Testimony #717 - ಎಷ್ಟೋ ಸಲ ಓದಿದ್ದರು ಕೂಡ ಅದರ ಪ್ರಕಟಣೆ ನಮಗೆ ಗೊತ್ತಿರಲಿಲ್ಲ...

 ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻.

 ನನ್ನ ಹೆಸರು ದ್ರಾಕ್ಷಾಯಿಣಿ.

 ಶರೀರದಲ್ಲಿ ಹೊಂದಿಕೊಳ್ಳುವುದು ಮಾತ್ರ ಸಾಕ್ಷಿ ಅಲ್ಲ, ಆತ್ಮದಲ್ಲಿ ಅನುಭವಿಸುವುದು, ಉನ್ನತವಾದ ಸಾಕ್ಷಿಯಾಗಿದೆ. ಆತ್ಮದಲ್ಲಿ ಅನುಭವಿಸುವ ಸಂತೋಷ ನೆಕ್ಸ್ಟ್ ಲೆವೆಲ್ ಆಗಿದೆ. ದೇವರು ಪಾಸ್ಟರ್ ಮೂಲಕ ಅನೇಕ ರಹಸ್ಯಗಳನ್ನು ನಮಗೆ ತಿಳಿಸುತ್ತಿದ್ದಾರೆ.

ಮೊನ್ನೆ ಕೂಡ ಒಂದು ಮೆಸೇಜ್ ನಲ್ಲಿ ದೇವರ ವಾಕ್ಯ ಹೇಗೆ ಕೆಲಸ ಮಾಡುತ್ತದೆ ಎಂದು ಹೇಳಿದರು. ಯೇಶಾಯ 55 :10 ಮತ್ತು 11 ನೇ ವಚನಗಳನ್ನು ಎಷ್ಟೋ ಸಲ ಓದಿದ್ದರು ಕೂಡ ಅದರ ಪ್ರಕಟಣೆ ನಮಗೆ ಗೊತ್ತಿರಲಿಲ್ಲ. ಆ ವಾಕ್ಯದ ಮೂಲಕ ದೇವರ ಉದ್ದೇಶ, ದೇವರ ಸಾಮರ್ಥ್ಯ ಏನು ಎಂದು ತಿಳಿದುಕೊಂಡೆವು. ಆ ವಾಕ್ಯವನ್ನು ಹೊಂದಿಕೊಳ್ಳುವಾಗಲೇ ವಾಕ್ಯ ಕ್ರಿಯೆ ಮಾಡುತ್ತಿದೆ ಎಂದು ತಿಳಿದುಕೊಂಡೆವು. ಆ ವಾಕ್ಯಕ್ಕೆ ತಕ್ಕಂತೆ ಅನೇಕ ವಾಕ್ಯಗಳನ್ನು, ಅನೇಕ ಉದಾಹರಣೆಗಳನ್ನು ದೇವರು ನನಗೆ ಕೊಟ್ಟರು. ದೇವರ ಉದ್ದೇಶ ಇಲ್ಲದೆ ವಾಕ್ಯ ಕೆಲಸ ಮಾಡಲು ಸಾಧ್ಯವಿಲ್ಲ. ದೇವರ ಉದ್ದೇಶವನ್ನು ಮಾತ್ರವೇ ವಾಕ್ಯ ಕ್ರಿಯೆ ಮಾಡುತ್ತದೆ. ಅದಕ್ಕೆ ಆಧಾರವಾಗಿ ಅನೇಕ ವಚನಗಳನ್ನು ತೆಗೆದುಕೊಂಡು ನಾನು ಆನ್ಲೈನ್ ಪ್ರೇಯರ್ ನಲ್ಲಿ ಮೆಸೇಜ್ ಕೊಟ್ಟೆ. ನನಗೆ ಗೊತ್ತಿಲ್ಲದ ಎಷ್ಟೋ ಪ್ರಕಟಣೆಗಳನ್ನು ದೇವರು ಕೊಟ್ಟರು. 

 ಆ ದಿನ ಪಾಸ್ಟರ್ 5 ಸಲ ಬರೆಯಿರಿ ಎಂದು ಹೋಂ ವರ್ಕ್ ಕೊಟ್ಟರು. ಬೆಳಗ್ಗೆ ನಾನು ಬೇಗ ಕೆಲಸಕ್ಕೆ ಹೋಗುವುದರಿಂದ ಬರೆಯಲು ಆಗಲಿಲ್ಲ.ಆದರೆ ನಾನು ಕೆಲಸದ ಮೇಲೆ ಇರುವಾಗಲೇ ಹೇಗಾದರೂ  ಬರೆಯಲೇಬೇಕು ಎಂದು ಐದು ಸಲ ಬರೆದ ಮೇಲೆ ಪ್ರಕಟಣೆಗಳ ಮೇಲೆ ಪ್ರಕಟಣೆಗಳು ಬರುತ್ತಲೇ ಇದ್ದವು.

 ಮಳೆಯೂ ಹಿಮವು ಆಕಾಶದಿಂದ ಬೀಳುವುದೇ  ಭೂಮಿಯನ್ನು ತೋಯಿಸುವುದೇ ಅದರ ಉದ್ದೇಶ, ಭೂಮಿ ಫಲಿಸುವಂತೆ ಮಾಡುವುದೇ ಅದರ ಉದ್ದೇಶ. 

 ಅದೇ ರೀತಿಯಾಗಿ ದೇವರ ವಾಕ್ಯ ಕೂಡ ಇದೆ, ದೇವರು ಆರೋಗ್ಯದಾಯಕನು ಅಂದರೆ ನಮ್ಮಲ್ಲಿ ಆರೋಗ್ಯ ಪ್ರಕಟವಾಗಲೇಬೇಕು. ಅದು ನಮ್ಮ ಉದ್ದೇಶ ಅಲ್ಲ ಅದು ದೇವರ ಉದ್ದೇಶವಾಗಿದೆ. ದೇವರ ಆಲೋಚನೆ ಅದರಲ್ಲಿ ತುಂಬಿಕೊಂಡಿದೆ, ದೇವರ ಸಾಮರ್ಥ್ಯಅದರಲ್ಲಿ ತುಂಬಿದೆ. ದೇವರ ಬಲ ಅದರಲ್ಲಿ ತುಂಬಿರುವುದರಿಂದ ಅದು ಪರಿಪೂರ್ಣವಾಗಿ ನಮ್ಮಲ್ಲಿ ನೆರವೇರಲೇಬೇಕು. ಅದಕ್ಕೆ ಅನುಸಾರವಾಗಿ ಯೇಸು  ಮಾತು ಮಾತ್ರದಿಂದಲೇ ಎಷ್ಟೋ ಜನರನ್ನು ಗುಣಪಡಿಸಿದ್ದನ್ನು ಅನೇಕ ವಾಕ್ಯ ಗಳ ಮೂಲಕ ತೋರಿಸಿಕೊಟ್ಟರು .

ಅದಕ್ಕಾಗಿ ದೇವರಿಗೆ ಸ್ತೋತ್ರ.

 ಪಾಸ್ಟರ್ ನವೆಂಬರ್ ತಿಂಗಳಲ್ಲಿ ವಾಗ್ದಾನ ಕೊಟ್ಟಿದ್ದರು ಸಂಪೂರ್ಣ/ ಪರಿಪೂರ್ಣ ಆನಂದ ಎಂಬುದಾಗಿ.

 ಇಂದಿನವರೆಗೂ ಪರಿಪೂರ್ಣವಾದ ಸಂತೋಷವನ್ನು ಅನುಭವಿಸುತ್ತಾ ಇದ್ದೇನೆ. ಶರೀರಿಕವಾದ ಎಲ್ಲಾ ಕಾರ್ಯಗಳಲ್ಲಿಯೂ ದೇವರು ನಮ್ಮನ್ನು ಜಯವಾಗಿ ನಡೆಸುತ್ತಾ ಇದ್ದಾರೆ.

 ನಮ್ಮ ತಾಯಿಯವರು ಕೂಡ ಅನೇಕ ಅನ್ಯ ಜನರಿಗೆ ಸುವಾರ್ತೆಯನ್ನು ಸಾರಿ ಬರುವಂತೆ ದೇವರು ಸಹಾಯ ಮಾಡಿದ್ದಾರೆ. ದೇವರ ವಾಕ್ಯವನ್ನು ಹೇಳುವಂತ ಪರಿಸ್ಥಿತಿ ಇಲ್ಲದೆ ಇದ್ದರೂ, ಎಂತಹ ಕಠಿಣ ಇಕ್ಕಟ್ಟಿನ ಪರಿಸ್ಥಿತಿ ಇದ್ದರೂ ಅಲ್ಲಿ ದೇವರ ಸುವಾರ್ತೆಯನ್ನು ಸಾರಿ ಬರುವಂತೆ ದೇವರೇ ಸಹಾಯ ಮಾಡಿ ನಡೆಸುತ್ತಿದ್ದಾರೆ.

 ಅದಕ್ಕಾಗಿ ದೇವರಿಗೆ ಸ್ತೋತ್ರ.

 ಇನ್ನು ಎಷ್ಟೋ ಕಾರ್ಯಗಳನ್ನು ದೇವರು ತಿಳಿಸುತ್ತಿದ್ದಾರೆ. ವಾಕ್ಯದ ಮೂಲಕ ದೇವರು ನಮ್ಮನ್ನು ನಡೆಸುತ್ತಿದ್ದಾರೆ ಅದಕ್ಕಾಗಿ ದೇವರಿಗೆ ಸ್ತೋತ್ರ. 

ಥ್ಯಾಂಕ್ಯೂ ಪಾಸ್ಟರ್ 🙏🏻🙏🏻🙏🏻


ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR THE LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY


 

Comments

  1. Glory glory to Jesus 🙏🏻🔥🔥🔥
    ಪ್ರತಿ ತಿಂಗಳ ವಾಗ್ದಾನ ಆ ತಿಂಗಳಲ್ಲಿಯೇ ದೇವರು ನೆರವೇರಿಸುತ್ತಿದ್ದಾರೆ. 🥳🥳🥳🎉🎉🎉

    ReplyDelete
  2. GLORY GLORY GLORY to god 🙏🔥

    ReplyDelete
  3. All glory to God for the revelations, perfect joy

    ReplyDelete
  4. Thank you Jesus 🙏 Glory Glory to God 🙏

    ReplyDelete

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)