Posts

Showing posts from April, 2026

Testimony # 758 -- ಮದುವೆ ಇನ್ನೂ ಎರಡು ದಿವಸ ಇದೆ ಎನ್ನುವಾಗ...

Image
  ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏 ನನ್ನ ಹೆಸರು: ಸರೋಜಿನಿ   ನಮ್ಮ ಊರು: ದಡೆರಕೊಪ್ಪ. ನನ್ನ ಸಾಕ್ಷಿ ಏನೆಂದರೆ ನಮ್ಮ ಅಣ್ಣನ ಮಕ್ಕಳ ಮದುವೆ ಇತ್ತು. ಮದುವೆ ಇನ್ನೂ ಎರಡು ದಿವಸ ಇದೆ ಎನ್ನುವಾಗ ತುಂಬಾ ಮಳೆ ಬರುತ್ತಿತ್ತು. ಎಲ್ಲರೂ ಖುಷಿಯಿಂದ ಮದುವೆ ಮಾಡುತ್ತಿದ್ದಾರೆ. ಹೊಲಕ್ಕೆ ಕಾಳು ಹಾಕುವುದು, ಸುಗ್ಗಿ ಇದೆ ಮಳೆ ಆಗಬಾರದೆಂದು ಭರಮು ಬ್ರದರ್ ಕಡೆ ಪ್ರೇಯರ್ ಮಾಡಿಸಿದೆ.  ಅದೇ ತರಹ ಮದುವೆ ಮುಗಿಸಿ ಎರಡು ದಿನದ ನಂತರ ಮಳೆ ಆಯಿತು .  ದೇವರ ನಾಮಕ್ಕೆ ಮಹಿಮೆ ಉಂಟಾಗಲಿ 🙏  ನನಗೆ ಕಟ್ಟಿಸಿದ ಮನೆ ಬೇಕು ಎನ್ನುವಾಗ ದೇವರು ನನಗೆ ಮನೆ ಕೊಟ್ಟರು. ದೇವರ ನಾಮ ಕ್ಕೆ  ಸ್ತೋತ್ರ ವಾಗಲಿ 🙏   ಪಗಾರ್ ಬರುತ್ತಿಲ್ಲ ಎಂದು ಪಾಸ್ಟರ್ ಹತ್ತಿರ ಪ್ರೇಯರ್ ಮಾಡಿಸಿದ್ದೆ. ಆದರೆ ಒಂದು ವರ್ಷದ ಹಣವೆಲ್ಲ ಜಮಾ ಆಗಿದೆ. ನಾನು ಇನ್ನೂ ದೀಕ್ಷಾಸ್ನಾನ  ತೆಗೆದುಕೊಂಡಿಲ್ಲ, ಆದರೆ ನಾನು ದೇವರ ಮಗಳಾಗಿದ್ದೇನೆ. ನಮ್ಮವರು ನಮ್ಮನ್ನು ಕೈಬಿಟ್ಟರು, ನಮ್ಮ ಅಪ್ಪ ಎಂದಿಗೂ ನಮ್ಮನ್ನು ಕೈಬಿಡುವುದಿಲ್ಲ. ನಾನು ಈ ಲೋಕದವಳಲ್ಲ, ನಾನು ಪರಲೋಕಕ್ಕೆ ಸೇರಿದವಳಾಗಿದ್ದೇನೆ. ದೇವರ ನಾಮಕ್ಕೆ  ಸ್ತೋತ್ರ ವಾಗಲಿ 🙏 Thank you pastor 🙏 ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್  ಮಾಡಿ ! Rev John Ebenezer - Youtube Rev John Ebenezer - Instagram Rev John Ebenezer - Fac...

Testimony # 757 -- ಗರ್ಭಕೋಶದಲ್ಲಿ ಗಂಟು ಆಗಿದೆ...

Image
 ದೇವರ ನಾಮಕ್ಕೆ  ಸ್ತೋತ್ರ ವಾಗಲಿ 🙏   ನನ್ನ ಹೆಸರು: ಸುಸನ್   ನಮ್ಮ ಊರು: ಧಾರವಾಡ . ನನ್ನ ಸಾಕ್ಷಿ ಏನೆಂದರೆ ನನಗೆ ಆರೋಗ್ಯದ ಸಮಸ್ಯೆ ತುಂಬಾ ಇತ್ತು. ಆಗ ಡಾಕ್ಟರ್ ಕಡೆ ಹೋದಾಗ, ಅವರು ಸ್ಕ್ಯಾನಿಂಗ್ ಮಾಡಿಸಬೇಕು ಎಂದರು. ಸ್ಕ್ಯಾನಿಂಗ್ ಕೂಡ ಮಾಡಿಸಿದೆ. ಗರ್ಭಕೋಶದಲ್ಲಿ ಗಂಟು ಆಗಿದೆ , ಅದು ಸರಿಯಾಗಿ ಕಾಣುತ್ತಿಲ್ಲ, ಅದಕ್ಕೆ ಇನ್ನೊಂದು ಟೆಸ್ಟ್ ಮಾಡಿಸಬೇಕು ಎಂದು ಹೇಳಿದರು. ನಾನು ಪಾಸ್ಟರ್ ಗೆ ಫೋನ್ ಮಾಡಿ ಹೇಳಿದೆ. ಆಗ ಅವರು, "ಒಂದು  ಗ್ಲಾಸ್ ನೀರು ತೆಗೆದುಕೊಳ್ಳಿ" ಎಂದು  ಹೇಳಿ, "ನೀವು ಶರೀರಕ್ಕೆ ಸಂಬಂಧಪಟ್ಟವರು ಅಲ್ಲ, ಆತ್ಮಕ್ಕೆ ಸಂಬಂಧಪಟ್ಟವರು. ಡಾಕ್ಟರ್ ನಿಮಗೆ ಸಮಸ್ಯೆ ಹೇಳಿದರೆ, ಪರಿಹಾರ ಎನ್ನುವ ಯೇಸು ನಿಮ್ಮೊಳಗೆ ಇದ್ದಾರೆ. ರಿಪೋರ್ಟ್ ಎಲ್ಲ ನಾರ್ಮಲ್ ಬರುತ್ತೆ" ಎಂದು ಡಿಕ್ಲೇರ್ ಮಾಡಿದರು. ದೇವರ ನಾಮಕ್ಕೆ ಸ್ತೋತ್ರ ವಾಗಲಿ🙏   ಪಾಸ್ಟರ್ ಡಿಕ್ಲೇರ್ ಮಾಡಿದ ಹಾಗೆ ರಿಪೋರ್ಟ್ ಎಲ್ಲ ನಾರ್ಮಲ್ ಬಂದಿದೆ. ನನ್ನ ತಂಗಿಯವರು ಮನೆ ಕಟ್ಟಿಸುತ್ತಿದ್ದರು.ಅವರು ಸರ್ಕಾರದಿಂದ ಲೋನ್ ತೆಗೆದುಕೊಂಡು, ಮೂರು ಕಂತುಗಳಾಗಿ ಹಣ ಬರಬೇಕಿತ್ತು, ಆದರೆ ಅದು ಬರಲಿಲ್ಲ, ಅದರ ಬಿಲ್ ಕೂಡ ಬಂದಿರಲಿಲ್ಲ, ಅವರಿಗೆ ಹಣದ ಸಮಸ್ಯೆ ಉಂಟಾಯಿತು. ಆಗ ಪಾಸ್ಟರ್ ಪ್ರೇಯರ್ ಮಾಡಿದರು, "ಮನೆ ಕಟ್ಟುವುದಕ್ಕೆ ಹಣ ಸೂಪರ್ ನ್ಯಾಚುರಲ್ ಆಗಿ ಬಂದು ಮುಟ್ಟಿದೆ. ಅವರು ಅದ್ಭುತವಾಗಿ, ಸುಂದರವಾಗಿ ಮನೆ ಕಟ್ಟಿ ಮುಗಿಸಿದ...

Testimony # 756 -- ಸಾಹಿಲ್ ಗೆ ಆಕ್ಸಿಡೆಂಟ್ ಆದಾಗ...

Image
 ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏 ನನ್ನ ಹೆಸರು : ನಮ್ರತಾ    ನಮ್ಮ ಊರು: ಬೆಳಗಾವಿ.  ನಾನು ಸಾಹಿಲ್ ಅವರ ಮನೆಗೆ ಹೋಗಿದ್ದೆ. ಅವರ ತಂದೆಗೆ ಕನ್ನಡ ಬರುವುದಿಲ್ಲ, ಆದರೂ ಅವರಿಗೆ ವಾಕ್ಯದಲ್ಲಿ ಬಹಳ ಕಡುಬಯಕೆ ಇದೆ. ಭಾಷೆ ಅರ್ಥವಾಗದಿದ್ದರೂ ಇಡೀ ಕುಟುಂಬವೇ ವಾಕ್ಯದಲ್ಲಿ ಸ್ಥಿರವಾಗಿ ನಿಂತಿದ್ದಾರೆ. ಸಾಹಿಲ್ ಗೆ ಆಕ್ಸಿಡೆಂಟ್ ಆದಾಗ ಅವರ ತಂದೆ ನನ್ನ ಮಗ ಇನ್ನು ಬದುಕುವುದಿಲ್ಲ, ನಾನು ಸಾಯಬೇಕು ಎಂದು ಯೋಚಿಸುತ್ತಿದ್ದರು.   ಆದರೆ ಈಗ ದೇವರಲ್ಲಿ ಹೆಚ್ಚೆಚ್ಚಾಗಿ ಬೆಳೆಯುತ್ತಿದ್ದಾರೆ. ವಾಕ್ಯವನ್ನು ಮಗನ ಮೇಲೆ ಡಿಕ್ಲೇರ್ ಮಾಡಿ ಮಗನನ್ನು ಬಲಪಡಿಸುತ್ತಿದ್ದಾರೆ. ಸಾಹೀಲ್ ಕೂಡ ಈಗ ತುಂಬಾ ಬದಲಾಗಿದ್ದಾನೆ. ಸಾಹಿಲ್ ನ ಬ್ರೈನ್ ಆಪರೇಷನ್ ಗೆ ಪುಣೆಗೆ ಹೋಗಿದ್ದರು. ಅಲ್ಲಿ ಕೂಡ ಸಾಹಿಲ್ ಅನಾರೋಗ್ಯದಲ್ಲಿರುವರೆಗೆಲ್ಲ ಧೈರ್ಯ  ಹೇಳಿ ಪ್ರೇಯರ್ ಮಾಡುತ್ತಿದ್ದನು. ಅವರನ್ನೆಲ್ಲ ನೋಡಿ ನನಗೆ ಬಹಳ ಸಂತೋಷವಾಯಿತು.  ದೇವರ ನಾಮಕ್ಕೆ ಸ್ತೋತ್ರ ಉಂಟಾಗಲಿ 🙏 ನ ನ್ನ ಸಾಕ್ಷಿ ಏನೆಂದರೆ : ನಾನು ಇರುವುದು ತಾತ್ಕಾಲಿಕವಾದ ಭೂಮಿಯಲ್ಲಿ, ಅಲ್ಲಿಯ ದುಃಖ, ಹಣದ ಸಮಸ್ಯೆ, ಶರೀರದ ಪರಿಸ್ಥಿತಿಗಳಿಗೆ ನಾನು ಯೋಚಿಸುವುದೇ ಇಲ್ಲ. ನಾನು ಜೀವಿಸುತ್ತಿರುವುದು ನಿತ್ಯ ನಿತ್ಯವಾದ  ಲೋಕದಲ್ಲಿ. ನಾನು ದೇವರಲ್ಲಿ ಒಂದಾಗಿ ದೇವರ ಕಾರ್ಯದಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ. ಎಲ್ಲರಿಗೂ ಸುವಾರ್ತೆಯನ್ನು ಸಾರುವುದು, ದೇವ...

Testimony # 755 -- ಈ ನೋವು ಸಹಿಸುವುದಕ್ಕೆ ಆಗುತ್ತಿಲ್ಲ ಎನ್ನುವಾಗ...

Image
 ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏 ನನ್ನ ಹೆಸರು: ಮಂಜುಳಾ.   ನಮ್ಮ ಊರು:ಬೆಳಗಾವಿ   ನಾನು ಲಲಿತಾ ಅವರಿಗೆ ಕಾಲ್ ಮಾಡಿ ಅವರ ಆರೋಗ್ಯ ವಿಚಾರಿಸುವಾಗ, ಅವರು ತಮ್ಮ ಕಷ್ಟ, ನೋವು, ದುಃಖ ಹೇಳಿ ಅಳುವುದಕ್ಕೆ ಶುರು ಮಾಡಿದರು. ಅವರು ನಾನು ಇರುವುದಕ್ಕಿಂತ ಸಾಯಬೇಕು, ಈ ನೋವು ಸಹಿಸುವುದಕ್ಕೆ ಆಗುತ್ತಿಲ್ಲ ಎನ್ನುವಾಗ ನಾನು ಅವರಿಗೆ ದೇವರ ವಾಕ್ಯ ಹೇಳಿ ಅವರನ್ನು ಬಲಪಡಿಸಿದೆ, ಪ್ರಾರ್ಥನೆ ಮಾಡಿದೆ.  "ನಿಮ್ಮ ಬಾಯಿಯಿಂದ ಸಮಸ್ಯೆ ಮಾತನಾಡಬೇಡಿ , ಸಮಾಧಾನವಾಗಿರಿ. ದೇವರು ನಂಬಿದವರನ್ನು ಎಂದಿಗೂ ಕೈಬಿಡುವುದಿಲ್ಲ, ಈ ಪರಿಸ್ಥಿತಿಯನ್ನು ದೇವರು ಬಿಡುಗಡೆ ಮಾಡುತ್ತಾರೆ ಧೈರ್ಯವಾಗಿರಿ ಎಲ್ಲ ಸರಿ ಹೋಗುತ್ತದೆ" ಎಂದು ಅವರಿಗೆ ಹೇಳಿದೆ. ಮರುದಿನ ಸಂಡೇ ಚರ್ಜ್ ಗೆ ಹೋಗಿ ಅವರಿಗೆ ಪ್ರೇಯರ್ ಲಿಂಕ್  ಕಳಿಸಿದೆ, ಅವರು ಮೆಸೇಜ್ ಪೂರ್ತಿಯಾಗಿ ಕೇಳಿದರಂತೆ. ಪಾಸ್ಟರ್  ಮೆಸೇಜ್ ಸ್ಟಾರ್ಟ್ ಆದ ಕೂಡಲೇ, "ಈ ಸತ್ಯ ಯಾರಿಗೆ ಎಂದರೆ ಜೀವನದಲ್ಲಿ ಸೋತು ಇರುವುದಕ್ಕಿಂತ ಸಾಯಬೇಕು, ನೋವು ಕಷ್ಟದಲ್ಲಿ ಇರುವವರಿಗೆ" ಎಂದು ಹೇಳಿದರು.  ಈ ಮೆಸೇಜನ್ನು ದೇವರು ಅವರಿಗಾಗಿಯೇ ಹೇಳಿದ್ದಾರೆ.   ಮರುದಿನ ಅವರಿಗೆ ಕಾಲ್ ಮಾಡಿ ಮಾತನಾಡುವಾಗ ನಾನು ಚೆನ್ನಾಗಿದ್ದೇನೆ. ನಾನು ಈಗ ಸಮಸ್ಯೆ ಮಾತನಾಡುವುದಿಲ್ಲ, ಈ ಲೋಕದ ಜೀವನ ತಾತ್ಕಾಲಿಕ. ನಾನು ಪರಲೋಕದವಳು ಅಲ್ಲಿ ನಿತ್ಯ ನಿತ್ಯವಾಗಿ ವಾಸಿಸುವಳಾಗಿದ್ದೇನೆ ಎಂದರು.  ಆ ...

Testimony # 754 -- ನನಗೆ ಕಿಡ್ನಿ ಸ್ಟೋನ್ ಆಗಿ ಜ್ವರದಿಂದ ಬಳಲುತ್ತಿದ್ದೆ...

Image
 ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏  ನನ್ನ ಹೆಸರು ಜಿಬೇಶ್..   ನಮ್ಮಊರು ಬೀದರ್. ನನಗೆ ಕಿಡ್ನಿ ಸ್ಟೋನ್ ಆಗಿ ಜ್ವರದಿಂದ ಬಳಲುತ್ತಿದ್ದೆ. ನನಗೆ ಲೂಸ್ ಮೋಷನ್ ಆಗಿ ಎಷ್ಟೇ ಟ್ಯಾಬ್ಲೆಟ್ ತೆಗೆದುಕೊಂಡರು ಕಡಿಮೆ ಆಗಿರಲಿಲ್ಲ. ಅದರಿಂದ ವೇಟ್ ಲಾಸ್ ಆಗುತ್ತಿತ್ತು.   ಆದರೆ ಪಾಸ್ಟರ್  ಬೀದರ್ ಗೆ ಬಂದಾಗ ನನಗೆ ಪ್ರೇಯರ್ ಮಾಡಿದರು. ಈಗ ನಾನು ಆರೋಗ್ಯವಾಗಿ ಎಲ್ಲಾ ಸಮಸ್ಯೆಯಿಂದ ಬಿಡುಗಡೆಯಾಗಿದ್ದೇನೆ. Thank you pastor🙏 ಸಂಡೆ ನನ್ನ ಆರು ತಿಂಗಳ ಮಗನಿಗೆ ತುಂಬಾ ಜ್ವರ ಬಂದಿತ್ತು. ಬೀದರ್ ಅಲ್ಲಿ ಮಳೆ ಇರುವುದರಿಂದ ಪಾಸ್ಟರ್ ಗೆ   ಕಾಲ್ ಕನೆಕ್ಟ್ ಆಗಲಿಲ್ಲ. ಆಗ ನಮ್ಮ ಮನೆಯವರೇ  ಪ್ರೇಯರ್ ಮಾಡಿದರು ಮತ್ತೆ ಮಗು ಅಳುತ್ತಾ ಇತ್ತು. ಆಗ ಮತ್ತೆ ಪ್ರೇಯರ್ ಮಾಡಿ, "ದೇವರು ಆರಾಮ್  ಮಾಡುತ್ತಾರೆ. ದೇವರೇ ಎಲ್ಲವನ್ನು ನಡೆಸುತ್ತಾರೆ" ಎಂದು ಹೇಳಿ ಔಷಧ ಹಾಕಿ ಮಲಗಿಸಿದೆ.   ನಂತರ ಅವನು ಸಮಾಧಾನವಾಗಿ ಬೆಳಿಗ್ಗೆ 8:00 ವರೆಗೆ ಮಲಗಿದನು. ದೇವರು ನನ್ನ ಮಗನಿಗೆ ಆರೋಗ್ಯವನ್ನು ಕೊಟ್ಟು, ಹಾಸ್ಪಿಟಲ್ ಗೆ ಹೋಗಬೇಕು ಎನ್ನುವ ಯೋಚನೆ ಕೂಡ ಬರದಂತೆ ದೇವರೇ ನನ್ನ ಮಗನನ್ನು ಗುಣಪಡಿಸಿದರು. ದೇವರ ನಾಮಕ್ಕೆ ಮಹಿಮೆ ಉಂಟಾಗಲಿ 🙏 Thank you pastor 🙏 ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್  ಮಾಡಿ ! Rev John Ebenezer - Youtube Rev John Ebenezer - Instagram...

Testimony # 753 -- ಮೊದಲು ನನಗೆ 6 ಲಕ್ಷ ರೂಪಾಯಿ ಸಾಲ ಇತ್ತು...

Image
 ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏  ನನ್ನ ಹೆಸರು ಬಸಪ್ಪ.  ನನ್ನ ಊರು ಅಥಣಿ.. ಕಳೆದ ವಾರದಲ್ಲಿ ನಮ್ಮ ಬೋರಿಗೆ ಸ್ವಲ್ಪ ನೀರು ಕಡಿಮೆ ಇತ್ತು. ಪಾಸ್ಟರ್ ಗೆ  ಪ್ರೇಯರ್ ಮಾಡಲು ಹೇಳಿದಾಗ , ಅವರು ಪ್ರೇಯರ್ ಮಾಡಿದರು ಮಾಡಿದ ಎರಡು ದಿನದಲ್ಲೇ ಅರ್ಧ  ಇಂಚು ನೀರು ಹೆಚ್ಚಾಯಿತು. ನಾನು ಯೇಸು ಸ್ವಾಮಿಯನ್ನು ನಂಬಿ ಎರಡು ವರ್ಷ ಆಯಿತು. ಮೊದಲು ನನಗೆ 6 ಲಕ್ಷ ರೂಪಾಯಿ ಸಾಲ ಇತ್ತು. ನನಗೆ 6 ಪಾಯಿಂಟ್ ರಕ್ತ ಇತ್ತು ಮತ್ತು ಇಬ್ಬರು ಹೆಂಡತಿಯರ ಜಗಳ ಇದನ್ನೆಲ್ಲ ನೋಡಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ತೀರ್ಮಾನ ಮಾಡಿದ್ದೆ.   ಅದೇ ಸಂದರ್ಭದಲ್ಲಿ ಸಂಗಮೇಶ್ ಬ್ರದರ್ ನನ್ನನ್ನು ಚರ್ಚ್ ಗೆ ಕರೆದುಕೊಂಡು ಹೋದರು. ನನಗಿರುವ ಬೆನ್ನು ನೋವು ಕೂಡ  ವಾಸಿ ಆಯಿತು. ನಾನು ಯೇಸುವನ್ನು ನಂಬಿದೆ. ಆವಾಗಿನಿಂದ ಇಲ್ಲಿಯವರೆಗೆ ನನ್ನ ಕುಟುಂಬಕ್ಕೆ ಯಾವ ಒಂದು ಇಂಜೆಕ್ಷನ್ ಕೂಡ ಇಲ್ಲದೆ ಎಲ್ಲರೂ ಆರೋಗ್ಯವಾಗಿ ಇದ್ದೇವೆ. ಯಾವ ದವಾಖಾನೆಗೆ ಹೋಗದೆ ದೇವರು ನಮ್ಮನ್ನು ಅದ್ಭುತವಾಗಿ ನಡೆಸುತ್ತಿದ್ದಾರೆ. ದೇವರ ನಾಮಕ್ಕೆ ಮಹಿಮೆ ಉಂಟಾಗಲಿ 🙏 Thank you pastor 🙏 ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್  ಮಾಡಿ ! Rev John Ebenezer - Youtube Rev John Ebenezer - Instagram Rev John Ebenezer - Facebook                SC...

2026 ರ ಏಪ್ರಿಲ್ ತಿಂಗಳ ಪ್ರವಾದನೆಯ ವಾಗ್ದಾನ

Image
  Prophetic word for April month 2026 ರ ಏಪ್ರಿಲ್ ತಿಂಗಳ  ಪ್ರವಾದನೆಯ  ವಾಗ್ದಾನ ಪುನರುತ್ಥಾನದ ಜೀವಿತ {Resurrected Life}                   ಇದನ್ನು ಓದುತ್ತಿರುವ ಸಹೋದರ ಸಹೋದರಿಯರೇ ಯೇಸು ಕ್ರಿಸ್ತನ ನಾಮದಲ್ಲಿ ನಿಮ್ಮನ್ನು ಆಶೀರ್ವದಿಸುತ್ತೇನೆ. ಪ್ರತಿ ತಿಂಗಳ ವಾಗ್ದಾನವನ್ನು ಎದುರು ನೋಡಿ ವಾಕ್ಯವು ನಮ್ಮ ಜೀವನದಲ್ಲಿ ಮಹತ್ತಾದ ಕಾರ್ಯಗಳನ್ನು ಮಾಡುತ್ತಿರುವುದಕ್ಕಾಗಿ ಸ್ತೋತ್ರ. ಮೂರು ತಿಂಗಳು ಕಳೆದು ನಾಲ್ಕನೆಯ ತಿಂಗಳಲ್ಲಿ ಕಾಲಿಟ್ಟಿದ್ದೇವೆ.   ಈ ಸಂದೇಶವನ್ನು ಓದುವಾಗ ವಾಕ್ಯವನ್ನು ಆತ್ಮದಿಂದ ಹೊಂದಿಕೊಳ್ಳಬೇಕು. ಆತ್ಮವಾಗಿಯೂ ಜೀವವಾಗಿಯೂ ಹೊಂದಿಕೊಂಡಿದ್ದೇನೆ ಎಂಬ ಭಾವನೆಯಿಂದ ದೇವರ ವಾಕ್ಯವನ್ನು ಸ್ವೀಕಾರ ಮಾಡಿಕೊಳ್ಳಬೇಕು ಎಂದು ಕೇಳಿಕೊಳ್ಳುತ್ತೇನೆ. ಈ ಏಪ್ರಿಲ್ ತಿಂಗಳಿನಲ್ಲಿ ಯೇಸು ನಮಗಾಗಿ ಜಜ್ಜಲ್ಪಟ್ಟು, ರಕ್ತವನ್ನು ಸುರಿದು, ಮರಣ ಹೊಂದಿ, ನಮಗಾಗಿ ಮೂರನೆಯ ದಿನದಲ್ಲಿ ಪುನರುತ್ಥಾನವಾಗಿ ಎದ್ದಿದ್ದಾರೆ. ಆದುದರಿಂದ ಈ ತಿಂಗಳ ವಾಗ್ದಾನ  ಪುನರುತ್ಥಾನದ ಜೀವಿತ {Resurrected Life} ಜನವರಿಯಲ್ಲಿ "ಏದೆನ್ ಪುನಃಸ್ಥಾಪನೆ {Eden Restored}" ಎಂಬ ವಾಗ್ದಾನವನ್ನು ಕೊಟ್ಟರು.  ಫೆಬ್ರುವರಿಯಲ್ಲಿ   "ದೇವರ ವಾಕ್ಯ ಸ್ಥಾಪಿತವಾಗಿದೆ {The month of settled}" ಎಂಬ ವಾಗ್ದಾನವನ್ನು ಕೊಟ್ಟರು...

Testimony # 752 -- ಎಷ್ಟು ಅದ್ಭುತವಾಗಿ ನಡೆಸುತ್ತಿದ್ದಾರೆ ಎಂದರೆ ...

Image
 ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏  ನನ್ನ ಹೆಸರು ಸುಜಾತ.   ನಮ್ಮ ಊರು ಬೆಂಗಳೂರು. ನನಗೆ ಈ ಸಾಕ್ಷಿಯನ್ನು ಹೇಳುವುದಕ್ಕೆ ತುಂಬಾ ಸಂತೋಷವಾಗುತ್ತದೆ. ಏಕೆಂದರೆ ನಾವು ನಮಗಾಗಿ ಯಾವಾಗಲೂ ಪ್ರೇಯರ್ ಮಾಡಿಕೊಳ್ಳುತ್ತೇವೆ. ಆದರೆ ಬೇರೆಯವರಿಗೆ ಪ್ರೇಯರ್ ಮಾಡುವಾಗ, ಅದರಲ್ಲಿ ಒಂದು ಬಿಡುಗಡೆ ಸಿಗುವಾಗ, ಆ ಆನಂದ ತುಂಬಾ ದೊಡ್ಡದು.  ನನಗೆ ಪರಿಚಯ ಇರುವವರ ತಾಯಿ ಊಟ ಮಾಡುತ್ತಿರಲಿಲ್ಲ, ಪಾಸ್ಟರ್ ಹತ್ತಿರ ಪ್ರೇಯರ್ ಮಾಡಿಸಿದೆ, ನಂತರ ನಾನು ಅವರನ್ನು ಭೇಟಿ ಮಾಡಿ  ಪ್ರೇಯರ್ ಮಾಡಿದೆ. ಅವರು ಮನೆಗೆ ಹೋಗಿ ಒಂದು ತಾಸಿನಲ್ಲಿ ನಮ್ಮ ತಾಯಿ ಊಟ ಮಾಡುತ್ತಿದ್ದಾರೆ ಎಂದು ಸಾಕ್ಷಿ ಹೇಳಿದರು..  ದೇವರು ಅವರನ್ನು ಎಷ್ಟು ಅದ್ಭುತವಾಗಿ ನಡೆಸುತ್ತಿದ್ದಾರೆ ಎಂದರೆ ಅವರ ಗಂಡನಿಗೂ ಕೆಲಸದ ತೊಂದರೆ ಇತ್ತು. ಅದಕ್ಕೂ ಕೂಡ ಪ್ರೇಯರ್ ಮಾಡಿದ್ದೆ, ಈಗ ಅವರು ಮತ್ತೆ ಕೆಲಸಕ್ಕೆ ಹೋಗುತ್ತಿದ್ದಾರೆ. ದೇವರು ನನ್ನನ್ನು ಬಲವಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ.  ನನ್ನ ಸ್ಟೂಡೆಂಟ್ ಅವರ ತಂದೆಗೆ ರಾತ್ರಿ ಹಾರ್ಟ್ ಅಟ್ಯಾಕ್ ಆಗಿ ಹಾಸ್ಪಿಟಲ್ ಗೆ ಸೇರಿದ್ದರು. ಅವರು ಕೂಡ ಯಾವ ಟ್ರೀಟ್ಮೆಂಟ್ ಇಲ್ಲದೆ, ನೀವು ತುಂಬಾ ಚೆನ್ನಾಗಿದ್ದೀರ ಯಾವ ಟ್ರೀಟ್ಮೆಂಟ್ ಬೇಡ ಎಂದು ಡಾಕ್ಟರ್  ಮನೆಗೆ ಕಳಿಸಿಕೊಟ್ಟಿದ್ದಾರೆ.   ಪಾಸ್ಟರ್ ಪ್ರೇಯರ್ ಮಾಡಿದ ಸ್ವಲ್ಪ ಹೊತ್ತಿಗೆ, ಅವರು ಮನೆಗೆ ಬರಲು ದೇವರು ಸಹಾಯ ಮಾಡಿದ್ದಾರೆ. ದೇವರ ನಾಮಕ್ಕೆ ಮ...