Testimony # 736 -- ಒಂದು ಆಟೋ ಬಂದು ಹಿಂದೆಯಿಂದ ನನಗೆ ಸ್ಪೀಡಾಗಿ ತೆರೆಚಿಕೊಂಡು ಹೋಗಿಬಿಟ್ಟ...
ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻.
ನನ್ನ ಹೆಸರು ಭಾಗ್ಯಲಕ್ಷ್ಮಿ.
ನಮ್ಮ ಊರು ಬೆಂಗಳೂರು.
ಲಾಸ್ಟ್ ವೀಕ್ ನಾನು ತರಕಾರಿ ತರಬೇಕು ಅಂತ ಅನ್ಯ ಭಾಷೆಯಲ್ಲಿ ಮಾತಾಡುತ್ತಾ ರೋಡಿನಲ್ಲಿ ದಾಟುತ್ತಾ ಇದ್ದೆ. ಅಲ್ಲಿ ಆಗ ಯಾವ ಆಟೋಗಳು ಇರಲಿಲ್ಲ. ಆಮೇಲೆ ಎದುರುಗಡೆ ಒಂದು ಬೈಕ್ ಫಾಸ್ಟ್ ಆಗಿ ಬಂತು. ನಾನು ಅನ್ಯ ಭಾಷೆ ಮಾತಾಡುತ್ತಾ ಇದ್ದೆ. ಅವಾಗ ಒಂದು ಆಟೋ ಬಂದು ಹಿಂದೆಯಿಂದ ನನಗೆ ಸ್ಪೀಡಾಗಿ ತೆರೆಚಿಕೊಂಡು ಹೋಗಿಬಿಟ್ಟ. ಆದರೆ ನನ್ನ ಯಾರೋ ಕೈ ಹಿಡಿದು ಸೈಡಿನಲ್ಲಿ ನಿಲ್ಲಿಸಿದ ಹಾಗೆ ಆಯಿತು. ಕಾಲಿಗೆ ಟಚ್ ಆಗಿ ಸೌಂಡ್ ಬಂದಿದ್ದು ಅಷ್ಟೇ ಗೊತ್ತಾಗಿದ್ದು, ಆದರೆ ನಾನು ಮಾತ್ರ ಪುಟ್ ಪಾತ್ ಅಲ್ಲಿ ನಿಂತಿದ್ದೆ. ಆದರೆ ನನಗೆ ಸ್ವಲ್ಪ ಗಾಯ ಆಗಿದ್ದು ಅಷ್ಟೇ , ಮತ್ತೆ ಏನೇನು ಆಗಿಲ್ಲ ಆಟೋ ಬಂದ ಸ್ಪೀಡಿಗೆ ನನ್ನ ಕಾಲು ಹೋಗಬೇಕಿತ್ತು.
ಆದರೆ ದೇವರು ಎಲ್ಲಾ ಕೇಡಿನಿಂದ ನನ್ನನ್ನು ತಪ್ಪಿಸಿದರು.
ದೇವರ ನಾಮಕ್ಕೆ ಮಹಿಮೆ ಉಂಟಾಗಲಿ.🙏🏼 🙏🏼 🙏🏼
ನಮ್ಮ ಸಂಬಂಧಿಕರ ಮಗಳಿಗೆ ಟೈಫಾಯಿಡ್ ಜ್ವರ ಬಂದಿತ್ತು. ಅವಳು ಹಾಸ್ಟೆಲ್ ನಲ್ಲಿ ಇದ್ದು ಪಿಯುಸಿ ಓದುತ್ತಿದ್ದಾಳೆ. ಅಲ್ಲಿಂದ ಅವಳನ್ನು ಕರೆದುಕೊಂಡು ಪದೇ ಪದೇ ಹಾಸ್ಪಿಟಲ್ ಗೆ ಹೋಗುತ್ತಿದ್ದರು. ಆದರೂ ಅವಳಿಗೆ ವಾಸಿಯಾಗಲಿಲ್ಲ. ಬ್ಲಡ್ ಟೆಸ್ಟ್ ಮಾಡಿಸಿದರು ಕಡಿಮೆಯಾಗಲಿಲ್ಲ ಅಂದರು. ಆದರೆ ನಾನು ಡಿಕ್ಲೇರ್ ಮಾಡಿದ 10 ನಿಮಿಷದಲ್ಲಿ ಅವಳು ಗುಣವಾದಳು. ಈಗ ಹುಷಾರಾಗಿ ಕಾಲೇಜಿಗೆ ಹೋಗುತ್ತಿದ್ದಾಳೆ.
ಈಗ ಆ ಹುಡುಗಿಯ ತಮ್ಮನು ಜ್ಞಾನ ತಪ್ಪಿ ಬೀಳುತ್ತಿದ್ದ. ಆಗ ಊರಿನವರೆಲ್ಲರೂ ಸೇರುತ್ತಿದ್ದರು, ಅವನಿಗೆ ಎಚ್ಚರ ಇರುತ್ತಿರಲಿಲ್ಲ, ಹಾಸ್ಪಿಟಲ್ ಗೆ ತೋರಿಸಿದಾಗ ಬ್ಲಡ್ ಟೆಸ್ಟ್ ಮಾಡಬೇಕು, ಸ್ಕ್ಯಾನಿಂಗ್ ಮಾಡಬೇಕು ಅಂತ ಹೇಳಿದರು. ಆದರೆ ನಾನು ಅವನಿಗೂ ಕೂಡ ಡಿಕ್ಲೇರ್ ಮಾಡಿದೆ, ಅವನಿಗೂ ಕೂಡ ಗುಣವಾಯಿತು. ಈಗ ಅವರು ಸಂತೋಷವಾಗಿದ್ದಾರೆ.
ಈಗ ದೇವರ ಉದ್ದೇಶ, ದೇವರ ಚಿತ್ತ ನನ್ನಲ್ಲಿ ನೆರವೇರುತ್ತಾ ಇದೆ ಪಾಸ್ಟರ್.
ದೇವರ ನಾಮಕ್ಕೆ ಸ್ತೋತ್ರ ವಾಗಲಿ.🙏🏼 🙏🏼 🙏🏼
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Amen Amen 🔥🔥
ReplyDeleteGlory glory to Jesus 🙏🏻👏🏻👏🏻👏🏻👏🏻
ReplyDeleteGlory to God 🔥🔥🔥
ReplyDeleteGlory to God🙏🙏🙏
ReplyDeleteGLORY TO GOD 🔥👏👏👏🙏🙏
ReplyDeleteGlory to God🙌
ReplyDelete