Testimony #704 - ಅವರ ರಿಪೋರ್ಟ್ ನಾರ್ಮಲ್ ಆಗಿರಲಿ
ದೇವರ ಪರಿಶುದ್ಧವಾದ ನಾಮಕ್ಕೆ ಸ್ತೋತ್ರವಾಗಲಿ.. 🙏🏻.
ನನ್ನ ಹೆಸರು ವಿಶಾಲಾಕ್ಷಿ :
ಬೆಳಗಾವಿಯಲ್ಲಿ ನಡೆದ ಪ್ರವಾದನೆಯ ಸಮ್ಮೇಳನದಲ್ಲಿ, ನಮ್ಮ ಆತ್ಮೀಕ ತಂದೆಯವರು “ಇನ್ನು ಮುಂದೆ ಯಾರೂ ಆಸ್ಪತ್ರೆಗೆ ಹೋಗಬಾರದು” ಎಂದು ವಾಕ್ಯವನ್ನು ಹೇಳಿದರು.
ಅದೇ ರೀತಿ, ಬೆಂಗಳೂರಿನ ಕ್ಯಾಂಪ್ ಮೀಟಿಂಗ್ನಲ್ಲಿಯೂ ಪಾಸ್ಟರ್ ಡಿಕ್ಲೇರ್ ಮಾಡಿದ್ದರು:
"ಯಾರು ಆಸ್ಪತ್ರೆಯಿಂದ ರಿಪೋರ್ಟ್ ಪಡೆದಿದ್ದಾರೆ, ಅವರ ರಿಪೋರ್ಟ್ ನಾರ್ಮಲ್ ಆಗಿರಲಿ!" ಎಂದು.
ನಾನು ಆ ವಾಕ್ಯವನ್ನು ಆತ್ಮದಲ್ಲಿ ಸ್ವೀಕರಿಸಿದೆ.
ನನ್ನ ತಮ್ಮನಿಗೆ ದೊಡ್ಡ ಕರುಳಿನಲ್ಲಿ ಇನ್ಫೆಕ್ಷನ್ ಇತ್ತು. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿದ್ದರು. ನಾನು ಪ್ರಾರ್ಥನೆ ಮಾಡಿ, "ರಿಪೋರ್ಟ್ ನಾರ್ಮಲ್ ಬರಲಿ" ಎಂದು ನಂಬಿಕೆಯಿಂದ ಪ್ರಾರ್ಥಿಸಿದೆ. ದೇವರು ಆ ಪ್ರಾರ್ಥನೆಯನ್ನು ಕೇಳಿ, ರಿಪೋರ್ಟ್ ನಾರ್ಮಲ್ ಆಗಿ ಬರುವಂತೆ ಕಾರ್ಯ ಮಾಡಿದ್ದಾರೆ ! Amen 🙏🏻!!
ದೇವರಿಗೆ ಸ್ತೋತ್ರ ಮತ್ತು ಮಹಿಮೆ!
ಪಾಸ್ಟರ್ ಅವರು ಪ್ರತಿದಿನವೂ ನಮಗೆ ಉಪದೇಶಿಸುತ್ತಾರೆ - "ನಾವು ಭಾಗ್ಯವಂತರು, ವಿಚಿತ್ರವಾದವರು, ವಿಶೇಷವಾದವರು ಮತ್ತು ಐಶ್ವರ್ಯವಂತರು" ಎಂದು. ಅವರು ಹೊಸ ಹೊಸ ಸತ್ಯ ಪ್ರಕಟಣೆಗಳನ್ನು ಮತ್ತು ದೇವರ ರಹಸ್ಯಗಳನ್ನು ನಮಗೆ ತಿಳಿಸಿಕೊಟ್ಟಿದ್ದಾರೆ.
ನಾವು ಆರೋಗ್ಯವಾಗಿರಬೇಕೆಂದರೆ ಶರೀರಕ್ಕೆ ವ್ಯಾಯಾಮ ಮತ್ತು ಆಹಾರ ಮಾತ್ರ ಸಾಕು ಎಂದು ನಾವು ಅಂದುಕೊಂಡಿದ್ದೆವು. ಆದರೆ ಪಾಸ್ಟರ್ ಅವರು ತಿಳಿಸಿಕೊಟ್ಟಂತೆ - ದೇವರು ನಮಗೆ ರಕ್ಷಣೆಯನ್ನು ಕೊಟ್ಟಿದ್ದಾನೆ. ಆತನ ಗಾಯಗಳಿಂದ ನಾವು ಪ್ರಾಣದಲ್ಲಿ ಗುಣವಾಗಿದ್ದೇವೆ ಎಂಬುದನ್ನು ಪ್ರಾಣದಲ್ಲಿ ಅರ್ಥ ಮಾಡಿಕೊಂಡರೆ, ನಮ್ಮ ಶರೀರದಲ್ಲಿಯೂ ಗುಣವಾಗುತ್ತದೆ. ಸರಿಯಾದ ಮನಸ್ಸು ಇದ್ದರೆ ಮಾತ್ರ ಶರೀರದಲ್ಲಿಯೂ ಒಳ್ಳೆಯ ಆರೋಗ್ಯ ಇರುತ್ತದೆ ಎಂಬ ತಿಳುವಳಿಕೆ, ಜ್ಞಾನ, ಪ್ರಕಟಣೆ ಕೊಟ್ಟಿದ್ದಕ್ಕಾಗಿ ಆತ್ಮೀಕ ತಂದೆಯ ಮೂಲಕ ದೇವರಿಗೆ ವಂದನೆಗಳನ್ನು ಸಲ್ಲಿಸುತ್ತೇನೆ.
ಗದಗ್ ಜಿಲ್ಲೆಯಿಂದ ಒಬ್ಬರು ಫೋನ್ ಮಾಡಿ, ತುಂಬಾ ಆರೋಗ್ಯದ ತೊಂದರೆ ಇದೆ, ಎದ್ದೇಳಲೂ ಆಗುತ್ತಿಲ್ಲ, ಊಟ ಕೂಡ ಸೇರುತ್ತಿಲ್ಲ, ಕಾಲಿನಲ್ಲಿ ಬಾವು {ಊತ, swelling} ಬಂದಿದೆ ಎಂದು ಹೇಳಿದರು. ಅವರಿಗಾಗಿ ಪ್ರಾರ್ಥನೆ ಮಾಡಿದ ಬಳಿಕ, ಒಂದೇ ದಿನದಲ್ಲಿ ಅವರ ಕಾಲಿನ ಬಾವು ಇಳಿದುಹೋಗಿ, ಅವರು ಊಟ ಮಾಡಿ ಚೆನ್ನಾಗಿ ನಿದ್ದೆ ಮಾಡಿದ್ದಾರೆ. ದೇವರ ನಾಮಕ್ಕೆ ಸ್ತೋತ್ರ!
ಈ ಅದ್ಭುತಕ್ಕಾಗಿ ದೇವರಿಗೆ ಕೋಟಿ ಕೋಟಿ ಸ್ತೋತ್ರಗಳು ಮತ್ತು ವಂದನೆಗಳು.
ದೇವರು ತನ್ನ ಸೇವಕರ ಮೂಲಕ ಇಂತಹ ಅದ್ಭುತಗಳನ್ನು ಮಾಡುತ್ತಿರುವುದಕ್ಕೆ ದೇವರ ನಾಮಕ್ಕೆ ಮಹಿಮೆ ಉಂಟಾಗಲಿ!
ಫಾಲೋ ಮಾಡಿ, ಲೈಕ್ ಮಾಡಿ, ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory to god 🔥👏🙏
ReplyDeleteGlory!
DeleteGlory to God 🙏
ReplyDeletePraise the Lord!
DeleteGlory Glory to Jesus 🙏🏻
ReplyDeleteMagnifying Jesus!
Delete