ್ಥನೆ ಮುಗಿಸಿ ಮನೆಗೆ ಹೋಗುತ್ತಿದ್ದಾಗಲೇ ಅವರು ನಮ್ಮನ್ನು ಕರೆದು,  “ನಮ್ಮ ಮನೆಗೆ ಬಂದು ಪ್ರಾರ್ಥಿಸಿ” ಎಂದು ಹೇಳಿದರು. ನಾವು ಮೂರು ಜನ ಸಹೋದರಿಯರು ಹೋಗಿ, ಡಾಕ್ಟರ್ ಅವರು ಚೆಕ್ ಮಾಡಿ ಹೋದ ನಂತರ, ಆ ಹುಡುಗನ ಮೇಲೆ ಕೈ ಇಟ್ಟು ಪ್ರಾರ್ಥನೆ ಮಾಡಿದೆವು. ಹುಡುಗ ತಕ್ಷಣ ಹಾಸಿಗೆಯ ಮೇಲಿಂದ ಎದ್ದು ನಡೆದನು, ಅವರ ತಂದೆ ಹೇಳಿದ್ದು ಇದೇ ಮೊದಲ ಸಾರಿ ಈ ರೀತಿ ಆಗಿದ್ದು, ಇದಕ್ಕೂ ಮೊದಲು ಹೀಗೆಲ್ಲ ಆಗಿರಲಿಲ್ಲ ಎಂದು ಅವರ ತಂದೆ ಆಶ್ಚರ್ಯಪಟ್ಟರು.  ಅವರ ತಾಯಿಯವರು ಮುಂದಿನ ದಿನವೂ   “ಮತ್ತೆ ಬಂದು ಪ್ರಾರ್ಥಿಸಿ” ಎಂದು ಹೇಳಿದರು. ಹೀಗಾಗಿ ನಾವು ದಿನಾಲು ಹೋಗಿ ಪ್ರಾರ್ಥನೆ ಮಾಡುತ್ತಿದ್ದೇವೆ. ಅವರ ಮನೆಯಲ್ಲಿ ತುಂಬಾ ಬದಲಾವಣೆಗಳು ಆಗುತ್ತಿವೆ  ಎಂದು ಹುಡುಗನ ತಂದೆಯೇ ಹೇಳಿದರು.. ಅವರಿಗೆ ಕನ್ನಡ ಬರುವುದಿಲ್ಲ; ಅವರು ಮರಾಠಿ ಭಾಷೆಯವರು. ಆದರೆ ಆ ಹುಡುಗನಿಗೆ ಕನ್ನಡ ಗೊತ್ತು. ಅವನಿಗೆ ಕಣ್ಣು ಕಾಣದಿದ್ದರೂ ನಮ್ಮ ಧ್ವನಿಯನ್ನು ಕೇಳಿ,   “ಅಕ್ಕ ಬಂದಿದ್ದಾರೆ” ಎಂದು ಗುರುತಿಸುತ್ತಾನೆ. ಮೊನ್ನೆ  ನನ್ನ ಬಟ್ಟೆ ಯಾವ...

Testimony #712 - ಎರಡು ಬಾರಿ ಆಪರೇಷನ್ ಕೂಡ ಆಗಿತ್ತು. 5 ಬಾರಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಬೇಕಾಯಿತು...

Image
  ದೇವರ ನಾಮಕ್ಕೆ ಸ್ತೋತ್ರ!   ನನ್ನ ಹೆಸರು ಲಲಿತಾ. ನಾನು ಪ್ರಾರ್ಥನೆಗೆ ಜಾಯಿನ್ ಆಗಿ ಇವತ್ತಿಗೆ 20 ದಿನಗಳು ಆಗಿವೆ. ಮಂಜುಳಾ ಸಿಸ್ಟರ್ ರವರು ಬೆಳಗಿನ ಪ್ರಾರ್ಥನೆಗೆ ಜಾಯಿನ್ ಆಗಿ ಎಂದು ಮಾರ್ಗದರ್ಶನ ನೀಡಿದಾಗಿನಿಂದ, ನನ್ನ ಜೀವನದಲ್ಲಿ ದೇವರು ಅದೆಷ್ಟೋ ಅದ್ಭುತ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ನಾನು ಮತ್ತು ನಮ್ಮ ಮನೆಯವರು ದವಾಖಾನೆ–ಆಸ್ಪತ್ರೆಗಳ ನಡುವೆ ಓಡಾಡುತ್ತಿದ್ದೇವೆ. ಅವರಿಗೆ ಅಸ್ತಮಾ ಸಮಸ್ಯೆ, ಭಯಂಕರ ತ್ರಾಸ್, ಹಾಗೂ ಎರಡು ಬಾರಿ ಆಪರೇಷನ್ ಕೂಡ ಆಗಿತ್ತು. 5 ಬಾರಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಬೇಕಾಯಿತು. ಮನೆಯಲ್ಲಿ ಶಾಂತಿ ಸಮಾಧಾನ ಇರಲಿಲ್ಲ. ಕಳೆದ ವಾರ ನಾನು ಬಿದ್ದು ಕೈ ಮುರಿದುಕೊಂಡಾಗ, ನೀವು ಪ್ರಾರ್ಥನೆ ಮಾಡಿದಿರಿ. ಡಾಕ್ಟರ್ ಆರು ತಿಂಗಳು ಬೇಕು ಎಂದಿದ್ದರು — ಆದರೆ ದೇವರ ಕೃಪೆಯಿಂದ ಕೇವಲ 20 ದಿನಗಳಲ್ಲಿ ಕೈ ಸಂಪೂರ್ಣವಾಗಿ ಆರಾಮವಾಗಿದೆ. ಇದಕ್ಕಾಗಿ ದೇವರಿಗೆ ಕೋಟಿ ಸ್ತೋತ್ರ. ಅದೇ ಸಮಯದಲ್ಲಿ ನನ್ನ ಮನೆಯವರಿಗೂ  ಆಪರೇಷನ್ ಇತ್ತು.ಅದಕ್ಕೂ ನಾವು ಪ್ರಾರ್ಥನೆ ಮಾಡಿಸಿಕೊಂಡೆವು. ಮೊದಲು 8 ದಿನ ಅಡ್ಮಿಟ್ ಮಾಡಿಕೊಂಡು ಸಲೈನ್ ಹಚ್ಚಿ ಆಮೇಲೆ ಆಪರೇಷನ್ ಮಾಡುತ್ತಿದ್ದರು, ಆದರೆ ಈ ಸಲ ಎಲ್ಲಾ ನಾರ್ಮಲ್ ಇದೆ ಸಲೈನ್ ಬೇಡ ಎಂದು ಡಾಕ್ಟರ್ ಹೇಳಿದರು. ಆಪರೇಷನ್ ಸಕ್ಸಸ್ ಆಗಿದ್ದಕ್ಕೆ ಡಾಕ್ಟರ್ ಕೂಡ ಆಶ್ಚರ್ಯಪಟ್ಟರು  ಆಪರೇಷನ್ ಯಶಸ್ವಿಯಾಗಿ ಆಯಿತು, ಅವರು ಚೆನ್ನಾಗಿದ್ದಾರೆ...

Testimony #711 - ನನ್ನ 2 ಕಿಡ್ನಿಗಳು ಡ್ಯಾಮೇಜ್ ಆಗಿದ್ದವು...

Image
  ದೇವರ ನಾಮಕ್ಕೆ ಸ್ತೋತ್ರ 🙏🏻 ನನ್ನ ಹೆಸರು ಉಮ.  ನಾನು ನಾಲ್ಕು ತಿಂಗಳಿನಿಂದ ಅಧಿಕವಾಗಿ ಬಲಹೀನಳಾಗಿದ್ದೆ ಮತ್ತು ಕಿಡ್ನಿಯ ತೊಂದರೆಯಿಂದ ಪೀಡಿತಳಾಗಿದ್ದೆ.ನನ್ನ 2 ಕಿಡ್ನಿಗಳು ಡ್ಯಾಮೇಜ್ ಆಗಿದ್ದವು, ಆಯುರ್ವೇದಿಕ್ ಮೆಡಿಸಿನ್ ತಗೊಂಡೆ, ಇನ್ನೂ ಕೆಟ್ಟದ್ದಾಯಿತು. ನಾನು Rev. John Ebenezer  ರವರ ವಾಕ್ಯವನ್ನು ಕೇಳಿ ಅದರ ಪ್ರಕಾರ ನಡೆಯುತ್ತಿದ್ದೇನೆ. ಪಾಸ್ಟರ್ ಬಳಿಯಲ್ಲಿ ನನ್ನ ಸಮಸ್ಯೆಯನ್ನು ಹೇಳಿಕೊಂಡು ಪ್ರಾರ್ಥನೆ ಮಾಡಿಸಿಕೊಂಡೆ. ಅದರ ನಂತರ ದೇವರು ನನಗೆ ಪರಿಪೂರ್ಣ ಬಿಡುಗಡೆಯನ್ನು ಮತ್ತು ಸಮಾಧಾನವನ್ನು ಕೊಟ್ಟಿದ್ದಾರೆ. ದೇವರಿಗೆ ಕೋಟಿ ಕೋಟಿ ಸ್ತೋತ್ರ 🙏🏻🙏🏻🙏🏻.   ಡಾಕ್ಟರ್ ಗಳನ್ನು ನಾನು ನಂಬಲಿಲ್ಲ, ದೇವರನ್ನು ಮಾತ್ರವೇ ನಾನು ನಂಬಿದ್ದೇನೆ. ಮತ್ತು ನಾನು ತೆಗೆದುಕೊಳ್ಳುತ್ತಿದ್ದ ಮಾತ್ರೆಗಳನ್ನು ನಾನು ನಂಬಲಿಲ್ಲ. ಆದರೆ ಸತ್ಯವನ್ನು ನಂಬಿದ್ದೇನೆ ಮತ್ತು ಪಾಸ್ಟರ್ ರಿಸೀವ್ ಇಟ್  ರಿಸೀವ್ ಇಟ್ ಎಂಬುದಾಗಿ ಪದೇಪದೇ ಹೇಳುತ್ತಿದ್ದರು. ಅದರ ಅರ್ಥ ನನಗೆ ಗೊತ್ತಿರಲಿಲ್ಲ, ಒಂದು ದಿನ ನನಗೆ ಸೀನಿಯರ್ ಪಾಸ್ಟರ್ { ಜಾನ್ ಪಾಸ್ಟರ್ ಅವರ ತಂದೆ Bishop Paul Raj  ಪಾಸ್ಟರ್  } ಅದನ್ನು ಮತ್ತೆ ಸ್ವೀಕರಿಸಿಕೊಂಡಿದ್ದೇನೆ, ಸ್ವೀಕರಿಸಿಕೊಂಡಿದ್ದೇನೆ  ಎಂಬುದಾಗಿ ಸ್ವೀಕರಿಸಿರಿ ಎಂದು ಹೇಳಿ ನನ್ನನ್ನು ಬಲಪಡಿಸಿದರು.  ಬಹಳ ಮಂದಿ ಮತ್ತು ನನ್ನನ್ನು ನೋಡಿದವರೆಲ್ಲ ಯಾಕೆ ...

2025 ರ ಡಿಸೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು, "2026ಗೆ ದೈವಿಕ ಸಿದ್ಧತೆ"

Image
  2025 ರ ಡಿಸೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು, "2026 ಗೆ  ದೈವಿಕ ಸಿದ್ಧತೆ" { Divine Preparation for 2026 }  ಇದನ್ನು ಓದುತ್ತಿರುವ ಪ್ರತಿಯೊಬ್ಬ ಸಹೋದರ ಸಹೋದರಿಯರಿಗೆ ಯೇಸುವಿನ ನಾಮದಲ್ಲಿ ವಂದನೆಗಳನ್ನು ಸಲ್ಲಿಸುತ್ತೇನೆ. ಇಂತಹ ಸತ್ಯವನ್ನು ಓದಿ, ನಿಮ್ಮ ಆತ್ಮದ ಕಣ್ಣುಗಳು ತೆರೆದು, ನಿಮ್ಮ ಆತ್ಮದ ಸಾಮರ್ಥ್ಯ ಹೆಚ್ಚಾಗಿ, ದೇವರ ಉದ್ದೇಶದ ಪ್ರಕಾರ ನಿಮ್ಮ ಜೀವಿತದಲ್ಲಿ ಎಲ್ಲಾ ಕಾರ್ಯಗಳು ಆಶೀರ್ವಾದವಾಗಿ  ನೆರವೇರಲಿ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.  ಕಳೆದ 11 ತಿಂಗಳು ದೇವರು ನಮ್ಮನ್ನು ಸುರಕ್ಷಿತವಾಗಿ, ಆರೋಗ್ಯವಾಗಿ ಮತ್ತು ಆಶೀರ್ವಾದದಲ್ಲಿ ನಡೆಸಿ ಈ ವರ್ಷದ ಕೊನೆಯ ತಿಂಗಳು, ಕೊನೆಯ ವಾಗ್ದಾನವನ್ನು ಕೊಟ್ಟಿದ್ದಾರೆ.   ಈ ತಿಂಗಳು ದೇವರು ಕೊಟ್ಟ ವಾಗ್ದಾನ, " ಆತ್ಮದಲ್ಲಿ ದೈವಿಕ ಸಿದ್ಧತೆ "   ಇವತ್ತಿನ ಧ್ಯಾನ ನಮ್ಮ ಆತ್ಮ, ಪ್ರಾಣ, ಶರೀರ, ಮನಸ್ಸು, ಭಾವನೆಗಳು ಮತ್ತು ಮಾತು ಎಲ್ಲವೂ ಕೂಡ ಆತ್ಮದಲ್ಲಿ ಏನು ಹೊಂದಿಕೊಳ್ಳುತ್ತಿದ್ದೇವೆ?, ಪ್ರಾಣದಲ್ಲಿ ಎಂಥ ಭಾವನೆಯನ್ನು ಪ್ರಕಟಿಸುತ್ತಾ ಇದ್ದೇವೆ?, ಯಾವ ಕಾರ್ಯಗಳನ್ನು ಶರೀರದಲ್ಲಿ ಅನುಭವಿಸುತ್ತಾ ಇದ್ದೇವೆ ಎನ್ನುವುದಾಗಿದೆ. ಅದೇ ರೀತಿ  2026ರಲ್ಲಿ ಏನನ್ನು ಅನುಭವಿಸಬೇಕು  ಎನ್ನುವುದರ ಸಿದ್ಧತೆಯ ತಿಂಗಳಾಗಿದೆ.  ಈ ಸಿದ್ಧತೆಗೆ ದೇವರು ಕೊಟ್ಟ ವಾಗ್ದಾನದ ವಚನ ...