Testimony #725 - ನಮ್ಮ ಊರಿನಲ್ಲಿ ಕ್ರಿಸ್ಮಸ್ ಆಚರಣೆ ಮಾಡಬಾರದು ಎಂದು...

 ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ. 🙏🏻🙏🏻🙏🏻

 ನನ್ನ ಹೆಸರು ಜಯಶ್ರೀ

 ನಮ್ಮ ಊರಿನಲ್ಲಿ ಕ್ರಿಸ್ಮಸ್ ಆಚರಣೆ ಮಾಡಬಾರದು ಎಂದು ಕೆಲವು ಜನರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ನಮ್ಮ ಮನೆಗೆ ಬಂದು ವಿಚಾರಣೆ ಮಾಡಿದರು. "ನೀವು ಇದನ್ನೆಲ್ಲಾ ಮಾಡಬಾರದು, ನಿಮ್ಮನ್ನು ಜೈಲಿಗೆ ಹಾಕುತ್ತೇವೆ, 7 ವರ್ಷ ಶಿಕ್ಷೆ ಆಗುತ್ತದೆ" ಎಂದು ನಮಗೆ ಜೋರು ಮಾಡಿದರು.

 ಅದಕ್ಕೆ ನಾವು ಅವರಿಗೆ ಹೇಳಿದೆವು, " ಭಾರತದ ಸಂವಿಧಾನದಲ್ಲಿ ಯಾರು ಯಾವ ದೇವರನ್ನು ಬೇಕಾದರೂ ಆರಾಧನೆ ಮಾಡಬಹುದೆಂದು ಬರೆದಿದೆ, ನಮ್ಮ ಹತ್ತಿರ ಸರ್ಕಾರದಿಂದ ಅಪ್ಪಣೆ ಪಡೆದ ಒಪ್ಪಿಗೆ  ಪತ್ರಗಳು ಇವೆ, ನಾವು ಯಾವ ಧರ್ಮಕ್ಕೆ ವಿರುದ್ಧವಾದ ಕಾರ್ಯಗಳನ್ನು ಮಾಡುತ್ತಿಲ್ಲ, ಈಗಲೇ ನಿಮ್ಮೊಂದಿಗೆ ಬರುತ್ತೇನೆ, ನಾನೇನು ಕೊಲೆ ಮಾಡಿಲ್ಲ, ಕಳ್ಳತನ ಮಾಡಿಲ್ಲ, ಆರೋಗ್ಯವಿಲ್ಲದವರು ತಾವೇ ಬಂದು ನಮ್ಮೊಂದಿಗೆ ಸೇರಿಕೊಳ್ಳುತ್ತಿದ್ದಾರೆ, ಬೇಕಿದ್ದರೆ ನೀವು ಬನ್ನಿ ನಿಮ್ಮನ್ನು ಸೇರಿಸಿಕೊಳ್ಳುತ್ತೇವೆ  " ಎಂದು ಅಷ್ಟೇ ಜೋರಾಗಿ ಉತ್ತರ ಕೊಟ್ಟೆವು. 

ಅದಕ್ಕೆ ಅವರು ಹಾಗಿದ್ದರೆ, ನೀವು ಕ್ರಿಸ್ಮಸ್ ಆಚರಣೆ ಮಾಡಿ, ನಾವೇ ನಿಮಗೆ ರಕ್ಷಣೆ ಕೊಡುತ್ತೇವೆ ಎಂದು ಹೇಳಿದರು.  ಅದರಂತೆಯೇ ಈ ವರ್ಷದ ಕ್ರಿಸ್ಮಸ್ ಆಚರಣೆ, ಪ್ರತಿ ವರ್ಷಕ್ಕಿಂತ ಜೋರಾಗಿತ್ತು, ಹೋಟೆಲ್ ನಲ್ಲಿ ಹಾಲ್ ಬುಕ್ ಮಾಡಿಕೊಂಡು, ಸುಮಾರು 200 ಜನರೊಂದಿಗೆ, ಹಾಡಿ, ಕುಣಿದು ಹಬ್ಬವನ್ನು ತುಂಬಾ  ಸಂತೋಷವಾಗಿ ಆಚರಿಸಿದೆವು.

ದೇವರ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ!!!


ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR THE LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY


 



Comments

  1. Glory glory to Jesus 👏🏻👏🏻👏🏻🔥🔥🔥
    ಜಯವು ತಂದೆಯಾದ ದೇವರದೇ 🎉🎉🎉🥳🥳🥳

    ReplyDelete
  2. ಜಯ ಕೊಡುವಾತನಿಗೆ ನಾವು ಶರೀರವಾಗಿರುವುದರಿಂದ ನಮ್ಮ ಶರೀರದಲ್ಲಿ ಜಯವನ್ನೇ ಅನುಭವಿಸುತ್ತೇವೆ ಆಮೆನ🎉
    Glory to God 🙏

    ReplyDelete
  3. ಅಶ್ವ ಬಲವು ಯುದ್ಧಕ್ಕೆ ಸನ್ನದ್ದವಾಗಿದ್ದರೂ ಜಯವು ಯೆಹೋವನಿಂದಲೇ ಆಮೇನ್ ಹಲ್ಲೆಲೂಯ 🙏🔥🔥🔥

    ReplyDelete
  4. MIGHTY WORK OF GOD!! GLORY TO HIM ALONE!!👏👏👏

    ReplyDelete
  5. Glory to god 👏👏👏🙏🙏

    ReplyDelete
  6. Glory to God 🙏👏👏👏💯💯💯🔥🔥🔥

    ReplyDelete

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)