Testimony #716 - ನನ್ನ ಮೈ ಮೇಲೆಲ್ಲಾ ಗುಳ್ಳೆಗಳು ಬಂದಿವೆ...
ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻.
ನನ್ನ ಹೆಸರು ಭಾಗ್ಯಲಕ್ಷ್ಮಿ.
ನನ್ನ ಪರಿಚಯದ, ನಾನು ಮೊದಲು ಹೋಗುತ್ತಿದ್ದ ಸಭೆಯ ವಿಶ್ವಾಸಿ ಹುಡುಗಿಯೊಬ್ಬಳು ಇತ್ತೀಚೆಗೆ ಮದುವೆಯಾಗಿ ಗಂಡನ ಮನೆಗೆ ಹೋಗಿದ್ದಳು, ಈಗ 20 ದಿನದ ಹಿಂದೆ ಒಂದು ದಿನ ನನಗೆ ಕಾಲ್ ಮಾಡಿ, ನನ್ನನ್ನು ಸಭೆಗೆ ಕಳುಹಿಸುತ್ತಿಲ್ಲ ಎಂದು ಹೇಳಿದಳು, ನನ್ನ ಮೈ ಮೇಲೆಲ್ಲಾ ಗುಳ್ಳೆಗಳು ಬಂದಿವೆ, ಕುತ್ತಿಗೆಯ ಕೆಳಗಡೆ, ಕೈಗಳ ಕೆಳಗಡೆ ದಪ್ಪ ದಪ್ಪ ಗಂಟುಗಳಾಗಿವೆ, ತುಂಬಾ ನೋಯುತ್ತಿವೆ, ಹಾಸ್ಪಿಟಲ್ ಗೆ ಹೋದರೆ ಡಾಕ್ಟರ್ ಸ್ಕ್ಯಾನಿಂಗ್ ಮಾಡಬೇಕು ಎಂದು ಹೇಳಿದರು, ಕ್ಯಾನ್ಸರ್ ಗಡ್ಡೆಗಳು ಇರಬಹುದು ಎಂದು ಹೇಳಿದರು, ತುಂಬಾ ಭಯವಾಗುತ್ತಿದೆ ಎಂದು ಹೇಳಿ ಪ್ರಾರ್ಥನೆ ಮಾಡಿಸಿಕೊಂಡಳು. ಅವರ ಮನೆಯಲ್ಲಿ ಯಾರು ಇಲ್ಲದಾಗ ಕಾಲ್ ಮಾಡಿ ಮತ್ತೆ ಮತ್ತೆ ಪ್ರಾರ್ಥನೆ ಮಾಡಿಸಿಕೊಂಡಳು. ನಾನು ನಮ್ಮ ಮಾರ್ನಿಂಗ್ ಪ್ರೇಯರ್ ಗ್ರೂಪ್ ನಲ್ಲಿಯೂ ಕೂಡ ಪ್ರೇಯರ್ ರಿಕ್ವೆಸ್ಟ್ ಹಾಕಿದ್ದೆ.
ನಿನ್ನೆಯ ದಿನ ಆ ಹುಡುಗಿಯ ಅಮ್ಮ ಕಾಲ್ ಮಾಡಿ, ನೀನು ಪ್ರಾರ್ಥನೆ ಮಾಡಿದ್ದಕ್ಕೆ ಅವಳಿಗೆ ಎಲ್ಲಾ ಗುಳ್ಳೆಗಳು ಗಂಟುಗಳು ಕರಗಿ ಪೂರ್ತಿ ಆರಾಮಾಗಿದ್ದಾಳೆ, ಈಗ ಯಾವ ನೋವು ಇಲ್ಲ, ಡಾಕ್ಟರ್ ಸ್ಕ್ಯಾನಿಂಗ್ ಮಾಡಿ, "ಏನು ಪ್ರಾಬ್ಲಮ್ ಇಲ್ಲ, ಹೆದರುವ ಅವಶ್ಯಕತೆ ಇಲ್ಲ, ಮಾತ್ರೆ ತಗೊಂಡರೆ ಸಾಕು ಎಲ್ಲ ಸರಿ ಹೋಗುತ್ತದೆ" ಎಂದುಡಾಕ್ಟರ್ ಹೇಳಿದ್ದಾರೆ, ಎಂದು ಹೇಳಿದಳು. ಇಂಥ ಅದ್ಭುತವನ್ನು ಮಾಡಿದ್ದಕ್ಕಾಗಿ ದೇವರಿಗೆ ಕೋಟಿ ಕೋಟಿ ಸ್ತೋತ್ರ ಉಂಟಾಗಲಿ. ಪ್ರಾರ್ಥನೆ ಮಾಡಿದ ಎಲ್ಲರಿಗೂ ಧನ್ಯವಾದಗಳು.
ನನ್ನ ಚಿಕ್ಕ ಸಾಕ್ಷಿ :
ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಮಗ ಪ್ರತಿದಿನ ಅರ್ಧ ಗಂಟೆ ಅನ್ಯ ಭಾಷೆಯಲ್ಲಿ ಪ್ರಾರ್ಥನೆ ಮಾಡುತಿದ್ದೇವೆ. ಮೊನ್ನೆ ನಡೆದ ಪರೀಕ್ಷೆಯಲ್ಲಿ ನನ್ನ ಮಗ 50 ಅಂಕಗಳಿಗೆ, 45, 40 ಈ ರೀತಿ ಅಂಕಗಳನ್ನು ತೆಗೆದುಕೊಂಡಿದ್ದಾನೆ, 3 ರಿಂದ 4 ಅಂಕಗಳನ್ನು ತೆಗೆದುಕೊಳ್ಳುತ್ತಿದ್ದ, ಇದೇ ಸಲ ದೇವರ ಕೃಪೆಯಿಂದ ಇಷ್ಟು ಅಂಕಗಳನ್ನು ತೆಗೆದುಕೊಂಡಿದ್ದಾನೆ. ಅವನಿಗೆ ಓದಲು ಸರಿಯಾಗಿ ಬರುತ್ತಿರಲಿಲ್ಲ, ಈಗ ಚೆನ್ನಾಗಿ ಓದುತ್ತಾನೆ. ಮೊನ್ನೆ ಸ್ಕೂಲ್ ಗೆ ಹೋದಾಗ ಅವರ ಪ್ರಿನ್ಸಿಪಲ್ ಅವನ ಬಗ್ಗೆ ಒಳ್ಳೆಯ ಮಾತುಗಳನ್ನು ಮಾತಾಡಿದರು.
ನನಗೆ ಕೆಲಸ ಇಲ್ಲ, ನನ್ನ ಮಗನ ಫೀ ಹೇಗೆ ತುಂಬುವುದು ಎಂದು ಯೋಚಿಸುತ್ತಿದ್ದೆ, ಕೊನೆಯ ವರ್ಷಕ್ಕಿಂತ ಈ ವರ್ಷ ಫೀ ಜಾಸ್ತಿ ಆಗಿದೆ ಎಂದು ಹೇಳುತ್ತಿದ್ದರು, 60 ರಿಂದ 70 ರೂಪಾಯಿಗಳನ್ನು ತುಂಬಬೇಕಿತ್ತು, ಕೃಪೆ ಎಂಬ ಯೇಸು ನನ್ನ ಮಗನ ಫೀ ತುಂಬುತ್ತಾರೆ, ಕೃಪೆ ಎಂಬ ಯೇಸು ನನ್ನ ಮಗನನ್ನು ನಡೆಸುತ್ತಾರೆ ಎಂದು ಯಾವಾಗಲೂ ಅರಿಕೆ ಮಾಡುತ್ತಿದ್ದೆ, ಪ್ರಿನ್ಸಿಪಲ್ 20 ಸಾವಿರ ರೂಪಾಯಿಗಳನ್ನು ಕಡಿಮೆ ಮಾಡಿ, 45,000 ಮಾತ್ರ ತುಂಬಲು ಹೇಳಿದರು. ದೇವರು ನನ್ನನ್ನು ಮತ್ತು ನನ್ನ ಕುಟುಂಬವನ್ನು ಅದ್ಭುತವಾಗಿ ನಡೆಸುತ್ತಿದ್ದಾರೆ.
ದೇವರಿಗೆ ಕೋಟಿ ಕೋಟಿ ಸ್ತೋತ್ರ 🙏🏻🙏🏻🙏🏻
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory to God 🙏
ReplyDeleteYes lord Amen Amen glory to god 👏👏👏👏👏🔥🔥🔥🔥💯💯
ReplyDeleteGlory glory to Jesus 🙏🏻
ReplyDeleteGlory to God!
ReplyDelete