Testimony #720 - ಬರೆದು ಇಡಿ ಹೊಂದಿಕೊಳ್ಳುತ್ತೀರಿ ಎಂದು ಹೇಳಿದ್ದರು...
ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ಉಂಟಾಗಲಿ 🙏🏻🙏🏻
ನನ್ನ ಹೆಸರು ಸುನಿತಾ
ಕಳೆದ ವರ್ಷ 2024ರಲ್ಲಿ ಡಿಸೆಂಬರ್ 28ರಂದು ಪಾಸ್ಟರ್ ಹೇಳಿದರು, ಒಬ್ಬೊಬ್ಬರಿಗೆ ಒಂದೊಂದು ವರಗಳು ಇರುತ್ತವೆ ಎಂದು. ನಿಮಗೆ ಏನು ಬೇಕು ಎನ್ನುವುದನ್ನು ಬರೆದು ಇಡಿ ಹೊಂದಿಕೊಳ್ಳುತ್ತೀರಿ ಎಂದು ಹೇಳಿದ್ದರು. ನಾನು ಆ ಡೇಟ್ ಹಾಕಿ ನನ್ನ ಅಕ್ಕನಿಗೆ ಕಡಿಮೆ ಬಾಡಿಗೆ ಇರುವ, ಮನೆಯ ಹತ್ತಿರದಲ್ಲೇ ಒಂದು ಅಂಗಡಿ ಸಿಗಬೇಕು ಎಂದು ಬರೆದು ಇಟ್ಟಿದ್ದೆ. ಅದೇ ರೀತಿ ನಾನು ಒಂದು ಮಷೀನ್ ತೆಗೆದುಕೊಳ್ಳಬೇಕು ಎಂದು ಬರೆದಿಟ್ಟಿದ್ದೆ. ಅದೆಲ್ಲವೂ ನನ್ನ ಜೀವಿತದಲ್ಲಿ ಇವತ್ತು ನೆರವೇರಿದೆ. ಅದಕ್ಕಾಗಿ ದೇವರನಾಮಕ್ಕೆ ವಂದನೆ.
ಹೊಸ ಮಷೀನ್ ತೆಗೆದುಕೊಳ್ಳಲು ಆಗುವುದಿಲ್ಲ, ಸೆಕೆಂಡ್ ಹ್ಯಾಂಡ್ ಮಷೀನ್ ತೆಗೆದುಕೊಳ್ಳೋಣ ಸಾಕು ಎಂದು ತುಂಬಾ ದಿನದಿಂದ ಯೋಚನೆ ಮಾಡುತ್ತಿದ್ದೆ. 4000 ಅಮೌಂಟ್ ಗೆ ಬರುವಂತದನ್ನೇ ತೆಗೆದುಕೊಳ್ಳೋಣ, ಅಷ್ಟೇ ಅಮೌಂಟ್ ಹೊಂದಿಸಲು ನನ್ನಿಂದ ಸಾಧ್ಯ ಎಂದು ಅಂದುಕೊಳ್ಳುತ್ತಿದ್ದೆ. ಆದರೆ ಜಿಗ್ ಜಾಗ್, ವರ್ಲ್ಯಾಕ್, ಎಂಬ್ರಾಯ್ಡರಿ ಕೆಲಸ ಮಾಡುವಂತ ಒಂದು ಮಷೀನ್ ಹೊಸದಾಗಿ ತೆಗೆದುಕೊಳ್ಳುವ ಹಾಗೆ ದೇವರು ಕೃಪೆ ಕೊಟ್ಟಿದ್ದಾರೆ. ಅದಕ್ಕಾಗಿ ದೇವರ ನಾಮಕ್ಕೆ ಸ್ತೋತ್ರ.
ಅದರಂತೆ ನನ್ನ ಅಕ್ಕನಿಗೆ ಒಂದು ಬೋನಸ್ ಸಿಕ್ಕು, ಒಂದು ಸ್ವಂತ ಅಂಗಡಿಯನ್ನು ನಡೆಸುವಂತೆ ದೇವರು ಕೃಪೆ ಕೊಟ್ಟಿದ್ದಾರೆ. ಅದಕ್ಕಾಗಿ ದೇವರು ನಾಮಕ್ಕೆ ಸ್ತೋತ್ರ. ನಾನು ಓದಿಲ್ಲ, ಅಷ್ಟೇನೂ ಗೊತ್ತಾಗಲ್ಲ, ಏನು ಮಾಡಲು ಸಾಧ್ಯವಿಲ್ಲ ಎಂಬ ಮೈಂಡ್ ಸೆಟ್ ಇತ್ತು. ಮಾರ್ನಿಂಗ್ ಪ್ರೇಯರ್ ನಲ್ಲಿ ಎರಡು ವರ್ಷದಿಂದ ಜಾಯಿನ್ ಆಗುತ್ತಿದ್ದೇನೆ. ಅಂದಿನಿಂದ ಇಲ್ಲಿಯವರೆಗೂ ಪಾಸ್ಟರ್ ಏನೇನು ಬ್ಲೆಸ್ ಮಾಡಿದ್ದಾರೋ ಅದನ್ನೆಲ್ಲ ಸ್ವೀಕರಿಸಿಕೊಳ್ಳುತ್ತಿದ್ದೆ ಮತ್ತು ಹೊಂದಿಕೊಳ್ಳುತ್ತಿದ್ದೆ. ವಿದ್ಯೆ ಇಲ್ಲ, ಓದೋಕೆ ಬರುವುದಿಲ್ಲ ಎಂದು ನಮ್ಮನ್ನು ನಾವೇ ಕಡಿಮೆ ಮಾಡಿಕೊಳ್ಳಬಾರದು, ದೇವರು ಎಲ್ಲರನ್ನೂ ಆರಿಸಿಕೊಳ್ಳುತ್ತಾರೆ, ದೇವರೇ ನಡೆಸುತ್ತಾರೆ ಎಂದು ಪಾಸ್ಟರ್ ಹೇಳುತ್ತಾ ಇದ್ದರು.
ನಾನು ಯೋಚಿಸುವುದಕ್ಕಿಂತಲೂ ಹೆಚ್ಚಾಗಿ ಒಂದು ಬಿಸಿನೆಸ್ ಮಾಡುವಂತೆ ದೇವರು ಕೃಪೆ ಕೊಟ್ಟಿದ್ದಾರೆ. ಬಟ್ಟೆ ತರಲು ಅಮೌಂಟ್ ಇರಲಿಲ್ಲ, ನಮ್ಮ ಮನೆಯವರು ಒಪ್ಪಿಕೊಳ್ಳುತ್ತಿರಲಿಲ್ಲ, ಆದರೆ ಒಂದು ದಿನ ಅವರೇ ನನ್ನನ್ನು ಕರೆದುಕೊಂಡು ಹೋಗಿ 15 ಸಾವಿರದವರೆಗೆ ಬಟ್ಟೆಗಳನ್ನು ಕೊಡಿಸಿದರು.. ದೇವರ ನಾಮಕ್ಕೆ ಕೋಟಿ ಕೋಟಿ ವಂದನೆ.
ಎರಡೇ ದಿನದಲ್ಲಿ ಅರ್ಧ ಬಟ್ಟೆಗಳನ್ನು ಸೇಲ್ ಮಾಡಿದ್ದೇನೆ, ಡ್ರೆಸ್ ಮೆಟೀರಿಯಲ್, ಬ್ಲೌಸ್ ತೆಗೆದುಕೊಂಡವರು ತಿರುಗಿ ನನ್ನ ಬಳಿಯೇ ಸ್ಟಿಚ್ ಮಾಡಲು ಕೊಟ್ಟಿದ್ದಾರೆ. ಎರಡೆರಡು ಬಿಸಿನೆಸ್ ಮಾಡುವಂತೆ ದೇವರು ಕೃಪೆ ಕೊಟ್ಟಿದ್ದಾರೆ.
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
GLORY TO GOD!!
ReplyDeleteLORD do it again and again!!
🔥🔥🔥🔥🔥🔥🔥
Glory to God 🙏
ReplyDelete