Testimony #727 - ಇನ್ನೊಂದು ಕಂಪನಿಯಿಂದ ಕೆಲಸ ಬಂದಿತ್ತು...
ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻
ನನ್ನ ಹೆಸರು ಸವಿತಾ
2026 ಸ್ಟಾರ್ಟ್ ಆಗಿದೆ, ಒಂದು ಕುತೂಹಲ, ಆತ್ಮದಲ್ಲಿ ಸಂತೋಷ ಜಾಸ್ತಿ ಆಗಿದೆ, ದೇವರು ನೋಡುತ್ತಾರೆ, ದೇವರು ಮಾತಾಡುತ್ತಾರೆ ಮತ್ತು ದೇವರೇ ಮಾಡುತ್ತಾರೆ ಎಂಬ ನಂಬಿಕೆ ಬಲವಾಗಿದೆ. ಏನೇ ಆದರೂ ದೇವರಿದ್ದಾನೆ ಎಂಬ ನಂಬಿಕೆ, ಅವರು ಈಗಾಗಲೇ ಎಲ್ಲವನ್ನು ಮಾಡಿ ಮುಗಿಸಿದ್ದಾರೆ, ಏನಾಗುತ್ತದೆ ಆಗಲಿ ದೇವರಿದ್ದಾರೆ ಎಂಬ ನಂಬಿಕೆ ಹೆಚ್ಚಾಗಿದೆ.
ದೇವರು ಪಾಸ್ಟರ್ ಮೂಲಕ ವಾಕ್ಯದಿಂದ ನಮ್ಮನ್ನು ಬಲಪಡಿಸುತ್ತಿದ್ದಾರೆ. ದೇವರು ವಾಕ್ಯದ ಮೂಲಕ ಮಾತಾಡುತ್ತಿದ್ದಾರೆ. ಹೆಚ್ಚಾಗಿದೆ ವಾಕ್ಯವನ್ನು ಓದಬೇಕು, ದೇವರ ವಾಕ್ಯವನ್ನು ಕೇಳಬೇಕು ಎಂಬ ಹಂಬಲ 2026 ರಲ್ಲಿ ಇನ್ನು ಜಾಸ್ತಿ ಆಗುತ್ತಿದೆ.
ನನ್ನ ಜೀವನದ ಸಾಕ್ಷಿ ಏನೆಂದರೆ -- ಈಗ ನಾನು ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ, ಇನ್ನೊಂದು ಕಂಪನಿಯಿಂದ ಕೆಲಸ ಬಂದಿತ್ತು. ನಾನು ಯೋಚಿಸುವುದಕ್ಕಿಂತಲೂ ಹೆಚ್ಚಾದ ಪೇಮೆಂಟ್ ಇರುವ ಕೆಲಸ ಸಿಕ್ಕಿದೆ. ಜನವರಿ 10 ಕ್ಕೆ ಹೊಸ ಕೆಲಸಕ್ಕೆ ಜಾಯಿನ್ ಆಗಬೇಕಿತ್ತು. ನಾನು ಮೊದಲಿನ ಕೆಲಸಕ್ಕೆ ರಾಜಿನಾಮೆ ಕೊಟ್ಟೆ. ಆದರೂ ಅವರು ಜನವರಿ 31 ರ ವರೆಗೆ ಮಾಡಲೇಬೇಕು ಎಂದು ಕಂಡಿಷನ್ ಹಾಕಿದ್ದರು.
" ದೇವರೇ ನಿನ್ನ ಚಿತ್ತ ಏನಿದೆಯೋ, ನಾನು ಇಲ್ಲೇ ಕೆಲಸ ಮಾಡಬೇಕು ಅಂದರೆ ಇಲ್ಲೇ ಮಾಡುತ್ತೇನೆ, ನಾನು ಬೇರೆ ಕಂಪನಿಗೆ ಹೋಗಬೇಕೆಂಬುದು ನಿನ್ನ ಉದ್ದೇಶ ಆಗಿದ್ದರೆ ಅದೇ ರೀತಿ ಆಗಲಿ" ಎಂದು ಪ್ರಾರ್ಥನೆ ಮಾಡಿ, ಒಂದು ಸಂತೋಷದಿಂದ, ಕುತೂಹಲದಿಂದ ಇದ್ದೆ.
ಈ ಹೊಸ ವರ್ಷದ ವಾಗ್ದಾನದ ವಾಕ್ಯ ಯಾವ ಚಿಂತೆಯು ಇಲ್ಲದಂತೆ ನಮ್ಮನ್ನು ನಡೆಸುತ್ತಿದೆ. ನಾನು ಪಾಸ್ಟರ್ ಗೆ ಹೇಳಿದೆ, ಅವರು ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದರು. ಐದನೇ ತಾರೀಕಿಗೆ ಪೇಮೆಂಟ್ ಆಗಬೇಕಿತ್ತು. ಪೇಮೆಂಟ್ ಬಂದ ಮೇಲೆ ಕೆಲಸ ಬಿಡಬೇಕು ಎಂದು ಕಾಯುತ್ತಿದ್ದೆ, ಪಾಸ್ಟರ್ ಜೊತೆ ಮಾತಾಡಿದ ಅದೇ ದಿನ 12 ಗಂಟೆಗೆ ಪೇಮೆಂಟ್ ಆಯ್ತು. ಒಂದು ಗಂಟೆ ಅಷ್ಟರಲ್ಲಿ ಮ್ಯಾನೇಜರ್ ಬಂದು ನೀನು ಕೆಲಸ ಬಿಡಬೇಕು ಎಂದು ಹೇಳುತ್ತಿದ್ದೆ ನೀನು ಹೋಗಬಹುದು ಎಂದು ಹೇಳಿದರು.
ದೇವರು ತುಂಬಾ ಸುಲಭವಾಗಿ ಎಲ್ಲವನ್ನು ಸಹಾಯ ಮಾಡಿದರು. ದೇವರು ಏನನ್ನು ಮಾಡುತ್ತಾರೋ ಅದು ಒಳ್ಳೆಯದಾಗಿರುತ್ತದೆ. ಅವರೇ ನನ್ನನ್ನು ಸರಿಯಾಗಿ ನಡೆಸುತ್ತಾರೆ ಎಂಬ ನಂಬಿಕೆ, ಕುತೂಹಲ ನನ್ನಲಿತ್ತು ದೇವರ ಉದ್ದೇಶದ ಪ್ರಕಾರ ನಾನು ಕೆಲಸಕ್ಕೆ ಹೋಗುತ್ತಿದ್ದೇನೆ ಎಂದು ಮತ್ತೆ ನಂಬಿಕೆ ಹೆಚ್ಚಾಯಿತು.
ದೇವರು ನಾಮಕ್ಕೆ ಕೋಟಿ ಕೋಟಿ ಸ್ತೋತ್ರ.
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory to God 🙏
ReplyDeleteGlory glory to Jesus 🙏🏻
ReplyDeleteGLORY to god, LORD do it again Amen 🙏 congratulations sister god bless you and your family members abundantly in Jesus mighty name Amen 🙏
ReplyDeleteGlory to God
ReplyDeleteGlory to God 🙏
ReplyDelete