2026ರ ಮಾರ್ಚ್ ತಿಂಗಳ ಪ್ರವಾದನೆಯ ವಾಗ್ದಾನ...

  2026ರ ಮಾರ್ಚ್  ತಿಂಗಳ ಪ್ರವಾದನೆಯ ವಾಗ್ದಾನ

 ಆತ್ಮಿಕ ಬೆಳವಣಿಗೆಯ ತಿಂಗಳು {Month of Growth}

             ಇದನ್ನು ಓದುತ್ತಿರುವ ಪ್ರತಿಯೊಬ್ಬ ಸಹೋದರ ಸಹೋದರಿಯರೇ ನಿಮ್ಮ ಶರೀರದ ಪರಿಸ್ಥಿತಿಗಳನ್ನು ಇಟ್ಟುಕೊಂಡು ವಾಕ್ಯವನ್ನು ಓದದೆ, ನಾನು ಪರಲೋಕದ ಪ್ರಜೆ, ಉನ್ನತದಲ್ಲಿ ಕುಳಿತಿದ್ದೇನೆ, ನಾನು ಆತ್ಮದ ವ್ಯಕ್ತಿ, ನನ್ನ ಇರುವಿಕೆಯೇ ಯೇಸುಕ್ರಿಸ್ತನಲ್ಲಿ  ಎಂಬ ಪ್ರಜ್ಞೆಯಿಂದ ಓದುವಾಗ ಮಾತ್ರವೇ ವಾಕ್ಯವನ್ನು ಹೊಂದಿಕೊಂಡು ವಾಕ್ಯದ ಬಲ, ಶಕ್ತಿ, ಸಾಮರ್ಥ್ಯ ಮತ್ತು ಮಹಿಮೆಯನ್ನು ನಿಮ್ಮ ಶರೀರದಲ್ಲಿ ಅನುಭವಿಸಲು ಸಾಧ್ಯವಾಗುತ್ತದೆ..


ಜನವರಿ ತಿಂಗಳಿನಲ್ಲಿ ಏದೆನ್ ನಲ್ಲಿ ಪುನ:ಸ್ಥಾಪನೆ ಮಾಡಿರುವುದನ್ನು, ಫೆಬ್ರುವರಿ ತಿಂಗಳಿನಲ್ಲಿ ನಿಮ್ಮನ್ನು ಕ್ರಿಸ್ತನಲ್ಲಿ ನೆಲೆಯಾಗಿಟ್ಟಿದ್ದಾರೆ, ಈಗ ಮೂರನೆಯ ತಿಂಗಳಿನಲ್ಲಿ ಕ್ರಿಸ್ತನಲ್ಲಿ ನೀವು ಬೆಳೆಯುತ್ತಲೇ ಇರುತ್ತೀರಿ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.

  

ವಾಗ್ದಾನದ ವಾಕ್ಯ:

( 2 ಪೇತ್ರನು 3 : 18 )

ನಿಮ್ಮ ಪ್ರಭುವಾದ ಮತ್ತು ರಕ್ಷಕನಾದ ಯೇಸು ಕ್ರಿಸ್ತನ ಕೃಪೆಯಲ್ಲಿಯೂ ತಿಳುವಳಿಕೆಯಲ್ಲಿಯೂ ಬೆಳೆಯುತ್ತಲೇ ಇರಿ. ಆತನಿಗೆ ಈಗಲೂ ಎಂದೆಂದಿಗೂ ಮಹಿಮೆಯಾಗಲಿ! ಆಮೆನ್.

 ಬೆಳವಣಿಗೆಯ ಬಗ್ಗೆ ಮಾತನಾಡುವಾಗ ನಿಮ್ಮ ಆತ್ಮದ ಮನುಷ್ಯನ ಬಗ್ಗೆ ಮಾತನಾಡುತ್ತಿದ್ದೇನೆ. ನಿಮ್ಮ ಆತ್ಮದ ಜ್ಞಾನ ಬೆಳೆಯಬೇಕು. ತಿಳುವಳಿಕೆಯ ಆತ್ಮ, ವಿವೇಚಿಸುವ ಆತ್ಮ ಬೆಳೆಯಬೇಕು. 

 ಇವತ್ತು ದೇವರು ನನಗೆ ಕೊಡುತ್ತಿರುವ ಅತಿ ದೊಡ್ಡ ಪ್ರಕಟಣೆ ಏನೆಂದರೆ,- "ಎಷ್ಟು ಶರೀರದ ಮನುಷ್ಯ ಗಣನೆಗೆ ಬಾರದೆ ಇರುತ್ತಾನೋ, ಅಷ್ಟು ಬಲವಾಗಿ ಆತ್ಮದ ಪ್ರಕಟಣೆಗಳನ್ನು, ರಹಸ್ಯಗಳನ್ನು ದೇವರು ನನಗೆ ತಿಳಿಸಿಕೊಡುತ್ತಿದ್ದಾರೆ. 

 ನಾವು ವಾಕ್ಯವನ್ನು ಧ್ಯಾನ ಮಾಡುವಾಗಲೆಲ್ಲ, "ನಾನು" ಎಂಬ "ಆತ್ಮದ ವ್ಯಕ್ತಿ" ದೇವರ ಜೊತೆಗೆ ಇನ್ನೂ ಹೆಚ್ಚಾಗಿ ಅನ್ಯೋನ್ಯತೆಯಿಂದ, ಐಕ್ಯತೆಯಿಂದ, ಹೊಂದಾಣಿಕೆಯಿಂದ ಇರಬೇಕು. ಇನ್ನೂ ಹೆಚ್ಚಾಗಿ ಅವರನ್ನು ಅರಿತುಕೊಳ್ಳಬೇಕು. ಇನ್ನೂ ಹೆಚ್ಚಾಗಿ ಅವರ ಪ್ರೀತಿಯನ್ನು ಅನುಭವಿಸಬೇಕು. ಅವರ ಪ್ರಸನ್ನತೆ ಒಂದೇ ಸಾಕು ಎಂದು ಎಷ್ಟು ದೊಡ್ಡದಾಗಿ ಹೇಳುತ್ತೇವೋ ಅಷ್ಟು ದೊಡ್ಡದಾಗಿರುವ ಫಲವನ್ನು ನಿಮ್ಮ ಶರೀರ ವ್ಯಕ್ತಪಡಿಸುತ್ತದೆ.

 ಆತ್ಮಕ್ಕೆ ಜೀವ ಇರುವುದರಿಂದ ಬೆಳೆಯುತ್ತಲೇ ಇರುತ್ತದೆ. ನಿಮ್ಮ ಆತ್ಮ ನಿತ್ಯ ನಿತ್ಯವಾಗಿರುವುದರಿಂದಲೂ, ಅದಕ್ಕೆ ಜೀವ ಇರುವುದರಿಂದಲೂ ಅದು ಬೆಳೆಯುತ್ತಲೇ ಇರುತ್ತದೆ. ಆದ್ದರಿಂದ ಇದು ಬೆಳವಣಿಗೆಯ ತಿಂಗಳಾಗಿದೆ.

ನಮ್ಮ ಆತ್ಮದ ಬೆಳವಣಿಗೆಗೆ ಅಗತ್ಯವಾಗಿ ಬೇಕಾಗಿರುವ ಐದು ಪ್ರಮುಖವಾದ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ.

1. ಹಸಿವು  { Hunger }

 2. ಕೃಪೆಯು { Grace }

 3. ಪ್ರಬುದ್ಧತೆ { Maturity }

 4. ಪ್ರಕಟಿಸುವುದು { Manifestation  }

 5. ಪರಲೋಕವೇ ಕೊಂಡಾಡುವುದು  { Heaven celebration } 

 ಒಂದು ಉದಾಹರಣೆಯ ಮೂಲಕ ಈ ಐದು ಅಂಶಗಳನ್ನು ನೋಡಿಕೊಳ್ಳೋಣ.

             ನಾವು ಒಂದು ಮನೆಗೆ ಹೋಗಿದ್ದೆವು, ಆ ಮನೆಯಲ್ಲಿ ನಡೆಯಲು ಬಾರದ ಒಂದು ಚಿಕ್ಕ ಮಗು ಇತ್ತು. ಅದಕ್ಕೆ ದೂರದಲ್ಲಿ ಒಂದು ಗೊಂಬೆಯನ್ನು ಇಟ್ಟಿದ್ದರು. ಅದನ್ನು ತೆಗೆದುಕೊಳ್ಳಲು ಮಗು ಮುಂದೆ ಹೋಗಲು ಪ್ರಯತ್ನಿಸುತ್ತಿತ್ತು. ಒಂದು ಉದ್ದೇಶ ಇರುವಾಗಲೇ ಚಲಿಸುವಿಕೆ ಪ್ರಾರಂಭವಾಗುವುದು.

1. ಹಸಿವು  { Hunger }

 ದೇವರ ಮೇಲೆ ಬಯಕೆ ಹಸಿವು ಇರುವಾಗಲೇ ನಾವು ಚಲಿಸುತ್ತೇವೆ. ಬೆಳವಣಿಗೆಗೆ ಒಂದು ಗುರುತು ನಿಮಗೆ ಹಸಿವಾಗುವುದು. ಹಸಿವು ಬೆಳವಣಿಗೆಯನ್ನು ಪ್ರಾರಂಭಿಸುತ್ತದೆ {Hunger starts Growth}. ಯೇಸು ಕ್ರಿಸ್ತನ ಮೇಲೆ ಇರುವ ಒಂದು ಬಯಕೆ ಅದೇ ಹಸಿವು.

ಯೋಹಾನ 6:35 ರಲ್ಲಿ “ಜೀವಕೊಡುವ ರೊಟ್ಟಿ ನಾನೇ; ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗುವದಿಲ್ಲ, ನನ್ನನ್ನು ನಂಬುವವನಿಗೆ ಎಂದಿಗೂ ನೀರಡಿಕೆಯಾಗುವದಿಲ್ಲ.” ಎಂದು ವಾಕ್ಯ ಹೇಳುತ್ತದೆ.. ಹಸಿವು ಹೆಚ್ಚಾಗುವಾಗ ಯೇಸುವಿನ ಮೇಲೆ ಆಸೆ ಹೆಚ್ಚಾಗಿದೆ ಎಂಬುದನ್ನು ವ್ಯಕ್ತಪಡಿಸುತ್ತಿದ್ದೇವೆ ಎಂದು ಅರ್ಥ..

2. ಕೃಪೆಯು { Grace }

 ಯಾವಾಗ ಯೇಸುವಿನ ಮೇಲಿರುವ ಆಸೆಯನ್ನು, ಹಸಿವೆಯನ್ನು ವ್ಯಕ್ತಪಡಿಸುತ್ತೇವೋ ಆಗ ಕೃಪೆ ಎಂಬ ವಾತಾವರಣ ಉಂಟಾಗುತ್ತದೆ. ಕೃಪೆ ಎಂಬ ವಾತಾವರಣ ಅಂದರೆ ನಿನ್ನ ಬಲದಿಂದ ಆಗುತ್ತಿಲ್ಲ, ನಿನ್ನ ಸಾಮರ್ಥ್ಯದಿಂದ ಆಗುತ್ತಿಲ್ಲ ಎನ್ನುವಾಗ ಯೇಸುವೇ ನಿನ್ನ ಬಲವಾಗಿ, ಸಾಮರ್ಥ್ಯವಾಗಿ, ಜ್ಞಾನವಾಗಿ ವ್ಯಕ್ತಪಡಿಸುವುದೇ ಕೃಪೆ. ಕೃಪೆ ಎಂಬುದು ಒಬ್ಬ ವ್ಯಕ್ತಿ, ಆ ವ್ಯಕ್ತಿಯ ಹೆಸರು, ಯೇಸು.

 ಯಾವುದು ನಮಗೆ ಆಗುತ್ತಿಲ್ಲ ಎಂದು ಹೇಳುವಾಗ ದೇವರು ಆತ್ಮದ ಸೈನ್ಯವನ್ನು ಕಳುಹಿಸಿ, ದೇವದೂತರುಗಳನ್ನು ಕಳುಹಿಸಿ, ದೇವರು ಕೃಪೆಯಿಂದ ತನ್ನ ಬಲವನ್ನು ವ್ಯಕ್ತಪಡಿಸಿ, ಪರಿಸ್ಥಿತಿಯನ್ನು ತಲೆಕೆಳಗಾಗಿ ಮಾಡಿ, ಎಲ್ಲವೂ ನಿಮಗೆ ಅನುಕೂಲವಾಗುವಂತೆ, ನಿಮಗೆ ಆಶೀರ್ವಾದವಾಗಿರುವಂತೆ, ನಿಮಗೆ ಜಯವಾಗಿರುವಂತೆ ಕಾರ್ಯಗಳು ಬದಲಾವಣೆಯಾಗುವುದೇ ಕೃಪೆ. {Grace sustains Growth}

  3. ಪ್ರಬುದ್ಧತೆ { Maturity }

 ಪ್ರಭುದ್ಧತೆ ಬೆಳವಣಿಗೆಯಲ್ಲಿ ಸರಿಯಾಗಿ, ಕ್ರಮವಾಗಿ ನನ್ನನ್ನು ಮೇಲೆ ಎಬ್ಬಿಸುತ್ತಿದೆ. {Maturity shapes Growth}

 ದೇವರ ವಾಕ್ಯದ ಪ್ರಕಾರ ನಿಮ್ಮ ಆಲೋಚನೆ ಇರುವಾಗ, ದೇವರ ವಾಕ್ಯದ ಪ್ರಕಾರ ನಡೆಯುವಾಗ  ನೀವು ಶರೀರದ ಮನುಷ್ಯನಂತೆ ನಡೆದುಕೊಳ್ಳುವುದಿಲ್ಲ, ದೇವರ ಆಲೋಚನೆಗೆ ಶಬ್ದವನ್ನು ಕೊಡುವವರಾಗಿರುತ್ತೀರಿ, ದೇವರ ಹಾಗೆ ನಿಮ್ಮ ಮಾತುಗಳಿರುವುದು, ದೇವರ ಹಾಗೆ ನಿಮ್ಮ ಕ್ರಿಯೆಗಳಿರುವುದು. ಇದನ್ನೇ ಪ್ರಬುದ್ಧತೆ ಎನ್ನುವುದು.

  4. ಪ್ರಕಟಿಸುವುದು { Manifestation  }

ಪ್ರಭುದ್ಧರಾದ ನಂತರದ ಕಾರ್ಯ ಪ್ರಕಟಪಡಿಸುವುದು. {Manifestation demonstrates Growth}  ಪ್ರಭುದ್ಧರಾದ ಮೇಲೆ ಆತ್ಮದಲ್ಲಿರುವುದನ್ನು ಶರೀರದಲ್ಲಿ ವ್ಯಕ್ತಪಡಿಸುತ್ತಿದ್ದೇನೆ ಎಂದು ಅರ್ಥ.

 5. ಪರಲೋಕವೇ ಕೊಂಡಾಡುವುದು  { Heaven celebration } 

ಶರೀರದಲ್ಲಿ ಅದನ್ನು ವ್ಯಕ್ತಪಡಿಸಿದ ಮೇಲೆ {Heaven celebrates Growth} ಪರಲೋಕವೇ ನಿಮ್ಮ ಬೆಳವಣಿಗೆಯನ್ನು ಕೊಂಡಾಡುತ್ತಾ ಇರುವುದು. 

                ಈ ಐದು ಅಂಶಗಳು ಆತ್ಮದ ಆಯುಧಗಳಾಗಿವೆ ಈ ವಾಕ್ಯ ನಿಮ್ಮಲ್ಲಿ ಬೇರೂರಿಬಿಟ್ಟರೆ, ಯಾವ ಶತ್ರು ನಿಮ್ಮನ್ನು ಯಾಮಾರಿಸಲು ಸಾಧ್ಯವಿಲ್ಲ, ವಂಚಿಸಲು ಸಾಧ್ಯವಿಲ್ಲ, ಈ ವಾಕ್ಯಗಳನ್ನು ನಿಮ್ಮಿಂದ ಕಿತ್ತು ಎಸೆಯಲು ಸಾಧ್ಯವಿಲ್ಲ. ಈ ವಾಕ್ಯ ನಿಮ್ಮಲ್ಲಿ ಬೇರೂರಿ ಬಿಟ್ಟರೆ, ಆ ವಾಕ್ಯದ ಫಲಗಳು ನಿಮ್ಮಲ್ಲಿ ಹಾಗೆಯೇ ಪ್ರಕಟವಾಗುವುದು ಎಂದು ಅರ್ಥ..

ಸತ್ಯವೇದದಲ್ಲಿರುವ ಒಂದು ಘಟನೆಯನ್ನು ನೋಡಿಕೊಳ್ಳೋಣ.

 ಲೂಕ 5:1-2

ಒಂದಾನೊಂದು ದಿವಸ ಜನರು ಒತ್ತಾಗಿ ಬಂದು ಆತನ ಮೇಲೆ ಬಿದ್ದುಕೊಂಡು ದೇವರ ವಾಕ್ಯವನ್ನು ಕೇಳುತ್ತಿರಲು ಗೆನೇಜರೆತ್ ಕೆರೆಯ ಅಂಚಿನಲ್ಲಿ ನಿಂತಿದ್ದ ಆತನು ಆ ಕೆರೆಯ ದಡದಲ್ಲಿ ಎರಡು ದೋಣಿಗಳನ್ನು ಕಂಡನು. ಬೆಸ್ತರು ಅವುಗಳೊಳಗಿಂದ ಹೊರಗೆ ಬಂದು ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು.

ಯೇಸುವಿನ ಮೇಲೆ ಆಸೆ ಅಂದರೆ ವಾಕ್ಯದ ಮೇಲೆ ಆಸೆ. ಎಷ್ಟು ಯೇಸುವಿನ ಮೇಲೆ ಆಸೆಯನ್ನು ಇಟ್ಟುಕೊಂಡಿದ್ದೇವೆ ಎನ್ನುವುದನ್ನು ವ್ಯಕ್ತಪಡಿಸುವುದು ಹೇಗೆ ಅಂದರೆ ವಾಕ್ಯದ ಹಸಿವು ಯಾವ ರೀತಿ ಇದೆ ಎನ್ನುವುದನ್ನು ವ್ಯಕ್ತಪಡಿಸುವುದೇ  ಆಗಿದೆ.

 ಜನರು ವಾಕ್ಯವನ್ನು ಕೇಳುವುದಕ್ಕೆ ನೂಕಾಡುತ್ತಿದ್ದರು. ಹೊಟ್ಟೆ ಖಾಲಿಯಾಗಿದ್ದಾಗಲೇ ಹಸಿವು ಹೆಚ್ಚಾಗುವುದು. ಇಲ್ಲಿ ಬಲೆಗಳು ಖಾಲಿಯಾಗಿದ್ದವು. ಎಲ್ಲಿ ಖಾಲಿಯಾಗಿದೆಯೋ ಹೃದಯ ಆ ಕಡೆ ಎಳೆದುಕೊಂಡು ಹೋಗುತ್ತದೆ. 

1 ಪೇತ್ರನು 2:2

ಎಲ್ಲಾ ತರದ ನಿಂದೆಯನ್ನೂ ವಿಸರ್ಜಿಸಿ ಹಸುಮಕ್ಕಳಂತೆ ಪಾರಮಾರ್ಥಿಕವಾದ ಶುದ್ಧ ಹಾಲನ್ನು ಬಯಸಿರಿ; ಅದರಿಂದ ಬೆಳೆಯುತ್ತಾ ರಕ್ಷಣೆಯನ್ನು ಹೊಂದುವಿರಿ; ಕರ್ತನು ದಯಾಳುವೆಂದು ನೀವು ಅನುಭವದಿಂದ ತಿಳಿದುಕೊಂಡಿದ್ದೀರಲ್ಲವೋ?

ಹಸಿವು ಆದಾಗ ವಾಕ್ಯವೆಂಬ ಶುದ್ಧ ಹಾಲನ್ನು ಬಯಸಿರಿ. 

ಲೂಕ 5:3

ಆ ದೋಣಿಗಳಲ್ಲಿ ಸೀಮೋನನ ಒಂದು ದೋಣಿಯನ್ನು ಆತನು ಹತ್ತಿ ದಡದಿಂದ ಸ್ವಲ್ಪ ದೂರಕ್ಕೆ ನೂಕಬೇಕೆಂದು ಅವನನ್ನು ಕೇಳಿಕೊಂಡನು. ತರುವಾಯ ಆತನು ಕೂತುಕೊಂಡು ದೋಣಿಯೊಳಗಿಂದಲೇ ಆ ಜನರ ಗುಂಪಿಗೆ ಉಪದೇಶಮಾಡಿದನು.

 ನಮ್ಮ ಜೀವಿತದಲ್ಲಿ ಆಗಬೇಕಾದ ಏನಾದರೂ ಒಂದು ಕಾರ್ಯ ಅದು ದೇವರ ಉದ್ದೇಶದ ಪ್ರಕಾರ ಇರುವಾಗ ದೇವರೇ ಎಲ್ಲವನ್ನು ಏರ್ಪಡಿಸುತ್ತಾರೆ. ನಿಮ್ಮ ಜೀವನದಲ್ಲಿ ಏನೇನು ಹೋರಾಡಬೇಡಿ, ಕಷ್ಟ ಪಡಬೇಡಿ. ಅಪ್ಪ ನಿನ್ನ ಉದ್ದೇಶದಂತೆ ನನ್ನ ನಡೆಸಿ ಎಂದು ಹೇಳುವಾಗೆಲ್ಲ ಈ ತಿಂಗಳು ಒಂದೊಂದು ದಿನವೂ ದೇವರೇ ಬಂದು ನಿಮ್ಮ ಹತ್ತಿರ ಮಾತಾಡುತ್ತಾರೆ. ದೇವರೇ ನಿಮಗೆ ಬೇಕಾಗಿರುವುದನ್ನು ಕಳಿಸುತ್ತಾರೆ. ದೇವರೇ ನಿಮ್ಮನ್ನು ಹೋಗಬೇಕಾಗಿರುವ ಸ್ಥಳಕ್ಕೆ ಕಳಿಸುತ್ತಾರೆ.

 ಇನ್ನೊಂದು ಪ್ರಕಟಣೆ :

 ಪೇತ್ರನು  ರಾತ್ರಿಯೆಲ್ಲಾ ಮೀನನ್ನು ಹುಡುಕಿ,  ಸಿಗದೇ ಇರುವಾಗ ಅವನು ಬೆಳಿಗ್ಗೆ ವೇದನೆಯಿಂದ ನೋವಿನಿಂದ  ಇರುತ್ತಾನೆ. ರಾತ್ರಿ ಎಲ್ಲ ಸೈತಾನ ಅವನ ಕೆಲಸ ಮಾಡಿದ ಬೆಳಿಗ್ಗೆ ಯೇಸು ಬಂದು ಈಗ ನನ್ನ ಕೆಲಸವನ್ನು ಮಾಡುತ್ತೇನೆ, ನೀನು ನೋಡು ಎಂದು ಹೇಳುತ್ತಾರೆ.

 ನಿಮ್ಮ ಪಾತ್ರೆ ಖಾಲಿಯಾಗಿರುವುದು, ಕೆಲಸವನ್ನು ಕಳೆದುಕೊಂಡಿರುವುದು, ನಿಮ್ಮ ವ್ಯಾಪಾರ ನಷ್ಟವಾಗಿರುವುದು, ಸೈತಾನ ಅವನ ಮಹಿಮೆಯನ್ನು ತೋರಿಸಿರಬಹುದು. ಇವತ್ತು ಈ ಮಾರ್ಚ್ ತಿಂಗಳಲ್ಲಿ ಒಂದೊಂದು ದಿನವೂ ನನ್ನ ಮಹಿಮೆ ಎಂಥದ್ದು, ನನ್ನ ಸಾಮರ್ಥ್ಯ ಎಂಥದ್ದು ಎಂದು ತೋರಿಸುತ್ತೇನೆ ಎಂದು ದೇವರು ಹೇಳುತ್ತಿದ್ದಾರೆ.

ಯೇಸು ಪೇತ್ರನಿಗೆ ನಿನ್ನ ದೋಣಿಯಲ್ಲಿ ಬಂದು ಕುಳಿತುಕೊಳ್ಳುತ್ತೇನೆ ಎಂದು ಹೇಳುತ್ತಾರೆ. ಈಗ ಯೇಸು ನಿಮಗೆ ಹೇಳುತ್ತಿದ್ದಾರೆ, -  "ನೀನು ಹೇಳಿದ ಮೇಲೆ ನಿನ್ನ ಪರಿಸ್ಥಿತಿ ನನಗೆ ತಿಳಿಯಬೇಕಾಗಿಲ್ಲ, ನೀವು ಯಾವ ಪರಿಸ್ಥಿತಿಯಲ್ಲಿ ಇದ್ದರೂ,  ನಿಮ್ಮ ಹೃದಯದಲ್ಲಿ, ನಿಮ್ಮ ಮನಸ್ಸಿನಲ್ಲಿ, ನಿಮ್ಮ ಪ್ರಾಣದಲ್ಲಿ ಸ್ವಲ್ಪ ಜಾಗ ಕೊಡು, ನಾನು ಒಳಗಡೆ ಬಂದು  ಕೂತುಕೊಳ್ಳುತ್ತೇನೆ" - ಎಂದು ಹೇಳುತ್ತಾರೆ... ಈ ಮಾರ್ಚ್ ತಿಂಗಳಲ್ಲಿ ಇದುವರೆಗೂ ಅನುಭವಿಸದ ರೀತಿಯಲ್ಲಿ ಒಂದೊಂದು ದಿನವೂ ನೀವು ಅನುಭವಿಸುವಿರಿ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತಿದ್ದೇನೆ.

 ಎಲ್ಲಿ ಪಾತ್ರೆ ಖಾಲಿಯಾಗಿದೆಯೋ ಅಲ್ಲಿ ಒಂದು ದೈವಿಕ ಆಕರ್ಷಣೆ ಉಂಟಾಗುತ್ತದೆ. ಮನುಷ್ಯ ಖಾಲಿಯಾಗಿರುವ ಹಾಗೆ ದೇವರು ಸೃಷ್ಟಿಸಲಿಲ್ಲ, ಮನುಷ್ಯ ಕೊರತೆಯಲ್ಲಿರುವ ಹಾಗೆ ದೇವರು ಸೃಷ್ಟಿಸಲಿಲ್ಲ, ಮನುಷ್ಯರು ಕಾಯಿಲೆಯಲ್ಲಿರುವ ರೀತಿಯಲ್ಲಿ ದೇವರು ಸೃಷ್ಟಿಸಲಿಲ್ಲ, ನನ್ನ ಉದ್ದೇಶವನ್ನು ನೆರವೇರಿಸುವುದಕ್ಕೆ ತಡೆಯಾಗಿರುವ ಎಂತದೇ ಪರಿಸ್ಥಿತಿ ಆಗಿರಲಿ, ನಾನು ಅಲ್ಲಿ ಬಂದು ಅದನ್ನು ಸರಿಪಡಿಸಿ, ನನ್ನ ನಾಮ ಮಹಿಮೆ ಪಡುವಂತೆ, ನನ್ನ ಉದ್ದೇಶ ನೆರವೇರುವಂತೆ, ನನ್ನ ಬಲವನ್ನು, ನನ್ನ ಸಾಮರ್ಥ್ಯವನ್ನು ವ್ಯಕ್ತಪಡಿಸುತ್ತೇನೆ ಎಂದು ದೇವರು ಹೇಳುತ್ತಿದ್ದಾರೆ.

 ಯಾರಾದರೂ ಚಿಂತೆಯಲ್ಲಿ ದುಃಖದಲ್ಲಿ ಇರುವುದಾದರೆ ದೇವರು ನಿಮಗೆ ಹೇಳುತ್ತಿದ್ದಾರೆ - ನಿಮ್ಮನ್ನು ಚಿಂತೆಯಲ್ಲಿರುವಂತೆ ಮಾಡಿದ  ಆ ಪರಿಸ್ಥಿತಿಯನ್ನು ನಾನು ತಲೆಕೆಳಗಾಗಿ ಮಾರ್ಪಡಿಸಿ, ಅವರ ಮಹಿಮೆ, ಅವರ ಬಲ ಎಂಥದ್ದು ಎಂದು ಈ ತಿಂಗಳಿನಲ್ಲಿ ಒಂದೊಂದು ದಿನವೂ ನೀನು ಹಾಗೆ ಅನುಭವಿಸಿಯೇ ಅನುಭವಿಸುತ್ತಿಯಾ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.

 ಲೂಕ 5:4-5

ಮಾತಾಡುವದನ್ನು ಮುಗಿಸಿದ ಮೇಲೆ ಸೀಮೋನನಿಗೆ – “ಆಳವಾದ ಸ್ಥಳಕ್ಕೆ ದೋಣಿಯನ್ನು ನಡಿಸಿ ಮೀನುಬೇಟೆಗಾಗಿ ನಿಮ್ಮ ಬಲೆಗಳನ್ನು ಹಾಕಿರಿ” ಎಂದು ಹೇಳಿದನು. ಅದಕ್ಕೆ ಸೀಮೋನನು – ಗುರುವೇ, ನಾವು ರಾತ್ರಿಯೆಲ್ಲಾ ಪ್ರಯಾಸಪಟ್ಟರೂ ಏನೂ ಸಿಕ್ಕಲಿಲ್ಲ; ಆದರೆ ನಿನ್ನ ಮಾತಿನ ಮೇಲೆ ಬಲೆಗಳನ್ನು ಹಾಕುತ್ತೇನೆ ಅಂದನು.

 ಆಳವಾದ ಜಾಗದಲ್ಲಿ ಹೋಗಿ ಹಾಕು ಎನ್ನುವ ಮಾತು, ಆ ವಾಕ್ಯವು  ಆತ್ಮವಾಗಿ ಪೇತ್ರನ ಹೃದಯವನ್ನು ಮುಟ್ಟಿ, "ನಾನು ರಾತ್ರಿಯೆಲ್ಲಾ ಹೋಗಿ ಪ್ರಯಾಸ ಪಟ್ಟಿದ್ದೇನೆ, ಈಗ ಮೀನು ಸಿಗುವುದಿಲ್ಲ" ಎಂದು ಶರೀರ ಹೇಳುತ್ತಿದ್ದರೂ, ಆ ವಾಕ್ಯದ ಆತ್ಮ ಅವನನ್ನು ತಟ್ಟಿ, ಎಬ್ಬಿಸಿ, ಬಲೆಗಳನ್ನು ಹೋಗಿ ಹಾಕುವಂತೆ ಮಾಡಿತು. ಆತ್ಮದಿಂದ ಬರುವ ವಾಕ್ಯವನ್ನು ಶರೀರ ವ್ಯಕ್ತಪಡಿಸುವಾಗ, ಕೃಪೆಯ ಮಹಿಮೆ ಅಲ್ಲಿ ವ್ಯಕ್ತವಾಗುತ್ತದೆ.. ಹಲ್ಲೆಲೂಯ!!! 

ನೀವು ಆತ್ಮದಲ್ಲಿ ಬೆಳೆಯುತ್ತಿರುವಾಗ ಈ ಲೋಕದಲ್ಲಿ ಇರುವುದೆಲ್ಲವೂ  ನಿಮ್ಮ ಪಾದದಲ್ಲಿ ಬಿದ್ದು ನಿಮಗೆ ಸೇವೆ ಮಾಡುತ್ತದೆ. ಇದು ಯೇಸುಕ್ರಿಸ್ತನ ಶರೀರ ಇಲ್ಲಿ ನಾನು ಬಂದು ವಾಸಿಸಲು ಸಾಧ್ಯವಿಲ್ಲ ಎಂದು ಹೇಳಿ ಖಾಯಿಲೆ ಬಿಟ್ಟು ಹೋಗುತ್ತದೆ. ಇದು ಪ್ರಯತ್ನಪಟ್ಟು ಅನುಭವಿಸುವ ಕಾರ್ಯ ಅಲ್ಲ, ದೇವರ ಜೊತೆಗೆ ಇದ್ದು ಅನುಭವಿಸುವ ಕಾರ್ಯ.

 ಯಾವಾಗ ನಿಮ್ಮ ಶರೀರ, ಪ್ರಾಣ, ಮನಸ್ಸು ಮತ್ತು ನಿಮ್ಮ ಹೃದಯ ವಾಕ್ಯವನ್ನು ಕುತೂಹಲದಿಂದ ಒಪ್ಪಿಕೊಳ್ಳುತ್ತದೆಯೋ, ಆವಾಗ ವಾಕ್ಯದ ಆತ್ಮ ಬಲವಾಗಿ ಕಾರ್ಯ ಮಾಡಲು ಪ್ರಾರಂಭಿಸುತ್ತದೆ. ವಾಕ್ಯವನ್ನು ಶರೀರದಲ್ಲಿ ವ್ಯಕ್ತಪಡಿಸುವ ಕ್ರಿಯೆ ನಡೆಯುವಾಗ ಯೇಸುವಿನ ಮಹಿಮೆ ಅಲ್ಲಿ ಪ್ರಕಟವಾಗುತ್ತಿದೆ ಎಂದು ಅರ್ಥ.

ಲೂಕ 5:6-7-8:

ಹಾಕಿದ ಮೇಲೆ ಮೀನುಗಳು ರಾಶಿರಾಶಿಯಾಗಿ ಸಿಕ್ಕಿಕೊಂಡು ಅವರ ಬಲೆಗಳು ಹರಿದುಹೋಗುತ್ತಿದ್ದವು. ಆಗ ಅವರು ಮತ್ತೊಂದು ದೋಣಿಯಲ್ಲಿದ್ದ ತಮ್ಮ ಪಾಲುಗಾರರಿಗೆ – ನೀವು ಬಂದು ನಮಗೆ ನೆರವಾಗಬೇಕೆಂದು ಸನ್ನೆಮಾಡಿದರು. ಅವರು ಬಂದು ಆ ಎರಡು ದೋಣಿಗಳಲ್ಲಿ ಮೀನುಗಳನ್ನು ತುಂಬಿಸಲು ಅವು ಮುಳುಗುವ ಹಾಗಾದವು.

ಸೀಮೋನ್ ಪೇತ್ರನು ಇದನ್ನು ಕಂಡು ಯೇಸುವಿನ ಮೊಣಕಾಲಿಗೆ ಬಿದ್ದು – ಸ್ವಾಮೀ, ನಾನು ಪಾಪಾತ್ಮನು; ನನ್ನನ್ನು ಬಿಟ್ಟುಹೋಗಬೇಕು ಅಂದನು.

 ಯೇಸು ಹೇಳಿದ ಪ್ರಕಾರ ಬಲೆಯನ್ನು ಹಾಕಿದಾಗ ಅವರು ಎದುರು ನೋಡುವುದಕ್ಕಿಂತ ಹೆಚ್ಚಾದ ಮೀನುಗಳು ಬಂದಿದ್ದವು. ನಾವಾಗಿದ್ದರೆ,-" ವಾವ್ ಎಷ್ಟು ಮೀನು ಸಿಕ್ಕಿತು"- ಎಂದು ಮೀನುಗಳ ಕಡೆಗೆ ಓಡುತ್ತಿದ್ದೆವು.

 ನಿಯಮ : ಸತ್ಯದಲ್ಲಿ ಪ್ರಬುದ್ಧರಾಗಿರುವವರು ಅದ್ಭುತವನ್ನು ನೋಡಿ ಆಶ್ಚರ್ಯಪಡುವುದಿಲ್ಲ, ಅದ್ಭುತವನ್ನು ಮಾಡಿದ ಯೇಸುವನ್ನು ನೋಡಿ ಆಶ್ಚರ್ಯಪಡುವರು.

 ದೇವರು ಮಾಡಿದ ಅದ್ಭುತವನ್ನು ನೋಡಿ ಶರೀರದಲ್ಲಿ ಕೊಂಡಾಡುವವರಾಗಿದ್ದರೆ ನೀವು ಈ ಲೋಕದವರು. ಆದರೆ ಈ ಅದ್ಭುತವನ್ನು ಮಾಡುವುದಕ್ಕೆ ಕಾರಣನಾಗಿದ್ದ ಯೇಸುವಿನ ಮೇಲೆ ನಿಮ್ಮ ಬಯಕೆ, ದಾಹ ಹೆಚ್ಚಾಗುವುದಾದರೆ ನೀವು ಪ್ರಭುದ್ಧರಾಗಿದ್ದೀರಿ ಎಂದರ್ಥ.

ನೀವು ಯಾವಾಗೆಲ್ಲ ದೇವರ ವಾಕ್ಯದಲ್ಲಿ ಪ್ರಬುದ್ಧತೆಯನ್ನು ಹೊಂದುತ್ತಾ ಇದ್ದೀರೋ, ನಿಮ್ಮ ಶರೀರದ ಪ್ರಕಾರ ಭಾವನೆಗಳನ್ನು ಬದಲಾಯಿಸಿ, ಯೇಸುವಿನ ಸ್ವಭಾವವನ್ನು, ಪ್ರೀತಿಯನ್ನು, ಸಮಾಧಾನವನ್ನು ವ್ಯಕ್ತಪಡಿಸುವ ರೀತಿಯಲ್ಲಿ ಬದಲಾಗುತ್ತಾ ಇದ್ದೀರಿ ಎಂದರ್ಥ.

 ಇಲ್ಲಿ ಪೇತ್ರನು ಯೇಸುವಿನ ಮೊಣಕಾಲಿಗೆ ಬಿದ್ದನು, ಮೀನುಗಳನ್ನು ಕೊಟ್ಟಿದ್ದಕ್ಕೆ ಅಲ್ಲ, ಮೀನುಗಳು ಕೂಡ ಈತನಿಗೆ ವಿಧೇಯವಾಗುತ್ತವೆ, ಇವರು ಈ ಲೋಕಕ್ಕೆ ಸೇರಿದವರಲ್ಲ, ಇವರೇ ದೇವರು, ಇವರು ಪರಲೋಕದವರು ಎಂದು ತಿಳಿದುಕೊಂಡು ನನ್ನನ್ನು ಬಿಟ್ಟು ಹೋಗು ಎಂದನು.

ಲೂಕ 5:9

ಯಾಕಂದರೆ ಅವನಿಗೂ ಅವನ ಸಂಗಡ ಇದ್ದವರೆಲ್ಲರಿಗೂ ತಾವು ಹಿಡಿದ ಮೀನುಗಳ ನಿವಿುತ್ತ ವಿಸ್ಮಯ ಹಿಡಿದಿತ್ತು;

 ಯಾವಾಗ ವಾಕ್ಯ ನಮ್ಮ ಜೀವಿತದಲ್ಲಿ ಮಾಂಸವಾಗುತ್ತದೆಯೋ, ಆಗ ಸುತ್ತ ಮುತ್ತಲಿದ್ದವರೆಲ್ಲರೂ ವಿಸ್ಮಯಗೊಳ್ಳುತ್ತಾರೆ. 

        ಈ ಮಾರ್ಚ್ ತಿಂಗಳಿನಲ್ಲಿ ನಿಮ್ಮ ಜೀವಿತವನ್ನು ಸುತ್ತಮುತ್ತಲಿನವರು ನೋಡುವಾಗ ವಿಸ್ಮಯದಿಂದ ನೋಡುತ್ತಿರುತ್ತಾರೆ, ಆಶ್ಚರ್ಯದಿಂದ ನೋಡುತ್ತಿರುತ್ತಾರೆ,  ಇವರಿಗೆ ಹೇಗೆ ಇಂಥ ಕಾರ್ಯಗಳೆಲ್ಲ ನಡೆಯುತ್ತಿವೆ ಎಂದು ನೋಡುತ್ತಿರುತ್ತಾರೆ.

ಈ ಮಾರ್ಚ್ ತಿಂಗಳಿನಲ್ಲಿ ವಾಕ್ಯವನ್ನು ಮಾಂಸವಾಗಿ ಪ್ರಕಟಿಸುವ ಒಂದು ಆಯುಧವಾಗಿ ಮಾರ್ಪಟ್ಟಿದ್ದೀರಿ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.

ಲೂಕ 5:10

ಸೀಮೋನನ ಪಾಲುಗಾರರಾಗಿದ್ದಂಥ ಜೆಬೆದಾಯನ ಮಕ್ಕಳಾದ ಯಾಕೋಬ ಯೋಹಾನರೂ ಹಾಗೆಯೇ ವಿಸ್ಮಯಪಟ್ಟರು. ಯೇಸು ಸೀಮೋನನಿಗೆ – “ಅಂಜಬೇಡ, ಇಂದಿನಿಂದ ನೀನು ಮನುಷ್ಯರನ್ನು ಹಿಡಿಯುವವನಾಗಿರುವಿ” ಎಂದು ಹೇಳಿದನು.

ಪೇತ್ರನು ಮೀನುಗಳನ್ನು ಹಿಡಿಯುತ್ತಿದ್ದ. ಆದರೆ ದೇವರ ಉದ್ದೇಶ ಅದಾಗಿರಲಿಲ್ಲ, ಅವನು ಮೀನುಗಳನ್ನು ಮಾತ್ರ ಹಿಡಿಯುತ್ತಿದ್ದರೆ ಅಲ್ಲಿಯೇ ಮುಗಿದು ಹೋಗುತ್ತಿತ್ತು, ಆದರೆ ಮನುಷ್ಯರನ್ನು ಹಿಡಿಯುವ ಹಾಗೆ ಮಾಡಿದ್ದಕ್ಕೆ, ಇವತ್ತಿಗೂ ಪೇತ್ರನ ಹೆಸರನ್ನು ನಾವು ಎತ್ತಿ ಮಾತಾಡುತ್ತೇವೆ.

 ದೇವರು ನಿಮ್ಮನ್ನು ಆರಿಸಿಕೊಂಡಿರುವುದು  ಹೇಗೋ ಜೀವಿಸಿ ಸಾಯುವುದಕ್ಕೆ ಅಲ್ಲ, ಮುಂದೆ ಬರುವ ಸಂತತಿ ಯೇಸುವಿನ ನಾಮ ಮಹಿಮೆ ಪಡುವ ರೀತಿಯಲ್ಲಿ, ನಿಮ್ಮ ಮೂಲಕ ಪ್ರಕಟವಾಗುತ್ತಲೇ ಇರಬೇಕು ಎನ್ನುವ ಕಾರ್ಯವನ್ನು ವ್ಯಕ್ತಪಡಿಸುತ್ತಿದ್ದಾರೆ. 

ಎಷ್ಟೊಂದು ಮೀನುಗಳು ಬಂದಿದ್ದರೂ, ಆ ಮೀನುಗಳನ್ನು ಬಿಟ್ಟು ಪೇತ್ರನು ಯೇಸುವನ್ನು ಹಿಂಬಾಲಿಸಿದನು. ಯಾಕೆಂದರೆ ನನಗೆ ಇದು ಮುಖ್ಯವಲ್ಲ, ನನಗೆ ನಿತ್ಯ ನಿತ್ಯ ಜೀವವಾಗಿರುವ ಆ ಜೀವದ ರೊಟ್ಟಿ ಆಗಿರುವ ಯೇಸುವೇ ಮುಖ್ಯ, ಆತನೇ ಸತ್ಯವಾಗಿಯೂ, ಮಾರ್ಗವಾಗಿಯೂ ಜೀವವಾಗಿರುವವನ ಹಿಂದೆ ಹೋದರೆ ನಾನು ನಿತ್ಯ ನಿತ್ಯವಾಗಿ ಆಶೀರ್ವಾದವಾಗಿರುತ್ತೇನೆ. ನಿತ್ಯ ನಿತ್ಯವಾಗಿ ಆರೋಗ್ಯವಾಗಿರುತ್ತೇನೆ. ನಿತ್ಯ ನಿತ್ಯವಾಗಿ ಜಯವಾಗಿಯೇ ಇರುತ್ತೇನೆ.

 ಈ ಮಾರ್ಚ್ ತಿಂಗಳಲ್ಲಿ ಒಂದೊಂದು ದಿನವೂ ಕೂಡ ನೀವು ಒತ್ತಡದಲ್ಲಿ ಇರುವುದಿಲ್ಲ, ಶಾಂತಿಯಿಂದ ಇರುತ್ತೀರಿ.. ಸಂಘರ್ಷದಲ್ಲಿ ಇರುವುದಿಲ್ಲ, ಪ್ರೀತಿಯಲ್ಲಿ ಇರುತ್ತೀರಿ. ಇಕಟ್ಟಿನಲ್ಲಿ ಇರುವುದಿಲ್ಲ, ನಂಬಿಕೆಯಿಂದ ಧೈರ್ಯವಾಗಿ ಇರುತ್ತೀರಿ.. ನೀವು ನಿಮ್ಮ ಬೆಳವಣಿಗೆಗೆ ಸಾಕ್ಷಿಯಾಗಿ ಇರುತ್ತೀರಿ.

ಪ್ರಕಟನೆ 21:4

 ಅವರ ಕಣ್ಣೀರನ್ನೆಲ್ಲಾ ಒರೆಸಿಬಿಡುವನು, ಇನ್ನು ಮರಣವಿರುವುದಿಲ್ಲ ದುಃಖವಾಗಲಿ, ಗೋಳಾಟವಾಗಲಿ , ಕಷ್ಟವಾಗಲಿ ಇರುವುದಿಲ್ಲ ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.

ನೀವು ಬಿದ್ದು ಹೋಗಿರುವ ಲೋಕದಲ್ಲಿ ನನ್ನ ವಾಕ್ಯವನ್ನು ಪ್ರಕಟಿಸಿದರೆ ಮುಂದಿನ ಲೋಕದಲ್ಲಿ ಮರಣವಿಲ್ಲ ಯಾವ ಕಾಯಿಲೆ ಇಲ್ಲ, ರೋಗವಿಲ್ಲ, ದರಿದ್ರ ವಿಲ್ಲ ನಿತ್ಯ ನಿತ್ಯವಾದ ಜೀವನ ಯೇಸು ಕ್ರಿಸ್ತನ ಜೊತೆ ನಿರಂತರವಾಗಿ ಅನುಭವಿಸುತ್ತೇವೆ.

ಈ ಮಾರ್ಚ್ ತಿಂಗಳಲ್ಲಿ ಒಂದೊಂದು ದಿನವೂ ಕೊಂಡಾಟವೇ ಒಂದೊಂದು ದಿನವೂ ಸೆಲೆಬ್ರೇಶನ್, ವಾಕ್ಯವು ಮಾಂಸವಾಗಿ ನಿಮ್ಮ ಜೀವನದಲ್ಲಿ ಅದು ಹಾಗೆ ಮ್ಯಾನಿಪೇಸ್ಟ್ ಆಗಬೇಕು, ನೆರವೇರಬೇಕು ಪರಲೋಕವು ಕೊಂಡಾಡಬೇಕು ದೇವರ ನಾಮ ಮಹಿಮೆ ಪಡಬೇಕು ಅನ್ನುವುದೇ ದೇವರ ಉದ್ದೇಶ.

ಮಾರ್ಚ್ ತಿಂಗಳಲ್ಲಿ ಒಂದೊಂದು ದಿನವೂ ನಿಮ್ಮ ಬೆಳವಣಿಗೆಯು ತಂದೆಗೆ ಸಂತೋಷವನ್ನು ತರುತ್ತದೆ. 

ಹಿಂದೆ ನೀವು ಅನುಭವಿಸದೆ ಇರುವ ದೇವರ ಫಲಗಳನ್ನು ಈ ಮಾರ್ಚ್ ತಿಂಗಳಲ್ಲಿ ಒಂದೊಂದು ದಿನವೂ ಅನುಭವಿಸುತ್ತೀರಿ. ದೇವರ ಬಲ, ಸಾಮರ್ಥ್ಯ ನಿಮ್ಮಲ್ಲಿ ಬಲವಾಗಿ ಪ್ರಕಟವಾಗುವುದು.
 ನೀವು ಯಾವಾಗಲೂ ಸುಖವಾಗಿ, ಸಮಾಧಾನವಾಗಿ, ಆರೋಗ್ಯವಾಗಿ, ಐಶ್ವರ್ಯವಾಗಿ, ಆಶೀರ್ವಾದವಾಗಿ, ಜಯವಾಗಿ, ಜೀವವಾಗಿ ಇರುತ್ತೀರಿ.

 ಈ ತಿಂಗಳ  ಪ್ರವಾದನೆಯ ಅರಿಕೆ :

👉 ಹಸಿವು ಬೆಳವಣಿಗೆಯನ್ನು ಪ್ರಾರಂಭಿಸುತ್ತದೆ.

👉 ಕೃಪೆಯು ಬೆಳವಣಿಗೆಯನ್ನು ಸಮರ್ಥಿಸುತ್ತದೆ

👉 ಪ್ರಬುದ್ಧತೆಯು ಬೆಳವಣಿಗೆಯನ್ನು ರೂಪಿಸುತ್ತದೆ.

👉 ವ್ಯಕ್ತಪಡಿಸುವುದು ಬೆಳವಣಿಗೆಯನ್ನು ಪ್ರದರ್ಶಿಸುತದೆ.

👉 ಪರಲೋಕವು ಬೆಳವಣಿಗೆಯನ್ನು ಆಚರಿಸುತ್ತದೆ.

👉 Hunger starts growth.

👉 Grace sustains growth.

👉 Maturity shapes growth.

👉 Manifestation demonstrates Growth.

👉 Heaven celebrates Growth.


ದೈವಿಕ ಹಸಿವು ನನ್ನೊಳಗೆ ಜಾಗೃತಗೊಳ್ಳುತ್ತಿದೆ, ತಡೆಯಲಾಗದ ಆಧ್ಯಾತ್ಮಿಕ ಬೆಳವಣಿಗೆಯನ್ನು ಹೊತ್ತಿಸುತ್ತಿದೆ ಎಂದು ನಾನು ಡಿಕ್ಲೇರ್ ಮಾಡುತ್ತೇನೆ.

ದೇವರ ಕೃಪೆಯು ಪ್ರತಿ ಋತುವಿನಲ್ಲಿಯೂ ನನ್ನನ್ನು ಉಳಿಸಿಕೊಳ್ಳುತ್ತದೆ ಮತ್ತು ಬಲಪಡಿಸುತ್ತದೆ ಎಂದು ನಾನು ಡಿಕ್ಲೇರ್ ಮಾಡುತ್ತೇನೆ.

ದೈವಿಕ ಪರಿಪಕ್ವತೆಯು ನನ್ನ ಪಾತ್ರವನ್ನು ರೂಪಿಸುತ್ತಿದೆ ಮತ್ತು ನನ್ನ ನಡಿಗೆಯನ್ನು ಸ್ಥಿರಗೊಳಿಸುತ್ತಿದೆ ಎಂದು ನಾನು ಡಿಕ್ಲೇರ್ ಮಾಡುತ್ತೇನೆ.

ಗೋಚರ ಫಲ ಮತ್ತು ಅಭಿವ್ಯಕ್ತಿ ನನ್ನ ಬೆಳವಣಿಗೆಗೆ ಸಾಕ್ಷಿಯಾಗುತ್ತದೆ ಎಂದು ನಾನು ಡಿಕ್ಲೇರ್ ಮಾಡುತ್ತೇನೆ.

ಪರಲೋಕವು ನನ್ನ ಬೆಳವಣಿಗೆಯನ್ನು ನೋಡಿ ಸಂತೋಷಪಡುತ್ತದೆ ಮತ್ತು ನನ್ನ ವಿಧೇಯತೆಯನ್ನು ಆಚರಿಸುತ್ತದೆ ಎಂದು ನಾನು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.  ಆಮೆನ್.

I declare that divine hunger is awakening within me, igniting unstoppable spiritual growth.
I declare that God’s grace sustains and strengthens me in every season.
I declare that divine maturity is shaping my character and stabilizing my walk.
I declare that visible fruit and manifestation will testify of my growth.
I declare that heaven rejoices over my progress and celebrates my obedience. 
In Jesus name, Amen.

ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR THE LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY


 


Comments

  1. ದೇವರಿಗೇ ಮಹಿಮೆಯಾಗಲಿ
    ಮಾರ್ಚ್ ತಿಂಗಳ್ ವಾಗದಾನವನ್ನು ಕೊಟ್ಟಿದಕ್ಕಾಗಿ
    ಆತ್ಮದಲ್ಲಿ Growth ಆಗಿ ನಂಗೋಸ್ಕರ ದೇವರು ಪರಲೋಕದ್ದಲಿ ಸಿದ್ಧಪಡಿಸಿದ ಯಲ್ಲಾ ಕಾರ್ಯಗಳು ನಾನು ಈ ಮಾರ್ಚ್ ನಲ್ಲಿ ಅನುಭವಿಸುತ್ತೇನೆ
    ಆಮೆನ್ 🙏

    ReplyDelete
  2. This comment has been removed by the author.

    ReplyDelete
  3. Yes! ನಾನು ಆತ್ಮದ ಹಸಿವಿನಲ್ಲಿ ಹೆಚ್ಚಾಗಿ, ಆತನ ಕೃಪೆಯಿಂದ ಬೆಳೆದು, ಆತನ ಪ್ರಬುದ್ಧತೆಯಲ್ಲಿ ರೂಪಿಸಲ್ಪಟ್ಟು, ಆತನಲ್ಲಿ ಸ್ಪಷ್ಟವಾಗಿ ಪ್ರಕಟಿಸಲ್ಪಟ್ಟು, ಪರಲೋಕವೇ ಕೊಂಡಾಡುವ ಹಾಗೆ ಆಗಿದಕೋಸ್ಕರ ದೇವರೇ ನಿಮಗೆ ಸ್ತೋತ್ರ ಮತ್ತು ಮಹಿಮೆ!! ಆಮೆನ್! 🔥🔥🔥

    ReplyDelete
  4. Yes, ದಿನದಿಂದ ದಿನಕ್ಕೆ ಆತ್ಮದಲ್ಲಿ ಬೆಳೆಯುವಂತೆ ದೇವರು ಕೃಪೆಯಿಂದ ನನ್ನನ್ನು ನಡೆಸಿ, ಆತ್ಮದಲ್ಲಿ ಪ್ರಬುದ್ಧತೆಯನ್ನು ಹೊಂದಿ, ಅದನ್ನು ಶರೀರದಲ್ಲಿ ಪ್ರಕಟಿಸುವಾಗ ತಂದೆಯಾದ ದೇವರಿಗೆ ಸಂತೋಷವಾಗುತ್ತದೆ. ಪರಲೋಕವೇ ಕೊಂಡಾಡುತ್ತದೆ.
    Powerful revelation Pastor 🔥🔥🔥🔥
    Glory glory to Jesus 🙏🏻🙏🏻🙏🏻

    ReplyDelete

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)