Testimony # 755 -- ಈ ನೋವು ಸಹಿಸುವುದಕ್ಕೆ ಆಗುತ್ತಿಲ್ಲ ಎನ್ನುವಾಗ...
ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏
ನನ್ನ ಹೆಸರು: ಮಂಜುಳಾ.
ನಮ್ಮ ಊರು:ಬೆಳಗಾವಿ
ನಾನು ಲಲಿತಾ ಅವರಿಗೆ ಕಾಲ್ ಮಾಡಿ ಅವರ ಆರೋಗ್ಯ ವಿಚಾರಿಸುವಾಗ, ಅವರು ತಮ್ಮ ಕಷ್ಟ, ನೋವು, ದುಃಖ ಹೇಳಿ ಅಳುವುದಕ್ಕೆ ಶುರು ಮಾಡಿದರು. ಅವರು ನಾನು ಇರುವುದಕ್ಕಿಂತ ಸಾಯಬೇಕು, ಈ ನೋವು ಸಹಿಸುವುದಕ್ಕೆ ಆಗುತ್ತಿಲ್ಲ ಎನ್ನುವಾಗ ನಾನು ಅವರಿಗೆ ದೇವರ ವಾಕ್ಯ ಹೇಳಿ ಅವರನ್ನು ಬಲಪಡಿಸಿದೆ, ಪ್ರಾರ್ಥನೆ ಮಾಡಿದೆ.
"ನಿಮ್ಮ ಬಾಯಿಯಿಂದ ಸಮಸ್ಯೆ ಮಾತನಾಡಬೇಡಿ , ಸಮಾಧಾನವಾಗಿರಿ. ದೇವರು ನಂಬಿದವರನ್ನು ಎಂದಿಗೂ ಕೈಬಿಡುವುದಿಲ್ಲ, ಈ ಪರಿಸ್ಥಿತಿಯನ್ನು ದೇವರು ಬಿಡುಗಡೆ ಮಾಡುತ್ತಾರೆ ಧೈರ್ಯವಾಗಿರಿ ಎಲ್ಲ ಸರಿ ಹೋಗುತ್ತದೆ" ಎಂದು ಅವರಿಗೆ ಹೇಳಿದೆ.
ಮರುದಿನ ಸಂಡೇ ಚರ್ಜ್ ಗೆ ಹೋಗಿ ಅವರಿಗೆ ಪ್ರೇಯರ್ ಲಿಂಕ್ ಕಳಿಸಿದೆ, ಅವರು ಮೆಸೇಜ್ ಪೂರ್ತಿಯಾಗಿ ಕೇಳಿದರಂತೆ. ಪಾಸ್ಟರ್ ಮೆಸೇಜ್ ಸ್ಟಾರ್ಟ್ ಆದ ಕೂಡಲೇ, "ಈ ಸತ್ಯ ಯಾರಿಗೆ ಎಂದರೆ ಜೀವನದಲ್ಲಿ ಸೋತು ಇರುವುದಕ್ಕಿಂತ ಸಾಯಬೇಕು, ನೋವು ಕಷ್ಟದಲ್ಲಿ ಇರುವವರಿಗೆ" ಎಂದು ಹೇಳಿದರು. ಈ ಮೆಸೇಜನ್ನು ದೇವರು ಅವರಿಗಾಗಿಯೇ ಹೇಳಿದ್ದಾರೆ.
ಮರುದಿನ ಅವರಿಗೆ ಕಾಲ್ ಮಾಡಿ ಮಾತನಾಡುವಾಗ ನಾನು ಚೆನ್ನಾಗಿದ್ದೇನೆ. ನಾನು ಈಗ ಸಮಸ್ಯೆ ಮಾತನಾಡುವುದಿಲ್ಲ, ಈ ಲೋಕದ ಜೀವನ ತಾತ್ಕಾಲಿಕ. ನಾನು ಪರಲೋಕದವಳು ಅಲ್ಲಿ ನಿತ್ಯ ನಿತ್ಯವಾಗಿ ವಾಸಿಸುವಳಾಗಿದ್ದೇನೆ ಎಂದರು.
ಆ ಮಾತು ಕೇಳಿ ನನಗೆ ತುಂಬಾ ಸಂತೋಷವಾಯಿತು. ಅವರ ದುಃಖ ಕಷ್ಟ ನೋವಿನಲ್ಲಿದ್ದಾಗ ದೇವರು ಸರಿಯಾದ ಸಮಯದಲ್ಲಿ ಪಾಸ್ಟರ್ ಮುಖಾಂತರ ದೇವರು ಅವರಿಗೆ ಮಾತನಾಡಿದ್ದಾರೆ.
ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏
Thank you pastor 🙏
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory to God🙌
ReplyDeleteGLORY to god 🔥
ReplyDeleteGlory to God 🙏
ReplyDeleteGlory to God 🙏
ReplyDeleteGlory to GOD!!🔥🔥🔥
ReplyDelete