Testimony # 745 -- ಮಾಟ ಮಂತ್ರ ಪೂಜೆ ಮಾಡುವವರ ಹತ್ತಿರ ಹೋದರೂ...

 ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ.  🙏🏻🙏🏻🙏🏻

 ನನ್ನ ಹೆಸರು ರೇಖಾ ..

ನಮ್ಮ ಊರು ಸವದತ್ತಿ.. 

ನಮ್ಮ ಸಭೆ ಚಿಕ್ಕದು, ಆದರೆ ಅಲ್ಲಿ ಬರುವ ವಿಶ್ವಾಸಿಗಳು ಬಹಳ. ನಮ್ಮ ಸಭೆಗೆ ಬರುವ ಭರಮು ಬ್ರದರ್,  ಪಾಸ್ಟರ್ ನಮ್ಮ ಸಭೆಯ ವಿಶ್ವಾಸಿಗಳನ್ನು ತುಂಬಾ ಪ್ರೋತ್ಸಾಹಿಸುತ್ತಾರೆ. ಅವರ ಸ್ವಂತ ಹಣದಿಂದ ಖರ್ಚು ಮಾಡಿ ಸಭೆ ಬೆಳೆಯಬೇಕು, ಅಲ್ಲಿರುವ ಎಲ್ಲರೂ ಬೆಳೆಯಬೇಕು ಎಂದು ಸಭೆಗೆ ಬೇಕಾಗಿರುವ ಎಲ್ಲವನ್ನು  ತರುತ್ತಾರೆ. ದೇವರ ಉದ್ದೇಶದ ಪ್ರಕಾರ ಅಲ್ಲಿ ಬರುವ ಪ್ರತಿಯೊಬ್ಬರಿಗೂ ಪ್ರೇಯರ್ ಮಾಡುತ್ತಾರೆ.

ಮಹಾದೇವಿ ಎನ್ನುವರು ಎರಡು ತಿಂಗಳುಗಳಿಂದ ದುರಾತ್ಮ ಪೀಡಿತರಾಗಿದ್ದರು.. ಅವರು ಈ ಲೋಕದ ರೀತಿಯಲ್ಲಿ ನೋಡುವಾಗ ಎಷ್ಟೆಷ್ಟೋ ದೇವರಿಗೆ ಹೋದರೂ, ಮಾಟ ಮಂತ್ರ ಪೂಜೆ ಮಾಡುವವರ ಹತ್ತಿರ ಹೋದರೂ ಅವರಿಗೆ ವಾಸಿಯಾಗಲಿಲ್ಲ.

 ಅವರಲ್ಲಿರುವ ನಂಬಿಕೆ, ಪಾಸ್ಟರ್ ಮತ್ತು ಭರಮು ಬ್ರದರ್  ಇವರೆಲ್ಲರೂ ಮಾಡಿರುವ ಪ್ರಾರ್ಥನೆಯಿಂದ ಈಗ ಅವರು ಸಂಪೂರ್ಣವಾಗಿ ದುರಾತ್ಮನಿಂದ ಬಿಡುಗಡೆಯಾಗಿದ್ದಾರೆ.

ದೇವರ ನಾಮಕ್ಕೆ ಮಹಿಮೆ ಉಂಟಾಗಲಿ 🙏🏼

  ನನ್ನ ಮಗನಿಗೋಸ್ಕರ ಪಾಸ್ಟರ್ ಪ್ರೇಯರ್ ಮಾಡಿದ್ದರು. ಅವನು ಕೂಡ ಪರೀಕ್ಷೆಯಲ್ಲಿ ಔಟ್ ಆಫ್ ಔಟ್  ತೆಗೆದುಕೊಳ್ಳುವಂತೆ ದೇವರು ಸಹಾಯ ಮಾಡಿದ್ದಾರೆ.

ಮೊದಲು ನಾನು ಪ್ರಾರ್ಥನೆ ಅಂದರೆ ಶರೀರ ಪ್ರಕಾರ ನನಗೆ ಬೇಕಾಗಿರುವುದನ್ನು ಕೇಳಿಕೊಳ್ಳುತ್ತಿದ್ದೆ, ಆದರೆ ಈಗ," ಅಪ್ಪ ನನಗೆ ನಿನ್ನ ಜ್ಞಾನ, ನಿನ್ನ ತಿಳುವಳಿಕೆ ಕೊಡು. ಅಪ್ಪ ನಿನ್ನ ಪ್ರೀತಿಯನ್ನು ಇನ್ನೂ ಹೆಚ್ಚಾಗಿ ಅನುಭವಿಸಬೇಕು. ನಿನ್ನನ್ನು ದ್ವೇಷಿಸುವವರು ನಿನ್ನನ್ನು ಅರಿತುಕೊಂಡು ನಿನ್ನ ಕಡೆ ತಿರುಗಬೇಕು. ಅವರ ಆತ್ಮದ ಕಣ್ಣು ತೆರೆಯಲಿ. ಅವರ ಹೃದಯ ಮಾನಸಾಂತರವಾಗಲಿ" ಎಂದು ಇನ್ನೊಬ್ಬರಿಗೂ ಪ್ರಾರ್ಥನೆ ಮಾಡುವಂತೆ ದೇವರು ನನ್ನ ಮನಸ್ಸನ್ನು ಬದಲಾಯಿಸಿದ್ದಾರೆ.

ದೇವರ ನಾಮಕ್ಕೆ ಮಹಿಮೆ ಉಂಟಾಗಲಿ 🙏🏼

ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR THE LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY


 


Comments

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)