Testimony # 757 -- ಗರ್ಭಕೋಶದಲ್ಲಿ ಗಂಟು ಆಗಿದೆ...

 ದೇವರ ನಾಮಕ್ಕೆ  ಸ್ತೋತ್ರ ವಾಗಲಿ 🙏

 ನನ್ನ ಹೆಸರು: ಸುಸನ್ 

 ನಮ್ಮ ಊರು: ಧಾರವಾಡ .

ನನ್ನ ಸಾಕ್ಷಿ ಏನೆಂದರೆ ನನಗೆ ಆರೋಗ್ಯದ ಸಮಸ್ಯೆ ತುಂಬಾ ಇತ್ತು. ಆಗ ಡಾಕ್ಟರ್ ಕಡೆ ಹೋದಾಗ, ಅವರು ಸ್ಕ್ಯಾನಿಂಗ್ ಮಾಡಿಸಬೇಕು ಎಂದರು. ಸ್ಕ್ಯಾನಿಂಗ್ ಕೂಡ ಮಾಡಿಸಿದೆ. ಗರ್ಭಕೋಶದಲ್ಲಿ ಗಂಟು ಆಗಿದೆ , ಅದು ಸರಿಯಾಗಿ ಕಾಣುತ್ತಿಲ್ಲ, ಅದಕ್ಕೆ ಇನ್ನೊಂದು ಟೆಸ್ಟ್ ಮಾಡಿಸಬೇಕು ಎಂದು ಹೇಳಿದರು.

ನಾನು ಪಾಸ್ಟರ್ ಗೆ ಫೋನ್ ಮಾಡಿ ಹೇಳಿದೆ. ಆಗ ಅವರು, "ಒಂದು  ಗ್ಲಾಸ್ ನೀರು ತೆಗೆದುಕೊಳ್ಳಿ" ಎಂದು  ಹೇಳಿ, "ನೀವು ಶರೀರಕ್ಕೆ ಸಂಬಂಧಪಟ್ಟವರು ಅಲ್ಲ, ಆತ್ಮಕ್ಕೆ ಸಂಬಂಧಪಟ್ಟವರು. ಡಾಕ್ಟರ್ ನಿಮಗೆ ಸಮಸ್ಯೆ ಹೇಳಿದರೆ, ಪರಿಹಾರ ಎನ್ನುವ ಯೇಸು ನಿಮ್ಮೊಳಗೆ ಇದ್ದಾರೆ. ರಿಪೋರ್ಟ್ ಎಲ್ಲ ನಾರ್ಮಲ್ ಬರುತ್ತೆ" ಎಂದು ಡಿಕ್ಲೇರ್ ಮಾಡಿದರು.

ದೇವರ ನಾಮಕ್ಕೆ ಸ್ತೋತ್ರ ವಾಗಲಿ🙏

 ಪಾಸ್ಟರ್ ಡಿಕ್ಲೇರ್ ಮಾಡಿದ ಹಾಗೆ ರಿಪೋರ್ಟ್ ಎಲ್ಲ ನಾರ್ಮಲ್ ಬಂದಿದೆ.

ನನ್ನ ತಂಗಿಯವರು ಮನೆ ಕಟ್ಟಿಸುತ್ತಿದ್ದರು.ಅವರು ಸರ್ಕಾರದಿಂದ ಲೋನ್ ತೆಗೆದುಕೊಂಡು, ಮೂರು ಕಂತುಗಳಾಗಿ ಹಣ ಬರಬೇಕಿತ್ತು, ಆದರೆ ಅದು ಬರಲಿಲ್ಲ, ಅದರ ಬಿಲ್ ಕೂಡ ಬಂದಿರಲಿಲ್ಲ, ಅವರಿಗೆ ಹಣದ ಸಮಸ್ಯೆ ಉಂಟಾಯಿತು. ಆಗ ಪಾಸ್ಟರ್ ಪ್ರೇಯರ್ ಮಾಡಿದರು, "ಮನೆ ಕಟ್ಟುವುದಕ್ಕೆ ಹಣ ಸೂಪರ್ ನ್ಯಾಚುರಲ್ ಆಗಿ ಬಂದು ಮುಟ್ಟಿದೆ. ಅವರು ಅದ್ಭುತವಾಗಿ, ಸುಂದರವಾಗಿ ಮನೆ ಕಟ್ಟಿ ಮುಗಿಸಿದ್ದಾರೆ. ಆ ಮನೆಯಲ್ಲಿಯೇ ಅವರು ಇದ್ದಾರೆ" ಎಂದು ಡಿಕ್ಲೇರ್ ಮಾಡಿದರು.

ಒಂದು ಕಂತು ಬರುವ ಹಣವು ಮೂರು ಕoತು ಬರುವಂತೆ ದೇವರು ಸಹಾಯ ಮಾಡಿದರು. ಅಲ್ಲಿ ಅಕ್ಕ ಪಕ್ಕದವರು, "ಬಿಲ್ ಬರದೆ ಇಷ್ಟು ಬೇಗ ಹೇಗೆ ಮನೆ ಕಟ್ಟುತ್ತಿದ್ದೀರಿ" ಎಂದು ಆಶ್ಚರ್ಯಪಟ್ಟರು.

 ಆದರೆ ಇದೆಲ್ಲವೂ ದೇವರೊಬ್ಬರಿಗೆ  ಮಾತ್ರ ಸಾಧ್ಯವಾದದ್ದು.

 ದೇವರ ನಾಮಕ್ಕೆ ಸ್ತೋತ್ರವಾಗಲಿ 🙏

Thank you pastor 🙏

ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR THE LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY


 


Comments

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)