Testimony # 735 -- ನಾನು ಬದುಕಲೇಬಾರದು ಅಂತ ಯೋಚನೆ ಮಾಡಿದ್ದರು...
ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻.
ನನ್ನ ಹೆಸರು ಮಂಜುಳಾ.
ನಮ್ಮ ಊರು ಬೆಳಗಾವಿ .
ದೇವರು ನನ್ನನ್ನು ಅದ್ಭುತವಾಗಿ ನಡೆಸುತ್ತಿದ್ದಾರೆ. ನಾವು ಇದ್ದ ಸ್ಥಿತಿಯಲ್ಲಿ ಇರದೆ ಇನ್ನೂ ಹೆಚ್ಚಾಗುತ್ತಲೇ ಇರಬೇಕು ಅನ್ನುವುದು ದೇವರ ಚಿತ್ತ.
ನಾವು ದೇವರ ರಾಜ್ಯಕ್ಕಾಗಿ ಬಿತ್ತುವುದು, ದಶಮಾಂಶ ಕೊಡುವುದು ಅದು ತುಂಬಾ ಆಶೀರ್ವಾದವಾಗಿದೆ. ನಾವು ದಶಮಾಂಶ ಬಿತ್ತುವಾಗ ನಮ್ಮ ಬ್ಯಾಂಕ್ ಬ್ಯಾಲೆನ್ಸ್ ಮುಗಿಯುವುದಿಲ್ಲ. ಹಣ ಬರುತ್ತಲೇ ಇರುತ್ತದೆ. ನಾವು ದಶಮಾಂಶವನ್ನು ಬಿತ್ತಿದಾಗ ಉಳಿದ ಹಣವೆಲ್ಲ ಆಶೀರ್ವಾದವಾಗಿರುತ್ತದೆ. ಬೇಡವಾದ ಖರ್ಚು ಆಗುವುದಿಲ್ಲ. ಯಾಕೆಂದರೆ ದೇವರು ಹಣ ಉಳಿಯುವಂತೆ ಸಹಾಯ ಮಾಡುತ್ತಾರೆ.
ಹಾಗೆಯೇ ನಾವು ದೇವರಲ್ಲಿ ಏನಾಗಿದ್ದೇವೆ ದೇವರು ನಮಗೆ ಕೊಟ್ಟಿರುವ ಅಧಿಕಾರ ಎಂತದ್ದು ಅಂತ ದೇವರು ನಮಗೆ ತಿಳಿಸುತ್ತಿದ್ದಾರೆ. ಪಾಸ್ಟರ್ ನೀವು ಹೇಳುವ ವಾಕ್ಯದಿಂದ ಮನೆಯಲ್ಲಿ ಎಲ್ಲರೂ ಸಂತೋಷ, ಸಮಾಧಾನ, ಶಾಂತಿಯಿಂದ ಇದ್ದೇವೆ. ನಾವು ದಿನದಿಂದ ದಿನಕ್ಕೆ ಅಭಿವೃದ್ದಿಯಾಗುತ್ತಾ ಇದ್ದೇವೆ. ಜನವರಿ 30 ಆಲ್ ನೈಟ್ ಪ್ರೇಯರ್ ಕೂಡ ತುಂಬಾ ಆಶೀರ್ವಾದವಾಗಿತ್ತು.
ದೇವರ ಪ್ರೀತಿಯ ಬಗ್ಗೆ ಹೇಳುವಾಗ ನನ್ನ ಹೃದಯ ತುಂಬಿ ನಾವು ಎಷ್ಟು ಭಾಗ್ಯವಂತರು, ಎಷ್ಟು ವಿಶೇಷವಾದವರು, ಎಷ್ಟು ಆಶೀರ್ವದಿಸಲ್ಪಟ್ಟವರು ಅಂತ ತುಂಬಾ ಸಂತೋಷವಾಯಿತು. ಅವತ್ತು ಕೂಡ ದೇವರ ಪ್ರಸನ್ನತೆ ಅನುಭವಿಸಿದ್ದೇವೆ.
ಫೆಬ್ರುವರಿ ತಿಂಗಳಿನ ವಾಗ್ದಾನ ಈ ಮೆಸೇಜ್ ನಲ್ಲಿ ನೀವು ಹೇಳಿರುವ ವಾಕ್ಯ, "ಬಿದ್ದು ಹೋಗಿರುವ ಲೋಕದಲ್ಲಿ ದೇವರು ನಮ್ಮನ್ನು ಪ್ರತ್ಯೇಕವಾಗಿ ಆರಿಸಿ, ಆತನ ಜೀವ, ಆತನ ಸಾಮರ್ಥ್ಯ, ಆತನ ಬಲ, ನಮ್ಮಲ್ಲಿ ಇಟ್ಟು, ನೀನು ಸ್ಥಾಪನೆಯಾಗಿದ್ದೀಯ" -- ಅಂತ ವಾಗ್ದಾನ ಮಾಡಿದ್ದಾರೆ. ಈ ಪ್ರಕಟಣೆಯು ಕೂಡ ನನ್ನ ಮನಸ್ಸಿಗೆ ಹತ್ತಿರವಾಯಿತು. ದೇವರ ವಾಕ್ಯ ನಮ್ಮ ಪರಿಸ್ಥಿತಿಗಳನ್ನು ಬದಲಾಯಿಸುವ ವಾಕ್ಯ ಅಲ್ಲ, ನಮ್ಮನ್ನೇ ಬದಲಾಯಿಸುವಂತದ್ದು ಆಗಿದೆ.
ಅದೇ ರೀತಿ ಇನ್ನೊಂದು ಸಾಕ್ಷಿ:
ಲಲಿತಾ ಅಂತ ಒಬ್ಬರು ಸಹೋದರಿ,
ಅವರು ಬಿದ್ದು ಕೈಕಾಲಿಗೆ ಫ್ಯಾಕ್ಚರ್ ಆಗಿತ್ತು. ಈಗ ದೇವರು ಅವರನ್ನು ಗುಣಪಡಿಸಿದ್ದಾರೆ. ಅವರಿಗೆ ಡಾಕ್ಟರ್ ನಿಮ್ಮ ನರಗಳು ಬಹಳ ವೀಕ್ ಆಗಿವೆ, ಆರು ತಿಂಗಳು ಇಂಜೆಕ್ಷನ್ ತೆಗೆದುಕೊಳ್ಳಬೇಕು, ಒಂದು ಇಂಜೆಕ್ಷನ್ ಐದು ಸಾವಿರ ಅಂತ ಹೇಳಿದ್ದರು. ಅದಕ್ಕೆ ಅವರು ಹಣ ಎಲ್ಲಿಂದ ತರುವುದು. ನಾನು ಬದುಕಲೇಬಾರದು ಅಂತ ಯೋಚನೆ ಮಾಡಿದ್ದರು.
ನಂತರ ಮಾರ್ನಿಂಗ್ ಪ್ರೇಯರ್ ದಲ್ಲಿ ಪಾಸ್ಟರ್ ಮಾತಾಡಿರುವ ಮೆಸೇಜನ್ನು ಸುಕುಮಾರಿ ಸಿಸ್ಟರ್ ಹೇಳುವಾಗ, "ಯೇಸು ಈ ಅಂತ್ಯಕ್ರಿಯೆಯನ್ನು ನಿಲ್ಲಿಸಿದನು" ಈ ಮೆಸೇಜ್ ಕೇಳಿ , ದೇವರು ನನ್ನ ಹತ್ತಿರ ಮಾತಾಡುತ್ತಾ ಇದ್ದಾರೆ. ಜೀವ ಕೊಡುವ ಯೇಸು ನನ್ನಲ್ಲಿ ಇರುವಾಗ ನಾನು ಯಾಕೆ ಸಾಯಬೇಕು? ಅಂತ ಅಂದುಕೊಂಡರು. ಈ ವಾಕ್ಯ ಅವರಲ್ಲಿ ಕಾರ್ಯ ಮಾಡಿದೆ, ಅವರನ್ನು ಬಲಪಡಿಸಿದೆ ಪಾಸ್ಟರ್.
ದೇವರ ನಾಮಕ್ಕೆ ಸ್ತೋತ್ರ ವಾಗಲಿ. 🙏🏼 🙏🏼 🙏🏼
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
GLORY to god 🙏🔥🔥
ReplyDeleteGlory to God 🔥🔥🔥👏👏👏
ReplyDeleteGlory to God 🙏
ReplyDeleteGlory to God🙏🙌🔥
ReplyDeleteGlory to God 🙏🙏🙏
ReplyDeleteGlory to God
ReplyDelete