Testimony #711 - ನನ್ನ 2 ಕಿಡ್ನಿಗಳು ಡ್ಯಾಮೇಜ್ ಆಗಿದ್ದವು...
ದೇವರ ನಾಮಕ್ಕೆ ಸ್ತೋತ್ರ 🙏🏻
ನನ್ನ ಹೆಸರು ಉಮ.
ನಾನು ನಾಲ್ಕು ತಿಂಗಳಿನಿಂದ ಅಧಿಕವಾಗಿ ಬಲಹೀನಳಾಗಿದ್ದೆ ಮತ್ತು ಕಿಡ್ನಿಯ ತೊಂದರೆಯಿಂದ ಪೀಡಿತಳಾಗಿದ್ದೆ.ನನ್ನ 2 ಕಿಡ್ನಿಗಳು ಡ್ಯಾಮೇಜ್ ಆಗಿದ್ದವು, ಆಯುರ್ವೇದಿಕ್ ಮೆಡಿಸಿನ್ ತಗೊಂಡೆ, ಇನ್ನೂ ಕೆಟ್ಟದ್ದಾಯಿತು. ನಾನು Rev. John Ebenezer ರವರ ವಾಕ್ಯವನ್ನು ಕೇಳಿ ಅದರ ಪ್ರಕಾರ ನಡೆಯುತ್ತಿದ್ದೇನೆ. ಪಾಸ್ಟರ್ ಬಳಿಯಲ್ಲಿ ನನ್ನ ಸಮಸ್ಯೆಯನ್ನು ಹೇಳಿಕೊಂಡು ಪ್ರಾರ್ಥನೆ ಮಾಡಿಸಿಕೊಂಡೆ. ಅದರ ನಂತರ ದೇವರು ನನಗೆ ಪರಿಪೂರ್ಣ ಬಿಡುಗಡೆಯನ್ನು ಮತ್ತು ಸಮಾಧಾನವನ್ನು ಕೊಟ್ಟಿದ್ದಾರೆ. ದೇವರಿಗೆ ಕೋಟಿ ಕೋಟಿ ಸ್ತೋತ್ರ 🙏🏻🙏🏻🙏🏻.
ಡಾಕ್ಟರ್ ಗಳನ್ನು ನಾನು ನಂಬಲಿಲ್ಲ, ದೇವರನ್ನು ಮಾತ್ರವೇ ನಾನು ನಂಬಿದ್ದೇನೆ. ಮತ್ತು ನಾನು ತೆಗೆದುಕೊಳ್ಳುತ್ತಿದ್ದ ಮಾತ್ರೆಗಳನ್ನು ನಾನು ನಂಬಲಿಲ್ಲ. ಆದರೆ ಸತ್ಯವನ್ನು ನಂಬಿದ್ದೇನೆ ಮತ್ತು ಪಾಸ್ಟರ್ ರಿಸೀವ್ ಇಟ್ ರಿಸೀವ್ ಇಟ್ ಎಂಬುದಾಗಿ ಪದೇಪದೇ ಹೇಳುತ್ತಿದ್ದರು. ಅದರ ಅರ್ಥ ನನಗೆ ಗೊತ್ತಿರಲಿಲ್ಲ, ಒಂದು ದಿನ ನನಗೆ ಸೀನಿಯರ್ ಪಾಸ್ಟರ್ { ಜಾನ್ ಪಾಸ್ಟರ್ ಅವರ ತಂದೆ Bishop Paul Raj ಪಾಸ್ಟರ್ } ಅದನ್ನು ಮತ್ತೆ ಸ್ವೀಕರಿಸಿಕೊಂಡಿದ್ದೇನೆ, ಸ್ವೀಕರಿಸಿಕೊಂಡಿದ್ದೇನೆ ಎಂಬುದಾಗಿ ಸ್ವೀಕರಿಸಿರಿ ಎಂದು ಹೇಳಿ ನನ್ನನ್ನು ಬಲಪಡಿಸಿದರು.
ಬಹಳ ಮಂದಿ ಮತ್ತು ನನ್ನನ್ನು ನೋಡಿದವರೆಲ್ಲ ಯಾಕೆ ಈ ರೀತಿಯಾಗಿದ್ದೀರಾ ಎಂಬುದಾಗಿ ಕೇಳುತ್ತಿದ್ದರು. ಆದರೆ ಸೀನಿಯರ್ ಪಾಸ್ಟರ್ ಮಾತ್ರವೇ ನನ್ನನ್ನು ನೋಡಿ, "ನಿಮ್ಮ ಮುಖ ಪ್ರಕಾಶವಾಗಿದೆ, ದೇವರು ನಿಮ್ಮನ್ನು ಆಶೀರ್ವದಿಸಿದ್ದಾರೆ ಮತ್ತು ನೀವು ಪರಿಪೂರ್ಣವಾಗಿ ಗುಣಹೊಂದಿದ್ದೀರಿ" ಎಂಬುದಾಗಿ ಹೇಳಿ ನನ್ನನ್ನು ಬಹಳ ಬಲಪಡಿಸಿದರು. ಆ ಮಾತುಗಳು ನನ್ನನ್ನು ಬಹಳವಾಗಿ ಬಲಪಡಿಸಿತು ಮತ್ತು ನನ್ನ ನಂಬಿಕೆ ದೇವರಲ್ಲಿ ಇನ್ನೂ ಹೆಚ್ಚಾಯಿತು.
ಅದೇ ನಂಬಿಕೆಯಲ್ಲಿ ಈ ಬಾರಿ ನಾನು ಮತ್ತೆ ಆಸ್ಪತ್ರೆಗೆ ಹೋಗಿ ತೋರಿಸಿದಾಗ ಡಾಕ್ಟರ್ ನನಗೆ, "ನೀವು ಒಂದು ತಿಂಗಳು ಟ್ಯಾಬ್ಲೇಟ್ಸ್ ತೆಗೆದುಕೊಂಡರೆ ಸಾಕು ನೀವು ಸಂಪೂರ್ಣವಾಗಿ ಗುಣಹೊಂದಿದ್ದೀರಾ" ಎಂಬುದಾಗಿ ನನಗೆ ಹೇಳಿದರು. ನನಗೆ ಬಹಳ ಸಂತೋಷವಾಯಿತು.
ನಾನು ಮಾತ್ರೆಯಿಂದಾಗಲಿ, ಔಷಧಿಯಿಂದಾಗಲಿ, ಡಾಕ್ಟರ್ ಗಳಿಂದಾಗಲಿ ಗುಣಹೊಂದಲಿಲ್ಲ, ದೇವರ ವಾಕ್ಯವು ನನ್ನನ್ನು ಬಹಳವಾಗಿ ಬಲಪಡಿಸಿತು. ದೇವರ ವಾಕ್ಯವೇ ನನ್ನನ್ನು ಸ್ವಸ್ಥಪಡಿಸಿತು. ಮತ್ತು ದೇವರ ವಾಕ್ಯವನ್ನು ನಂಬುವುದರಿಂದಲೇ ನಾನು ಪರಿಪೂರ್ಣವಾಗಿ ಗುಣಹೊಂದಿದ್ದೇನೆ.
ತುಂಬಾ ವೀಕ್ ಆದ ಪರಿಸ್ಥಿತಿಯಿಂದ ದೇವರ ವಾಕ್ಯವು ನನ್ನನ್ನು ಪರಿಪೂರ್ಣ ಗುಣಪಡಿಸಿ ಒಂದು ತಿಂಗಳಿನ ನಂತರ ಮಾತ್ರೆ ಕೂಡ ಬೇಡ ಅಂತ ಡಾಕ್ಟರ್ ಹೇಳಿದ್ದಾರೆ.
ನನಗೋಸ್ಕರ ಪ್ರಾರ್ಥಿಸಿದ ಪ್ರತಿಯೊಬ್ಬರಿಗೆ ದೇವರ ಹೆಸರಿನಲ್ಲಿ ಹೃದಯಪೂರ್ವಕವಾಗಿ ವಂದನೆಗಳನ್ನು ಸಲ್ಲಿಸುತ್ತೇನೆ. ದೇವರು ನನ್ನನ್ನು ಪರಿಪೂರ್ಣವಾಗಿ ಗುಣಪಡಿಸಿದ್ದಾರೆ.
ದೇವರ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ!!
ಆಮೆನ್!!
ಥ್ಯಾಂಕ್ಯೂ ಜೀಸಸ್ 🙏🏻🙏🏻🙏🏻
ಥ್ಯಾಂಕ್ಯೂ ಪಾಸ್ಟರ್ 🙏🏻🙏🏻🙏🏻
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory to God 🙏
ReplyDeleteGLORY GLORY GLORY to god powerful testimony god bless you sister 🙏
ReplyDelete