Testimony #707 - ನನ್ನ ಜೀವಿತದಲ್ಲಿ ಮಾಟ ಮಂತ್ರಗಳಿಂದ ಶೋಧನೆಯಲ್ಲಿ ಹಾದು ಹೋಗಬೇಕಾಯಿತು...
ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ 🙏🏻
ನನ್ನ ಹೆಸರು ರೂಪಾ
ದೇವರಿಗೆ ಕೋಟಿ ಸ್ತೋತ್ರಗಳು 🙏🏻 .
ದೇವರು ಈ ವಾರದಲ್ಲಿ ಮಾಡಿದ ಅದ್ಭುತಕ್ಕಾಗಿ ಸ್ತೋತ್ರ 🙏🏻.
ನನ್ನ ಜೀವಿತದಲ್ಲಿ ಮಾಟ ಮಂತ್ರಗಳಿಂದ ಶೋಧನೆಯಲ್ಲಿ ಹಾದು ಹೋಗಬೇಕಾಯಿತು, ತರಕಾರಿ ಬಿಸಿನೆಸ್ ತುಂಬಾ ನಷ್ಟ ಆಯಿತು, ನಾನು ತರಕಾರಿ ಅಂಗಡಿ ಮುಚ್ಚಬೇಕು ಅಂದುಕೊಂಡೆ , ಏನಾದರೂ ಕೆಲಸ ಮಾಡಿದರೆ ಆಯ್ತು ಅಂದುಕೊಂಡೆ, ಆದರೆ ಯಾವುದು ಸಕ್ಸಸ್ ಆಗ್ತಿರಲಿಲ್ಲ, ನನ್ನ ಗಂಡನ ಆರೋಗ್ಯದಲ್ಲಿ ತುಂಬಾ ಏರುಪೇರು ಆಯಿತು. ಹೇಳಿಕೊಳ್ಳುವುದಕ್ಕೂ ಆಗದಷ್ಟು ಅನಾರೋಗ್ಯದ ಸಮಸ್ಯೆಗಳು ಕಾಡುತ್ತಿದ್ದವು. ಅವರ ಮೈ ಮೇಲೆಲ್ಲಾ ಸುಟ್ಟ ಗಾಯದ ಹಾಗೆ ಗುಳ್ಳೆಗಳು ಎದ್ದಿದ್ದವು. ಅವರ ಕಿಡ್ನಿಯಲ್ಲಿ ಸ್ಟೋನ್ ಆಗಿದ್ದವು. 7-8 ತೊಂದರೆ ಇತ್ತು, ಅದು ಈಗ ಜಾಸ್ತಿ ಆಗಿತ್ತು.
ಎಲ್ಲಿದ್ದಾನೆ ನಿನ್ನ ದೇವರು ? ಎಂದು ಪ್ರಶ್ನೆ ಮಾಡಿದರು, ಸಭೆಗೆ ಬರುವುದಿಲ್ಲ ಅಂದರು.
ಇದಕ್ಕೆ ದೇವರೇ ಉತ್ತರ ಕೊಡುತ್ತಾನೆ ಎಂದೇ ಹೇಳಿದೆ.
ದೇವರಾತ್ಮನು ಒಂದು ವಾಕ್ಯ ಕೊಟ್ಟು, " ನಿನ್ನನ್ನು ತಾಕುವವನು ಕಣ್ಣು ಗುಡ್ಡೆಯನ್ನು ತಾಕುವವನು" ಸೇವಕರ ಮೂಲಕ ಈ ವಾಕ್ಯದ ಮೂಲಕ ಬಲಪಡಿಸಿದ್ದಕ್ಕಾಗಿ ಸ್ತೋತ್ರ.
"ಬೇಗನೆ ಅಲ್ಲ, ತಡ ಮಾಡುವುದಿಲ್ಲ ತಕ್ಕ ಕಾಲಕ್ಕೆ ಉತ್ತರ ಕೊಡುತ್ತೇನೆ, ನಾನಿದ್ದೇನೆ ಹೆದರಬೇಡ" ಎಂದು ಕನಸಿನಲ್ಲಿ ಸ್ತ್ರೀಯ ಮೂಲಕ ಮಾತಾಡಿದರು.
ನಮ್ಮ ತರಕಾರಿ ವ್ಯಾಪಾರಕ್ಕೆ ಏನು ಮಾಟ ಮಾಡಿಸಿದರೋ ಗೊತ್ತಿಲ್ಲ, ನಾನು ದೇವರಿಗೆ ಒಪ್ಪಿಸಿಕೊಡ್ತೀನಿ ಎಂದು ಡಿಕ್ಲೇರ್ ಮಾಡಿದೆ. ನನ್ನ ಬಿಜಿನೆಸ್ ಅನ್ನು ತಾಕುವವನು ನಿನ್ನನ್ನು ತಾಕುವನಾಗಿದ್ದೇನೆ, ನೀನೆ ನನ್ನ ಆಶ್ರಯದುರ್ಗ, ನನ್ನ ಅಂಗಡಿಯಲ್ಲಿರುವ ಎಲ್ಲಾ ಮಾಟ ಮಂತ್ರವನ್ನು ನಿರ್ಮೂಲ ಮಾಡುತ್ತೇನೆ, ನನ್ನ ಮನಃಪೂರ್ವಕವಾಗಿ ಅವರನ್ನು ಆಶೀರ್ವದಿಸುತ್ತೇನೆ ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡಿದೆ, ನಾವು ಯಾವ ಡಾಕ್ಟರ್ ಹತ್ತಿರ ಹೋಗಲಿಲ್ಲ, ವೈದ್ಯರಿಗಿಂತ ಘನವೈದ್ಯನು ನೀನೆ, ಆರೋಗ್ಯದಾಯಕನು ನೀನೆ, ದೇವರಾತ್ಮನೆ ನೀನು ವಾಕ್ಯದಲ್ಲಿ ಬಿಡುಗಡೆ ಕೊಟ್ಟರೆ ಮಾತ್ರ ನಮ್ಮ ಜೀವದಲ್ಲಿ ಬಿಡುಗಡೆ ಎಂದು ಡಿಕ್ಲೇರ್ ಮಾಡಿದೆ.
ಮೊದಲಿನಂತೆಯೇ ಅಂಗಡಿ ವ್ಯಾಪಾರ ನಡೆಯಿತು. ನನ್ನ ಗಂಡನ ಕಿಡ್ನಿ ಸ್ಟೋನ್ ಕೂಡ ತಾನಾಗಿಯೇ ಹೊರಗೆ ಬಂತು !!!!!!🙏🏻.
ದೇವರು ಎಲ್ಲಿದ್ದಾನೆ ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟರು, ದೇವರು ಮಾಡಿದ ಉಪಕಾರಗಳನ್ನು ನಮ್ಮಿಂದ ಹೇಳಲು ಆಗುವುದಿಲ್ಲ, ಒಂದಕ್ಕೂ ಕೊರತೆ ಇಲ್ಲದಂತೆ ದೇವರು ನಡೆಸುತ್ತಿದ್ದಾರೆ, ಮಕ್ಕಳು ದೇವರಲ್ಲಿ ಇನ್ನಷ್ಟು ಆಸಕ್ತಿಯಿಂದ ಇದ್ದಾರೆ, ಇಕ್ಕಟ್ಟಿನಲ್ಲಿ ತಾಳ್ಮೆಯನ್ನು ದೇವರೇ ಕೊಟ್ಟಿದ್ದಾರೆ, ಆತನಲ್ಲಿರುವಾಗ ಇಕ್ಕಟ್ಟು ಎನಿಸುವುದಿಲ್ಲ, ಆತನನ್ನು ಬಿಟ್ಟು ನಮಗೆ ಯಾರು ಇಲ್ಲ ಎಂದು ಮೊರೆಹೊಕ್ಕು ಎಲ್ಲವೂ ನೀನೇ, ನೀನೇ ನಮ್ಮಅರೋಗ್ಯದಾಯಕನು ಎಂದು ಹೇಳುವಾಗ ಜೀವವುಳ್ಳ ಸಾಕ್ಷಿಯಾಗಿ ದೇವರು ನಮ್ಮನ್ನು ನಿಲ್ಲಿಸಿದ್ದಾರೆ. ನಮಗೆ ಸಹಾಯವು ಭೂಮಿ ಆಕಾಶವನ್ನು ಸೃಷ್ಟಿಸಿದ ಯೆಹೋವನಿಂದಲೇ ಬರುವುದು. ಯೆಹೋವನ ಮೇಲೆ ಭರವಸೆ ಇಡುವವನು ಚಿಯೋನ್ ಪರ್ವತದಂತೆ ಇರುತ್ತಾರೆ ಎಂದು ವಾಕ್ಯ ಹೇಳುತ್ತದೆ. ನಮ್ಮ ದೇವರು ಕೆಟ್ಟದ್ದಾಗಲು ಬಿಡುವುದಿಲ್ಲ.
ನದಿಯ ದಡದ ಮೇಲಿರುವ ಮರ ಇರುವಂತೆ ಅದರ ಎಲೆಗಳು ಬಾಡುವುದಿಲ್ಲ , ಒಂದು ಸ್ಪಂಜು ನೀರನ್ನು ಹೇಗೆ ಹೀರಿಕೊಳ್ಳುತ್ತೋ ಅದೇ ರೀತಿ ಆತ್ಮದ ಪ್ರಸನ್ನತೆಯಲ್ಲಿ ನಾನು ತುಂಬಬೇಕು ಎಂದು ನಾನು ದೇವರಲ್ಲಿ ಕೇಳಿಕೊಂಡೆ, ಅನೇಕ ರೀತಿಯಲ್ಲಿ ಮಾತನಾಡಿದ ಸೋಮವಾರ ಬೆಳಿಗ್ಗೆ 8:30 ಆಗಿತ್ತು, ಸುಸ್ತು ಆಗಿರುವ ಕಾರಣ ಮಲಗಿಕೊಂಡೆ, ದೇಹ ಮತ್ತು ಆತ್ಮ ರೋಮಾಂಚನಗೊಂಡು ಪರಲೋಕಕ್ಕೆ ಎತ್ತಲ್ಪಟ್ಟಿತು , ಆ ಸ್ಥಳವು ಏಕಾಂತವಾಗಿತ್ತು, ನನಗೆ ದೇವರ ಆತ್ಮನ ದರ್ಶನವಾಯಿತು ಅವರ ಹೃದಯದಿಂದ ಒಂದು ಬೆಳಕು ನನ್ನನ್ನು ತುಂಬಿಕೊಂಡಿತ್ತು.
ಆ ಪ್ರಸನ್ನತೆ ಮತ್ತು ಆಶೀರ್ವಾದ ಕೊಟ್ಟಿದ್ದಕ್ಕಾಗಿ ಸ್ತೋತ್ರ, ದೇವರಾತ್ಮ ಹೊಸ ಹೊಸದಾಗಿ ನಡೆಸಿದ ಬಿಡುಗಡೆ ಕೊಟ್ಟ , ದೇವರ ಆತ್ಮ ಬಲದಿಂದ ಕಟ್ಟಿ ನಿಲ್ಲಿಸಿದ .
ದೇವರಿಗೆ ಕೋಟಿ ಕೋಟಿ ಸ್ತೋತ್ರ 🙏🏻.
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Amen 🙌 glory to God 🙏 Thank you Jesus 🙏
ReplyDeleteGLORY to Father god 🔥🔥👏👏👏
ReplyDeleteGlory Glory to God 🙏
ReplyDeleteಆಮೇನ್ ನಿಮ್ಮ ಸಾಕ್ಷಿ ನಾನು ಕೇಳಿದ ಮೇಲೆ ನನ್ಗೆ ದೇವರ ಮೇಲೆ ನಂಬಿಕೆ ಹೆಚ್ಚಾಗಿದೆ.
ReplyDelete