Testimony #715 - ನೀನು ಅವರ ಮನೆಗೆ ಹೋಗು...

 ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ🙏🏻🙏🏻🙏🏻.

 ನನ್ನ ಹೆಸರು ರೇಖಾ

 ನಮ್ಮ ಮನೆಗೆ ಸ್ವಲ್ಪ ಹತ್ತಿರದಲ್ಲಿ ಒಂದು ಪಂಜಾಬಿ ವಿಶ್ವಾಸಿ ಕುಟುಂಬ ಇತ್ತು. ಅವರು ನಮ್ಮ ಮನೆಯವರಿಗೆ ಪರಿಚಯವಾಗಿದ್ದರಿಂದ ಒಂದು ದಿನ ಅವರ ಮನೆಗೆ ಹೋಗಿ ಪ್ರಾರ್ಥನೆ ಮಾಡಿ ಬಂದೆವು. ಅವರು ಬೇರೆ ಸಭೆಗೆ ಹೋಗುತ್ತೇನೆ ಎಂದು ಹೇಳಿದರು, ಆದ್ದರಿಂದ  ನಮ್ಮ ಅವರ ಸಂಪರ್ಕ ಇಲ್ಲದೇ ಹೋಯಿತು. ಎಂಟು ತಿಂಗಳ ನಂತರ ಮೊನ್ನೆ ಅವರ ಸೊಸೆ ನಮ್ಮ ಮನೆಗೆ ಬಂದು ಹೋದಳು. ಅದೇ ದಿನ ರಾತ್ರಿ ಪವಿತ್ರಾತ್ಮನು ನನಗೆ  " ನೀನು ಅವರ ಮನೆಗೆ ಹೋಗು" ಎಂದು  ಹೇಳಿದರು. ನಮ್ಮ ಮನೆಯವರಿಗೆ ಹೇಳಿ ಹೋದೆ. ಆದರೆ ನನಗೆ ಅವರ ಮನೆ ಗೊತ್ತಿರಲಿಲ್ಲ. ಪವಿತ್ರಾತ್ಮನೇ ದಾರಿ ತೋರಿಸುತ್ತಾರೆ ಎಂದು ಹೋದೆ. ಅವರೇ ಹೊರಗಡೆ ಬಂದರು, ಅವರ ಮನೆಗೆ ಹೋಗಿ ನೋಡಿದೆ, ಅವರಿಗೆ ಊಟಕ್ಕೂ ಇರಲಿಲ್ಲ, ನಾಲ್ಕು ತಿಂಗಳ ಮಗುವಿಗೆ ಹಾಸ್ಪಿಟಲ್ ಗೆ ತೋರಿಸಲು ಸಹ ದುಡ್ಡು ಇರಲಿಲ್ಲ. ಅದು ಅಳುತ್ತಿತ್ತು, ನಮ್ಮ ಮನೆಯವರು ತೀರಿ ಹೋದರು ಎಂದು ಅಳುತ್ತಿದ್ದರು, ನಾನು ಪ್ರಾರ್ಥನೆ ಮಾಡಿ, ನಮ್ಮ ಪಾಸ್ಟರ್ ಬಗ್ಗೆ ಹೇಳಿ, ಅವರ ವಿಡಿಯೋ ಕೇಳಿ ಎಂದು ಹೇಳಿ ಬಂದೆ, ಅವರಿಗೆ ಕನ್ನಡ ಬರದೇ ಇದ್ದರೂ, ಕನ್ನಡ ಅರ್ಥವಾಗದಿದ್ದರೂ  ಅವರ ಸೊಸೆ ಇನ್ನು ಹೆಚ್ಚಾದ ವಿಡಿಯೋಗಳನ್ನು ಕಳಿಸಿ ಎಂದು ಹೇಳಿದರು. ನಾನು ವಿಡಿಯೋ ಕಳಿಸಿದೆ, ಅವರ ಮಗಳಿಗೆ ಹೊರದೇಶದಲ್ಲಿ ಕೆಲಸ ಸಿಕ್ಕಿತು ಎಂದು ಹೇಳಿದರು.

 ದೇವರು ನಾಮಕ್ಕೆ ಕೋಟಿ ಕೋಟಿ ಸ್ತೋತ್ರ 🙏🏻🙏🏻🙏🏻


 ನನ್ನ ಚಿಕ್ಕ ಸಾಕ್ಷಿ :

 ಒಂದು ದಿನ ರಾತ್ರಿಯ ಸಮಯದಲ್ಲಿ  ಅಡುಗೆ ಮಾಡುವಾಗ ನನ್ನ ಮಗು ಅಳುತ್ತಿತ್ತು, ನಮ್ಮ ಮನೆಯವರಿಗೆ ತರಕಾರಿ ನೋಡಿಕೊಳ್ಳಿ ಎಂದು ಹೇಳಿದ್ದೆ, ಆದರೆ ಅವರು ಮರೆತಿದ್ದರು, ನೋಡಲಿಲ್ಲ, ಅದು ಹೊತ್ತಿ ಹೋಗಿತ್ತು. ಮತ್ತೆ ಅಡುಗೆ ಮಾಡಿ ಯಾವಾಗ ಊಟ ಮಾಡುವುದು ಎಂದು ಯೋಚಿಸುವಷ್ಟರಲ್ಲಿ ಪವಿತ್ರಾತ್ಮನು "ನನಗೆ ಟೇಸ್ಟ್ ಮಾಡು "ಎಂದು ಹೇಳಿದರು. ನಾನು ಟೇಸ್ಟ್ ಮಾಡಿದೆ, ಇಷ್ಟು ರುಚಿಯಾದದ್ದನ್ನು ತಿಂದೆ ಇಲ್ಲ ಎನ್ನುವಷ್ಟು   ರುಚಿಯಾಗಿತ್ತು.

 ದೇವರ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ 🙏🏻🙏🏻🙏🏻


ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR THE LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY


 

Comments

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)