Testimony # 748 -- ನಾನು 3000 ರೂಪಾಯಿ ಹಣ ಕಳೆದುಕೊಂಡಿದ್ದೆ...
ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻.
ನನ್ನ ಹೆಸರು ರೇಖಾ..
ನಮ್ಮ ಊರು ಸವದತ್ತಿ..
ಕಳೆದ ವಾರ ನಾನು 3000 ರೂಪಾಯಿ ಹಣ ಕಳೆದುಕೊಂಡಿದ್ದೆ. ಅದನ್ನು ಡಬ್ಬಿಯಲ್ಲಿ ಹಾಕಿ ಲಾಕರ್ ನಲ್ಲಿ ಇಟ್ಟಿದ್ದೆ. ಆದರೆ ಅದನ್ನು ಮತ್ತೆ ನೋಡುವಾಗ, ಆ ಲಾಕರ್ ನಲ್ಲಿ ಹಣ ಇರಲಿಲ್ಲ, ಈ ಹಣವನ್ನು ಜಮಖಂಡಿಯಲ್ಲಿ ನಡೆಯುವ ಕೂಟಕ್ಕೆ ಸಭಾ ಪಾಲಕರು ಕೊಟ್ಟಿದ್ದರು.
ಅದಕ್ಕೆ,- "ಅಪ್ಪ ಇದು ನನಗೆ ಕೊಟ್ಟ ಜವಾಬ್ದಾರಿ, ಈ ಹಣವು ನಿನ್ನದು ಕಳೆದು ಹೋದ ಹಣವು ಮತ್ತೆ ಸಿಗುವಂತೆ ನೀನು ಮಾಡುತ್ತೀಯಾ ಅಪ್ಪ" ಎಂದು ಡಿಕ್ಲೇರ್ ಮಾಡಿ, ಒಬ್ಬರ ಮನೆಗೆ ಪ್ರೇಯರ್ ಗೆ ಹೋಗಿದ್ದೆ.. ಆದರೆ ನನಗೆ ಯಾವುದು ಗಲಿಬಿಲಿ ಆಗಲಿಲ್ಲ, ನಾನು ಖುಷಿಯಿಂದ ಪ್ರೇಯರ್ ಮುಗಿಸಿಕೊಂಡು ಮನೆಗೆ ಬರುವ ಸಂದರ್ಭದಲ್ಲಿ, ಅಲ್ಲಿ ನನಗೆ ಮತ್ತೆ ಹಣ ಕೊಟ್ಟರು. ಆ ಹಣವನ್ನು ಲಾಕರ್ ನಲ್ಲಿ ಇಡಲು ಹೋದಾಗ ಅಲ್ಲಿ ಕಳೆದು ಹೋದ ಹಣ ಇತ್ತು. ಮೊದಲು ಅಲ್ಲೇ ಹುಡುಕಿದಾಗ ಅದು ಸಿಕ್ಕಿರಲಿಲ್ಲ, ಆದರೆ ಈಗ ಹಣ ಸಿಗುವಂತೆ ದೇವರು ಅದ್ಭುತವನ್ನು ಮಾಡಿದ್ದಾರೆ.
ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏼
ಪಾಸ್ಟರ್ ನನ್ನ ಮಗನ ಎಕ್ಸಾಮ್ ಸಲುವಾಗಿ ನೀವು ಪ್ರೇಯರ್ ಮಾಡಿದ್ದೀರಿ. ಅದೇ ತರ ನನ್ನ ಮಗ ಸೈನಿಕ್ ಎಕ್ಸಾಮ್ ಅನ್ನು ತುಂಬಾ ಅದ್ಭುತವಾಗಿ ಬರೆಯುವಂತೆ ದೇವರು ಮಾಡಿದ್ದಾರೆ. ಅವರ ತಂದೆಯ ಆಸೆಯಂತೆ ನನ್ನ ಮಗನ ಫೋಟೋ ಬ್ಯಾನರ್ ನಲ್ಲಿ ಹಾಕಿದ್ದಾರೆ.
ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏼
ಮಾರ್ಚ್ 2026 ಪ್ರವಾದನೆಯ ವಾಕ್ಯ ಈ ಮೆಸೇಜನ್ನು ಕೇಳಿದೆ. ತುಂಬಾ ಸೂಪರ್ ಆಗಿ ಪವರ್ ಫುಲ್ ಆಗಿತ್ತು. ದೇವರ ಮಾತಿಗೆ ಮನುಷ್ಯನು ವಿಧೇಯನಾದ, ರಾಶಿ ರಾಶಿ ಮೀನುಗಳು ಸಹ ವಿಧೇಯವಾಗಿ ಬಲೆಯಲ್ಲಿ ಸಿಗುವಂತೆ ದೇವರು ಕಾರ್ಯ ಮಾಡಿದರು. ಅಲ್ಲಿ ಈ ವಾಕ್ಯವನ್ನು ಹೇಳುವಾಗ ನಿಮ್ಮ ಮಾತು ನನಗೆ ಪ್ರವಾದನೆಯಾಯಿತು. ನಾನು ಸಭೆಯಲ್ಲಿ ಅನೇಕರಿಗೆ ಪ್ರಾರ್ಥನೆ ಮಾಡುತ್ತೇನೆ. ದೇವರು ನನ್ನ ಶರೀರದ ಮೂಲಕ ಅದ್ಭುತ ಕಾರ್ಯಗಳನ್ನು ಮಾಡುತ್ತಾರೆ. ಆದರೆ ನನಗೆ ಏಕೆ ಬಿಡುಗಡೆಯಾಗುತ್ತಿಲ್ಲ ಎಂದು ನನಗೆ ಚಿಂತೆ ಇತ್ತು.
ಆದರೆ ದೇವರು ನಮ್ಮನ್ನು ಇನ್ನೊಬ್ಬರ ಆಶೀರ್ವಾದಕ್ಕಾಗಿ ಇಟ್ಟಿದ್ದಾರೆ ಎಂದು ಪಾಸ್ಟರ್ ಹೇಳುವಾಗ, ಹೌದು ದೇವರು ನನ್ನನ್ನು ಇನ್ನೊಬ್ಬರ ಆಶೀರ್ವಾದಕ್ಕಾಗಿ ಇಟ್ಟಿದ್ದಾರೆ. ಅದರ ಮೂಲಕ ನನಗೆ ಅಭಿಷೇಕ ಮಾಡುತ್ತಿದ್ದಾರೆ ಎಂದು ನನ್ನ ಮನಸ್ಥಿತಿ ಬದಲಾಯಿತು.
ನನಗೆ ನೆಗಡಿ ಕೆಮ್ಮಿನಿಂದ ಹುಷಾರಿರಲಿಲ್ಲ, ಆದರೆ ನಾನು ಒಂದು ಮಾತ್ರೆಯು ತೆಗೆದುಕೊಳ್ಳದೆ ಯೇಸುವಿನ ಬಾಸುಂಡೆಯಿಂದ ಗುಣವಾಗಿದ್ದೇನೆ. ಈ ಶರೀರ ಕ್ರಿಸ್ತನಿಗೆ ಸ್ವಂತ. ಅದಕ್ಕೆ ಯಾವುದೇ ಸೈತಾನನ ಕ್ರಿಯೆ, ಅನಾರೋಗ್ಯ ಬರಲು ಸಾಧ್ಯವಿಲ್ಲ ಎಂದು ಡಿಕ್ಲೇರ್ ಮಾಡುವಾಗ ನಾನು ಸಂಪೂರ್ಣವಾಗಿ ಗುಣ ಹೊಂದಿದ್ದೇನೆ.
ದೇವರ ನಾಮಕ್ಕೆ ಮಹಿಮೆ ಉಂಟಾಗಲಿ 🙏🏼
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory to God 🙏
ReplyDeleteGLORY to god 🔥
ReplyDeleteGlory to God🔥🔥🔥
ReplyDeleteGlory to God 🙏
ReplyDeleteGlory to god 🙏🔥
ReplyDeleteGlory glory to Jesus 🙏🏻👏🏻👏🏻🔥🔥
ReplyDelete