2025 ನವೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು - "ಪರಿಪೂರ್ಣವಾದ ಆನಂದ"

 2025 ನವೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಪರಿಪೂರ್ಣವಾದ ಆನಂದ" (Month of Complete Joy

             

ಯೇಸುವಿನ ನಾಮದಲ್ಲಿ ಓದುವ ಪ್ರತಿಯೊಬ್ಬ ಸಹೋದರ  ಮತ್ತು ಸಹೋದರಿಯರೆ ಈಗ ನೀವು ಓದುವ ವಾಕ್ಯಗಳು ಅಭಿಷೇಕ ಮಾಡಲ್ಪಟ್ಟು ಆತ್ಮವೂ ಜೀವವೂ ಆಗಿ ನಿಮ್ಮ ಜೀವಿತದಲ್ಲಿ ಕಾರ್ಯ ಮಾಡಲಿ. ನೀವು ಸದಾಕಾಲವೂ ದೇವರ ಆಶೀರ್ವಾದದಲ್ಲಿ ತುಂಬಿ ಮತ್ತು ತುಳುಕಿ ಹರಿಯುವ ರೀತಿಯಲ್ಲಿ ನಿಮ್ಮ ಜೀವನ ದೇವರ ಉದ್ದೇಶದ ಪ್ರಕಾರ ನಡೆಯಲಿ ಎಂದು ಯೇಸುವಿನ ನಾಮದಲ್ಲಿ  ಅರಿಕೆ ಮಾಡುತ್ತಿದ್ದೇನೆ!

 ಕಳೆದ 10 ತಿಂಗಳು ದೇವರು  ಪ್ರವಾದನೆ ಕೊಟ್ಟ ಪ್ರಕಾರವೇ  ನಡೆಸುತ್ತಾ ಬಂದಿದ್ದಾರೆ. ವಾಗ್ದಾನದ ಫಲವನ್ನು ತೃಪ್ತಿಯಾಗಿ ಅನುಭವಿಸುತ್ತಾ ಬರುತ್ತಿದ್ದೇವೆ. ವಿಶೇಷವಾಗಿ  ಅಕ್ಟೋಬರ್ ತಿಂಗಳಲ್ಲಿ  ಊಹಿಸುವುದಕ್ಕಿಂತಲೂ ಮತ್ತು ಯೋಚಿಸುವುದಕ್ಕಿಂತಲೂ  ಹೆಚ್ಚಾಗಿ ಅನೇಕರನ್ನು ಸಾಕ್ಷಿಯಾಗಿ ದೇವರು  ಎಬ್ಬಿಸಿರುವುದಕ್ಕಾಗಿ ದೇವರಿಗೆ ಸ್ತೋತ್ರ.

 ಅದೇ ರೀತಿಯಾಗಿ ಈ ತಿಂಗಳು "ಪರಿಪೂರ್ಣವಾದ ಆನಂದ" {The Month of  Complete Joy} ಎಂಬ ಪ್ರವಾದನೆಯನ್ನು ದೇವರು ಕೊಟ್ಟಿದ್ದಾರೆ.

 ಪ್ರವಾದನೆಯ ವಾಕ್ಯದ ಭಾಗ : 

ಧರ್ಮೋಪದೇಶಕಾಂಡ 16:15

ನಿಮ್ಮ ದೇವರಾದ ಯೆಹೋವನು ಆದುಕೊಳ್ಳುವ ಸ್ಥಳದಲ್ಲಿ ನೀವು ಏಳು ದಿನವೂ ಆ ಜಾತ್ರೆಯನ್ನು ಆಚರಿಸಬೇಕು. ನಿಮ್ಮ ವ್ಯವಸಾಯವನ್ನೂ ಬೇರೆ ಎಲ್ಲಾ ಕೆಲಸಗಳನ್ನೂ ಆತನು ಸಫಲವಾಗಿ ಮಾಡಿದ್ದರಿಂದ ನೀವು ಬಹಳ ಆನಂದದಿಂದಿರಬೇಕು.

 ಶರೀರದಲ್ಲಿ ಎಲ್ಲಾ ಕಾರ್ಯಗಳು  ಅನುಕೂಲವಾಗಿ, ಸಮಾಧಾನವಾಗಿ, ಆರೋಗ್ಯವಾಗಿ, ಕುಟುಂಬದಲ್ಲಿ ಗಂಡ ಹೆಂಡತಿ ಸಂಬಂಧ ಆರೋಗ್ಯವಾಗಿರುವಾಗ, ಮಕ್ಕಳ ಜೀವನ ಆಶೀರ್ವಾದವಾಗಿರುವಾಗ, ನಮ್ಮ ಕೆಲಸ ಆಶೀರ್ವಾದವಾಗಿ ಇರುವಾಗ, ಯಾವುದೇ ಕೊರತೆ ಇಲ್ಲದೆ ತೃಪ್ತಿಯಾಗಿರುವಾಗ ಇರುವ ಆನಂದವೇ ಪರಿಪೂರ್ಣ ಆನಂದ.

 ಆಶೀರ್ವಾದದ ವಾಕ್ಯ :

ಕೀರ್ತನೆಗಳು 128:1-6

ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಆತನ ಮಾರ್ಗಗಳಲ್ಲಿ ನಡೆಯುವವನು ಧನ್ಯನು.

ನಿನ್ನ ಕಷ್ಟಾರ್ಜಿತವನ್ನು ನೀನೇ ಅನುಭವಿಸುವಿ; ನೀನು ಧನ್ಯನು, ನಿನಗೆ ಶುಭವಿರುವದು.

ಅಂತಃಪುರದಲ್ಲಿರುವ ನಿನ್ನ ಹೆಂಡತಿಯು ಫಲಭರಿತವಾದ ದ್ರಾಕ್ಷಾಲತೆಯಂತಿರುವಳು; ನಿನ್ನ ಸಂಗಡ ಊಟದ ಮಣೆಯ ಸುತ್ತಲೂ ಕೂತುಕೊಳ್ಳುವ ನಿನ್ನ ಮಕ್ಕಳು ಎಣ್ಣೇಮರದ ಸಸಿಗಳಂತಿರುವರು.

ಇಗೋ, ಯೆಹೋವನಲ್ಲಿ ಭಯಭಕ್ತಿಯುಳ್ಳ ಪುರುಷನು ಈ ರೀತಿಯಾಗಿ ಆಶೀರ್ವಾದಹೊಂದುವನು.

ಚೀಯೋನಿನಲ್ಲಿರುವ ಯೆಹೋವನು ನಿನ್ನನ್ನು ಆಶೀರ್ವದಿಸಲಿ; ಜೀವಮಾನವೆಲ್ಲಾ ಯೆರೂಸಲೇವಿುನ ಸೌಭಾಗ್ಯವನ್ನು ನೋಡುವವನಾಗು.  ಮಕ್ಕಳ ಮಕ್ಕಳನ್ನು ಕಾಣುವವನಾಗು. ಇಸ್ರಾಯೇಲ್ಯರಿಗೆ ಶುಭವಾಗಲಿ.


 ಯಾವ ಕೊರತೆ ಇಲ್ಲದೆ ತೃಪ್ತಿಯಾಗಿ, ಸಮೃದ್ಧಿಯಾಗಿ, ಆಶೀರ್ವಾದವಾಗಿ ಅನುಭವಿಸುವ ಕಾರ್ಯಗಳನ್ನು  ಕೀರ್ತನೆ 128 ರಲ್ಲಿ ನೋಡುತ್ತೇವೆ.

 ಒಬ್ಬ ಮನುಷ್ಯ ದೇವರಲ್ಲಿ, ದೇವರ ಆತನಲ್ಲಿ ಇರುವಾಗ ಅನ್ಯೋನ್ಯತೆಯಿಂದ, ಐಕ್ಯತೆಯಿಂದ ಇದ್ದು, ಸಮಾಧಾನ ನೆಮ್ಮದಿಯಿಂದ ಇದ್ದು, ಅವನು ಮಾತ್ರವಲ್ಲದೆ ಅವನ ಸಂತತಿ ಕೂಡ ಆಶೀರ್ವಾದವಾಗಿರುತ್ತದೆ ಎಂದು ತೋರಿಸುವ ಕೀರ್ತನೆಯಾಗಿದೆ.

 ಈ ಕೀರ್ತನೆಯ ಹಿನ್ನೆಲೆಯನ್ನು ತಿಳಿದುಕೊಳ್ಳೋಣ.

 ಇಸ್ರಾಯೇಲ್ಯರು  ಬಾಬಿಲೋನಿನಿಂದ ಹಿಂತಿರುಗಿ ಯೇರುಸಲೇಮಿ ನಲ್ಲಿದ್ದಾಗ ವರ್ಷಕ್ಕೆ ಮೂರು ಹಬ್ಬಗಳನ್ನು ಆಚರಿಸುತ್ತಿದ್ದರು.

1. ಫಸ್ಕ ಹಬ್ಬ 

2. ಸುಗ್ಗಿಯ ಹಬ್ಬ 

3. ಗುಡಾರದ ಹಬ್ಬ 

 ಯಾವ ದೇಶದಲ್ಲಿ ಚದರಿ ಹೋಗಿದ್ದರೂ ಈ ಹಬ್ಬಗಳಲ್ಲಿ ಕುಟುಂಬ ಸಹಿತವಾಗಿ ದೇವರನ್ನು ಘನಪಡಿಸುವುದಕ್ಕಾಗಿ ನಡೆದುಕೊಂಡು ಬರುವ ಪ್ರಯಾಣದಲ್ಲಿ ಎಲ್ಲರೂ ಸೇರಿ ಹಾಡಿರುವ ಹಾಡು  128ನೇ ಕೀರ್ತನೆ.

 ದೇವರು ಮಾಡಿದ ಒಳ್ಳೆಯ ಕಾರ್ಯಗಳನ್ನು ನೆನೆಸಿದವರಾಗಿ, ಎಂಟು ದಿನಗಳು ಖುಷಿಯಿಂದ ಹಾಡಿ ಕೊಂಡಾಡಿ, ದೇವರನ್ನು ಆರಾಧಿಸಿ, ಹಬ್ಬಗಳನ್ನು ಆಚರಿಸುತ್ತಿದ್ದರು.

# ಈ ಹಬ್ಬಗಳ ಅರ್ಥವನ್ನು ತಿಳಿದುಕೊಳ್ಳೋಣ.

1. The Feast of Passover - ಫಸ್ಕ ಹಬ್ಬ:

 ಈ ಹಬ್ಬಕ್ಕೆ ಹಿಬ್ರೂ ಭಾಷೆಯಲ್ಲಿ ಫಸಾಕ್ ಎಂದು ಹೆಸರು.

 430 ವರ್ಷ ಐಗುಪ್ತದಲ್ಲಿ ಗುಲಾಮರಾಗಿ ಇದ್ದವರನ್ನು ದೇವರು ಬಿಡುಗಡೆ ಮಾಡಿ, ರಕ್ಷಿಸಿ, ಹೊರಗಡೆ ತಂದರು.

 ಗುಲಾಮತನದಿಂದ ಬಿಡಿಸಿ ಬಿಡುಗಡೆಯ ಜೀವಿತವನ್ನು ದೇವರು ಕೊಟ್ಟಿದ್ದರಿಂದ ಮೊದಲನೆಯ ಹಬ್ಬವನ್ನು ಆಚರಿಸುತ್ತಾರೆ.


2. The Feast of Harvest - ಸುಗ್ಗಿಯ ಹಬ್ಬ

ಹಿಬ್ರೂ ಭಾಷೆಯಲ್ಲಿ ಸೋವಾತ್ ಎಂದು ಹೆಸರು.

 ಬಿಡುಗಡೆಯ ನಂತರ ದೇವರು ಏರ್ಪಡಿಸಿ, ಕರೆದುಕೊಂಡು ಹೋದ   ಸ್ಥಳಕ್ಕೆ  ಹೋಗಿ ಅಲ್ಲಿ ಬೀಜಗಳನ್ನು ಬಿತ್ತಿ ಬೆಳೆ ಬೆಳೆದು ಮೊದಲನೆಯ ಫಲ ಸುಗ್ಗಿಗೆ ಬಂದಾಗ 50ನೇ ದಿನ, ತಾವು ಬೆಳೆದ ಬೆಳೆಯಲ್ಲಿ ಮೊದಲನೆಯ ಫಲವನ್ನು ದೇವರಿಗೆ ಕೊಟ್ಟು, ದೇವರನ್ನು  ಘನಪಡಿಸುವ ರೀತಿಯಲ್ಲಿ ತಂದು ಆಚರಿಸುವ ಹಬ್ಬ.


3. The Feast of Tabernacles - ಗುಡಾರದ ಹಬ್ಬ

 ಹಿಬ್ರೂ ಭಾಷೆಯಲ್ಲಿ ಸುಕೋತ್ ಎಂದು ಹೆಸರು. 

 ಕೊನೆಯ ಸುಗ್ಗಿಯನ್ನು  ಆಚರಿಸಲು ವರ್ಷಪೂರ್ತಿ ದೇವರು ನಮ್ಮನ್ನು ನಡೆಸಿ ಕಾಪಾಡಿದ್ದಾರೆ ಎಂದು ಕೃತಜ್ಞತೆ ಹೇಳುವ ರೀತಿಯಲ್ಲಿ ಆಚರಿಸುವ ಹಬ್ಬವೇ ಗುಡಾರದ ಹಬ್ಬ.


 ಈ ಹಬ್ಬಗಳ ಪ್ರಕಟನೆ ಏನು? ಇದು ನಮಗೆ ಹೇಗೆ ಅನ್ವಯ ಆಗುತ್ತದೆ? ಎಂದು ನೋಡಿಕೊಳ್ಳೋಣ.

 ಇಸ್ರಾಯೇಲ್ಯರನ್ನು ಐಗುಪ್ತದಿಂದ ಬಿಡುಗಡೆ ಮಾಡಿದ ಪ್ರಕಾರವೇ ಪಾಪದಲ್ಲಿ ಬಿದ್ದು, ದೇವರಿಗೂ ನಮಗೂ ಸಂಬಂಧವೇ ಇಲ್ಲದೆ ಇರುವಾಗ, ಮರಣದ ಪರಿಸ್ಥಿತಿಯಲ್ಲಿರುವಾಗ, ದೇವರು ಯೇಸುವನ್ನು ಕಳಿಸಿ, ಪಾಪದಿಂದ  ರಕ್ಷಿಸಿ, ಶುದ್ಧೀಕರಿಸಿ, ನೀತಿವಂತರನ್ನಾಗಿ ಮಾಡಿ, ಪಾಪಕ್ಕೆ ಗುಲಾಮರಾಗಿದ್ದ ನಮ್ಮನ್ನು ಕ್ರಿಸ್ತನಲ್ಲಿ ಬಿಡುಗಡೆ ಮಾಡಿ ಆಶೀರ್ವಾದದ ಜೀವಿತವನ್ನು ಅನುಭವಿಸಬೇಕು ಎಂದು ದೇವರು ಕೊಟ್ಟ ಬಿಡುಗಡೆಯೇ ನಮಗೆ ಫಸ್ಕ ಹಬ್ಬ.

ಅವರಿಗೆ ಬಿಡುಗಡೆ ಬಂದ ನಂತರ ಬೆಳೆಯನ್ನು ಬೆಳೆದು 50 ನೇಯ ದಿನದಲ್ಲಿ ಮೊದಲನೆಯ ಫಲದಿಂದ ದೇವರನ್ನು ಘನಪಡಿಸಿದರು. 

 ಅದೇ ರೀತಿ ಯೇಸುಕ್ರಿಸ್ತನ ಮರಣದ ಮೂಲಕ ಬಿಡುಗಡೆಯನ್ನು ಅನುಭವಿಸಿ, ಪಂಚಾಶತ್ತಮ  ದಿನದಲ್ಲಿ   ಪವಿತ್ರಾತ್ಮನು ಬಲವಾಗಿ ಇಳಿದನು. ಇದರ ಅರ್ಥ ಏನೆಂದರೆ ಸಾಧಾರಣ ವ್ಯಕ್ತಿಯಲ್ಲಿ ದೇವರು ಒಳಗಡೆ ಬಂದು ವಾಸಿಸುವಾಗ ಅದರ ಫಲ ಎಂಥದಾಗಿರುತ್ತದೆ ಎಂದು ಪ್ರಕಟಿಸುವುದೇ ಸುಗ್ಗಿಯ ಹಬ್ಬ.

 ದೇವರು ನಮ್ಮೊಂದಿಗೆ ಇದ್ದು, ಇದುವರೆಗೂ ನಮ್ಮನ್ನು ಆಶೀರ್ವಾದವಾಗಿ ನಡೆಸಿದ್ದಾರೆ ಎಂದು ಕೃತಜ್ಞತೆಯಿಂದ  ಸ್ತೋತ್ರ ಸಲ್ಲಿಸುವದೇ ಗುಡಾರದ ಹಬ್ಬ. 

 ಅದೇ ರೀತಿ ಇವತ್ತು ನಮಗೆ ದೇವರು ನಮ್ಮಲ್ಲಿ ವಾಸಿಸುತ್ತಿರುವುದೇ ಗುಡಾರದ ಹಬ್ಬ.

ಇವತ್ತು ಈ ಮೂರು ಹಬ್ಬಗಳಿಗೆ ಹೊಸ ಒಡಂಬಡಿಕೆಯ ಪ್ರಕಾರ ಇರುವ ಪ್ರಕಟಣೆ ಏನೆಂದರೆ..... 

1.ಇಸ್ರಾಯೇಲ್ಯರನ್ನು ದೇವರು ಬಿಡಿಸಿದ ಹಾಗೆ, ಪಾಪದಲ್ಲಿದ್ದ ನಮ್ಮನ್ನು ಬಿಡಿಸಿ, ಯೇಸು ತನ್ನ ರಕ್ತವನ್ನು ಸುರಿಸಿ, ಜೀವ ಕೊಟ್ಟು ರಕ್ಷಿಸಿದ್ದಾರೆ. ಆ ರಕ್ಷಣೆಯನ್ನು ಹೊಂದುವ ಕಾರ್ಯವೇ ಫಸ್ಕ ಹಬ್ಬ.

2. ಮೊದಲನೇ ಸುಗ್ಗಿಯನ್ನು ಆಚರಿಸುವ ರೀತಿಯಲ್ಲಿ, ನಮ್ಮ ಮೊದಲನೇ ಸುಗ್ಗಿಯು ಪವಿತ್ರಾತ್ಮನಿಂದ, ದೇವರ ಮಹಿಮೆಯಿಂದ ತುಂಬುವುದೇ ಸುಗ್ಗಿಯ ಹಬ್ಬ.

3. ಹೇಗೆ ಇಸ್ರಾಯೇಲ್ಯರು ತೃಪ್ತಿಯಾಗಿ ಅನುಭವಿಸಿ ಕೊನೆಯ ಸುಗ್ಗಿಯನ್ನು ಕೃತಜ್ಞತೆ ಸಲ್ಲಿಸುತ್ತಾ ಕೊಂಡಾಡಿದರೋ ಹಾಗೆ ನಾವು ನಮ್ಮ ಶರೀರದಲ್ಲಿ ತುಂಬಿರುವ ದೇವರ ಮಹಿಮೆಯನ್ನು ಬಲವಾಗಿ ಪ್ರಕಟಿಸುವುದೇ ಗುಡಾರದ ಹಬ್ಬ.

ಇಸ್ರಾಯೇಲ್ಯರು ದೇವರು ಮಾಡಿರುವ ಮಹಿಮೆಯಾದ ಕಾರ್ಯಗಳಿಗೆ ಕೃತಜ್ಞತೆ ಹೇಳುವ ರೀತಿಯಲ್ಲಿ  ಯೇರುಸಲೇಮಿನಲ್ಲಿ ಇರುವ ಚಿಯೋನ್  ಪರ್ವತದ ಕಡೆಗೆ ಪ್ರಯಾಣ ಮಾಡುತ್ತಾ ಈ ಕೀರ್ತನೆ 128 ನ್ನು ಹಾಡಿಕೊಂಡು ಹೋದರು. 

ಇಂದು, 3 ಹಬ್ಬಗಳು ಪ್ರತಿನಿಧಿಸುತ್ತಿರುವ ಕಾರ್ಯ

"ರಕ್ಷಣೆ ಹೊಂದುವುದು -> ಪವಿತ್ರತ್ಮಾದಿಂದ ತುಂಬುವುದು -> ದೇವರನ್ನು ಮಹಿಮೆ ಪಡಿಸುವುದು"

ಇವತ್ತು ನಮಗೆ ಕೀರ್ತನೆಗಳು 128:1-6 ಇದರ ಪ್ರಕಟಣೆ ಏನು ಎಂದು ನೋಡೋಣ. 

ಕೀರ್ತನೆಗಳು 128:1-6

ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಆತನ ಮಾರ್ಗಗಳಲ್ಲಿ ನಡೆಯುವವನು ಧನ್ಯನು.

ನಿನ್ನ ಕಷ್ಟಾರ್ಜಿತವನ್ನು ನೀನೇ ಅನುಭವಿಸುವಿ; ನೀನು ಧನ್ಯನು, ನಿನಗೆ ಶುಭವಿರುವದು.

ಅಂತಃಪುರದಲ್ಲಿರುವ ನಿನ್ನ ಹೆಂಡತಿಯು ಫಲಭರಿತವಾದ ದ್ರಾಕ್ಷಾಲತೆಯಂತಿರುವಳು;

ನಿನ್ನ ಸಂಗಡ ಊಟದ ಮಣೆಯ ಸುತ್ತಲೂ ಕೂತುಕೊಳ್ಳುವ ನಿನ್ನ ಮಕ್ಕಳು ಎಣ್ಣೇಮರದ ಸಸಿಗಳಂತಿರುವರು.

ಇಗೋ, ಯೆಹೋವನಲ್ಲಿ ಭಯಭಕ್ತಿಯುಳ್ಳ ಪುರುಷನು ಈ ರೀತಿಯಾಗಿ ಆಶೀರ್ವಾದಹೊಂದುವನು.

ಚೀಯೋನಿನಲ್ಲಿರುವ ಯೆಹೋವನು ನಿನ್ನನ್ನು ಆಶೀರ್ವದಿಸಲಿ;

ಜೀವಮಾನವೆಲ್ಲಾ ಯೆರೂಸಲೇವಿುನ ಸೌಭಾಗ್ಯವನ್ನು ನೋಡುವವನಾಗು. ಮಕ್ಕಳ ಮಕ್ಕಳನ್ನು ಕಾಣುವವನಾಗು. ಇಸ್ರಾಯೇಲ್ಯರಿಗೆ ಶುಭವಾಗಲಿ.

 ಇದು ಪವಿತ್ರಾತ್ಮನೇ ನಡೆಸಿ, ದೇವರಿಗೆ ವಿಧೇಯನಾಗಿ ನಡೆಸುವ ವಿಷಯ.

 "ವಾಕ್ಯವು ಆತ್ಮವಾಗಿ ಒಂದಾಗುವಾಗ, ಸರಿಯಾದ ಹೃದಯ ಉಂಟಾಗುತ್ತದೆ, ಸರಿಯಾದ ಮಾರ್ಗದಲ್ಲಿ ನಡೆಸುತ್ತದೆ, ಸರಿಯಾದ ಕಾರ್ಯಗಳು ಮತ್ತು ಆಶೀರ್ವಾದಗಳು ಶರೀರದಲ್ಲಿ ಪ್ರಕಟವಾಗುತ್ತವೆ. "

ಹೃದಯ ಸರಿಯಾಗಿ, ದೇವರಿಗೆ ಮೆಚ್ಚಿಕೆಯಾಗಿರುವ ರೀತಿಯಲ್ಲಿ ಜೀವನ ಇರುವುದು. 

 ಪವಿತ್ರಾತ್ಮನ ಪ್ರೇರೇಪಣೆಯಿಂದ ಕೆಲಸ ಮಾಡುವಾಗ ಕಷ್ಟ, ನಷ್ಟ, ನೋವು ಇಲ್ಲದೆ, ಆಶೀರ್ವಾದದ ಜೀವಿತವನ್ನು ಹೊಂದಿರುವನು.

 ದೇವರನ್ನು ಎಷ್ಟು ಹೆಚ್ಚಾಗಿ ಅನುಭವಿಸುತ್ತೇವೋ ಅಷ್ಟು ದೇವರ ಮಹಿಮೆ ಹೊರಗಡೆ ಪ್ರಕಟವಾಗುತ್ತದೆ.

 ದ್ರಾಕ್ಷಿ ಬಳ್ಳಿ, ಆಲಿವ್ ಎಣ್ಣೆ ಮರ ಒಟ್ಟಿಗೆ ಇರುತ್ತವೆ. ಯಾಕೆಂದರೆ ಇವೆರಡೂ ಒಂದೇ ಸೀಸನ್ ನಲ್ಲಿ, ಒಂದೇ ವಾತಾವರಣದಲ್ಲಿ  ಬೆಳೆಯುತ್ತವೆ.

 ದ್ರಾಕ್ಷಿ ಬಳ್ಳಿ ಚೆನ್ನಾಗಿ ಬೆಳೆಯಲು ಆಲಿವ್ ಮರದ ಸಹಾಯ ಬೇಕು. 

 ಒಂದು ಕುಟುಂಬದಲ್ಲಿ ಗಂಡ - ಹೆಂಡತಿ ಮಕ್ಕಳು ಸಮಾಧಾನದಿಂದ, ಶಾಂತಿಯಿಂದ, ಪ್ರೀತಿಯಿಂದ ಮತ್ತು ಅನ್ಯೋನ್ಯತೆಯಿಂದ ಇರುವಾಗ ಕುಟುಂಬದ ಜೀವನ ಆಶೀರ್ವಾದವಾಗಿರುತ್ತದೆ.    

 ಯೇಸು ಕ್ರಿಸ್ತನೇ ದ್ರಾಕ್ಷಿಯ ಬಳ್ಳಿ, ನಮಗೆ ಬೇಕಾಗಿರುವ ಆನಂದ, ಪರಿಪೂರ್ಣತೆ, ಫಲಭರಿತವಾಗಿರುವ ಕಾರ್ಯ ಯೇಸುವೇ.

 ಎಣ್ಣೆ ಮರ ಎಂದರೆ ಪವಿತ್ರಾತ್ಮನ ಅಭಿಷೇಕ. ಎಣ್ಣೆ ಮರ ನೆರಳಿನಂತೆ ದ್ರಾಕ್ಷಿಯ ಬಳ್ಳಿಯನ್ನು  ಅಂಟಿಕೊಂಡಿರುವಾಗಲೇ ಅದು ಫಲ ಕೊಡಲು ಸಾಧ್ಯವಾಗುತ್ತದೆ. 

ಅದರಂತೆಯೇ ನಮ್ಮ ಶರೀರ ಪವಿತ್ರಾತ್ಮನಿಂದ ತುಂಬಿರುವಾಗ ಮಾತ್ರವೇ ಪವಿತ್ರಾತ್ಮನ ಫಲಗಳನ್ನು  ನಮ್ಮ ಶರೀರದಲ್ಲಿ ಪ್ರಕಟಿಸಲು ಸಾಧ್ಯವಾಗುತ್ತದೆ.

 ಯಾವ ಸಭೆ ದ್ರಾಕ್ಷಿಯ ಮರ ಎಂಬ ಯೇಸುವಿನಲ್ಲಿದೆಯೋ, ಅಂತ ಸಭೆ ಎಣ್ಣೆ ಮರ ಎಂಬ ಪವಿತ್ರಾತ್ಮನ ಅಭಿಷೇಕವನ್ನು ಹೊಂದಿ, ಊಟದ ಮನೆ ಎನ್ನುವ ಅನ್ಯೋನ್ಯತೆ, ಐಕ್ಯತೆಯಿಂದ ಸೇರಿ ಪ್ರಾರ್ಥಿಸುವಾಗ ದೇವರ  ಮಹಿಮೆಯನ್ನು ಬಲವಾಗಿ ಪ್ರಕಟಿಸುತ್ತದೆ.

 ದೇವರು ಚಿಯೋನ್ ಬೆಟ್ಟದಲ್ಲಿ  ವಾಸಿಸುತ್ತಿರುವದರಿಂದ ಅವರ ಹತ್ತಿರ ಇರುವ ಎಲ್ಲಾ ಆಶೀರ್ವಾದ ಅವರ ಮಕ್ಕಳದು. ಯೇಸು ಕ್ರಿಸ್ತನಲ್ಲಿರುವ ಪ್ರತಿಯೊಬ್ಬರು ಅವರಲ್ಲಿರುವ  ಆಶೀರ್ವಾದಗಳನ್ನು ಅನುಭವಿಸುವವರಾಗಿದ್ದೇವೆ. ಅಂಥವರಿಗೆ ಮಕ್ಕಳ ಮಕ್ಕಳನ್ನು ನೋಡುವಷ್ಟು ದೀರ್ಘಾಯುಷ್ಯವಿರುವುದು, ಇದೇ ಪರಿಪೂರ್ಣವಾದ ಆನಂದ.

 ಪ್ರವಾದನಾತ್ಮಕ ಘೋಷಣೆ :

 ನಾನು ಕ್ರಿಸ್ತನಲ್ಲಿ ಆಶೀರ್ವದಿಸಲ್ಪಟ್ಟಿದ್ದೇನೆ. ನನ್ನ ಸ್ಥಾನ ಕ್ರಿಸ್ತನಲ್ಲಿರುವುದರಿಂದ ದೇವರ ಆಶೀರ್ವಾದವು ನನ್ನ ತಲೆಯ ಮೇಲೆ ಇದೆ. ನನ್ನ ಮನೆಯ ಸುತ್ತಲೂ ಇದೆ. ನಾನು ನಡೆಯುವ ದಾರಿಗಳಲ್ಲಿ ಆತನ ಪ್ರಸನ್ನತೆ ನನ್ನ ಮುಂದೆ ಹೋಗುತ್ತದೆ. ನಾನು ಕೈಯಿಟ್ಟು ಮಾಡುವ ಎಲ್ಲಾ ಕಾರ್ಯಗಳು ಸಫಲವಾಗುವವು. ನಾನು ಕೈಯಿಟ್ಟು ಮಾಡುವ ಕಾರ್ಯಗಳಲ್ಲಿ ಸಮಾಧಾನವನ್ನು ಅನುಭವಿಸುತ್ತೇನೆ. ನಾನು ದುಡಿದು, ಕಷ್ಟಪಟ್ಟು ಫಲವನ್ನು ತಿನ್ನುವುದಿಲ್ಲ, ನಾನು ದೇವರಲ್ಲಿದ್ದು, ಆತನ ಉದ್ದೇಶದ ಪ್ರಕಾರ ಅಲೌಕಿಕವಾಗಿ,  ಮಿತಿ ಇಲ್ಲದ, ಅಳತೆ ಮಾಡಲು ಆಗದಂತ ಆಶೀರ್ವಾದವನ್ನು ಅನುಭವಿಸುತ್ತೇನೆ.

 ನನ್ನ ಕುಟುಂಬ ಫಲ ಭರಿತವಾಗುತ್ತದೆ. ನನ್ನ ಮನೆಯಲ್ಲಿರುವ ದ್ರಾಕ್ಷಾಮರ, ಎಣ್ಣೆಯ ಮರ, ನನ್ನ ಹೆಂಡತಿ ಮಕ್ಕಳು, ನನ್ನ ಕುಟುಂಬದಲ್ಲಿ ಯಾವಾಗಲೂ ಸಮಾಧಾನ, ಸಂತೋಷ, ಶಾಂತಿ, ಪ್ರೀತಿ, ಅನ್ಯೋನ್ಯತೆ, ಐಕ್ಯತೆ ಮತ್ತು ಆನಂದ ಉಕ್ಕಿ ಹರಿಯುವುದು ಎಂದು ಯೇಸುವಿನ ನಾಮದಲ್ಲಿ ಅರಿಕೆ ಮಾಡುತ್ತೇನೆ.

 ಚಿಯೋನ್ ದೇವರು ವಾಸಿಸುವ ಸ್ಥಳ, ಅದರ ಪ್ರಸನ್ನತೆಯಲ್ಲಿಯೇ ನಾನು ಇರುತ್ತೇನೆ. ಆತನ ಪ್ರಸನ್ನತೆಯಿಂದಲೇ ನಾನು ಆಶೀರ್ವಾದಗಳನ್ನು ಹೊಂದಿಕೊಳ್ಳುವುದು. ಆತನ ಪ್ರಸನ್ನತೆಯಿಂದಲೇ ನನ್ನ ಕುಟುಂಬದಲ್ಲಿ ನನ್ನ ದೇಶದಲ್ಲಿ ದೇವರ ಆಶೀರ್ವಾದಗಳನ್ನು ನೋಡುತ್ತೇನೆ ಮತ್ತು ಅನುಭವಿಸುತ್ತೇನೆ ಎಂದು ಯೇಸುವಿನ ನಾಮದಲ್ಲಿ ಅರಿಕೆ ಮಾಡುತ್ತೇನೆ.

 ನಾನು ದೇವರಲ್ಲಿದ್ದು ಅನುಭವಿಸಿದ ಪರಿಪೂರ್ಣವಾದ ಆನಂದ, ಆಶೀರ್ವಾದ, ಸಮಾಧಾನವನ್ನು ನಾನು ಮಾತ್ರವಲ್ಲದೆ ನನ್ನ ಮಕ್ಕಳು ಅನುಭವಿಸುತ್ತಾರೆ. ಮಕ್ಕಳ ಮಕ್ಕಳು ಅನುಭವಿಸುವ ಆಶೀರ್ವಾದವನ್ನು ಹೊಂದಿದ್ದೇವೆ  ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ. ಸಂತತಿ ಸಂತತಿಗಳು ಆಶೀರ್ವಾದವಾಗಿರುವುದು. ನಾನು ದೇವರಲ್ಲಿ ಅನುಭವಿಸಿದ ಸಮಾಧಾನ ನನ್ನ ಮಕ್ಕಳು ಮತ್ತು ಮಕ್ಕಳ ಮಕ್ಕಳು ಅನುಭವಿಸುತ್ತಾರೆ. ಸಂತತಿ ಸಂತತಿಯಾಗಿ ಪರಿಪೂರ್ಣ ಆನಂದದಲ್ಲಿ ಇರುತ್ತೇವೆ. ಪರಿಪೂರ್ಣ ಸಮಾಧಾನದಲ್ಲಿ ಇರುತ್ತೇವೆ. ಪರಿಪೂರ್ಣ ಆರೋಗ್ಯದಲ್ಲಿ ಇರುತ್ತೇವೆ. ಪರಿಪೂರ್ಣ ಐಶ್ವರ್ಯದಲ್ಲಿ ಇರುತ್ತೇವೆ.

 ದೇವರು ಕೊಟ್ಟಿರುವ ಪರಿಪೂರ್ಣತೆಯನ್ನು ಒಂದೂ ಮಿಸ್ ಮಾಡದೆ, ಒಂದೂ ತಡೆಯಾಗದೆ ಆತನನ್ನು ತೃಪ್ತಿಯಾಗಿ ಸಂಪೂರ್ಣವಾಗಿ ಅನುಭವಿಸುತ್ತೇನೆ ಎಂದು ಡಿಕ್ಲೇರ್ ಮಾಡುತ್ತೇನೆ.

 ಈ ನವೆಂಬರ್ ತಿಂಗಳಿನಲ್ಲಿ ಒಂದೊಂದು ದಿನವೂ ಕೊಂಡಾಡಲು, ಆಚರಿಸಲು ಒಂದೊಂದು ಕಾರಣ ಇರುತ್ತದೆ. ಫಸ್ಕ ಹಬ್ಬ, ಮೊದಲನೆಯ ಸುಗ್ಗಿಯ ಹಬ್ಬ, ಕೊನೆಯ ಗುಡಾರ  ಹಬ್ಬವನ್ನು ಆಚರಿಸುತ್ತೀರಿ. ಒಂದೊಂದು ದಿನವೂ ನಿಮ್ಮ ಜೀವಿತದಲ್ಲಿ ಕೀರ್ತನೆ 128ರ ವಾಕ್ಯಗಳು ಮಾಂಸವಾಗಿ ಪ್ರಕಟವಾಗುತ್ತವೆ. ವಾಕ್ಯದ ಫಲವನ್ನು ತೃಪ್ತಿಯಾಗಿ ಅನುಭವಿಸುತ್ತಾ ಇರುತ್ತೀರಿ. ಆ ವಾಕ್ಯವು ಜೀವವಾಗಿ ನಿಮ್ಮಲ್ಲಿ ಕಾರ್ಯ ಮಾಡುತ್ತದೆ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.

ಈ ಸಂದೇಶವನ್ನು ಪೂರ್ತಿಯಾಗಿ ನೋಡಲು ಕೆಳಗಿನ ಲಿಂಕ್ ಮೇಲೆ  ಒತ್ತಿ.

Prophetic Word for Month Nov-2025


ಫಾಲೋ ಮಾಡಿ, ಲೈಕ್ ಮಾಡಿ, ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR THE LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY


Comments

  1. Yes Amen I received it in my spirit in the mighty name of Jesus name Amen 🔥🔥🔥

    ReplyDelete
  2. GLORY GLORY GLORY to god i yes Lord i agree and receive it in my spirit in the mighty Jesus Christ name Amen Amen Amen 🔥👏💯❤️🙏🥳🥳

    ReplyDelete

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)