Testimony # 759 -- ವೈರಲ್ ಇನ್ಫೆಕ್ಷನ್ ಆಗಿದೆ, ನೀವು ಎಲ್ಲಿಗೂ ಹೋಗಬಾರದು.............

 ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏

 ನನ್ನ ಹೆಸರು ನಿರೀಕ್ಷಾ

 ನಮ್ಮ ಊರು ಬೆಳಗಾವಿ .

ಕಳೆದ ವಾರದಲ್ಲಿ ನನಗೆ ಅನಾರೋಗ್ಯ ಇತ್ತು. ಕುತ್ತಿಗೆಯಲ್ಲಿ ಊತ {Swelling } ಬಂದು ತುಂಬಾ ನೋವು ಆಗುತ್ತಿತ್ತು. ಗಂಟಲು ರಿಯಾಕ್ಷನ್ ಆಗಿ ತಿನ್ನಲು ಬಾರದ ಹಾಗೆ ನೋವು ಆಗುತಿತ್ತು. ಆಗ ಡಾಕ್ಟರ್ ಕಡೆ ಹೋದೆ. ಅವರು ವೈರಲ್ ಇನ್ಫೆಕ್ಷನ್ ಆಗಿದೆ, ನೀವು ಎಲ್ಲಿಗೂ ಹೋಗಬಾರದು, ಮತ್ತೊಬ್ಬರಿಗೆ ಹರಡುವ ಚಾನ್ಸ್ ಇದೆ ಎಂದು ಹೇಳಿದರು. ನನಗೆ ಬಹಳ ಬೇಜಾರಾಯಿತು. ಆದರೂ ನಾನು ದೇವರ ಆಲಯಕ್ಕೆ ಹೋಗಿ ಪ್ರೇಯರ್ ಮಾಡಿದೆ.

ಮತ್ತೆ ಹಾಸ್ಪಿಟಲ್ ಗೆ ಹೋಗಬೇಕು ಎಂದರೆ ಮೂರು ದಿನಗಳಿಂದ ಹಾಸ್ಪಿಟಲ್ ಓಪನ್ ಇರಲಿಲ್ಲ. ಮತ್ತೆ ಬುಧವಾರ ಹೋದಾಗ ಡಾಕ್ಟರ್ ಕೂಡ ಇರಲಿಲ್ಲ. ಅದಕ್ಕೆ, "ಅಪ್ಪ ನಾನು ಇನ್ನೂ ಮುಂದೆ ಡಾಕ್ಟರ್ ಕಡೆ ಹೋಗುವುದಿಲ್ಲ, ನೀನೇ ಗುಣಪಡಿಸುತ್ತಿ" ಎಂದು ದೇವರಿಗೆ ಒಪ್ಪಿಸಿ ಕೊಟ್ಟೆ. ಮಾರ್ನಿಂಗ್ ಪ್ರೇಯರ್ ದಲ್ಲಿ ಪಾಸ್ಟರ್ ಡಿಕ್ಲೇರ್ ಮಾಡುತ್ತಿದ್ದರು, "ನಿಮ್ಮ ಜೀವನದಲ್ಲಿ ಪುನರುತ್ಥಾನ ಶುರುವಾಗಿದೆ. ಯಾವುದೇ ಮರಣದ ಕಾರ್ಯಗಳು ನಡೆಯುವುದಿಲ್ಲ, ಅನಾರೋಗ್ಯ  ನಿಮ್ಮನ್ನು ಮುಟ್ಟುವುದಿಲ್ಲ" ಎಂದು ಹೇಳುವಾಗ, ಅದನ್ನು ನಾನು ಆತ್ಮದಿಂದ ಹೊಂದಿಕೊಂಡೆ. ಆಗ ಸ್ವಲ್ಪ ನೋವು ಕಡಿಮೆ ಆಯಿತು.

ಸಾಯಂಕಾಲ ಪಾಸ್ಟರ್ ಕಡೆ ಪ್ರೇಯರ್ ಮಾಡಿಸಿದೆ. ಅವರು, "ಮುಂಜಾನೆ ಎನ್ನುವುದರಲ್ಲಿ ನಿಮಗೆ ಯಾವ ನೋವು ಇರುವುದಿಲ್ಲ" ಎಂದು ಡಿಕ್ಲೇರ್ ಮಾಡಿದರು. ಅದೇ ತರಹ ನನಗೆ ಪೂರ್ತಿಯಾಗಿ ಊತ {Swelling } ಕಡಿಮೆಯಾಗಿದೆ. ಇನ್ಫೆಕ್ಷನ್ ಎಲ್ಲವೂ ನಿರ್ಮೂಲವಾಗಿದೆ. 

ಹಾಸ್ಪಿಟಲ್ ಗೆ ಹೋಗದೆ ಪರಿಪೂರ್ಣವಾಗಿ ಗುಣವಾಗಿದ್ದೇನೆ. ಆ ಪುನರುತ್ಥಾನದ ಶಕ್ತಿ ನನ್ನಲ್ಲಿ ಕಾರ್ಯ ಮಾಡಿದೆ.

ದೇವರ ನಾಮಕ್ಕೆ ಮಹಿಮೆ ಉಂಟಾಗಲಿ 🙏🙏🙏

ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR THE LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY


 


Comments

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)