Testimony #710 - ನರಗಳ ಪ್ರಾಬ್ಲಮ್ ಮತ್ತು ಹೃದಯದ ಸಮಸ್ಯೆ ಇದೆ ಎಂದು ವೈದ್ಯರು ಹೇಳಿದರು...

 ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರವಾಗಲಿ 🙏🏻.

ನನ್ನ ಹೆಸರು ಬಸಪ್ಪ

 ದೇವರು ನಮ್ಮ ಕುಟುಂಬದಲ್ಲಿ ಬಹಳ ಅದ್ಭುತಗಳನ್ನು ಮಾಡಿದ್ದಾರೆ.

ನಮ್ಮ ನಾದಿನಿಯವರ  ಗರ್ಭದಲ್ಲಿ ಇರುವ ಮಗುವಿಗೆ  "ನರಗಳ ಪ್ರಾಬ್ಲಮ್ ಮತ್ತು ಹೃದಯದ ಸಮಸ್ಯೆ"  ಇದೆ ಎಂದು ವೈದ್ಯರು ಹೇಳಿದರು. ನಾವು ಪಾಸ್ಟರ್ ಹತ್ತಿರ ಪ್ರಾರ್ಥನೆ ಮಾಡಿಸಿಕೊಂಡೆವು. ಮೊನ್ನೆ ಹೋಗಿ ಮತ್ತೆ ಚೆಕ್ ಮಾಡಿಸಿದಾಗ, ಎಲ್ಲಾ ನಾರ್ಮಲ್ ಇದೆ ಎಂದು ರಿಪೋರ್ಟ್ ಬಂತು. ಅದಕ್ಕಾಗಿ ದೇವರಿಗೆ ಕೃತಜ್ಞತೆಯಿಂದ ಸ್ತೋತ್ರ ಸಲ್ಲಿಸುತ್ತೇನೆ!

ನಾನು ತರಕಾರಿ ವ್ಯಾಪಾರ ಮಾಡುತ್ತೇನೆ. ದಿನಕ್ಕೆ 2000 ರೂಪಾಯಿ ತರಕಾರಿ ತರುತ್ತೇನೆ, ಆದರೆ ದೇವರ ಕೃಪೆಯಿಂದ 4000 ರೂಪಾಯಿ ವ್ಯಾಪಾರ ಆಗುತ್ತದೆ. ನನ್ನ ಅಂಗಡಿಯಲ್ಲಿ ಗಿರಾಕಿಗಳು ಯಾವಾಗಲೂ ತುಂಬಿ ತುಳುಕುತ್ತಾರೆ. ನಮ್ಮ ಪಕ್ಕದ ಅಂಗಡಿಯಲ್ಲಿ ಗಿರಾಕಿಗಳು ಇರಲ್ಲ. ಸುಮ್ಮನೆ ಕೂತುಕೊಂಡಿರುತ್ತಾರೆ, ನಮ್ಮ ಜೀವಿತದಲ್ಲಿ ದೇವರ ಮಹಿಮೆ ಬಹಳ ಇದೆ. 🙏🏻

ಏಳು ತಿಂಗಳ ಹಿಂದೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಯೋಚಿಸುತ್ತಿದ್ದೆ. ಆದರೆ ದೇವರು ದೊಡ್ಡವರು! ಇಂದು ಬೆಳಗ್ಗೆಯಿಂದ ಸಂಜೆವರೆಗೆ ನಾನು 4–5 ಸಾವಿರ ರೂಪಾಯಿ ಲಾಭ ಮಾಡಿಕೊಂಡಿರುತ್ತೇನೆ. ದೇವರು ನನ್ನ ಜೀವಿತದಲ್ಲಿ ಅದ್ಭುತ ಮಾಡಿದ್ದಾರೆ. ಆಮೆನ್ 🙏🏻 

ನನ್ನ ಮಗನನ್ನು ಶಾಲೆಯಲ್ಲಿ ತುಂಬಾ ದಡ್ಡ ಅನ್ನುತಿದ್ದರು. 20ಕ್ಕೆ 2–3 ಮಾರ್ಕ್ಸ್ ಮಾತ್ರ ತಗೊಳ್ಳುತ್ತಿದ್ದ. ಆದರೆ ಈಗ ನನ್ನ ಜೊತೆಗೆ ಚರ್ಚ್‌ಗೆ ಬರುತ್ತಾನೆ, ವಾಕ್ಯ ಓದುತ್ತಾನೆ, ಪ್ರಾರ್ಥನೆ ಮಾಡುತ್ತಾನೆ. ಈಗ ಅವನು 20ಕ್ಕೆ 20 ಮಾರ್ಕ್ಸ್ ತಗೊಳ್ಳುತ್ತಾನೆ. ಶಾಲೆಯವರೂ ಕೂಡ ಆಶ್ಚರ್ಯ ಪಡುತ್ತಾರೆ “ಎಲ್ಲಿ ಕಲಿತುಕೊಂಡೆ, ಎಷ್ಟೊಂದು ಜಾಣ ಆಗಿದ್ದಿಯಾ ಎನ್ನುತ್ತಾರೆ ಎಂದು ಹೇಳುತ್ತಾನೆ.  ನಾನು ಕೂಡ ಅಪ್ಪನ ಜೊತೆ ಚರ್ಚಿಗೆ  ಹೋಗುತ್ತೇನೆ ಪ್ರಾರ್ಥನೆ ಮಾಡುತ್ತೇನೆ  ಎಂದು ಹೇಳುತ್ತಾನೆ. ದೇವರು ಮಾಡಿದ ಇಂಥ ದೊಡ್ಡ  ಅದ್ಭುತಕ್ಕಾಗಿ ಸ್ತೋತ್ರ 🙏🏻


 ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR BANGALORE CHURCH LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY


Comments

  1. Lord do it again and again 🙏
    Glory to God 🙏

    ReplyDelete
  2. ದೇವರ ಪರಿಶುದ ನಮಕ್ಕೆ ಕೋಟಿ ಕೋಟಿ ಸ್ತೋತ್ರ!!

    ReplyDelete
  3. GLORY to god powerful testimony Lord do it again in there business and there children's life bless the Family in Jesus mighty name i pray Amen 🙏🔥👏👏

    ReplyDelete

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)