Testimony # 719 - ಒಂದು ದಿನ ಪಕ್ಕದ ಮನೆಯಲ್ಲಿ.........

 ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻.

 ನನ್ನ ಹೆಸರು ನಿರ್ಮಲ

 ದೇವರಿಗೆ ಕೋಟಿ ಕೋಟಿ ಸ್ತೋತ್ರ ವಾಗಲಿ. ನಾವು ಮಾರ್ನಿಂಗ್ ಪ್ರೇಯರ್ ಗೆ ಜಾಯಿನ್ ಆಗಿ ಒಂದು ವಾರ ಅಷ್ಟೇ ಆಯ್ತು  . ದೇವರು ನಮ್ಮನ್ನು ತುಂಬಾ ಅದ್ಭುತವಾಗಿ ನಡೆಸುತ್ತಿದ್ದಾರೆ, ನಾನು ಮಾತ್ರ ಅಲ್ಲ ನನ್ನ ಫ್ರೆಂಡ್ಸ್ ಗಳಿಗೆ ಸಹ ಇದನ್ನು ಕಳಿಸುತ್ತೇನೆ, ಎಲ್ಲರೂ ತುಂಬಾ ಖುಷಿಪಡುತ್ತಾ ಇದ್ದಾರೆ ಎಲ್ಲರ ಜೊತೆಯಲ್ಲಿ ಅದ್ಭುತ ಆಗುತ್ತಿದೆ.

 ಒಂದು ದಿನ ಪಕ್ಕದ ಮನೆಯಲ್ಲಿ ತುಂಬಾ ಜೋರು ಜಗಳ ಆಗುತ್ತಿತ್ತು, ಪಾಸ್ಟರ್ ಮೆಸೇಜ್ ಸ್ಟಾರ್ಟ್ ಮಾಡಿ ಇದನ್ನು ಕೇಳಿಸಿಕೊಳ್ಳಿ ಎಂದು ಹೇಳಿದೆ, ಸಲ್ಪ ಸಮಯದಲ್ಲಿಯೇ ಅವರು ನನಗೆ ನೆಮ್ಮದಿ ಸಿಕ್ಕಿತು. ಇನ್ನು ಮೇಲೆ ನಾನು ಜಗಳ ಮಾಡುವುದಿಲ್ಲ ಎಂದು ಹೇಳಿದರು., ಮಾರ್ನಿಂಗ್ ಪ್ರೇಯರ್ ಜಾಯಿನ್ ಆಗಲು ಎಲ್ಲರೂ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ನಮಗೆ ಏನು ಬೇಕೋ ಅದನ್ನು ದೇವರು ಅನುಗ್ರಹಿಸುತ್ತಿದ್ದಾರೆ. ಪ್ರತಿದಿನ ವಾಕ್ಯ ಸಿಗುತ್ತದೆ.

 ದೇವರ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ.

 ನನಗೆ ಅನ್ಯ ಭಾಷೆ ಮಾತಾಡಲು ಬರುತ್ತಿರಲಿಲ್ಲ. ಮೈಸೂರಿನಿಂದ ಒಬ್ಬ ಬ್ರದರ್ ಹೇಳಿಕೊಟ್ಟರು. ನಿಜವಾಗಲೂ ತುಂಬಾ ಬಲ ಕೊಡ್ತಾ ಇದೆ.  ನಮಗೆ ಬೇಕಾಗಿರುವ ಪಾಸ್ಟರ್ ಅನ್ನು ದೇವರೇ ಒದಗಿಸಿ ಕೊಟ್ಟಿದ್ದಾರೆ.  ಬ್ರದರ್ ಫೋನ್ ಕಾಲ್ ಮೂಲಕ ಬಲಪಡಿಸುತ್ತಿರುತ್ತಾರೆ.  ತುಂಬಾ ಸಂತೋಷವಾಗುತ್ತಿದೆ.

 ನಮ್ಮ ಎದುರುಗಡೆ ಮನೆಯಲ್ಲಿರುವವರಿಗೆ ಸಡನ್ ಆಗಿ ಹೊಟ್ಟೆ ನೋವು ಬಂತು, ಎಲ್ಲರೂ ಅವರು ಬದುಕುವುದಿಲ್ಲ ಎಂದರು. ಅವರಿಗೆ ಯಾರು ಸಹಾಯಕರಿರಲಿಲ್ಲ. ಕೊಬ್ಬರಿ ಎಣ್ಣೆ ತೆಗೆದುಕೊಂಡು ಹೋಗಿ ಹಚ್ಚಿ," ದೇವರೇ ಇವರನ್ನು ನೀನೇ ಕಾಪಾಡಬೇಕು" ಎಂದು ಪ್ರಾರ್ಥಿಸಿದೆ. ಆಂಬುಲೆನ್ಸ್ ತೆಗೆದುಕೊಂಡು ಹಾಸ್ಪಿಟಲ್ ಗೆ ಹೋದೆವು ಆಪರೇಷನ್ ಮಾಡಬೇಕು ಅಂದರು.

 ಡಾಕ್ಟರ್ ಕೂಡ ಸಡನ್ ಆಗಿ ಆಪರೇಷನ್ ಥಿಯೇಟರ್ ಗೆ ಕರೆದುಕೊಂಡು ಹೋದರು. ಅಷ್ಟರಲ್ಲಿ ಅವರ ಮನೆಯವರೆಲ್ಲರೂ ಬಂದರು. ಈಗ ಅವರು ಚೆನ್ನಾಗಿದ್ದಾರೆ, ನಾನು ಪ್ರತಿಕ್ಷಣ ದೇವರಿಗೆ ಹೇಳುತ್ತಿದ್ದೆ -- "ಅಪ್ಪ ಇವರಿಗೆ ಮಕ್ಕಳಿದ್ದಾರೆ, ಇವರನ್ನು ಕಾಪಾಡು ದೇವರೇ" ಎಂದು ಬೇಡಿಕೊಳ್ಳುತ್ತಿದ್ದೆ. ಇವತ್ತು ಅವರೇ ನನಗೆ ಕಾಲ್ ಮಾಡಿ ನಿಮ್ಮಿಂದ ನನಗೆ ತುಂಬಾ ಉಪಕಾರ ಆಯ್ತು, ಹೀಗೆಲ್ಲ ಯಾರೂ ಬರುವುದಿಲ್ಲ ನೀವು ಆಂಬುಲೆನ್ಸ್ ನಲ್ಲಿ ಅಲ್ಲಿಂದ ಇಲ್ಲಿಯವರೆಗೂ ಬಂದ್ರಿ ಅಂದರು. 

ದೇವರ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ!!!

 ಪ್ರತಿದಿನ ಎಲ್ಲರಿಗೂ ಬೇಕಾದ ವಾಕ್ಯಗಳನ್ನು ಕೊಡಲಿ ಎಂದು ಪ್ರಾರ್ಥಿಸುತ್ತೇನೆ. ದೇವರ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ!!!


ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR THE LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY


 


Comments

  1. Glory glory to Jesus 🙏🏻🙏🏻🙏🏻🔥🔥🔥👏🏻👏🏻👏🏻

    ReplyDelete
  2. Glory to GOD!!🔥🔥🔥
    LORD do it again and again!!🔥🔥🔥

    ReplyDelete
  3. All praises to God . Hallelujah🙏🏻

    ReplyDelete
  4. Wonderful testimony 👏
    Glory to God 🙏

    ReplyDelete
  5. Amen Amen god presences is moving glory to god 🙏🙏

    ReplyDelete
  6. Glory to God 🙏 Lord do it again again 🙏

    ReplyDelete

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)