Testimony #709 - ನಾನು ಹಾಸ್ಪಿಟಲ್ ಗೆ ಹೋಗಿ ಸ್ಕ್ಯಾನಿಂಗ್ ಮಾಡಿಸಿದಾಗ...
ದೇವರ ನಾಮಕ್ಕೆ ಸ್ತೋತ್ರ ವಾಗಲಿ.
ನನ್ನ ಹೆಸರು ಕಮಲಮ್ಮ,
ಸ್ವಲ್ಪ ದಿನಗಳ ಹಿಂದೆ ನನಗೆ ಹೊಟ್ಟೆ ನೋವು ಪದೇ ಪದೇ ಬರುತ್ತಿತ್ತು, ನಾನು ಹಾಸ್ಪಿಟಲ್ ಗೆ ಹೋಗಿ ಸ್ಕ್ಯಾನಿಂಗ್ ಮಾಡಿಸಿದಾಗ, "ಮೂತ್ರಕೋಶದಲ್ಲಿ ಕಲ್ಲುಗಳಿವೆ" ಎಂದು ಡಾಕ್ಟರ್ ಹೇಳಿದರು.
ನಾನು ಪ್ರತಿ ವಾರ ಚರ್ಚ್ ಗೆ ಹೋಗುತ್ತಿದ್ದೆ, ಪ್ರತಿದಿನ ಬೆಳಗಿನ ಪ್ರಾರ್ಥನೆಯಲ್ಲಿ ಪಾಸ್ಟರ್ ಡಿಕ್ಲೇರ್ ಮಾಡುವ ವಾಕ್ಯಗಳನ್ನು ಕೇಳಿಸಿಕೊಳ್ಳುತ್ತಿದ್ದೆ ಮತ್ತು ಸ್ವೀಕರಿಸಿಕೊಳ್ಳುತ್ತಿದ್ದೆ.
ಒಂದು ದಿನ ಹೊಟ್ಟೆ ನೋವು ಜಾಸ್ತಿ ಆದಾಗ ಬೇರೆ ಹಾಸ್ಪಿಟಲ್ ಗೆ ಹೋಗಿ ಸ್ಕ್ಯಾನಿಂಗ್ ಮಾಡಿಸಿದೆ. ಆಗ ಅವರು ಎಲ್ಲಾ ರಿಪೋರ್ಟ್ ನಾರ್ಮಲ್ ಇದೆ, ಏನು ಸಮಸ್ಯೆ ಇಲ್ಲ ಎಂದು ಹೇಳಿದರು. ಹಲ್ಲೆಲೂಯ!!!
"ಬೆಳಗಿನ ಪ್ರಾರ್ಥನೆಯಲ್ಲಿ ಕೇಳಿದ ವಾಕ್ಯದ ಮೂಲಕ ನಾನು ಬಿಡುಗಡೆಯನ್ನು ಹೊಂದಿದ್ದೇನೆ. ಈಗ ಸಂಪೂರ್ಣ ಆರೋಗ್ಯವನ್ನು ಹೊಂದಿಕೊಂಡಿದ್ದೇನೆ".
ದೇವರ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ.
ಅದೇ ರೀತಿ ನನ್ನ ತಮ್ಮ ಮಧ್ಯಪಾನದ ನಿಮಿತ್ತವಾಗಿ ಅನಾರೋಗ್ಯದಿಂದ ಬಳಲುತ್ತಿದ್ದ. ಎಲ್ಲಾ ಅಂಗಗಳು ಹಾಳಾಗಿವೆ, ಮನೆಗೆ ತೆಗೆದುಕೊಂಡು ಹೋಗಿ ಎಂದು ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಮಾಡಿಕೊಳ್ಳಲಿಲ್ಲ, ತಿರುಗಿ ನಮ್ಮ ಊರಿಗೆ ಕರೆದುಕೊಂಡು ಬಂದರು, ಅಲ್ಲಿಯೂ ಡಾಕ್ಟರ್ ತೆಗೆದುಕೊಳ್ಳುತ್ತಿರಲಿಲ್ಲ, ಆದರೆ ನಾನು ಪ್ರಾರ್ಥಿಸಿದೆ, ಪಾಸ್ಟರ್ ಪ್ರಾರ್ಥಿಸಿದರು, ರವಿವಾರ ಸಭೆ ಮುಗಿಸಿ ತಿರುಗಿ ಹೋಗುವಷ್ಟರಲ್ಲಿ ನನ್ನ ತಮ್ಮ ಆರೋಗ್ಯವಾಗಿ ಎದ್ದು ಕೂತಿದ್ದ, Amen 🙏🏻
ಫಾಲೋ ಮಾಡಿ, ಲೈಕ್ ಮಾಡಿ, ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Comments
Post a Comment