Testimony #723 - ಹಾಸ್ಪಿಟಲ್ ಗೆ ಕರ್ಕೊಂಡ್ ಹೋಗುವಾಗ...

 Praise the lord pastor 

 ನನ್ನ ಹೆಸರು ದೀಪಾ. 

ನಾವು ಇರುವ ಅಪಾರ್ಟ್ಮೆಂಟ್ ನಲ್ಲಿ ಒಬ್ಬ ಅಜ್ಜಿಗೆ ಆರಾಮ ಇರ್ಲಿಲ್ಲ. ಅವರಿಗೆ ವಯಸ್ಸು 70 ರ ಮೇಲೆ ಇರಬಹುದು ಪಾಸ್ಟರ್. ಊಟಾನೇ ಬಿಟ್ಟಿದ್ರು, ಅವರನ್ನು ಹಾಸ್ಪಿಟಲ್ ಗೆ ಕರ್ಕೊಂಡ್ ಹೋಗುವಾಗ ಆ ಅಜ್ಜಿ ನನ್ನ ಕೈ ಹಿಡಿದು ನನ್ನ ಜೊತೆ ಬಾ ಅಂತ ಕೈನೆ ಬಿಡುತ್ತಿರಲಿಲ್ಲ. 

ಅವಾಗ ನಾನು," ಅಪ್ಪ ಈ ಕೈ ಹಿಡಿದಿದ್ದು ನನ್ನ ಕೈ ಅಲ್ಲ, ನಿನ್ನ ಕೈ ಅಪ್ಪ ನೀವು ಯಾವತ್ತಿದ್ದರೂ ಕೈ ಬಿಡುವುದಿಲ್ಲ, ತೊರೆಯುವುದಿಲ್ಲ ಅಂತ ವಾಗ್ದಾನ ಮಾಡಿದ್ದೀರಪ್ಪ ಆ ವಾಗ್ದಾನವನ್ನು ಈ ಅಜ್ಜಿ ಮೇಲೆ ರಿಲೀಸ್ ಮಾಡ್ತೀನಿ ಯೇಸುವಿನ ನಾಮದಲ್ಲಿ ಗುಣವಾಗಿ ಮನೆಗೆ ಬರ್ಲಿ" ಅಂತ ನನ್ ಮನಸಲ್ಲಿ ಡಿಕ್ಲೇರ್ ಮಾಡಿದೆ ಪಾಸ್ಟರ್. 

ಆಮೇಲೆ ನಾಲ್ಕು ದಿವಸ ಆದ್ಮೇಲೆ ಅಜ್ಜಿನ ಕರ್ಕೊಂಡು  ಮನೆಗೆ ಬಂದ್ರು. ಅವರ ಸೊಸೆ ನನ್ನ ಜೊತೆ ಮಾತಾಡುವಾಗ ಮನೆಗೆ ಬನ್ನಿ ಅಂದ್ರು ಬರ್ತೀನಿ ಅಂತ ಸಾಯಂಕಾಲ ಹೋದೆ  ಪಾಸ್ಟರ್. ಅವಾಗ ಅಜ್ಜಿ ಅವರಿಗೆ ಅರಿವು ಇಲ್ಲದೆ ಏನೇನು ಮಾತಾಡ್ತಿದ್ರು. ಅವಾಗ ದೇವರ ಬಗ್ಗೆ ಹೇಳಿದೆ, ಅವಾಗ ನಿಮ್ಮ ಬಗ್ಗೆ ಹೇಳಿದೆ ಪಾಸ್ಟರ್.

 ನಮ್ಮ ಪಾಸ್ಟರ್ ಪ್ರೇಯರ್ ಮಾಡ್ತಾರೆ, ಆರಾಮ ಆಗ್ತೀರಾ ಅಂತ ಹೇಳಿದೆ. ಹೇಳಿದ ತಕ್ಷಣನೆ  ಮಾಡಿಸ್ರಿ ಅಂದ್ರು. ಆದರೆ ಅವರು ಪ್ರೇಯರ್ ಮಾಡ್ಸು ಅಂತ ಅಂದಿದ್ದೆ ದೊಡ್ಡ ವಿಷಯ ಪಾಸ್ಟರ್, ಯಾಕಂದ್ರೆ ಅವರು ಬ್ರಾಹ್ಮಿನ್ಸ್ ಪಾಸ್ಟರ್ ಅವರು ಅಷ್ಟ್ ಸಲೀಸಾಗಿ ಅವರ ದೇವರನ್ನ ಬಿಟ್ಟು ಇನ್ನೊಂದು ದೇವರನ್ನ ಒಪ್ಪಿಕೊಳ್ಳುವುದಿಲ್ಲ.

 ಆದರೆ ಅವರು ಫೋನ್ ಮಾಡ್ರಿ ಮಾತಾಡ್ತೀನಿ ಅಂದ್ರು  ನಿಮ್ ಜೊತೆ ಮಾತಾಡಿದ್ರು, ಅವಾಗ ನೀವು ಪ್ರೇಯರ್ ಮಾಡಿದ್ರಿ, ನೀವು ಪ್ರೇಯರ್ ಮಾಡುವಾಗ ನಿಮ್ಮ ಬಾಯಿಂದ ಬರುವ ಪ್ರತಿಯೊಂದು ಮಾತನ್ನು ಅವರು ನಂಬಿಕೆಯಿಂದ ಸ್ವೀಕಾರ ಮಾಡಿದರು ಪಾಸ್ಟರ್.

 ಆಮೇಲೆ ನಿಮ್ ಜೊತೆ ಮಾತಾಡಿದ್ದಕ್ಕೆ ಖುಷಿಪಟ್ಟರು. ಪಾಸ್ಟರ್ ನೀವು  ಡಿಕ್ಲೇರ್ ಮಾಡಿದಂಗೆ ಮುಂಚೆಗಿಂತ ಈಗ ಅಜ್ಜಿ ಆರೋಗ್ಯದಲ್ಲಿ ಸುಧಾರಣೆಯಾಗಿದೆ ಪಾಸ್ಟರ. ಮೈಯಲ್ಲಿ ಆದ ಗಾಯಗಳು ಗುಣವಾಗಿದೆ.ಈಗ ಅವರು ಊಟ ಮಾಡುತ್ತಿದ್ದಾರೆ ಪಾಸ್ಟರ್. 

ದೇವರ ನಾಮಕ್ಕೆ ಸ್ತೋತ್ರ ವಾಗಲಿ.

 ದೇವ ಮನುಷ್ಯರ ಬಾಯಿಂದ ಬರುವ ಪ್ರತಿಯೊಂದು ಮಾತು ಆತ್ಮವು  ಜೀವವು ಆಗಿ  ಅವರಲ್ಲಿ ಪ್ರಕಟವಾಗಿದೆ ಪಾಸ್ಟರ್.

Thank you pastor ❤️


ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR THE LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY

Comments

  1. Glory to God 🙏 ದೇವ ಮನುಷ್ಯನ ಬಾಯಿಂದ ಬರುವ ಮಾತು ಅದು ಆತ್ಮವು ಜೀವವೂ ಆಗಿದೆ ಅಮೆನ್,, 🎉

    ReplyDelete
  2. This comment has been removed by the author.

    ReplyDelete

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)