Testimony #726 - ಹೊಸ ವರ್ಷಕ್ಕೆ ದೇವರು ಕೊಟ್ಟ ವಾಗ್ದಾನ...
ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻
ನನ್ನ ಹೆಸರು ದ್ರಾಕ್ಷಾಯಿಣಿ.
ಈ ದಿನಗಳಲ್ಲಿ ದೇವರು ಸರಿಯಾದ ಸತ್ಯಕ್ಕೆ ನಮ್ಮನ್ನು ಕನೆಕ್ಟ್ ಮಾಡಿ ನಡೆಸುತ್ತಿದ್ದಾರೆ. ಅದಕ್ಕಾಗಿ ದೇವರಿಗೆ ಸ್ತೋತ್ರ.
ಇಂಥ ಸರಿಯಾದ ಸತ್ಯದ ತಿಳುವಳಿಕೆ ಅನೇಕರಲ್ಲಿ ಇಲ್ಲದೆ ಇರುವುದರಿಂದ, ದೇವರ ಆಶೀರ್ವಾದವನ್ನು ಅನುಭವಿಸಲು ಆಗುತ್ತಿಲ್ಲ. ಆದರೆ ನಮಗಾದರೋ ದೇವರು ಸರಿಯಾದ ಸತ್ಯದಲ್ಲಿ ನಡೆಯುವಂತೆ ಮಾಡಿದ್ದಾರೆ.
ಹೊಸ ವರ್ಷಕ್ಕೆ ದೇವರು ಕೊಟ್ಟ ವಾಗ್ದಾನ ಅದ್ಬುತ ರೀತಿಯಾಗಿ ಇತ್ತು. ಅದಕ್ಕಾಗಿ ದೇವರಿಗೆ ಸ್ತೋತ್ರ. ಏದೆನ್ ನಲ್ಲಿ ಒಂದು ನದಿ ಹುಟ್ಟಿ, ಅದು ತೋಟದ ಕಡೆಗೆ ಹರಿದು, ಅಲ್ಲಿ ಸಮೃದ್ಧಿ ಗೊಳಿಸಿ, ತೋಟವನ್ನು ತೋಯಿಸಿ, ತನ್ನ ಉದ್ದೇಶವನ್ನು ನೆರವೇರಿಸಿ, ಸಮೃದ್ಧಿ ಗೊಳಿಸಿ, 4 ಶಾಖೆಗಳಾಗಿ ಹರಿಯಿತು ಎಂಬುದಾಗಿ ಹೇಳಿದ್ದೀರಿ ಪಾಸ್ಟರ್. ನಿಮ್ಮ ಕುರಿತಾಗಿ ದೇವರು ನನಗೆ ಒಂದು ಪ್ರಕಟಣೆಯನ್ನು ಕೊಟ್ಟರು.
ಏನೆಂದರೆ "ದೇವರ ವಾಕ್ಯ" ಎಂಬ ನದಿ, "ನೀವು" ಎಂಬ ತೋಟದ ಕಡೆಗೆ ಹರಿದು, ನಿಮ್ಮನ್ನು ತೃಪ್ತಿಗೊಳಿಸಿ, ನಿಮ್ಮನ್ನು ತೋಯಿಸಿ, ನಿಮ್ಮನ್ನು ಸಮೃದ್ಧಿ ಗೊಳಿಸಿ, ನಿಮ್ಮನ್ನು ಬಲಗೊಳಿಸಿ, ವಾಕ್ಯದಿಂದ ನಿಮ್ಮನ್ನು ಅಭಿಷೇಕ ಮಾಡಿ, ಅದರ ಫಲವಾಗಿ ಮುಂದೆ ಅದು ನಾಲ್ಕು ಶಾಖೆಗಳಾಗಿ ಹರಿದು ಇಲ್ಲಿ ಸೇರಿರುವ ಪ್ರತಿಯೊಬ್ಬರ ಕಡೆಗೆ ಹರಿದು ಬರುತ್ತಿದೆ.
ನಮ್ಮನ್ನು ಕೂಡ ತೋಯಿಸಿ, ನಮ್ಮಲ್ಲಿ ಹರಿದು, ನಮ್ಮನ್ನು ಫಲಗೊಳಿಸಿ, ನಾವು ಎಲ್ಲೆಲ್ಲಿ ಹರಿಯುತ್ತೇವೋ ಅಲ್ಲಲ್ಲಿ ಜೀವವನ್ನು ಉಂಟು ಮಾಡುತ್ತಿದೆ.
ಯಾಕೆಂದರೆ ಆ "ವಾಕ್ಯ" ಎಂಬ ನದಿ ಪೂರ್ತಿಯಾಗಿ ನಿಮ್ಮನ್ನು ತೃಪ್ತಿಗೊಳಿಸಿ, ಅದು ಹೇಗೆ ನಾಲ್ಕು ಶಾಖೆಗಳಾಗಿ ಹರಿಯಿತೋ, ಈಗ ಇಲ್ಲಿ ಸೇರಿರುವ ನಮ್ಮೆಲ್ಲರ ಮಧ್ಯದಲ್ಲಿ ಹರಿದು, ನಮ್ಮನ್ನು ಕೂಡ ತೃಪ್ತಿಗೊಳಿಸಿ, ನಮ್ಮಲ್ಲಿ ಕೂಡ ಸಮೃದ್ಧಿ ಗೊಳಿಸಿ, ನಮ್ಮನ್ನು ಕೂಡ ಇನ್ನೊಬ್ಬರಿಗೆ ಫಲ ಭರಿತರಾಗಿರುವಂತೆ, ಆಶೀರ್ವಾದವಾಗಿರುವಂತೆ ಆತನು ತುಂಬಿಸಿದ್ದಾನೆ. ನಾವು ಎಲ್ಲೆಲ್ಲಿ ಹರಿಯುತ್ತೇವೋ, ಎಲ್ಲೆಲ್ಲಿ ಹೋಗುತ್ತೇವೋ ಅಲ್ಲಲ್ಲಿ ಜೀವ ಉಂಟಾಗುತ್ತಿದೆ.
ದೇವರು ಈ ರೀತಿಯಾಗಿ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಆ ತೊರೆಯು ಎಲ್ಲೆಲ್ಲಿ ಹರಿಯುತ್ತದೆ ಅಲ್ಲಲ್ಲಿ ಜೀವ ಉಂಟಾಗುತ್ತದೆ ಎಂಬ ವಾಕ್ಯದ ಪ್ರಕಟಣೆಯನ್ನು ದೇವರು ಈ ರೀತಿ ಕೊಟ್ಟರು.
ಅದಷ್ಟೇ ಅಲ್ಲದೆ ಕಳೆದ ರವಿವಾರದ "ಆರಾಧನೆಯ ವಿನ್ಯಾಸ" ಎಂಬ ಸಂದೇಶ, ಅದು ಕೂಡ ಅದ್ಭುತವಾಗಿತ್ತು. ಯಾಕೆಂದರೆ ಎಷ್ಟೋ ಜನರಿಗೆ ಯೇಸು ಎಂಬ ಹೆಸರು ಗೊತ್ತು, ಆದರೆ ಅವರಿಗೆ ದೇವರನ್ನು ಆರಾಧಿಸುವುದು ಗೊತ್ತಿಲ್ಲ. ನಮ್ಮ ಇರುವಿಕೆಯೇ ಏಸುಕ್ರಿಸ್ತನಲ್ಲಿ ಎಂಬುದಾಗಿ ಪ್ರಕಟಪಡಿಸುವುದು ಆರಾಧನೆಯಾಗಿದೆ.
ಯಾಕೆಂದರೆ ಆತನಲ್ಲಿ ನಾವಿದ್ದೇವೆ ಎಂಬುದಾಗಿ ಮತ್ತು ಅದಷ್ಟೇ ಅಲ್ಲದೆ ಶನಿವಾರ ದಿನ ತೆಗೆದುಕೊಂಡ ವಾಕ್ಯ ಕೂಡ, ನಾವು ಯಾವ ರೀತಿಯಾಗಿ ವಾಕ್ಯದೊಂದಿಗೆ ಒಂದಾಗಿ ನಡೆದು ಕೊಂಡು ಜೀವಿಸುವುದು?
ಹೇಗೆ ವಾಕ್ಯವನ್ನು ಹೊಂದಿಕೊಂಡು ಅನುಭವಿಸುವುದು ?
ಯಾಕೆ ಅದು ನಮ್ಮ ಜೀವಿತದಲ್ಲಿ ವಾಕ್ಯ ಇದ್ದರೂ ಕೂಡ ಅನುಭವಿಸಲು ಆಗುತ್ತಿಲ್ಲ?
ವಾಗ್ದಾನವನ್ನು ನೆರವೇರಿಸಲು ಆಗುತ್ತಿಲ್ಲ?
ಪ್ರತಿಯೊಂದು ಸತ್ಯವು ಕೂಡ ನೆಕ್ಸ್ಟ್ ಲೆವೆಲ್ ಆಗಿ, ಆ ವಾಕ್ಯ ನಮ್ಮ ಜೀವಿತದಲ್ಲಿ ಕೆಲಸ ಮಾಡ್ತಾ ಇದೆ. ಅದಕ್ಕಾಗಿ ದೇವರಿಗೆ ಸ್ತೋತ್ರ.
ಇನ್ನೊಂದು ನಮ್ಮ ಜೀವಿತದಲ್ಲಿ ನಡೆದ ಸಾಕ್ಷಿ. ಇದನ್ನು ದೇವರ ನಾಮ ಮಹಿಮೆಗಾಗಿ ಹೇಳುತ್ತಿದ್ದೇನೆ. ಯಾಕೆಂದರೆ ನಮ್ಮನ್ನು ನಾವು ಹೆಚ್ಚಳ ಪಡಿಸಿಕೊಳ್ಳುವುದು ಅಲ್ಲ. ಕಳೆದ ಕ್ರಿಸ್ಮಸ್ ಸಮಯದಲ್ಲಿ ನಮ್ಮ ಊರಿನಲ್ಲಿರುವ ಕೆಲವು ಜನರು ನಮ್ಮ ತಾಯಿಯವರ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದರು ಇವರು ಕ್ರಿಸ್ಮಸ್ ಆಚರಣೆಯನ್ನು ಮಾಡಬಾರದು, ಇವರು ದೇವರನ್ನು ನಂಬಬಾರದು, ಹೇಗಾದರೂ ಮಾಡಿ ಇವರನ್ನು ದೇವರಿಂದ ಬಿಡಿಸಬೇಕೆಂದು ಕೆಲವು ಕುತಂತ್ರಗಳನ್ನು ಮಾಡಿದ್ದರು. ಈ ರೀತಿಯಾದ ಕಾರ್ಯಗಳನ್ನು ಮಾಡುವಾಗ ಒಂದು ಲೆಟರ್ ಬರೆದು, ಊರಿನಲ್ಲಿರುವ ಹಿರಿಯರ ಸಹಿಯನ್ನು ಮಾಡಿಸಿ, ಪೊಲೀಸ್ ಸ್ಟೇಷನ್ನಲ್ಲಿ ಕಂಪ್ಲೇಂಟ್ ಕೊಟ್ಟು ಬಂದಿದ್ದರು. ಕ್ರಿಸ್ಮಸ್ ಇನ್ನು ಎರಡು ದಿನ ಇದೆ ಅನ್ನುವಾಗ ಮೂರು ಜನ ಪೊಲೀಸರು ನಮ್ಮ ತಾಯಿಯವರು ಒಬ್ಬರೇ ಇದ್ದಾಗ ನಮ್ಮ ಮನೆಗೆ ಬಂದರು. ಇಲ್ಲಿ ಯಾರಾದರೂ ಕ್ರಿಶ್ಚಿಯನ್ ಇದ್ದಾರ? ಯಾಕೆ ನೀವು ಇದನ್ನು ಮಾಡುತ್ತಿದ್ದೀರಿ ಎಂದರು ಯಾರು ದೇವರನ್ನು ನಂಬುತ್ತಾರೋ ಅವರೇ ಕ್ರಿಶ್ಚಿಯನ್ ಎಂದು ನಾವು ಹೇಳಿದ್ದೆವು.
ಇನ್ನೂ ಅನೇಕ ಕಾರ್ಯಗಳನ್ನು ಇವರ ಜೊತೆ ಮಾತಾಡಿದ್ದಾರೆ. ನೀವು ಹೋಗಿ ಜನರನ್ನು ಕರೆದುಕೊಂಡು ಬರುತ್ತಿದ್ದೀರಿ ಯಾಕೆ ಎಂದು ಕೇಳಿದರು. ಹೌದು ನಾನು ಕಷ್ಟದಲ್ಲಿರುವ ಜನರಿಗೆ ಸುವಾರ್ತೆಯನ್ನು ಹೇಳಿ ಕರೆದುಕೊಂಡು ಬರುತ್ತೇನೆ. ಯಾಕೆಂದರೆ ನಮಗೆ ಬಿಡುಗಡೆಯನ್ನು ಕೊಟ್ಟವರು ಅವರಿಗೆ ಬಿಡುಗಡೆ ಕೊಡುತ್ತಾರೆ ಎಂಬ ನಂಬಿಕೆಯಿಂದ ಎಂದು ಹೇಳಿದ್ದೆವು.
ಅದೇ ರೀತಿಯಾಗಿ ನಮ್ಮ ದೇವರು ನಿಮಗೂ ಬಿಡುಗಡೆ ಕೊಡುತ್ತಾನೆ ಎಂದು ಹೇಳುವಾಗ, ಅವರಿಗೆ ಸ್ವಲ್ಪ ಭಯ ಉಂಟಾಗಿ ಯಾವ ಆಧಾರದ ಮೇಲೆ ಇದನ್ನೆಲ್ಲ ಮಾಡುತ್ತಿದ್ದೀರಿ ಎಂದು ಕೇಳಿದ್ದಾರೆ. ನಾವು ಸರಕಾರದ ಒಪ್ಪಿಗೆ ಮೇರೆಗೆ ಇದನ್ನೆಲ್ಲ ಮಾಡುತ್ತಿದ್ದೇವೆ, ಐದು ನಿಮಿಷದಲ್ಲಿ ನಿಮ್ಮ ಮೊಬೈಲ್ಗೆ ಡಾಕ್ಯುಮೆಂಟ್ಸ್ ಗಳು ಬರುತ್ತವೆ ಎಂದು ಹೇಳಿದ್ದೆವು.
ನಾಳೆ ಬಂದು ಪೋಲಿಸ್ ಸ್ಟೇಷನ್ ಗೆ ಬಂದು ಭೇಟಿಯಾಗಬೇಕು ಎಂದು ಹೇಳಿದರು. ಅವರಿಗೆ ಭಯಪಡಿಸುವ ರೀತಿಯಲ್ಲಿ ದೇವರು ಇವರ ಮೂಲಕ ಮಾತನಾಡಿದ್ದಾರೆ. ಅದಕ್ಕಾಗಿ ದೇವರಿಗೆ ಸ್ತೋತ್ರ 🥳🥳🎉🎉
ಕ್ರಿಸ್ಮಸ್ ಹಿಂದಿನ ದಿನ ನಾನು ನಮ್ಮ ತಾಯಿಯವರು ಪೊಲೀಸ್ ಸ್ಟೇಷನ್ ಗೆ ಹೋದೆವು. ಹೋಗುವಾಗಲೇ ಪ್ರಾರ್ಥನೆ ಮಾಡಿಕೊಂಡು ನಾವು ಜನಬಲದಿಂದ ಹೋಗುತ್ತಿಲ್ಲ, ನಾವು ದೇವರ ನಾಮದಲ್ಲಿ ಹೋಗುತ್ತಿದ್ದೇವೆ. ಆತ್ಮ ಮಂಡಲದಲ್ಲಿ ಈಗಾಗಲೇ ಎಲ್ಲಾ ಕಾರ್ಯಗಳನ್ನು ಜಯವಾಗಿ ಕೊಟ್ಟಿದ್ದೀರಿ ಎಂದು ಹೇಳಿ ಒಳಗೆ ಹೋದೆವು. ಹಿಂದಿನ ದಿನ ಬಂದ ಪೊಲೀಸರು ಇನ್ಸ್ಪೆಕ್ಟರ್ ಕಡೆಗೆ ಕರೆದುಕೊಂಡು ಹೋದರು, ಇನ್ಸ್ಪೆಕ್ಟರ್ ಕೇಳಿದರು ಏನು ನಿಮ್ಮ ತೊಂದರೆ ಎಂದು, ನಾವು ಹೇಳಿದ್ದೆವು ನಮಗೆ ಯಾವ ತೊಂದರೆಯೂ ಇಲ್ಲ, ನಮ್ಮಿಂದ ಬೇರೆಯವರಿಗೆ ತೊಂದರೆ ಆಗುತ್ತಿದೆ ಎಂದು ಕಂಪ್ಲೇಂಟ್ ಕೊಟ್ಟಿದ್ದಾರೆ ಎಂದು ಹೇಳಿದರು.
ಅವರು ಒಂದು ಮಾತನ್ನು ಮಾತಾಡಲಿಲ್ಲ, ನಮ್ಮ ಯಾವ ಕಾಗದಪತ್ರಗಳನ್ನು ನೋಡಲಿಲ್ಲ. ಒಂದೇ ನಿಮಿಷದಲ್ಲಿ ತಿರುಗಿ ಹೊರಗೆ ಬಂದೆವು. ನಿಮ್ಮ ದೇವರ ಆರಾಧನೆ ಮಾಡುವುದಕ್ಕೆ ನಮಗೆ ಯಾವ ಅಭ್ಯಂತರವೂ ಇಲ್ಲ, ನಿಮ್ಮ ನಿಮ್ಮ ಇಷ್ಟಕ್ಕೆ ಅನುಸಾರವಾಗಿ ನೀವು ಮಾಡಬಹುದು, ಯಾವುದೇ ಧರ್ಮದ ವಿಷಯವಾಗಿ ನಾವು ಮಾತನಾಡುವುದಿಲ್ಲ ಎಂದು ಹೇಳಿದರು . ಯಾವ ಭಯವೂ ಇಲ್ಲದೆ, ಧೈರ್ಯವಾಗಿ ಮಾತಾಡಿ ಹಿಂತಿರುಗಿ ಬಂದೆವು.
ಮರುದಿನ ಕ್ರಿಸ್ಮಸ್ ಹಬ್ಬವನ್ನು ಸಂತೋಷದಿಂದ ಆಚರಿಸುವಂತೆ ದೇವರು ಸಹಾಯ ಮಾಡಿದರು. ಈ ಸತ್ಯ ನಮ್ಮಲ್ಲಿ ಬಲವಾಗಿ ಕಾರ್ಯ ಮಾಡುತ್ತಾ ಇದೆ. ಅದನ್ನು ನಾವು ತೃಪ್ತಿ ಯಾಗಿ ಅನುಭವಿಸುತ್ತಾ ಇದ್ದೇವೆ.
ಅದಕ್ಕಾಗಿ ದೇವರಿಗೆ ಸ್ತೋತ್ರ.
ಥ್ಯಾಂಕ್ಯು ಫಾದರ್ 🙏🏻🙏🏻
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory glory to Jesus only 🙏🏻
ReplyDeleteಯುದ್ಧವು ಯೆಹೋವನದು ಜಯವು ನಮ್ಮದು 🎉🎉🎉🥳🥳🥳👏🏻👏🏻🔥🔥
Yes amen 🙌
DeleteGlory to God
ReplyDeleteಬಲದಿಂದಲ್ಲ, ಪರಾಕ್ರಮದಿಂದಲ್ಲ, ಕರ್ತನ ಆತ್ಮದಿಂದಲೇ ಎಲ್ಲವೂ ಸಾಧ್ಯ ಆಮೇನ್ 🙏🔥👏
ReplyDeleteYes amen
DeleteThis comment has been removed by the author.
ReplyDeleteGlory to God 🙏🙏
ReplyDeleteGlory to God 🔥🔥🔥🙏
ReplyDeleteYes Amen
ReplyDeleteGlory to God🔥🔥🔥
ReplyDeleteThis comment has been removed by the author.
ReplyDeleteGlory to God 🙏🙏🙏
ReplyDelete