Posts

Showing posts from February, 2026

Testimony # 739 -- ನೀವು ಕಳಿಸಿಕೊಟ್ಟ ಸಂದೇಶ ಎಷ್ಟು ಬಾರಿ ನೋಡಿದೆ ಅಂದರೆ...

Image
ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻. ನನ್ನ ಹೆಸರು  ಸುಜಾತ .. ನಮ್ಮ ಊರು   ಬೆಂಗಳೂರು .    Praise the lord pastor 🙏🏼  ನನ್ನ ಮಗನಿಗೆ ಜ್ವರ ಇದೆ ಅಂತ ನಿಮಗೆ ಹೇಳಿದ್ದೆ ಪಾಸ್ಟರ್.  ಮಕ್ಕಳಿಗೆ ಜ್ವರ ಬಂದರೆ ಏನು ಹುಷಾರಿಲ್ಲ,ಅಂದರೆ ನಾನು ಫಸ್ಟ್ ಅಳುವುದಕ್ಕೆ ಶುರು ಮಾಡುತ್ತಿದ್ದೆ.  ಆದರೆ ನಿನ್ನೆ ಫಸ್ಟ್ ನನ್ನ  ಮೈಂಡಿಗೆ ಬಂದಿದ್ದು ನಿಮಗೆ ಹೇಳಬೇಕು ಅಂತ.  ನಿಮಗೆ ಹೇಳಿದ ನಂತರ ನೀವು ಕಳಿಸಿಕೊಟ್ಟ ವಿಡಿಯೋ ಕೇಳಿಸಿಕೊಂಡ ಮೇಲೆ ನಾನು ಅಳಲಿಲ್ಲ ತುಂಬಾ ಧೈರ್ಯವಾಗಿ ಇದ್ದೆ, ನನ್ನ ಮಗ ಹಾಸ್ಪಿಟಲ್ ಗೆ  ಹೋದಮೇಲೆ ಡಾಕ್ಟರ್ ಅಡ್ಮಿಟ್ ಆಗಬೇಕು ಅಂತ ಹೇಳಿದರು. ಅದಕ್ಕೆ ನಾನು ಹೋದೆ ನನ್ನ ಮಗ ಮಲಗಿದ್ದನು. ಡಾಕ್ಟರ್ ಹತ್ತಿರ ಕೇಳಿದೆ ಏನಾಗಿದೆ ಅಂತ ಅದಕ್ಕೆ ತುಂಬಾ ಜ್ವರ ಇದೆ.  ಹೀಗೆ ಇದ್ದರೆ ಅಡ್ಮಿಟ್ ಮಾಡಬೇಕು ಅಂದರು.  ಅವಾಗ ನಾನು ಮನಸ್ಸಿನಲ್ಲಿ ನಮ್ಮ ದೇವರ ಕಾರ್ಯ ಸ್ಟಾರ್ಟ್ ಆಗಿದೆ ಅಂತ ನನಗೆ ಗೊತ್ತಾಗಿತ್ತು. ನಾನು ಆತ್ಮದಲ್ಲಿ ಸಂತೋಷಪಟ್ಟು ತುಂಬಾ ಆನಂದದಿಂದ ಇಲ್ಲಿ ನನ್ನ ಮಗನ ಹೃದಯದಲ್ಲಿ ದೇವರ ಕಾರ್ಯ ನಡೆಯುತ್ತಾ ಇದೆ. ಅದಕ್ಕೆ ಡಾಕ್ಟರ್ ಗೆ ಹೇಳಿದೆ.  ನಾನು ಮನೆಯಲ್ಲಿ ನೋಡಿಕೊಳ್ಳುತ್ತೇನೆ. ಅಡ್ಮಿಟ್ ಮಾಡೋದು ಬೇಡ ಅಂತ ಮನೆಗೆ ಕರೆದುಕೊಂಡು ಬಂದೆ.  ನೀವು ಕಳಿಸಿಕೊಟ್ಟ  ಸಂದೇಶ  ಎಷ್ಟು ಬಾರಿ ನೋಡಿದೆ ಅಂದರೆ ಅ...

Testimony # 738 -- ಅಪ್ಲಿಕೇಶನ್ ಫಾರ್ಮ್ ಫಿಲ್ ಮಾಡುವ ಟೈಮಲ್ಲಿ...

Image
   ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻. ನನ್ನ ಹೆಸರು    ಕಿರಣ್.  ನಮ್ಮ ಊರು ಬೆಂಗಳೂರು.  ಫೆಬ್ರುವರಿ ಸೆಕೆಂಡ್ ಗೆ  ರಿಸಲ್ಟ್ ಬಂದಿತ್ತು. ಇಂಡಿಯನ್ ಕೋಚ್ ಗೆ ಸೇರಿದೆ. ಅದರಲ್ಲೂ ನಾನು ಸೆಲೆಕ್ಟ್ ಆದೆ ದೇವರ ಕೃಪೆಯಿಂದ.   ಡಾಕ್ಟರ್  ವೆರಿಫಿಕೇಶನ್ ಮತ್ತು ಮೆಡಿಕಲ್ ಮಾತ್ರ ಬರಬೇಕಿತ್ತು.  ಅಪ್ಲಿಕೇಶನ್ ಫಾರ್ಮ್ ಫಿಲ್ ಮಾಡುವ ಟೈಮಲ್ಲಿ ನನ್ನ ಕಡೆ ಡೋಮಿಸ ಸರ್ಟಿಫಿಕೇಟ್ ಇರಲಿಲ್ಲ. ಅದನ್ನು ಫಿಲ್ ಮಾಡುವುದಕ್ಕೆ ಇಂಪಾರ್ಟೆಂಟ್ ಇತ್ತು . ನಮ್ಮ ರಾಜು ಅಣ್ಣ ಅವರ ಫ್ರೆಂಡ್ ಡೋಮಿಸ  ಸರ್ಟಿಫಿಕೇಟ್ ಮಾಡುವುದಕ್ಕೆ 15 ದಿವಸ ಆಯಿತು. ಅಷ್ಟರೊಳಗೆ ಅದನ್ನು ಮಾಡುವ ಡೇಟ್ ಕೂಡ ಮುಗಿದು ಹೋಯಿತು. ನೆಕ್ಸ್ಟ್ ಮಾಡಿದರೆ ಆಯ್ತು ಅಂತ ಬಿಟ್ಟಾಗ, ನೆಕ್ಸ್ಟ್ ಡೇ ಇನ್ನು ಟೈಮ್ ಇದೆ ಅಂತ ನೋಟಿಫಿಕೇಶನ್ ಬಂತು.  ಎಕ್ಸಾಮ್ ಬರೆಯೋದಕ್ಕೆ  ಅಡ್ಮಿಟ್  ಕಾರ್ಡ್ ಕೂಡ ಬಂತು.  ರಿಟರ್ನ್ ಎಕ್ಸಾಮ್ ಕ್ಲಿಯರ್ ಆಯಿತು. ಫಿಸಿಕಲ್,  ಮೆಡಿಕಲ್, ಗವರ್ನಮೆಂಟ್ ಎಕ್ಸಾಮ್ ಎಲ್ಲಾ ಕ್ಲಿಯರ್ ಆಗತಿತ್ತು. ಆದರೆ ಫಿಸಿಕಲ್, ಮೆಡಿಕಲ್ ಔಟ್ ಆಗುತ್ತಾ ಇದ್ದೆ. ಲಾಸ್ಟ್ ಟೈಮ್ ಆರ್ಮಿದಲ್ಲಿ ಹಾಗೆ ಆಗಿತ್ತು.   ಪಾಸ್ಟರ್ ಕಡೆಯಿಂದ ಪ್ರೇಯರ್ ಮಾಡಿಸಿಕೊಂಡು ಹೋಗಿದ್ದೆ. ಫಿಸಿಕಲ್ ರನ್ನಿಂಗ್ ದಲ್ಲಿ ಟಾಪ್ ಟೆನ್ ಬಂದೆ. ಮೆಡಿಕಲ್ ದಲ್ಲಿ ನಾನು ಫಿಟ್ ಇ...

Testimony # 737 -- ಈಗ ಒಂದು ವರ್ಷದಿಂದ ತುಂಬಾ ಮರಣದ ಭಯ ಆಗುತ್ತಿತ್ತು...

Image
  ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻. ನನ್ನ ಹೆಸರು   ಸರೋಜಾ.  ನಮ್ಮ ಊರು ಚಾಮರಾಜನಗರ  ನಾನು 5 ವರ್ಷದಿಂದ ಚರ್ಚ್ ಗೆ ಹೋಗುತ್ತಿದ್ದೆ, ದೇವರು ನಮಗೆ ಒಳ್ಳೆಯದು ಮಾಡಿದ್ದಾರೆ. ಆದರೆ ನನಗೆ ದೇವರ ಬಗ್ಗೆ ಅಷ್ಟು ತಿಳಿದಿರಲಿಲ್ಲ.   ಈಗ ಒಂದು ವರ್ಷದಿಂದ ತುಂಬಾ ಮರಣದ ಭಯ ಆಗುತ್ತಿತ್ತು. ಒಬ್ಬಳೇ ಕೆಲಸಕ್ಕೆ ಹೋಗುತ್ತಿರಲಿಲ್ಲ, ಅಡುಗೆ ಕೂಡ ಮಾಡುತ್ತಿರಲಿಲ್ಲ, ಯಾವಾಗ ನನಗೆ ಏನು ಆಗುತ್ತದೆ, ನಾನು ಸಾಯುತ್ತೇನೆ ಅಂತ ಪಕ್ಕದ ಮನೆಗೂ ಹೋಗದೆ ಮನೆಯಲ್ಲಿ ಇರುತ್ತಿದ್ದೆ. ಗಂಡ, ಮಕ್ಕಳ ಹತ್ತಿರ ಪ್ರೀತಿಯಿಂದ ಮಾತನಾಡುತ್ತಿರಲಿಲ್ಲ. ಯಾವಾಗಲೂ ಮರಣದ ಭಯ ನನ್ನ ಕಾಡುತ್ತಿತ್ತು. ಎಲ್ಲೆಲ್ಲಿ ಚರ್ಚ್ ಇದೆಯೋ ಅಲ್ಲೆಲ್ಲ ಹೋಗಿ ಉಪವಾಸ ಪ್ರಾರ್ಥನೆ ಕೂಡ ಮಾಡಿದರು ನನಗೆ ಪೂರ್ಣ ಬಿಡುಗಡೆ ಆಗಲಿಲ್ಲ.  ಪಾಸ್ಟರ್  ಯೂಟ್ಯೂಬ್ ನಲ್ಲಿ ನಿಮ್ಮ ಮೆಸೇಜ್ ನೋಡಿ ಪ್ರೇಯರ್ ಗೆ ಅಟೆಂಡ್ ಆದೆ. ಆಗಲೂ ಕೂಡ ನನಗೆ ಸಮಾಧಾನವಾಗಲಿಲ್ಲ. ಅದಕ್ಕೆ ನಾನು ನನ್ನ ಮಕ್ಕಳು," ನಾವು ಮುಂಚೆ ಅನ್ಯ ಜನರಂತೆ ಇದ್ದಾಗ ಚೆನ್ನಾಗಿ ಇದ್ದೇವೆ. ಇಲ್ಲಿ ಬಂದಾಗ ಹೀಗೆಲ್ಲಾ ಆಗಿದೆ, ಇದು ಬೇಡ" ಅಂತ ಮಾತಾಡುತ್ತಾ ಇರುವಾಗ, ಅದೇ ಸಮಯಕ್ಕೆ ಭರತ್ ಬ್ರದರ್ ಫೋನ್ ಮಾಡಿ, ಯಾಕೆ ಸಿಸ್ಟರ್ ಪ್ರೇಯರ್ ಗೆ ಜಾಯಿನ್ ಆಗುತ್ತಾ ಇಲ್ಲ ಅಂದರು. ಮತ್ತೆ ದೇವರ ಬಗ್ಗೆ ಹೇಳಿದರು. ದೇವರು ನಿಮ್ಮನ್ನು ಕೈಬಿಡುವುದಿಲ್ಲ  ನಿಮಗೆ ಒಳ್ಳೆಯ...

Testimony # 736 -- ಒಂದು ಆಟೋ ಬಂದು ಹಿಂದೆಯಿಂದ ನನಗೆ ಸ್ಪೀಡಾಗಿ ತೆರೆಚಿಕೊಂಡು ಹೋಗಿಬಿಟ್ಟ...

Image
   ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻. ನನ್ನ ಹೆಸರು  ಭಾಗ್ಯಲಕ್ಷ್ಮಿ. ನಮ್ಮ ಊರು ಬೆಂಗಳೂರು.  ಲಾಸ್ಟ್ ವೀಕ್ ನಾನು ತರಕಾರಿ ತರಬೇಕು ಅಂತ ಅನ್ಯ ಭಾಷೆಯಲ್ಲಿ ಮಾತಾಡುತ್ತಾ ರೋಡಿನಲ್ಲಿ ದಾಟುತ್ತಾ ಇದ್ದೆ. ಅಲ್ಲಿ ಆಗ ಯಾವ ಆಟೋಗಳು  ಇರಲಿಲ್ಲ. ಆಮೇಲೆ ಎದುರುಗಡೆ ಒಂದು ಬೈಕ್ ಫಾಸ್ಟ್ ಆಗಿ ಬಂತು. ನಾನು ಅನ್ಯ ಭಾಷೆ ಮಾತಾಡುತ್ತಾ ಇದ್ದೆ. ಅವಾಗ ಒಂದು ಆಟೋ ಬಂದು ಹಿಂದೆಯಿಂದ ನನಗೆ ಸ್ಪೀಡಾಗಿ ತೆರೆಚಿಕೊಂಡು ಹೋಗಿಬಿಟ್ಟ. ಆದರೆ ನನ್ನ ಯಾರೋ ಕೈ ಹಿಡಿದು ಸೈಡಿನಲ್ಲಿ ನಿಲ್ಲಿಸಿದ ಹಾಗೆ ಆಯಿತು. ಕಾಲಿಗೆ ಟಚ್ ಆಗಿ ಸೌಂಡ್ ಬಂದಿದ್ದು ಅಷ್ಟೇ ಗೊತ್ತಾಗಿದ್ದು, ಆದರೆ ನಾನು ಮಾತ್ರ ಪುಟ್ ಪಾತ್ ಅಲ್ಲಿ ನಿಂತಿದ್ದೆ.  ಆದರೆ ನನಗೆ ಸ್ವಲ್ಪ ಗಾಯ ಆಗಿದ್ದು ಅಷ್ಟೇ , ಮತ್ತೆ ಏನೇನು ಆಗಿಲ್ಲ ಆಟೋ ಬಂದ ಸ್ಪೀಡಿಗೆ ನನ್ನ ಕಾಲು ಹೋಗಬೇಕಿತ್ತು.   ಆದರೆ ದೇವರು ಎಲ್ಲಾ ಕೇಡಿನಿಂದ ನನ್ನನ್ನು ತಪ್ಪಿಸಿದರು.  ದೇವರ ನಾಮಕ್ಕೆ ಮಹಿಮೆ ಉಂಟಾಗಲಿ. 🙏🏼  🙏🏼  🙏🏼 ನಮ್ಮ ಸಂಬಂಧಿಕರ ಮಗಳಿಗೆ ಟೈಫಾಯಿಡ್ ಜ್ವರ ಬಂದಿತ್ತು. ಅವಳು ಹಾಸ್ಟೆಲ್ ನಲ್ಲಿ ಇದ್ದು ಪಿಯುಸಿ ಓದುತ್ತಿದ್ದಾಳೆ. ಅಲ್ಲಿಂದ ಅವಳನ್ನು ಕರೆದುಕೊಂಡು ಪದೇ ಪದೇ ಹಾಸ್ಪಿಟಲ್ ಗೆ ಹೋಗುತ್ತಿದ್ದರು. ಆದರೂ ಅವಳಿಗೆ ವಾಸಿಯಾಗಲಿಲ್ಲ. ಬ್ಲಡ್ ಟೆಸ್ಟ್ ಮಾಡಿಸಿದರು ಕಡಿಮೆಯಾಗಲಿಲ್ಲ ಅಂದರು. ಆದರೆ ನಾನು ಡಿಕ್ಲೇರ್  ಮಾಡಿ...

Testimony # 735 -- ನಾನು ಬದುಕಲೇಬಾರದು ಅಂತ ಯೋಚನೆ ಮಾಡಿದ್ದರು...

Image
   ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻. ನನ್ನ ಹೆಸರು  ಮಂಜುಳಾ. ನಮ್ಮ ಊರು ಬೆಳಗಾವಿ  .  ದೇವರು ನನ್ನನ್ನು ಅದ್ಭುತವಾಗಿ ನಡೆಸುತ್ತಿದ್ದಾರೆ. ನಾವು ಇದ್ದ ಸ್ಥಿತಿಯಲ್ಲಿ ಇರದೆ ಇನ್ನೂ ಹೆಚ್ಚಾಗುತ್ತಲೇ ಇರಬೇಕು ಅನ್ನುವುದು ದೇವರ ಚಿತ್ತ.   ನಾವು ದೇವರ ರಾಜ್ಯಕ್ಕಾಗಿ ಬಿತ್ತುವುದು, ದಶಮಾಂಶ ಕೊಡುವುದು ಅದು ತುಂಬಾ ಆಶೀರ್ವಾದವಾಗಿದೆ. ನಾವು ದಶಮಾಂಶ ಬಿತ್ತುವಾಗ ನಮ್ಮ ಬ್ಯಾಂಕ್ ಬ್ಯಾಲೆನ್ಸ್ ಮುಗಿಯುವುದಿಲ್ಲ. ಹಣ ಬರುತ್ತಲೇ ಇರುತ್ತದೆ.  ನಾವು ದಶಮಾಂಶವನ್ನು ಬಿತ್ತಿದಾಗ ಉಳಿದ ಹಣವೆಲ್ಲ ಆಶೀರ್ವಾದವಾಗಿರುತ್ತದೆ.  ಬೇಡವಾದ  ಖರ್ಚು ಆಗುವುದಿಲ್ಲ.  ಯಾಕೆಂದರೆ ದೇವರು ಹಣ ಉಳಿ ಯು ವಂತೆ ಸಹಾಯ ಮಾಡುತ್ತಾರೆ. ಹಾಗೆಯೇ ನಾವು ದೇವರಲ್ಲಿ ಏನಾಗಿದ್ದೇವೆ ದೇವರು ನಮಗೆ ಕೊಟ್ಟಿರುವ ಅಧಿಕಾರ ಎಂತದ್ದು ಅಂತ ದೇವರು ನಮಗೆ ತಿಳಿಸುತ್ತಿದ್ದಾರೆ. ಪಾಸ್ಟರ್ ನೀವು ಹೇಳುವ ವಾಕ್ಯದಿಂದ ಮನೆಯಲ್ಲಿ ಎಲ್ಲರೂ ಸಂತೋಷ, ಸಮಾಧಾನ, ಶಾಂತಿಯಿಂದ ಇದ್ದೇವೆ. ನಾವು ದಿನದಿಂದ ದಿನಕ್ಕೆ ಅಭಿವೃದ್ದಿಯಾಗುತ್ತಾ ಇದ್ದೇವೆ. ಜನವರಿ 30 ಆಲ್ ನೈಟ್ ಪ್ರೇಯರ್ ಕೂಡ ತುಂಬಾ ಆಶೀರ್ವಾದವಾಗಿತ್ತು.   ದೇವರ ಪ್ರೀತಿಯ ಬಗ್ಗೆ ಹೇಳುವಾಗ ನನ್ನ ಹೃದಯ ತುಂಬಿ ನಾವು ಎಷ್ಟು ಭಾಗ್ಯವಂತರು, ಎಷ್ಟು ವಿಶೇಷವಾದವರು, ಎಷ್ಟು ಆಶೀರ್ವದಿಸಲ್ಪಟ್ಟವರು ಅಂತ ತುಂಬಾ ಸಂತೋಷವಾಯಿತು. ಅವತ್ತು ಕೂಡ ದೇವರ ...

Testimony # 734 -- ಒಡವೆ ಮಾಡಿಸಿ, ಯಾವುದನ್ನು ಅಡವಿಡದೆ, ಕೊರತೆ ಇಲ್ಲದೆ...

Image
   ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻 ನನ್ನ ಹೆಸರು  ವಿಶ್ವನಾಥ್  . ನಮ್ಮ ಊರು ಚಾಮರಾಜನಗರ  ಪಾಸ್ಟರ್ ನಾನು ನನ್ನ ಹೆಂಡತಿಗೆ  ಒಂದು  ಒಡವೆ ಮಾಡಿಸಿ ಕೊಡಬೇಕೆಂದು ಬಹಳ ವರ್ಷದಿಂದ ಪ್ರಯತ್ನ ಪಡುತ್ತಿದ್ದೆ, ಅದು ಆಗಿರಲಿಲ್ಲ.  ಆದರೆ ದೇವರ ಹತ್ತಿರ ಪ್ರಾರ್ಥನೆ ಮಾಡಿದಾಗ,  ದೇವರ ಜ್ಞಾನ ತಿಳುವಳಿಕೆ ನಿಮ್ಮ ಪ್ರೀತಿಯ ಪ್ರಾರ್ಥನೆ ಬಲ ಎಲ್ಲಾ ಸೇರಿ ದಿನ ಡಿಸೆಂಬರ್ 19ನೇ ದಿನದಂದು ಒಡವೆ ಮಾಡಿಸಿ, ಯಾವುದನ್ನು ಅಡವಿಡದೆ, ಕೊರತೆ ಇಲ್ಲದೆ ದೇವರು ಒಡವೆ ಮಾಡಿಸಲು ಸಹಾಯ ಮಾಡಿದರು.   ದೇವರ ನಾಮಕ್ಕೆ ಸ್ತೋತ್ರ ಉಂಟಾಗಲಿ.  ನಮ್ಮ ಮನೆಯಲ್ಲಿ ಅಶಾಂತಿ, ಗಲಿಬಿಲಿ ಉಂಟಾಗುತ್ತಿತ್ತು.  ಆದರೆ ನಿಮ್ಮ ಪ್ರೇಯರ್ ಗೆ ಜಾಯಿನ್ ಅದಾಗಿನಿಂದ  ನಮ್ಮ ಮನೆಯಲ್ಲಿ ನೀವು ಕುಳಿತು  ಪ್ರೇಯರ್ ಮಾಡುತ್ತಿರುವಂತೆ,  ಒಂದು ಅಭಿಪ್ರಾಯ ವ್ಯಕ್ತವಾಗಿರುವುದರಿಂದ ಈಗ   ನಮ್ಮ ಮನೆಯಲ್ಲಿ ಈಗ ಸಂತೋಷ, ಸಮಾಧಾನ, ಶಾಂತಿ ನೆಲೆಸಿದೆ. ಎಲ್ಲವೂ ಒಂದೊಂದು ಅದ್ಭುತವಾದ ರೀತಿಯಲ್ಲಿ ನನ್ನ ಜೀವನ ನಡೆಯುತ್ತಿದೆ ಪಾಸ್ಟರ್.  ನಿಮ್ಮ ಪ್ರಾರ್ಥನೆ ಬಲ ನನ್ನ ಜೀವಿತವನ್ನು ಮಾರ್ಪಡಿಸಿದೆ.   ದೇವರ ನಾಮಕ್ಕೆ ಮಹಿಮೆ ಉಂಟಾಗಲಿ. 🙏🏼  🙏🏼  🙏🏼 ಥ್ಯಾಂಕ್ ಯು ಪಾಸ್ಟರ್.    ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್...

Testimony # 733 - ಆದರೆ ಪಾಸ್ಟರ್ ನಿಮ್ಮ ವಾಕ್ಯ ಕೇಳುವಾಗ...

Image
    ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻 ನನ್ನ ಹೆಸರು  ಭಾಗ್ಯ.   ನಮ್ಮ ಊರು  ಮೈಸೂರು.   ಪಾಸ್ಟರ್ ನಾನು 15 ರಿಂದ 20 ದಿವಸ ಆಯಿತು.  ಪ್ರೇಯರ್ ಗೆ ಜಾಯಿನ್ ಆಗುತ್ತಾ ಇದ್ದು.  ನನಗೆ ತುಂಬಾ ಮನಸ್ಸಿನಲ್ಲಿ ನೋವು ಇರುತ್ತಿತ್ತು. ಒಂಥರಾ ಹೇಳಿಕೊಳ್ಳಲು ಆಗುತ್ತಿರಲಿಲ್ಲ. ನಾನು ದೇವರ ವಾಕ್ಯ ಕೇಳುತ್ತಿರಬೇಕಾದರೆ ತುಂಬಾ ಮನಸ್ಸಿನಲ್ಲಿ ನೋವು . ಅದೇ ಏನು ಅಂತ ಗೊತ್ತಾಗುತ್ತಿರಲಿಲ್ಲ.  ಆದರೆ ಪಾಸ್ಟರ್ ನಿಮ್ಮ ವಾಕ್ಯ ಕೇಳುವಾಗ ನನಗೆ ಏನೋ ಒಂದು ಸಮಾಧಾನ.  ದೇವರು ನನ್ನ ಜೊತೆ ಇದ್ದಾರೆ . ನನ್ನನ್ನು ನಡೆಸುತ್ತಾರೆ ಅನ್ನುವ ಸಮಾಧಾನ.  ನಮ್ಮ ಮನೆಯಲ್ಲಿ ನಮ್ಮ ಯಜಮಾನರಿಗೆ ಕೆಲಸ ಇಲ್ಲ, ಏನು ಮಾಡಬೇಕು? ಅಂತ  ಎರಡೆರಡು ಆಲೋಚನೆಗಳು ಇದ್ದವು. ಆಗ ನಿಮ್ಮ ವಾಕ್ಯ ಕೇಳುತ್ತಾ ನನಗೆ ಬಲ ಬಂತು ಪಾಸ್ಟರ್.  ಮತ್ತೆ ನನಗೆ  ಅಜೀರ್ಣ ಆಗಿ ಆಸ್ಪತ್ರೆಗೆ ಹೋಗಿದ್ದೆ. ತುಂಬಾ ಸುಸ್ತು ಮೈ ಕೈ ಎಲ್ಲಾ ತುಂಬಾ ನೋವು, ಎದ್ದು ಕೂತುಕೊಳ್ಳಲು  ಆಗುತ್ತಿರಲಿಲ್ಲ. ಆದರೆ ನಾನು ದೇವರ ವಾಕ್ಯ ಕೇಳಬೇಕು. ನನಗೆ ಕೂತುಕೊಳ್ಳಲು ಆಗದೆ ಇದ್ದರೂ ಮಲಗಿಕೊಂಡೆ ಕೇಳುತ್ತಿದ್ದೆ.  ಆದರೂ ಕೂಡ ನಾನು ನಿಮ್ಮ ಪ್ರೇಯರ್ ಒಂದು ದಿನಾನು ಮಿಸ್ ಮಾಡಲೇ ಇಲ್ಲ. ಪಾಸ್ಟರ್ ಪ್ರೇಯರ್ ಮಾಡುತ್ತಾ ಇದ್ದಾಗ, -- "ಅನಾರೋಗ್ಯದಲ್ಲಿ  ಇರುವರು ಬಿಡುಗಡೆ ಹೊಂದಿದ್ದೀರಾ"...

Testimony # 732 - ಒಂದು ಲೆಟರ್ ಕೊಡಬೇಕಮ್ಮ ನೀವು...

Image
  ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻 ನನ್ನ ಹೆಸರು  ಕಾಶವ್ವಾ , ನಮ್ಮ ಊರು ಸವದತ್ತಿ..  ನನ್ನ ಸಾಕ್ಷಿ ಏನೆಂದರೆ ರವಿವಾರ ಸರ್ ಫೋನ್ ಮಾಡಿ, "ಒಂದು ಲೆಟರ್ ಕೊಡಬೇಕು, ನೀವು ಜನವರಿ 26ಕ್ಕೆ  ಪಂಚಾಯಿತಿಗೆ ಹೋಗಲೇಬೇಕು" ಅಂತ ಹೇಳಿದರು. ನನಗೆ ತುಂಬಾ ಶಾಕ್ ಆಯ್ತು, ಹೇಗೆ ಹೋಗಬೇಕು? ನಾನು ಇವಾಗ ಪ್ರೇಯರ್ ಮುಗಿಸಿ ಬರ್ತಿದ್ದೀನಿ ಅನ್ನುತ್ತಿದ್ದೆ. ನನಗೆ ಐವತ್ತು ಜನರನ್ನು ಕರೆದುಕೊಂಡು ಬಾ ಅಂದಿದ್ದಾರೆ, ನಾನು ಎಲ್ಲಿಂದ ಕರ್ಕೊಂಡು ಹೋಗುವುದು ಅಂತ ಅನ್ನುತ್ತಿದ್ದೆ.  ನಾನು ಕರೆದಾಗ ಬರದೇ ಇದ್ದವರು, ದೇವರು ಅವರನ್ನು ಕರೆದುಕೊಂಡು ಹೋಗಿ ಸಹಿ ಮಾಡುವಂತೆ  ಮಾಡಿದರು. ಯಾವತ್ತೂ ರಿಸಿಪ್ಟ್ ಕೊಟ್ಟಿರಲಿಲ್ಲ. ಆದರೆ ಆವತ್ತು ರಿಸಿಪ್ಟ್  ಕೊಟ್ಟರು. ನನಗೆ ಬಹಳ ಖುಷಿಯಾಯಿತು. ದೇವರು ನಮ್ಮ ಜೊತೆ ಇದ್ದಾನೆ, ದೇವರು ನಮ್ಮನ್ನು ಕೈಬಿಡುವುದಿಲ್ಲ ಅಂತ ಸಂತೋಷದಲ್ಲಿ ಬಂದೆ .  ದೇವರ ನಾಮಕ್ಕೆ ಸ್ತೋತ್ರ ವಾಗಲಿ . 🙏🏼  🙏🏼  ಮತ್ತೆ ನನಗೆ ನಿನ್ನೆ ಬಹಳ ಜ್ವರ ಬಂದಿತ್ತು ಏನೋ  ಸಂಕಟ, ಎದ್ದು ಕೂತುಕೊಳ್ಳಲು ಆಗುತ್ತಿರಲಿಲ್ಲ , ತಲೆ ತಿರುಗುತ್ತಿತ್ತು, ಬಹಳ ಸುಸ್ತಾಗುತ್ತಿತ್ತು. ಆಗ ಭರತ್ ಅಣ್ಣ ಅವರಿಗೆ ಫೋನ್ ಮಾಡಿದೆ ,  ಅವರು -  "ಸಿಸ್ಟರ್ ತಲೆ ಕೆಡಿಸ್ಕೋಬೇಡಿ, ದೇವರು ಇದ್ದಾರೆ ಏನು ಆಗುವುದಿಲ್ಲ" ಅಂತ ಪ್ರೇಯರ್ ಮಾಡಿದರು. ...

Testimony # 731 - ದೇವರು ಅಷ್ಟು ಅದ್ಬುತವಾಗಿ ನಮ್ಮ ಮನೆಯನ್ನು...

Image
    ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻 ನನ್ನ ಹೆಸರು ಪವಿತ್ರ, ನಮ್ಮ ಊರು ಮಂಗಳೂರು.  ನನ್ನ ಸಾಕ್ಷಿ ಏನೆಂದರೆ ನನ್ನ ಅಮ್ಮನ ಮನೆ ಕಟ್ಟುತ್ತಾ ಇದ್ದರು. ಅದಕ್ಕೋಸ್ಕರ ಪಾಸ್ಟರ್ ಕಡೆ ಪ್ರೇಯರ್ ಮಾಡ್ಸಿದ್ದೆ. ನೈಟ್ ಪ್ರೇಯರ್ ದಲ್ಲೂ ಕೂಡ ಭರಮು ಅಣ್ಣ  ಪ್ರೇಯರ್ ಮಾಡಿದ್ರು. ಅದೇ ರೀತಿ ಆಗಸ್ಟ್ ದಲ್ಲಿ  ಪ್ರೇಯರ್ ಮೀಟಿಂಗ್ ಇತ್ತು. ಅಲ್ಲಿ ಕೂಡ ಮನೆ ವಿಷಯವಾಗಿ ವಾಗ್ದಾನ ಬಂದಿತ್ತು.  ದೇವರು ಆತನ  ಸಾಮರ್ಥ್ಯದಲ್ಲಿ, ಆತನ  ಗುಣಮಟ್ಟದಲ್ಲಿ, ಆತನ ವೇಗದಲ್ಲಿ, ಆರು ಏಳು ತಿಂಗಳಲ್ಲಿ ಮನೆ ಫುಲ್ ಕಂಪ್ಲೀಟ್ ಆಗಿ ಈ ತಿಂಗಳು 25ನೇ ತಾರೀಕು  ಓಪನಿಂಗ್ ಕೂಡ ಆಯ್ತು. ದೇವರು ಅಷ್ಟು ಅದ್ಬುತವಾಗಿ ನಮ್ಮ ಮನೆಯನ್ನು ಆರು - ಏಳು ತಿಂಗಳಲ್ಲಿ ನಮ್ಮ ಮನೆಯನ್ನು ಕಟ್ಟಿ ಮುಗಿಸಿದ್ದಾರೆ.  ಈ ಮನೆ ಮುಗಿಯುವಷ್ಟರಲ್ಲಿ, "ಅಯ್ಯೋ ಇನ್ನು ಎಷ್ಟು ವರ್ಷ ಆಗಬಹುದು?" ಅಂತ ಹೇಳ್ತಿದ್ರು. ಆದರೆ ದೇವರು ಮನಸ್ಸು ಮಾಡಿದರೆ ಅಸಾಧ್ಯ ಯಾವುದು ಇಲ್ಲ, ಅನ್ನೋ ರೀತಿಯಲ್ಲಿ ನಮ್ಮ ಮನೆಯನ್ನು ಅಷ್ಟು ಅದ್ಭುತವಾಗಿ ಕಟ್ಟಿ ಮುಗಿಸಿದರು.   ದೇವರ ನಾಮಕ್ಕೆ ಕೋಟಿ ಕೋಟಿ ಸ್ತೋತ್ರವಾಗಲಿ.  ಅದು ಕೂಡ ನಮ್ಮ ಬಲ, ನಮ್ಮ ಯೋಗ್ಯತೆ ಏನು ಅಲ್ಲ , ಪಾಸ್ಟರ್ ಆಡಿದ ಪ್ರತಿಯೊಂದು ಮಾತುಗಳು  ಆತ್ಮವಾಗಿ, ಜೀವವಾಗಿ ಅವೇ  ನಮ್ಮ ಜೀವಿತದಲ್ಲಿ ಕಾರ್ಯ ಮಾಡಿದೆ ಅಂತ ಹೇಳುತ್ತೇನೆ. ಅದಕ್ಕೆ ಬೇಕ...

Testimony # 730 - ಗ್ಲೋರಿ ಕಾನ್ಫರೆನ್ಸ್ ಕ್ಯಾಂಪ್ ಮೀಟಿಂಗ್ ನಲ್ಲಿ...

Image
 ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ.    🙏🏻🙏🏻🙏🏻  ನನ್ನ ಹೆಸರು ನಮೃತ . ನಮ್ಮ ಊರು ಬೆಳಗಾವಿ  ನಮ್ಮ ಸಭೆಯ ವಿಶ್ವಾಸಿ ಒಬ್ಬರು ಮಾರ್ನಿಂಗ್ ಪ್ರೇಯರ್ ನಲ್ಲಿ ಜಾಯಿನ್ ಆಗಲು ಆಗುವುದಿಲ್ಲ ಎಂದು ಮಧ್ಯಾಹ್ನದಲ್ಲಿ ಮಾರ್ನಿಂಗ್ ಪ್ರೇಯರ್  ರೆಕಾರ್ಡಿಂಗ್ ಅನ್ನು ಕೇಳುತ್ತಾರೆ.  ಒಂದು ದಿನ ನಾನು ಅವರಿಗೆ ಕಾಲ್ ಮಾಡಿದೆ, ತುಂಬಾ ಅಳುತ್ತಿದ್ದರು. ಅವರು ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಆಗಿದ್ದರು. ಯೂರಿನ್ ಕರೆಕ್ಟಾಗಿ ಪಾಸ್ ಆಗುತ್ತಿಲ್ಲ, ಪೈಪ್ ಹಾಕಿದ್ದರೂ ಕೂಡ ತುಂಬಾ ನೋವಾಗುತ್ತಿದೆ ಎಂದು ಹೇಳುತ್ತಿದ್ದರು. ರಾತ್ರಿ 10:30ಕ್ಕೆ ನಾವು ಪಾಸ್ಟರ್ ಗೆ ಕಾಲ್ ಮಾಡಿದ್ದೆವು. ಕಾನ್ಫರೆನ್ಸ್ ಕಾಲ್ ನಲ್ಲಿ ಪಾಸ್ಟರ್ ಪ್ರೇಯರ್ ಮಾಡಿದರು. ಅದೇ ರಾತ್ರಿಯಲ್ಲಿ ಯೂರಿನ್ ಪೈಪ್ ತೆಗೆದರು ಕೂಡ, ಯೂರಿನ್ ಆಟೋಮ್ಯಾಟಿಕ್ ಆಗಿ ಫ್ಲೋ ಆಯ್ತು.  ಅವರು ಬೆಳಗ್ಗೆ ಖುಷಿಯಿಂದ ಕಾಲ್ ಮಾಡಿ,  ನನಗೆ ತುಂಬಾ ಆರಾಮ್ ಆಗಿದೆ ಎಂದು ಹೇಳಿದರು.  ನನ್ನದೊಂದು ಸಾಕ್ಷಿ ಏನೆಂದರೆ - ನಾವು ಎಂಟನೇ ತಿಂಗಳಿನಲ್ಲಿ " ಗ್ಲೋರಿ ಕಾನ್ಫರೆನ್ಸ್ ಕ್ಯಾಂಪ್ ಮೀಟಿಂಗ್ "   ನಲ್ಲಿ ಭಾಗವಹಿಸಿದ್ದೆವು. ಆಗ ಪಾಸ್ಟರ್ - " ನಿಮಗೆ ಏನು ಆಸೆ ಇದೆಯೋ ಅದನ್ನು  ಒಂದು ಚೀಟಿಯಲ್ಲಿ ಬರೆದು ಹಾಕಿ"  ಎಂದು ಹೇಳಿದ್ದರು.   ನಾನು ಬಿಜಿನೆಸ್ ಬಗ್ಗೆ ಬರೆದು ಹಾಕಿದ್ದೆ, ಅದು ಈಗ ನೆರವೇರುತ್ತಿದೆ. ?...

Testimony # 729 - ನಮ್ಮ ಹೊಲದಲ್ಲಿ ಬೋರ್ ವೆಲ್ ಹೊಡೆಸುವ ಸಲುವಾಗಿ...

Image
  ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ಉಂಟಾಗಲಿ.    🙏🏻🙏🏻🙏🏻  ನನ್ನ ಹೆಸರು ಜ್ಯೋತಿ. ನಮ್ಮ ಊರು ಬಾಗಲಕೋಟ  ನಾವು ನಮ್ಮ ಹೊಲದಲ್ಲಿ ಬೋರ್ ವೆಲ್ ಹೊಡೆಸುವ ಸಲುವಾಗಿ ಪಾಸ್ಟರ್ ಗೆ  ಪ್ರೇಯರ್ ಮಾಡಲು ಹೇಳಿದ್ದೆವು, ಅವರು ವಾಟ್ಸಪ್ ನಲ್ಲಿ ವಾಯ್ಸ್ ಮೆಸೇಜ್ ಕಳಿಸಿದ್ದರು, ಮೊಬೈಲ್ ತೆಗೆದುಕೊಂಡು ನಮ್ಮ ಹೊಲವೆಲ್ಲ ಸುತ್ತು ಹೊಡೆದಿದ್ದೆ. ಪ್ರೇಯರ್ ಮಾಡಿದ ನೀರನ್ನು ಹೊಲದಲ್ಲಿ ಎಲ್ಲಾ ಕಡೆ ಚಿಮುಕಿಸಿದ್ದೆ. "ಇದು ನೀರಲ್ಲ, ನಿನ್ನ ರಕ್ತ ಯೇಸಪ್ಪ"   ಎಂದು ಎಲ್ಲಾ ಕಡೆ ಸುರಿದಿದ್ದೆ. ನಂತರ ನಾವು ಬೋರ್ ಹಾಕಿಸಿದಾಗ ನೀರು ಹೊಳೆ ಹರಿದ ಹಾಗೆ ಹರಿಯಿತು. ಎರಡು ಜಾಗದಲ್ಲಿ ಎರಡು ಬೋರ್ ವೆಲ್ ಹಾಕಿಸಿದ್ದೆವು. ಎರಡರಲ್ಲಿಯೂ ನೀರು ಬಿದ್ದಿದೆ.  ನಮ್ಮ ಜೀವಿತದಲ್ಲಿ ದೇವರು ಬಹಳ ಅದ್ಭುತವನ್ನು ಮಾಡುತ್ತಿದ್ದಾರೆ.  ದೇವರಿಗೆ ಕೋಟಿ ಕೋಟಿ ಸ್ತೋತ್ರ .  ಇನ್ನೊಂದು ಸಾಕ್ಷಿ ಏನೆಂದರೆ - ನನ್ನ ಮಗಳ ಕುಟುಂಬದಲ್ಲಿ ಗಂಡ ಹೆಂಡತಿಯ ಮಧ್ಯದಲ್ಲಿ ಹೊಂದಾಣಿಕೆ ಇರಲಿಲ್ಲ. "ದೇವರೇ ನಿನ್ನ ಪ್ರೀತಿಯಿಂದ ನನ್ನ ಅಳಿಯನನ್ನು ತುಂಬಿಸು ಅಪ್ಪ" ಎಂದು ಪ್ರಾರ್ಥಿಸಿದೆ. ಈಗ ಅವರಿಬ್ಬರೂ ಆರಾಮವಾಗಿ ಚೆನ್ನಾಗಿ ಇದ್ದಾರೆ. ಈ ರೀತಿಯಲ್ಲಿ ದೇವರು ತುಂಬಾ ಸಹಾಯ ಮಾಡುತ್ತಿದ್ದಾರೆ.   ನಾವು ಯಾವಾಗ ದೇವರಲ್ಲಿ ಬಂದೆವು ಅವಾಗಿನಿಂದಲೂ ದೇವರು ತುಂಬಾ ಚೆನ್ನಾಗಿ ನಮ್ಮನ್ನು ಮತ್ತು ನಮ್ಮ ಜೀವಿತವನ್ನು ನಡೆಸುತ...

2026 ರ ಫೆಬ್ರವರಿ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು

Image
  2026 ರ ಫೆಬ್ರವರಿ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು    " ಕ್ರಿಸ್ತನಲ್ಲಿ ನೆಲೆಗೊಂಡಿರುವುದು "  The Month of  " Settled" ಇದನ್ನು ಓದುತ್ತಿರುವ ನನ್ನ ಸಹೋದರ ಸಹೋದರಿಯರೇ ನೀವೆಲ್ಲರೂ  ವಾಕ್ಯವನ್ನು ಹೊಂದಿಕೊಳ್ಳುವುದಕ್ಕೆ  ಎಷ್ಟು ಕುತೂಹಲದಿಂದ ಇದ್ದೀರೋ, ಬಯಕೆಯಿಂದ ಇದ್ದಿರೋ, ಎಷ್ಟು ಹಸಿವು ಮತ್ತು ದಾಹದಿಂದ ಇದ್ದಿರೋ ಅಷ್ಟು ಆ ವಾಕ್ಯ ನಿಮ್ಮನ್ನು ತೃಪ್ತಿಪಡಿಸುತ್ತದೆ. ಅಷ್ಟು ನಿಮಗೆ ಹೊಟ್ಟೆ ತುಂಬುತ್ತದೆ. ಬಾಯಾರಿಕೆ ಹೋಗುತ್ತದೆ  ಮತ್ತು ಪರಿಪೂರ್ಣವಾಗಿರುತ್ತದೆ.  ದೇವರು ಈ ತಿಂಗಳು   ಆತ್ಮ ಮಂಡಲದಲ್ಲಿ ನೆಲೆಗೊಂಡಿರುವ ವಾಗ್ದಾನವನ್ನು ನಿಮ್ಮ ಜೀವನದಲ್ಲಿ, ನಿಮ್ಮ ಶರೀರದಲ್ಲಿ  ಹೇಗೆ ನೆರವೇರುತ್ತದೆ?  ಹೇಗೆ ಪ್ರಕಟವಾಗುತ್ತದೆ? ಅದು ಪ್ರಕಟವಾಗುವುದಕ್ಕೆ ನಿಮ್ಮ ಪ್ರಯತ್ನ ಅಲ್ಲ, ನಿಮ್ಮ ಬಲ ಅಲ್ಲ, ನಿಮ್ಮ ಸಾಮರ್ಥ್ಯ ಅಲ್ಲ, ನೀವು ಆತನಲ್ಲಿ ಇರುವಾಗ ಆತನ ಕಾರ್ಯಗಳು  ನಿಮ್ಮಲ್ಲಿ ಕಾರ್ಯ ಪ್ರಕಟವಾಗುತ್ತವೆ ಎನ್ನುವುದಕ್ಕೆ ಸಾಕ್ಷಿಯಾಗಿರುತ್ತೀರಿ. ಪ್ರವಾದನೆಯ  ವಾಗ್ದಾನದ ವಾಕ್ಯ  : ಕೀರ್ತನೆಗಳು 119:89 ಯೆಹೋವನೇ, ನಿನ್ನ ವಾಕ್ಯವು ಪರಲೋಕದಲ್ಲಿ ಶಾಶ್ವತವಾಗಿ ಸ್ಥಾಪಿಸಲ್ಪಟ್ಟದೆ .    ಒಂದೊಂದು ಭಾಷಾಂತರದಲ್ಲಿ ಒಂದೊಂದು ತರ ಇದೆ. ನಾನು ರೆಫರ್ ಮಾಡಿದ ಭಾಷಾಂತರದಲ್...