Testimony # 731 - ದೇವರು ಅಷ್ಟು ಅದ್ಬುತವಾಗಿ ನಮ್ಮ ಮನೆಯನ್ನು...

 

 ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻

ನನ್ನ ಹೆಸರು ಪವಿತ್ರ,

ನಮ್ಮ ಊರು ಮಂಗಳೂರು.

 ನನ್ನ ಸಾಕ್ಷಿ ಏನೆಂದರೆ ನನ್ನ ಅಮ್ಮನ ಮನೆ ಕಟ್ಟುತ್ತಾ ಇದ್ದರು. ಅದಕ್ಕೋಸ್ಕರ ಪಾಸ್ಟರ್ ಕಡೆ ಪ್ರೇಯರ್ ಮಾಡ್ಸಿದ್ದೆ. ನೈಟ್ ಪ್ರೇಯರ್ ದಲ್ಲೂ ಕೂಡ ಭರಮು ಅಣ್ಣ  ಪ್ರೇಯರ್ ಮಾಡಿದ್ರು. ಅದೇ ರೀತಿ ಆಗಸ್ಟ್ ದಲ್ಲಿ  ಪ್ರೇಯರ್ ಮೀಟಿಂಗ್ ಇತ್ತು. ಅಲ್ಲಿ ಕೂಡ ಮನೆ ವಿಷಯವಾಗಿ ವಾಗ್ದಾನ ಬಂದಿತ್ತು.  ದೇವರು ಆತನ  ಸಾಮರ್ಥ್ಯದಲ್ಲಿ, ಆತನ  ಗುಣಮಟ್ಟದಲ್ಲಿ, ಆತನ ವೇಗದಲ್ಲಿ, ಆರು ಏಳು ತಿಂಗಳಲ್ಲಿ ಮನೆ ಫುಲ್ ಕಂಪ್ಲೀಟ್ ಆಗಿ ಈ ತಿಂಗಳು 25ನೇ ತಾರೀಕು  ಓಪನಿಂಗ್ ಕೂಡ ಆಯ್ತು. ದೇವರು ಅಷ್ಟು ಅದ್ಬುತವಾಗಿ ನಮ್ಮ ಮನೆಯನ್ನು ಆರು - ಏಳು ತಿಂಗಳಲ್ಲಿ ನಮ್ಮ ಮನೆಯನ್ನು ಕಟ್ಟಿ ಮುಗಿಸಿದ್ದಾರೆ.  ಈ ಮನೆ ಮುಗಿಯುವಷ್ಟರಲ್ಲಿ, "ಅಯ್ಯೋ ಇನ್ನು ಎಷ್ಟು ವರ್ಷ ಆಗಬಹುದು?" ಅಂತ ಹೇಳ್ತಿದ್ರು. ಆದರೆ ದೇವರು ಮನಸ್ಸು ಮಾಡಿದರೆ ಅಸಾಧ್ಯ ಯಾವುದು ಇಲ್ಲ, ಅನ್ನೋ ರೀತಿಯಲ್ಲಿ ನಮ್ಮ ಮನೆಯನ್ನು ಅಷ್ಟು ಅದ್ಭುತವಾಗಿ ಕಟ್ಟಿ ಮುಗಿಸಿದರು.

 ದೇವರ ನಾಮಕ್ಕೆ ಕೋಟಿ ಕೋಟಿ ಸ್ತೋತ್ರವಾಗಲಿ.

 ಅದು ಕೂಡ ನಮ್ಮ ಬಲ, ನಮ್ಮ ಯೋಗ್ಯತೆ ಏನು ಅಲ್ಲ, ಪಾಸ್ಟರ್ ಆಡಿದ ಪ್ರತಿಯೊಂದು ಮಾತುಗಳು  ಆತ್ಮವಾಗಿ, ಜೀವವಾಗಿ ಅವೇ  ನಮ್ಮ ಜೀವಿತದಲ್ಲಿ ಕಾರ್ಯ ಮಾಡಿದೆ ಅಂತ ಹೇಳುತ್ತೇನೆ. ಅದಕ್ಕೆ ಬೇಕಾದ ಪ್ರತಿಯೊಂದು ಒಂದು ಲೋನ್ [ Loan ] ವಿಷಯ ಇರಬಹುದು, ಅದೇ ರೀತಿ ನಮ್ಮ ತಮ್ಮನಿಗೆ ಕೆಲಸದ ವಿಷಯ ಇರಬಹುದು, ಪ್ರತಿಯೊಂದು ಕೂಡ ಪಾಸ್ಟರ್ ಹೇಳಿದ ಹಾಗೆ ಎಲ್ಲವೂ ಕೂಡ ನಮ್ಮ ಜೀವಿತದಲ್ಲಿ ಅದ್ಭುತವಾಗಿ ನಡೆಸಲ್ಪಟ್ಟಿವೆ.

  ನಮ್ಮ ತಮ್ಮ ಹೇಳ್ತಾ ಇದ್ದ," ಪಾಸ್ಟರ್ ಪ್ರೇಯರ್ ಮಾಡಿದ್ದೆಲ್ಲ ನನಗೆ ಒಳ್ಳೆಯದೇ ಆಗಿದೆ" ಅಂತ ಪಾಸ್ಟರ್ ಮುಂದೆ ಹೇಳು ಅಂತ ಹೇಳಿದ. ಇದೆಲ್ಲವೂ ಕೂಡ ಈ ಸತ್ಯವನ್ನು ತಿಳಿದುಕೊಳ್ಳುವುದರಿಂದ, ಈ  ಪ್ರೇಯರ್ ಟೀಮ್ ಗೆ ನಾನು ಕನೆಕ್ಟ್ ಆಗಿರುವುದರಿಂದ, ಎಲ್ಲವೂ ಕೂಡ ಅದ್ಭುತವಾಗಿ, ಆಶೀರ್ವಾದವಾಗಿ, ಯಾವುದೇ ಒಂದು ಪ್ರಯಾಸವಿಲ್ಲದೆ, ಕಷ್ಟಪಡದೆ ಇರೋ ರೀತಿ ದೇವರು ನಮ್ಮ ಕುಟುಂಬವನ್ನು ಆಶೀರ್ವದಿಸಿದ್ದಾರೆ.

 ದೇವರ ನಾಮಕ್ಕೆ ಕೋಟಿ ಕೋಟಿ ಸ್ತೋತ್ರವಾಗಲಿ.

ಅದೇ ರೀತಿ ಇನ್ನೊಂದು  ಸಾಕ್ಷಿ: 

            ನನ್ನ ಮಗ ಎಂಟನೇ ಕ್ಲಾಸ್ ಓದುತ್ತಿದ್ದಾನೆ. ಅವನು ಕೂಡ ಅನ್ಯ ಭಾಷೆ ಮಾತಾಡ್ತಾ ಇದ್ದ. ನಮ್ಮ ಅತ್ತೆಯವರಿಗೆ ಶೋಲ್ಡರ್ ಪೇನ್ ಇತ್ತು. ಸರ್ಜರಿ ಆಗಬೇಕು ಅಂತ ಹೇಳಿದ್ರು. ಮತ್ತೆ ನಮ್ಮ ನಾದಿನಿಯವರಿಗೆ ಕೂಡ ಯೂರಿನ್ ಇನ್ಫೆಕ್ಷನ್ ಆಗಿತ್ತು. ಇಬ್ಬರಿಗೂ ಕೂಡ ಆಪರೇಷನ್ ಆಗಬೇಕು ಅಂತ ಹೇಳಿದ್ರು. ಆದರೆ ನನ್ನ ಮಗ ದಿನಾಲು ಅನ್ಯ ಭಾಷೆ ಮಾತಾಡ್ತಿದ್ದು, ಅವರಿಗೆ ಹುಷಾರಾಗಲಿ ಅಂತ ಪ್ರೇಯರ್ ಮಾಡುತ್ತಿದ್ದ.  ದೇವರು ಅವನ ಮುಖಾಂತರ ಸರ್ಜರಿ ಆಪರೇಷನ್ ಇಲ್ಲದೆ ಅವರು ಗುಣವಾಗುವಂತೆ ಮಾಡಿದ್ದಾರೆ. ಡಾಕ್ಟರ್ ಕೂಡ ಮಾತ್ರೆ ಅಷ್ಟೇ ಕೊಟ್ಟಿದ್ದಾರೆ, ಆಪರೇಷನ್ ಬೇಡ ಅಂದಿದ್ದಾರೆ.

     ದೇವರ ನಾಮಕ್ಕೆ ಸ್ತೋತ್ರ ವಾಗಲಿ.. 

ಇದೆಲ್ಲವೂ ಕೂಡ ಸತ್ಯ ತಿಳಿದುಕೊಳ್ಳುವುದರಿಂದ, ಈ ಸತ್ಯದ ಆತ್ಮ ನಮ್ಮ ಜೀವಿತದಲ್ಲಿ ಆತ್ಮವಾಗಿಯೂ ಜೀವವಾಗಿಯೂ ಕಾರ್ಯ ಮಾಡಿದೆ. ಇದೆಲ್ಲವೂ ಆತನ ಸಾಮರ್ಥ್ಯ, ಆತನ ವೇಗದಿಂದ, ಆತನ ಗುಣಮಟ್ಟದಲ್ಲಿ ದೇವರು ನಮ್ಮನ್ನು ಅದ್ಭುತವಾಗಿ ನಡೆಸುತ್ತಿದ್ದಾರೆ.

 ಥ್ಯಾಂಕ್ ಯು ಪಾಸ್ಟರ್, ಥ್ಯಾಂಕ್ಯೂ ಭರಮು ಅಣ್ಣ. ನಿಮ್ಮಿಬ್ಬರ ಕುಟುಂಬವನ್ನು ದೇವರು ಇನ್ನೂ ಹೆಚ್ಚಾಗಿ ಆಶೀರ್ವದಿಸಲಿ.

ದೇವರ ನಾಮಕ್ಕೆ ಮಹಿಮೆ ಉಂಟಾಗಲಿ. 🙏🏼 🙏🏼 🙏🏼


ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR THE LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY


 

Comments

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)