Testimony #718 - ಆ ಸಂದೇಶವನ್ನು ನೋಡಿದಾಗ ನನಗೆ ಒಂದು ಆಶ್ಚರ್ಯ.....
ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ 🙏🏻.
ನನ್ನ ಹೆಸರು ಸುನಿತಾ
ಪ್ರತಿದಿನ ದೇವರ ವಾಕ್ಯದಿಂದ ನನಗೆ ಬಹಳ ಉತ್ತೇಜನ ಮತ್ತು ಆತ್ಮೀಯ ಬಲ ಹೆಚ್ಚಾಗಿ ಬರುತ್ತಿದೆ.
ಕಳೆದ ವಾರ ನಾನು ಆಕಸ್ಮಿಕವಾಗಿ ಫೇಸ್ಬುಕ್ನಲ್ಲಿ ಪಾಸ್ಟರ್ ಅವರ ಸಂದೇಶವನ್ನು ನೋಡಿದೆ. ಆ ಸಂದೇಶವನ್ನು ನೋಡಿದಾಗ ನನಗೆ ಒಂದು ಆಶ್ಚರ್ಯ ಮತ್ತು ಆತ್ಮೀಯ ಅನುಭವ ಸಿಕ್ಕಿತು. ಪಾಸ್ಟರ್ ಆ ವಾಕ್ಯವನ್ನು ವಿವರಿಸುವ ರೀತಿ, ಅದರಲ್ಲಿರುವ ಆತ್ಮಿಕತೆಯ ಭಾರ ನನಗೆ ಬಹಳ ಪ್ರೋತ್ಸಾಹವಾಗಿತ್ತು ಮತ್ತು ಮನಸ್ಸಿಗೆ ಸಮಾಧಾನ, ಸಂತೋಷ ಆಯಿತು.
ನಿಮ್ಮ ಫೋನ್ ನಂಬರ್ ಪರದೆ ಮೇಲೆ ಬಂತು, ನಾನು ಅದನ್ನು ನೋಟ್ ಮಾಡಿಕೊಂಡೆ. 128 ನೇ ಕೀರ್ತನೆಯನ್ನು ಆಧರಿಸಿ, ಮೂರು ಹಬ್ಬಗಳನ್ನು ಆಚರಿಸುವ ಬಗ್ಗೆ, ಅದರ ಅರ್ಥ ಮತ್ತು ಪ್ರಕಟಣೆ ಮತ್ತು ದೇವರ ಆತ್ಮದೊಂದಿಗೆ ಒಂದುಗೂಡಿ,ದೇಹದ ಮೂಲಕ ದೇವರ ಮಹಿಮೆಯನ್ನು ಹೇಗೆ ವ್ಯಕ್ತಪಡಿಸಬೇಕು ಎಂಬುದಾಗಿ ಪಾಸ್ಟರ್ ವಿವರಿಸಿದಾಗ, “ಹೌದು, ನಾವು ಇದನ್ನೇ ತಪ್ಪಿಸಿಕೊಂಡಿದ್ದೇವೆ” ಅನ್ನಿಸಿತು. ನಮಗೆ ಇದು ಸರಿಯಾಗಿ ಅರ್ಥವಾಗಿರಲಿಲ್ಲ ಎಂದು ಅರಿವಾಯಿತು.
ನಾನು ಪರ್ಸನಲ್ ವಿಷಯವಾಗಿ ಮೆಸೇಜ್ ಮಾಡಿದಾಗ, ದೇವಸೇವಕರು ತಕ್ಷಣ ಉತ್ತರಿಸಿದರು. ಅದರ ಉತ್ತರವನ್ನು ಮತ್ತು ನಾನು ಹೇಗೆ ಪ್ರಾರ್ಥನೆ ಮಾಡಬೇಕು ಎಂಬುದನ್ನು ತಿಳಿಸಿದರು.
ನಾನು ದೇವ ಸೇವಕರಿಗೆ ವಂದನೆಗಳನ್ನು ತಿಳಿಸುತ್ತೇನೆ. ಇದಕ್ಕಾಗಿ ದೇವರಿಗೆ ಸ್ತೋತ್ರ.
ಆತ್ಮೀಯ ವಿಷಯಗಳಲ್ಲಿ ನಾವು ಕೆಲವೊಮ್ಮೆ ‘ಮರಳುಗಾಡಿನಲ್ಲಿ ತಿರುಗಾಡುವಂತ ಪರಿಸ್ಥಿತಿಯಲ್ಲಿದ್ದೇವೆ . ನಮಗೆ ಜೀವ ಕೊಡುವ ವಾಕ್ಯಗಳು, ಆತ್ಮವನ್ನು ಉತ್ತೇಜಿಸುವ ಮಾರ್ಗದರ್ಶಕರು ಬೇಕಾಗುತ್ತಾರೆ, ಆ ಸಮಯದಲ್ಲಿ ನಿಮ್ಮ ಸಂಪರ್ಕ ಸಿಕ್ಕಿದ್ದು ದೇವರ ಕೃಪೆ ಎಂದು ನಂಬುತ್ತೇನೆ.
ನನ್ನ ಅಣ್ಣನ ಮಗನ ವಿಷಯದಲ್ಲಿ, ನನ್ನ ತಂಗಿ ಅವನ ಸ್ಥಿತಿ ಅಷ್ಟೇ ಎಂದು ನಿರಾಶೆಯಿಂದ ಹೇಳಿದಳು. ಆಗ ನಾನು ಅವಳಿಗೆ,
“ನಮ್ಮ ಯೇಸು ಎಷ್ಟು ಶಕ್ತಿವಂತನು! ಗವಿಯಲ್ಲಿ ವಾಸ ಮಾಡಿದ ದೆವ್ವ ಹಿಡಿದವನಿಗೆ ಯೇಸು ಬಿಡುಗಡೆ ಕೊಟ್ಟ ಹಾಗೆ, ನಮ್ಮ ಮಗನಿಗೂ ಬಿಡುಗಡೆ ಕೊಡುತ್ತಾನೆ” ಎಂದು ಹೇಳಿ ಧೈರ್ಯಪಡಿಸಿದೆ.
ಅದೇ ವಾಕ್ಯವನ್ನು ನಿನ್ನೆ ಸಿಸ್ಟರ್ ಕೂಡ ವಿವರವಾಗಿ ಹೇಳುತ್ತಿರುವುದು ಕೇಳಿ ನನಗೆ ಇನ್ನಷ್ಟು ಬಲ ಬಂತು. ನೀವು ಕೂಡ ಅದನ್ನು ವಿಶ್ಲೇಷಿಸಿ, ವಿವರಿಸಿದಾಗ ನನಗೆ ತುಂಬಾ ಬಲ ಬಂತು. ನಾನು ಅದೇ ರೀತಿಯಲ್ಲಿ ನನ್ನ ಕುಟುಂಬದವರಿಗೆ ಈ ವಾಕ್ಯ ಹಂಚಿಕೊಂಡು ಅವರನ್ನು ಧೈರ್ಯಪಡಿಸಿದೆ.
ನಾನು ಮಗನೊಂದಿಗೆ ಕೂಡ ಮಾತನಾಡಿ, “ನೀನು ಯಾವಾಗಲೂ ಪ್ರಾರ್ಥನೆ ಮಾಡಬೇಕು. ದೇವರ ಉತ್ತರಕ್ಕಾಗಿ ಕಾಯಬೇಕು. ದೇವರು ನಿನ್ನ ಹೆಜ್ಜೆಯನ್ನು ಮುನ್ನಡೆಸಲು, ನೀನು ದೇವರೊಂದಿಗೆ ಒಟ್ಟಾಗಿರಬೇಕು” ಎಂದು ಹೇಳಿದೆ.
ಅವನಿಗೆ ಕೆಲವೊಮ್ಮೆ ಸೈಕಾಲಜಿ ಸಂಬಂಧಿತ ತೊಂದರೆ ಬರುತ್ತದೆ. ಕೆಲವು ಸಲ ಟ್ರಿಗರ್ ಆಗಿ ಹೆಚ್ಚು ಮಾತನಾಡುತ್ತಾನೆ. ಯೋಚನೆ ಶಕ್ತಿ ಕಡಿಮೆಯಾಗುತ್ತದೆ. ಆದರೆ ದೇವರ ವಾಕ್ಯ ಮತ್ತು ದೇವರ ಮಾತು ಸ್ವಲ್ಪ ಮಟ್ಟಿಗೆ ಸುಧಾರಿಸಿ ಅವನಲ್ಲಿ ಪಾಸಿಟಿವ್ ಉತ್ತರ ಬಂತು, ನಾನು ಪ್ರಾರ್ಥನೆ ಮಾಡುತ್ತೇನೆ ಮತ್ತು ದೇವರಿಗೋಸ್ಕರ ಕಾಯುತ್ತೇನೆ ಅಂತ ಹೇಳಿದನು. ಇದಕ್ಕಾಗಿ ದೇವರಿಗೆ ಸ್ತೋತ್ರ.
ದೇವರು ಅವನ ಮೇಲೆ ತನ್ನ ಅಭಿಷೇಕವನ್ನು ಸುರಿಸಿ ಅವನನ್ನು ಬಲಪಡಿಸಲಿ ಎಂದು ನಾನು ಪ್ರಾರ್ಥಿಸಿದೆ.
ನಿಮ್ಮ ಮೂಲಕ ಬಂದ ದೇವರ ವಾಕ್ಯಗಳು ನೇರವಾಗಿ ನನ್ನ ಜೀವನಕ್ಕೆ ಮಾತಾಡಿದ್ದಕ್ಕಾಗಿ ದೇವರಿಗೆ ಸ್ತೋತ್ರ ಮತ್ತು ನಿಮಗೆ ಧನ್ಯವಾದಗಳು, ಪಾಸ್ಟರ್.
ದೇವರಿಗೆ ಮಹಿಮೆ ಉಂಟಾಗಲಿ🙏🏻..
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory to God 🙏
ReplyDeleteನಮ್ಮ ಆತ್ಮದ ಸಾಮರ್ಥವನ್ನು ಹೆಚ್ಚಿಸಲು ಬೇಕಾದ ವಾಕ್ಯದ ಪ್ರಕಟಣೆಗಳನ್ನು ಕೊಡುವ ಮಾರ್ಗದರ್ಶಕರು ಸಿಕ್ಕಿದ್ದಾರೆ. 🎉🎉🎉🥳🥳🥳👏🏻👏🏻👏🏻
ReplyDeleteGLORY to god 🙏
ReplyDeleteGlory to GOD!!
ReplyDelete