2026 ರ ಏಪ್ರಿಲ್ ತಿಂಗಳ ಪ್ರವಾದನೆಯ ವಾಗ್ದಾನ
Prophetic word for April month
2026 ರ ಏಪ್ರಿಲ್ ತಿಂಗಳ ಪ್ರವಾದನೆಯ ವಾಗ್ದಾನ
ಪುನರುತ್ಥಾನದ ಜೀವಿತ {Resurrected Life}
ಇದನ್ನು ಓದುತ್ತಿರುವ ಸಹೋದರ ಸಹೋದರಿಯರೇ ಯೇಸು ಕ್ರಿಸ್ತನ ನಾಮದಲ್ಲಿ ನಿಮ್ಮನ್ನು ಆಶೀರ್ವದಿಸುತ್ತೇನೆ. ಪ್ರತಿ ತಿಂಗಳ ವಾಗ್ದಾನವನ್ನು ಎದುರು ನೋಡಿ ವಾಕ್ಯವು ನಮ್ಮ ಜೀವನದಲ್ಲಿ ಮಹತ್ತಾದ ಕಾರ್ಯಗಳನ್ನು ಮಾಡುತ್ತಿರುವುದಕ್ಕಾಗಿ ಸ್ತೋತ್ರ. ಮೂರು ತಿಂಗಳು ಕಳೆದು ನಾಲ್ಕನೆಯ ತಿಂಗಳಲ್ಲಿ ಕಾಲಿಟ್ಟಿದ್ದೇವೆ.
ಈ ಸಂದೇಶವನ್ನು ಓದುವಾಗ ವಾಕ್ಯವನ್ನು ಆತ್ಮದಿಂದ ಹೊಂದಿಕೊಳ್ಳಬೇಕು. ಆತ್ಮವಾಗಿಯೂ ಜೀವವಾಗಿಯೂ ಹೊಂದಿಕೊಂಡಿದ್ದೇನೆ ಎಂಬ ಭಾವನೆಯಿಂದ ದೇವರ ವಾಕ್ಯವನ್ನು ಸ್ವೀಕಾರ ಮಾಡಿಕೊಳ್ಳಬೇಕು ಎಂದು ಕೇಳಿಕೊಳ್ಳುತ್ತೇನೆ.
ಈ ಏಪ್ರಿಲ್ ತಿಂಗಳಿನಲ್ಲಿ ಯೇಸು ನಮಗಾಗಿ ಜಜ್ಜಲ್ಪಟ್ಟು, ರಕ್ತವನ್ನು ಸುರಿದು, ಮರಣ ಹೊಂದಿ, ನಮಗಾಗಿ ಮೂರನೆಯ ದಿನದಲ್ಲಿ ಪುನರುತ್ಥಾನವಾಗಿ ಎದ್ದಿದ್ದಾರೆ. ಆದುದರಿಂದ ಈ ತಿಂಗಳ ವಾಗ್ದಾನ ಪುನರುತ್ಥಾನದ ಜೀವಿತ {Resurrected Life}
ಜನವರಿಯಲ್ಲಿ "ಏದೆನ್ ಪುನಃಸ್ಥಾಪನೆ {Eden Restored}" ಎಂಬ ವಾಗ್ದಾನವನ್ನು ಕೊಟ್ಟರು.
ಫೆಬ್ರುವರಿಯಲ್ಲಿ "ದೇವರ ವಾಕ್ಯ ಸ್ಥಾಪಿತವಾಗಿದೆ {The month of settled}" ಎಂಬ ವಾಗ್ದಾನವನ್ನು ಕೊಟ್ಟರು.
ಮಾರ್ಚ್ ತಿಂಗಳಲ್ಲಿ "ಬೆಳವಣಿಗೆಯ ತಿಂಗಳು {The month of growth}" ಎಂಬ ವಾಗ್ದಾನವನ್ನು ಕೊಟ್ಟರು.
ಈ ತಿಂಗಳು "ಪುನರುತ್ಥಾನದ ಜೀವಿತ {The Month of resurrected life}ವನ್ನು ಅನುಭವಿಸುವ ತಿಂಗಳಾಗಿದೆ.
ಪುನರುತ್ಥಾನ ಅಂದರೆ ಯೇಸುವಿನ ಮೂಲಕ ಅದನ್ನು ಶರೀರದಲ್ಲಿ ಅನುಭವಿಸಬೇಕು. ಯೇಸು ಸತ್ತಿರುವುದರಿಂದ ಜೀವಂತವಾಗಿ ಎದ್ದರು ಎನ್ನುವುದಕ್ಕಿಂತ, ಯೇಸು "ನಾನೇ" ಆಗಿ ಸತ್ತರು, "ನಾನೇ" ಆಗಿ ಜೀವಂತವಾಗಿ ಎದ್ದು ಬಂದರು. ಯೇಸು ಸತ್ತು ಮೂರನೇ ದಿನದಲ್ಲಿ ಪುನರುತ್ಥಾನವಾಗಿ ಎದ್ದು ಬಂದಿದ್ದು ಏನೋ ಒಂದು ಸಾಧನೆ ಮಾಡುವುದಕ್ಕೆ ಅಲ್ಲ, ಯೇಸು ನಾನೇ ದೇವರು ಎಂದು ತೋರಿಸಿಕೊಳ್ಳುವುದಕ್ಕೆ ಅಲ್ಲ, ಅವರು ಯಾರು ಎಂದು ತೋರಿಸಿಕೊಳ್ಳುವುದಕ್ಕೆ ಅಲ್ಲ. ಅವರು ನಮ್ಮ ಪರವಾಗಿ ಮಾಡಿದರು. ಪುನರುತ್ಥಾನ ಎನ್ನುವುದು ನಮಗಾಗಿಯೇ.
ಈ ಸೃಷ್ಟಿಯಾಗಲಿ, ಪವಿತ್ರಾತ್ಮನಾಗಲಿ, ವಾಕ್ಯವೆಂಬ ಯೇಸುವಾಗಲಿ, ತಂದೆಯಾದ ದೇವರಾಗಲಿ ಈ ನಾಲ್ಕು ದೇವರಲ್ಲಿರುವ ಒಂದೇ ಭಾಗವಾಗಿದೆ. ಆದುದರಿಂದ ಕಾನುವ ರೂಪದಲ್ಲಿ ಏನಾದರೂ ಆಗಬೇಕಾದರೆ ಪವಿತ್ರಾತ್ಮನ ಪ್ರೇರೇಪಣೆಯಿಂದಲೇ ಆಗಬೇಕೇ ಹೊರತು ಬೇರೆ ರೀತಿಯಲ್ಲಿ ಉಂಟಾಗಲು ಸಾಧ್ಯವಿಲ್ಲ.
ಪವಿತ್ರಾತ್ಮನು ಪ್ರೇರೇಪಿಸುವುದೇ ತಂದೆಯಾದ ದೇವರ ಆಲೋಚನೆಯನ್ನು, ವಾಕ್ಯದ ಮೂಲಕ ಪ್ರಕಟಿಸುವಾಗಲೇ ಪವಿತ್ರಾತ್ಮನು ಕಾರ್ಯ ಮಾಡುವುದು. ಅದೇ ರೀತಿ ವಾಕ್ಯವು ಸಾಧಾರಣವಾಗಿ ಬರುವುದಿಲ್ಲ. ಅದು ದೇವರ ಆಲೋಚನೆಯಾಗಿಯೇ ಇದ್ದರೆ ಮಾತ್ರವೇ ಅಲ್ಲಿ ವಾಕ್ಯವಾಗಿ ಬರಲು ಸಾಧ್ಯ.
ಅದಕ್ಕಾಗಿ ಯೇಸು ಹೇಳಿದರು,-" ನನ್ನ ಸ್ವಂತ ಜ್ಞಾನದಿಂದ, ಬಲದಿಂದ ಏನನ್ನು ಮಾಡುತ್ತಿಲ್ಲ, ನನ್ನ ತಂದೆ ಏನನ್ನು ಹೇಳುತ್ತಿದ್ದಾರೆ ಅದನ್ನೇ ಮಾಡುತ್ತಿದ್ದೇನೆ".
ಪವಿತ್ರಾತ್ಮನು ಕೂಡ ಹೇಳುತ್ತಾನೆ,- "ನಾನು ಕೂಡ ಸ್ವಂತವಾಗಿ ಏನು ಮಾಡುತ್ತಿಲ್ಲ, ಯಾವ ವಾಕ್ಯ ಬಿಡುಗಡೆಯಾಯಿತು ಅದರಂತೆ ಕಾರ್ಯ ಮಾಡುತ್ತೇನೆ". ಇವತ್ತು ನಾವೆಲ್ಲರೂ ಪುನರುತ್ಥಾನವನ್ನು ಹೊಂದಿರುವುದೇ ಈ ಪರಿಕಲ್ಪನೆಯಲ್ಲಿ.
ಉದಾಹರಣೆ: ಒಂದು ಮೊಬೈಲ್ ಅದರ ದೇಹ ಎಷ್ಟೇ ಚೆನ್ನಾಗಿದ್ದರೂ, ಒಳಗೆ ಬ್ಯಾಟರಿ ಇಲ್ಲ ಅಂದರೆ ಅದು ಸತ್ತ ಹಾಗೆ. ಮೊಬೈಲ್ ಅನ್ನೋದು ಒಂದು ಶರೀರದ ಸೃಷ್ಟಿ. ಯಾವ ಉದ್ದೇಶಕ್ಕಾಗಿ ಅದನ್ನು ಸೃಷ್ಟಿಸಲ್ಪಟ್ಟಿತೋ ಅದರ ಹಾಗೆ ಕಾರ್ಯ ಮಾಡಬೇಕು ಅಂದರೆ ಬ್ಯಾಟರಿ ಒಳಗಡೆ ಇರಲೇಬೇಕು. ಆಗಲೇ ಅದರಲ್ಲಿ ಜೀವ ಇರುವುದು, ಅದರ ಉದ್ದೇಶವನ್ನು ನೆರವೇರಿಸುವುದಕ್ಕೆ ಸಾಧ್ಯವಾಗುವುದು.
ಅದರಂತೆಯೇ ಯೇಸುವನ್ನು ಸ್ವಂತ ರಕ್ಷಕನಾಗಿ ಸ್ವೀಕರಿಸಿಕೊಳ್ಳುವುದಕ್ಕಿಂತ ಮುಂಚೆ ಮನುಷ್ಯನು ಕೇವಲ ಬ್ಯಾಟರಿ ಇಲ್ಲದ ಮೊಬೈಲ್ ಹಾಗೆ ಇದ್ದಾನೆ, ಅದರಲ್ಲಿ ಜೀವ ಇರಲಿಲ್ಲ. ಯಾವಾಗ ಮನುಷ್ಯ ಯೇಸುವನ್ನು ಸ್ವಂತ ರಕ್ಷಕನಾಗಿ ಸ್ವೀಕರಿಸಿಕೊಂಡು, ಹೃದಯದಿಂದ ನಂಬಿ, ಬಾಯಿಂದ ಅರಿಕೆ ಮಾಡುವವನು ಪುನರುತ್ಥಾನವನ್ನು ಹೊಂದುತ್ತಾ ಇದ್ದಾನೆ. ದೇವರ ಆತ್ಮನಿಂದ ಹುಟ್ಟುತ್ತಿದ್ದಾನೆ.
ಯೇಸುವೇ ನನ್ನ ರಕ್ಷಕ ಎಂದು ಹೇಳುವ ವಾಕ್ಯವೇ "ಯೇಸು" ಆಗಿರುವುದರಿಂದ ಪವಿತ್ರಾತ್ಮನು ನಿಮ್ಮ ಒಳಗಡೆ ಬಂದು ನಿರಂತರವಾಗಿ ವಾಸಿಸುತ್ತಾನೆ. ಈಗ ನೀನು ದೇವರ ಆತ್ಮನಿಂದ ಹುಟ್ಟಿದ್ದೀಯ. ಇದೇ ಪುನರುತ್ಥಾನ.
ಪವಿತ್ರಾತ್ಮನು ಒಳಗಡೆ ಬಂದ ಮೇಲೆ ಆ ವ್ಯಕ್ತಿ ಯಾವಾಗೆಲ್ಲ ವಾಕ್ಯ ಎಂಬ ಯೇಸುವಿನ ಪ್ರಜ್ಞೆಯಲ್ಲಿರುತ್ತಾನೋ ವಾಕ್ಯದ ಆತ್ಮವಾಗಿರೋ ಪವಿತ್ರಾತ್ಮನ ಪ್ರೇರೇಪಣೆಯಿಂದ ಇರುವುದರಿಂದ ಅವನಿಗೆ ಬರುವ ಆಲೋಚನೆ ತಂದೆಯ ಆಲೋಚನೆಯಾಗಿದೆ. ವಾಕ್ಯವು ಯೇಸು ಮಾತನಾಡುವುದಾಗಿದೆ. ಆ ಮಾತಿನ ಪ್ರಕಾರವೇ ಪವಿತ್ರಾತ್ಮನು ಅವನ ಜೀವಿತದಲ್ಲಿ ಕಾರ್ಯ ಮಾಡುವನಾಗಿದ್ದಾನೆ. ಇದೇ ಪುನರುತ್ಥಾನ.
ನೀವು ಏದೆನ್ ನಲ್ಲಿ ಪುನಸ್ಥಾಪನೆಯಾಗಿದ್ದೀರಿ. ಯೇಸು ಕ್ರಿಸ್ತನ ವಾಕ್ಯವು ಹೇಗೆ ಪರಲೋಕದಲ್ಲಿ ನೆಲೆಯಾಗಿದೆ ದೃಢವಾಗಿ ನೆಲೆಗೊಂಡಿದೆಯೋ ಅದರಂತೆಯೇ ಕಳೆದ ತಿಂಗಳಿನಲ್ಲಿ ಬೆಳವಣಿಗೆಯನ್ನು ಅನುಭವಿಸಿದೆವು. ಅದೇ ರೀತಿ ಇವತ್ತು ವಾಕ್ಯದ ಮೂಲಕ ಇರುವ ಪುನರುತ್ಥಾನದ ಜೀವಿತವನ್ನು ಒಂದೊಂದು ದಿನವೂ ಹೇಗೆ ಅನುಭವಿಸುತ್ತಿದ್ದೇವೆ ಎನ್ನುವುದನ್ನು ಆಸಕ್ತಿಯಿಂದ ಓದಿ.
ರೋಮಾ 6:4
ಹೀಗಿರಲಾಗಿ ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಆತನ ಮರಣದಲ್ಲಿ ಪಾಲುಗಾರರಾಗಿ ಆತನೊಂದಿಗೆ ಹೂಣಲ್ಪಟ್ಟೆವು. ಆದದರಿಂದ ಕ್ರಿಸ್ತನು ಸತ್ತು ತಂದೆಯ ಮಹಿಮೆಯಿಂದ ಜೀವಿತನಾಗಿ ಎಬ್ಬಿಸಲ್ಪಟ್ಟಂತೆಯೇ ನಾವು ಕೂಡ ಜೀವದಿಂದೆದ್ದು ಹೊಸಬರಾಗಿ ನಡಕೊಳ್ಳಬೇಕು.
ಈ ಪುನರುತ್ಥಾನದ ಜೀವಿತ ಎನ್ನುವುದು ಕೊಡಲ್ಪಟ್ಟ ವಿಷಯವಲ್ಲ, ನೀವು ಪುನರುತ್ಥಾನದ ಜೀವಿತದ ಮೂಲಕ ಹುಟ್ಟಿದ್ದಿರಿ ಎಂದು ಅರ್ಥ. ಶರೀರದಲ್ಲಿ ವಾಸ ಮಾಡುತ್ತಿದ್ದ ಹಳೆಯ ಮನುಷ್ಯ ಮರಣ ಹೊಂದಿದ. ಈಗ ದೇವರ ಆತ್ಮನಿಂದ ಅವನನ್ನು ಹೊಸದಾಗಿ ಹುಟ್ಟಿಸಿ, ಮತ್ತೆ ದೇವರೊಂದಿಗೆ ಒಂದಾಗಿ ಜೀವಿಸುವ ಕಾರ್ಯವಾಗಿದೆ.
ಶರೀರದಲ್ಲಿ ಯಾವ ಬದಲಾವಣೆ ಇಲ್ಲದೇ ಇರಬಹುದು. ಆದರೆ ದೇವರೇ ನಿಮ್ಮಲ್ಲಿ ಹುಟ್ಟಿ ಬರುವಾಗ ನಿಮ್ಮ ಭಾವನೆಗಳು, ನಿಮ್ಮಆಲೋಚನೆಗಳು, ನೀವು ಮಾಡುವ ಕಾರ್ಯಗಳು ಎಲ್ಲವೂ ದೇವರ ಪ್ರೇರೇಪಣೆಯಿಂದ ಇರುವಂಥದಾಗಿದೆ.
ದೀಕ್ಷಾಸ್ನಾನದ ಮೂಲಕ ನೀರಿನಲ್ಲಿ ಹೋಗಿ ಹೊರಗಡೆ ಬರುವುದರಿಂದ ರಕ್ಷಣೆಯಲ್ಲ, ದೇವರ ವಾಕ್ಯವು ಆತ್ಮವಾಗಿ, "ಯೇಸುವೇ ನನ್ನ ರಕ್ಷಕ" ಎಂದು ಅರಿಕೆ ಮಾಡುವಾಗ, ಪವಿತ್ರಾತ್ಮನ ಪ್ರೇರೇಪಣೆಯಿಂದ ನೀರಿನಲ್ಲಿ ಮುಳುಗಿ ಎದ್ದು ಬರುವ ಕಾರ್ಯವೇ ನೂತನ ಜೀವನ. ಶರೀರದಲ್ಲಿ ದೀಕ್ಷಾಸ್ನಾನ ತೆಗೆದುಕೊಂಡಿರುವುದರಿಂದ ಆತ್ಮದಲ್ಲಿ ಹುಟ್ಟಲಿಲ್ಲ, ಆತ್ಮದಲ್ಲಿ ಹುಟ್ಟಿದ್ದನ್ನು ಶರೀರದಲ್ಲಿ ದೀಕ್ಷಾಸ್ನಾನ ತೆಗೆದುಕೊಳ್ಳುವುದರ ಮೂಲಕ ವ್ಯಕ್ತಪಡಿಸುತ್ತಿದ್ದೇವೆ ಎಂದು ಅರ್ಥ.
ಪುನರುತ್ಥಾನದ ಜೀವಿತ ಎನ್ನುವುದೇ ಈ ಭೂಲೋಕದಲ್ಲಿರುವ ಜೀವಿತ ಅಲ್ಲ. ಪುನರುತ್ಥಾನದ ಜೀವಿತ ಎನ್ನುವುದೇ ಅದು ಇನ್ನೊಂದು ಮಂಡಲ.
ಕೊಲೊ 3:1
ಆದಕಾರಣ ನೀವು ಕ್ರಿಸ್ತನೊಂದಿಗೆ ಎಬ್ಬಿಸಲ್ಪಟ್ಟಿರುವದರಿಂದ ಮೇಲಿರುವವುಗಳನ್ನು ಹುಡುಕಿರಿ; ಅಲ್ಲಿ ಕ್ರಿಸ್ತನು ದೇವರ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ.
ನಾವು ಲೋಕಕ್ಕೆ ಮರಣ ಹೊಂದಿ, ಪುನರುತ್ಥಾನದ ಜೀವಿತವನ್ನು ಹೊಂದಿಕೊಂಡ ಮೇಲೆ, ಈ ಲೋಕದ ಜ್ಞಾನ ಮತ್ತು ಪ್ರಜ್ಞೆಯಿಂದ ಜೀವಿಸದೇ, ಆತ್ಮದ ಮಂಡಲದಲ್ಲಿ ದೇವರು ನಮಗಾಗಿ ಎಂಥ ಜೀವಿತವನ್ನು ಇಟ್ಟಿದ್ದಾರೋ, ಕಾಣದೇ ಇರುವ ಆ ಜೀವಿತವನ್ನು ನಮ್ಮ ಶರೀರದಲ್ಲಿ ಕಾಣುವ ರೂಪದಲ್ಲಿ ಅನುಭವಿಸಿ, ಪ್ರಕಟಿಸುವವರಾಗಿರುತ್ತೇವೆ. ನಮ್ಮ ಶರೀರದ ಮೂಲಕ ಬರುವ ಆಲೋಚನೆಗಳು, ಮಾತುಗಳು ಮತ್ತು ಕ್ರಿಯೆಗಳು ಎಲ್ಲವೂ ಆತ್ಮದ ಮಂಡಲವನ್ನು ಪ್ರಕಟಪಡಿಸುತ್ತವೆ.
1 ಪೇತ್ರನು 1:23
ನೀವು ಪುನರ್ಜನ್ಮ ಹೊಂದಿದವರಾಗಿದ್ದೀರಲ್ಲಾ; ಆ ಜನ್ಮವು ನಾಶವಾಗುವ ಬೀಜದಿಂದ ಉಂಟಾದದ್ದಲ್ಲ, ನಾಶವಾಗದ ಬೀಜದಿಂದಲೇ ಉಂಟಾದದ್ದು. ಅದು ದೇವರ ಸದಾಜೀವವುಳ್ಳ ವಾಕ್ಯದ ಮೂಲಕವಾಗಿ ಉಂಟಾಯಿತು.
ನಾಶವಾಗದ ಬೀಜವೆಂಬ ದೇವರ ವಾಕ್ಯದ ಮೂಲಕ ಪುನರುತ್ಥಾನವಾಗಿದ್ದೇನೆ ಎಂದು ಪೇತ್ರನು ಹೇಳುತ್ತಾನೆ. ಈಗ ನಾವು ಸಾಧಾರಣವಾದವರಲ್ಲ. ಯೇಸುಕ್ರಿಸ್ತನನ್ನು ಸ್ವಂತ ರಕ್ಷಕನಾಗಿ ಸ್ವೀಕರಿಸಿಕೊಂಡು, ದೇವರ ಸ್ವಭಾವಗಳಿಂದ, ದೇವರ ಆಲೋಚನೆಗಳಿಂದ ತುಂಬಿರುವವರು, ದೇವರನ್ನು ಹೊತ್ತುಕೊಂಡು ಓಡಾಡುವವರಾಗಿದ್ದೇವೆ. ಅದಕ್ಕಾಗಿ ಪೌಲನು ಹೇಳುತ್ತಾನೆ,- "ಇನ್ನು ನನ್ನ ಯೋಚನೆಯಲ್ಲ, ಕ್ರಿಸ್ತನ ಮನಸ್ಸೇ ನನಗಿರುವುದು".
ಯೆಹೆಜ್ಕೇಲ 36:26
ನಾನು ನಿಮಗೆ ಹೊಸ ಮನಸ್ಸನ್ನು ಕೊಟ್ಟು ನಿಮ್ಮಲ್ಲಿ ನೂತನ ಸ್ವಭಾವವನ್ನು ಹುಟ್ಟಿಸುವೆನು; ಕಲ್ಲಾದ ಹೃದಯವನ್ನು ನಿಮ್ಮೊಳಗಿಂದ ತೆಗೆದು ಮೃದುವಾದ ಹೃದಯವನ್ನು ನಿಮಗೆ ದಯಪಾಲಿಸುವೆನು.
ಕಲ್ಲಾದ ಹೃದಯ ಅಂದರೆ ದೇವರೊಂದಿಗೆ ಇರಲು ಬಯಸದೆ ಇರುವ ಹೃದಯ, ದೇವರ ವಾಕ್ಯವನ್ನು ಆತ್ಮದಲ್ಲಿ ಸ್ವೀಕರಿಸುವುದಕ್ಕೆ ಬಿಡದೆ ಇರುವ ಹೃದಯ, ಅದೇ ಕಲ್ಲಾದ ಹೃದಯ. ಅದಕ್ಕಾಗಿ ಒಂದು ಮೃದುವಾದ ಹೃದಯವನ್ನು ಕೊಡುತ್ತೇನೆ, ಅದು ದೇವರೊಂದಿಗೆ ಒಂದಾಗಿ ದೇವರ ಪ್ರಜ್ಞೆಯಲ್ಲಿದ್ದು ಪ್ರಕಟಣೆ ಬರುವಾಗ, ವಾಕ್ಯ ಬರುವಾಗ ಅಭಿಷೇಕಿಸಲ್ಪಟ್ಟು ಆತ್ಮವಾಗಿಯೂ ಜೀವವಾಗಿಯೂ ಹೊಂದಿಕೊಳ್ಳುವಂತೆ ಹೃದಯವನ್ನು ಕೊಡುತ್ತೇನೆ ಎಂದು ದೇವರು ಹೇಳುತ್ತಾರೆ .
ಯೋಹಾನ 3:6
ದೇಹದಿಂದ ಹುಟ್ಟಿದ್ದು ದೇಹವೇ; ಆತ್ಮನಿಂದ ಹುಟ್ಟಿದ್ದು ಆತ್ಮವೇ.
ಸತ್ಯವನ್ನು ಕೇಳುವಾಗ ಸತ್ಯದ ಆತ್ಮ ನಿಮ್ಮ ಒಳಗಡೆ ಬಂದುಬಿಟ್ಟಿದೆ ಅಂದರೆ ಅದರ ಅರ್ಥ ಏನೆಂದರೆ ಈಗ ನೀವು ಆತ್ಮದಿಂದ ಹುಟ್ಟಿದವರಾಗಿದ್ದೀರಿ.
"ಹೊಸ ಆತ್ಮ" ಎನ್ನುವುದು "ಮೂಲ'".
"ಹೊಸ ಹೃದಯ" ನೀವು ಯಾರಾಗಿದ್ದೀರಿ ಎಂದು ವ್ಯಕ್ತಪಡಿಸುವುದು.
ನಾವು ಆತ್ಮದಲ್ಲಿ ದೇವರ ಹಾಗೆ "ಪರಿಪೂರ್ಣರಾಗಿದ್ದೇವೆ" ಎನ್ನುವಾಗ ದೇವರ ಪರಿಪೂರ್ಣತೆಯನ್ನು ಶರೀರದಲ್ಲಿ ವ್ಯಕ್ತಪಡಿಸುತ್ತೇವೆ. ನಾವು ಆತ್ಮದಲ್ಲಿ "ನೀತಿವಂತರಾಗಿದ್ದೇವೆ" ಎನ್ನುವಾಗ ನೀತಿವಂತನ ಸ್ವಭಾವವನ್ನು ಪ್ರಕಟಿಸುತ್ತೇವೆ. ಆತ್ಮದಲ್ಲಿ ದೇವರೊಂದಿಗೆ ಸೇರಿ ಒಂದಾಗಿದ್ದೇವೆ ಎನ್ನುವಾಗ ದೇವರ ಜೊತೆ ಇರುವ ಕಾರ್ಯವನ್ನು ನಮ್ಮ ಭಾವನೆಗಳ ಮೂಲಕ ವ್ಯಕ್ತಪಡಿಸುತ್ತೇವೆ. "ನೂತನ ಆತ್ಮ"ದೊಂದಿಗೆ "ನೂತನ ಹೃದಯ" ಒಂದಾಗುವಾಗ ದೇವರ ಮೇಲೆ ಬಯಕೆ ಮತ್ತು ಆಸಕ್ತಿಯನ್ನು ವ್ಯಕ್ತಪಡಿಸುತ್ತೇವೆ.
ಇಬ್ರಿಯರಿಗೆ 8:10
ಆ ದಿನಗಳು ಬಂದ ಮೇಲೆ ನಾನು ಇಸ್ರಾಯೇಲ್ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವದು –
ನನ್ನ ಆಜ್ಞೆಗಳನ್ನು ಅವರ ಮನಸ್ಸಿನಲ್ಲಿ ಇಡುವೆನು,
ಅವರ ಹೃದಯದ ಮೇಲೆ ಅವುಗಳನ್ನು ಬರೆಯುವೆನು;
ನಾನು ಅವರಿಗೆ ದೇವರಾಗಿರುವೆನು,
ಅವರು ನನಗೆ ಪ್ರಜೆಯಾಗಿರುವರು;.
ಈಗ ಆ ನೂತನ ಹೃದಯದ ಕಾರ್ಯಗಳನ್ನು ನಮ್ಮ ಮನಸ್ಸಿನಲ್ಲಿ ನಮ್ಮ ಹೃದಯದಲ್ಲಿ ಬರೆಯುವವರೂ ಕೂಡ ಅವರೇ ಆಗಿದ್ದಾರೆ.
ಅಲ್ಲಿ ಮೂರು ಪದಗಳಿವೆ. ನಿಯಮ, ಮನಸ್ಸು, ಹೃದಯ
ನಿಯಮ ಅಂತ ಹೇಳುವಾಗೆಲ್ಲ ದೇವರು ಹೇಗಿದ್ದಾರೋ ಆ ಒಂದು ಸ್ವಭಾವವನ್ನು ಹೃದಯದಲ್ಲಿ ಮನಸ್ಸಿನಲ್ಲಿ ಇಟ್ಟಿದ್ದಾರಂತೆ. ಇದರ ಅರ್ಥ ಏನೆಂದರೆ ನೀನು ಹೇಗೆ ಇರಬೇಕೆಂಬ ನಿಯಮಗಳು ಮನಸ್ಸಿನಲ್ಲಿ ಇವೆ, ಆದರೆ ಹೃದಯ ಏನನ್ನು ಬಯಸುತ್ತದೆ ಅದನ್ನೇ ಮಾಡುತ್ತದೆ.
{ರೋಮಾ 8:2
ಯಾಕಂದರೆ ಜೀವವನ್ನುಂಟುಮಾಡುವ ಪವಿತ್ರಾತ್ಮನಿಂದಾದ ನಿಯಮವು ನಿನ್ನನ್ನು ಪಾಪಮರಣಗಳಿಗೆ ಕಾರಣವಾದ ನಿಯಮದಿಂದ ಕ್ರಿಸ್ತ ಯೇಸುವಿನ ಮೂಲಕ ಬಿಡಿಸಿತು.}
ಇಲ್ಲಿ ನಿಯಮ ಅಂದರೆ 10 ಕಟ್ಟಳೆಗಳಲ್ಲ, ಇದು ಪುನರುತ್ಥಾನದ ಜೀವನದ ನಿಯಮ, ದೇವರ ನಿಬಂಧನೆ ಇಲ್ಲದೆ ಇರುವ ಪ್ರೀತಿಯ ನಿಯಮ, ಇದೇ ದೇವರ ನೀತಿಯ ನಿಯಮ, ದೇವರ ನಂಬಿಕೆಯ ನಿಯಮ.
ದೇವರ ವಾಕ್ಯ, ದೇವರ ಆಲೋಚನೆಯ ಪ್ರಕಾರ ಮಾಡುವುದಕ್ಕೆ ಬಯಕೆ, ಹಸಿವು, ದಾಹ ನಮ್ಮ ಹೃದಯದಲ್ಲಿದೆ . ವಾಕ್ಯದ ಪ್ರಕಾರದ ನಿಯಮಗಳನ್ನೇ ನಮ್ಮ ಹೃದಯ ಆಸೆ ಪಡುವಂತೆ, ಆ ಆಸೆಯನ್ನು ಸಹ ನಾನೇ ಹುಟ್ಟಿಸುತ್ತೇನೆ. ನಾವು ನೀವು ವಾಕ್ಯಭರಿತರಾಗಿ ಆತ್ಮಭರಿತರಾಗಿ ಇರುವಾಗ ಪಾಪ ಮಾಡಬಾರದೆಂದು ಕಷ್ಟಪಟ್ಟು ಹೋರಾಡುವುದಿಲ್ಲ. ನಿಮಗೆ ಪಾಪ ಮಾಡುವುದಕ್ಕೆ ಇಷ್ಟ ಇರುವುದಿಲ್ಲ. ದೇವರ ಕಾರ್ಯಗಳನ್ನ ಮಾಡುವುದಕ್ಕೆ ಇಷ್ಟ ಇರುತ್ತದೆ.
ನೂತನ ಹೃದಯವು ನಾವು ಒಂದಾಗಿರುತ್ತೇವೆ. ನೂತನ ಆತ್ಮವೂ, ಹೃದಯವು ಒಂದಾಗಿ ಅನ್ಯೋನ್ಯತೆಯಲ್ಲಿ ಇರುವುದು ಯಾವಾಗ ಅಂದರೆ ಇಂತಹ ಸತ್ಯವನ್ನು ಕೇಳುವಾಗ, ಸತ್ಯದ ಆತ್ಮ ನಮ್ಮ ಮನಸ್ಸನ್ನು ಮಾನಸಾಂತರಪಡಿಸಿ ಅದರಂತೆ ನಡೆಸುವಂಥದಾಗಿದೆ. ಪುನರುತ್ಥಾನ ಹೊಂದುವುದಕ್ಕೆ ಮುಂಚೆ ನಾವು ಯಾವ ಕಡೆ ಹೋಗಬೇಕು ಅಂತ ಗೊತ್ತಿಲ್ಲದೆ ಗೊಂದಲದಲ್ಲಿ ಓಡಾಡುತ್ತಾ ಇರುತ್ತಾರೆ. ಆದರೆ ಪುನರುತ್ಥಾನದ ಜೀವನ ನಮ್ಮನ್ನು ನಡೆಸುವಾಗ ನಾವು ಹೋಗಬೇಕಾಗಿರುವ ದಾರಿಯಲ್ಲಿ ಸರಿಯಾಗಿ ಹೋಗುತ್ತಾ ಇರುತ್ತೇವೆ. ಈ ತಿಂಗಳು ನೂತನ ಜೀವನದ ತಿಂಗಳು.
ಪುನರುತ್ಥಾನ ಹೊಂದುವಾಗ ನಿಮ್ಮ ಆತ್ಮ ನೂತನವಾಯಿತು. ಅದರಂತೆ ನಿಮ್ಮ ಪ್ರಾಣ, ನಿಮ್ಮ ಮನಸ್ಸು ಕೂಡ ನೂತನವಾಗಬೇಕು. ಇದನ್ನು ಕೂಡ ಅವರೇ ಮಾಡುತ್ತಿದ್ದಾರೆ ಎನ್ನುವ ಕಾರ್ಯವನ್ನು ಒಂದು ಸತ್ಯವೇದದ ಘಟನೆಯ ಆಧಾರದ ಮೇಲೆ ನೋಡಿಕೊಳ್ಳೋಣ.
1 ಸಮುವೇಲನು 24:4
ಜನರು ದಾವೀದನಿಗೆ – ನಿನ್ನ ಶತ್ರುವನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು; ಆಗ ನೀನು ಅವನನ್ನು ಮನಸ್ಸಿಗೆ ಬಂದಂತೆ ನಡಿಸಬಹುದು ಎಂದು ಯೆಹೋವನು ನಿನಗೆ ಹೇಳಿದ ಮಾತು ನೆರವೇರುವ ದಿವಸ ಇದೇ ಅಂದಾಗ ಅವನೆದ್ದು ಮೆಲ್ಲಗೆ ಹೋಗಿ ಸೌಲನ ನಿಲುವಂಗಿಯ ಮೂಲೆಯನ್ನು ಕತ್ತರಿಸಿಕೊಂಡನು.
ಅಯ್ಯೋ ಮತ್ತೆ ಇವನು ರಾಜ ಆಗಿಬಿಟ್ಟರೆ ನನ್ನದೆಲ್ಲಾ ಕಳೆದುಕೊಂಡು ಬಿಡುತ್ತೇನೆ ಎಂದು ಹೊಟ್ಟೆ ಕಿಚ್ಚು, ದ್ವೇಷ ಹೇಗಾದರೂ ಇವನು ಇದ್ದರೆ ನನ್ನ ಆಳ್ವಿಕೆ ರಾಜ್ಯ ಹೋಗಿ ಬಿಡುತ್ತೆ. ಆ ಭಾವನೆಯಿಂದ ಈಗ ದಾವೀದನನ್ನು ಕೊಲ್ಲುವುದಕ್ಕೆ ಹುಡುಕುತ್ತಾ ಇದ್ದಾನೆ.
ಅವನನ್ನು ಸಾಯಿಸಿಬಿಡು, ಅವನು ನಿನ್ನ ಶತ್ರು, ಅವನು ನಿನ್ನ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ. ಈ ಅವಕಾಶ ಬಿಟ್ಟುಬಿಡಬೇಡ ಎಂದು ಅವನ ಜೊತೆ ಇರುವವರು ಹೇಳಿದರು. ಆದರೆ ದಾವೀದನು ಸಾಯಿಸಲಿಲ್ಲ, ಹೊಡೆಯಲಿಲ್ಲ ಸುಮ್ಮನೆ ವಸ್ತ್ರವನ್ನು ಕತ್ತರಿಸಿದ.
1 ಸಮುವೇಲನು 24:6
ಅವನು ತನ್ನ ಜನರಿಗೆ – ಅವನು ಯೆಹೋವನಿಂದ ಅಭಿಷೇಕಿಸಲ್ಪಟ್ಟವನೂ ನನ್ನ ಒಡೆಯನೂ ಆಗಿದ್ದಾನೆ; ನಾನು ನಿಮ್ಮ ಮಾತು ಕೇಳಿ ಯೆಹೋವನ ಅಭಿಷಿಕ್ತನಿಗೆ ವಿರೋಧವಾಗಿ ಕೈಯೆತ್ತದಂತೆ ಯೆಹೋವನೇ ನನಗೆ ಅಡ್ಡಿಮಾಡಲಿ ಎಂದು ಹೇಳಿದನು.
ನಾನು ಅಭಿಷೇಕ ಮಾಡಲ್ಪಟ್ಟವನನ್ನು ಸಾಯಿಸುವುದಿಲ್ಲ. ದೇವರು ಅವನನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳುತ್ತಾನೆ.
1 ಸಮುವೇಲನು 24:5
ಅನಂತರದಲ್ಲಿ ಸೌಲನ ನಿಲುವಂಗಿಯ ಮೂಲೆಯನ್ನು ಕತ್ತರಿಸಿದ್ದಕ್ಕಾಗಿ ಅವನ ಮನಸ್ಸಾಕ್ಷಿಯು ಅವನನ್ನು ಹಂಗಿಸತೊಡಗಿತು.
ಸೌಲನನ್ನು ಸಾಯಿಸದೆ ಸುಮ್ಮನೆ ವಸ್ತ್ರದ ಬಟ್ಟೆಯ ಕೊನೆಯಲ್ಲಿ ಕತ್ತರಿಸುತ್ತಾನೆ. ಅದನ್ನು ಕತ್ತರಿಸಿದ್ದು ಕೂಡ ಅವನಿಗೆ ಮನಸ್ಸಿಗೆ ನೋವು ಉಂಟಾಗಿದ್ದು. ಇದೇ ನೂತನ ಹೃದಯದ ಸ್ವಭಾವ..
1 ಸಮುವೇಲನು 24:12
ಯೆಹೋವನೇ ನಮ್ಮ ಉಭಯರ ವ್ಯಾಜ್ಯವನ್ನು ತೀರಿಸಲಿ; ಆತನೇ ನನಗೋಸ್ಕರ ನಿನಗೆ ಮುಯ್ಯಿ ಸಲ್ಲಿಸಲಿ; ನಾನಂತೂ ನಿನಗೆ ವಿರೋಧವಾಗಿ ಕೈಯೆತ್ತುವದಿಲ್ಲ.
ಪ್ರವಾದನೆಯ ಘೋಷಣೆ :
ಈ ತಿಂಗಳು ನಮಗೆ ಯಾರೆಲ್ಲಾ ದ್ರೋಹ ಮಾಡಿದ್ದಾರೆ, ದ್ವೇಷವಾಗಿದ್ದಾರೆ, ಶತ್ರುವಾಗಿದ್ದಾರೆ, ನಮ್ಮ ನೆಮ್ಮದಿಯನ್ನು ಕೆಡಿಸುತ್ತಿದ್ದಾರೆ, ನಮ್ಮ ಸಮಾಧಾನವನ್ನು ಕೆಡಿಸುತ್ತಿದ್ದಾರೆ. ಈ ಸತ್ಯ ನಮ್ಮ ನೂತನ ಆತ್ಮ ಮಾತ್ರ ಅಲ್ಲ ನಮ್ಮ ಹೃದಯವನ್ನು ನೂತನ ಪಡಿಸುವುದರಿಂದ ದೇವರು ಅವರನ್ನು ನೋಡಿಕೊಳ್ಳಲಿ. ನಾನು ಅವರಿಗೆ ಏನೂ ಹಾನಿ ಮಾಡುವದಿಲ್ಲ. ನಾನು ಅವರನ್ನು ಆಶೀರ್ವದಿಸುತ್ತಾ ಇದ್ದೀನಿ.
ಯಾವಾಗ ಶರೀರ ಕಾರ್ಯದ ನಿಮಿತ್ತವಾಗಿ ನಮ್ಮ ಮನಸ್ಸು ದುಃಖವಾಗಿರುವಾಗ, ನಮ್ಮ ಸಮಾಧಾನ ಕೆಡುವಾಗ ಪ್ರತಿಕ್ರಿಯಿಸುತ್ತಾ ಇದ್ದೀವಿ. ಶರೀರ ಕಾರ್ಯಕ್ಕೆ ಪ್ರತಿಕ್ರಿಯಿಸುತ್ತಿರುವಾಗ ಶರೀರವಾಗಿದೆ. ಆದರೆ ಶರೀರದಲ್ಲಿ ಒಂದು ಕಾರ್ಯ ಹುಟ್ಟಿದ್ದರೂ ಆತ್ಮದ ಸ್ವಭಾವವನ್ನು ವ್ಯಕ್ತಪಡಿಸುವನು ಆತ್ಮದಿಂದ ಹುಟ್ಟಿದವನಾಗಿದ್ದಾನೆ. ಆದ್ದರಿಂದ ಆತ್ಮದ ಫಲವನ್ನು ಅನುಭವಿಸುವವನಾಗಿದ್ದಾನೆ.
ನಾನು ನೂತನ ಹೃದಯ ಹೊಂದಿರುವನು. ನಾನು ನೂತನ ಆತ್ಮದಿಂದ ತುಂಬಿರುವನು. ಅದರ ಸ್ವಭಾವ ನಾನು ಇದರ ಬಗ್ಗೆ ಒಂದು ಕಾರ್ಯ ಮಾಡುವುದಲ್ಲ, ದೇವರು ಇದರ ಬಗ್ಗೆ ಕಾರ್ಯ ಮಾಡಲಿ. ನಾನು ಏನು ಹಾನಿ ಮಾಡುವುದಿಲ್ಲ, ನನ್ನ ಸಮಾಧಾನವನ್ನು ಕೆಡಿಸುವುದಕ್ಕೆ ಬಿಡುವುದಿಲ್ಲ. ಎಂದು ಹೇಳುವಾಗ ಶತ್ರುವೇ ಅವನನ್ನು ಆಶೀರ್ವದಿಸುತ್ತಾ ಇದ್ದಾನೆ.
ಸೌಲ : ಪುನರುತ್ಥಾನವನ್ನು ಕಳೆದುಕೊಂಡಿರುವ, ಹೊಂದಿಕೊಳ್ಳದಿರುವ ಸ್ವಭಾವವನ್ನು ವ್ಯಕ್ತಪಡಿಸುತ್ತಾನೆ.
ದಾವೀದ: ಪುನರುತ್ಥಾನದ ಜೀವವನ್ನು ಹೊಂದಿರುವ ಕಾರ್ಯವನ್ನು ವ್ಯಕ್ತಪಡಿಸುತ್ತಾನೆ.
ಪುನರುತ್ಥಾನ ಹೊಂದದೆ ಇರುವನು ಯಾವಾಗಲೂ ಏನು ಆಗುತ್ತದೆ ಎನ್ನುವ ಭಾವನೆಯಲ್ಲಿ ಇರುತ್ತಾನೆ.
ಆದರೆ ಪುನರುತ್ಥಾನ ಹೊಂದಿರುವನು ದೇವರಲ್ಲಿ ಭದ್ರವಾಗಿ ಇದ್ದೇನೆ,ದೇವರಲ್ಲಿ ನಾನು ಸುರಕ್ಷಿತವಾಗಿದ್ದೇನೆ. ಯಾವ ಭಯ, ಗೊಂದಲ ಇಲ್ಲ ದೇವರು ನನ್ನ ಕೈಬಿಡುವುದಿಲ್ಲ,ಎನ್ನುವ ನಂಬಿಕೆಯಲ್ಲಿ ಇರುತ್ತಾನೆ.
ನಿಮ್ಮ ಹೃದಯ ಇವತ್ತು ನೂತನವಾಗಿದ್ದು, ಈ ತಿಂಗಳು ಪೂರ್ತಿ ನೂತನ ಹೃದಯದ ಮಹಿಮೆಯನ್ನು ನೀವು ಅನುಭವಿಸುವಿರಿ.
ನಿಮ್ಮ ಆಲೋಚನೆಗಳು, ನಿಮ್ಮ ಮಾತುಗಳು ವ್ಯತ್ಯಾಸವಾಗಿರುವುದು. ಕ್ಷಮಿಸುವುದಕ್ಕೆ ಆಗದೇ ಇರುವವರನ್ನು ಸುಲಭವಾಗಿ ನಿಮ್ಮ ನೂತನ ಹೃದಯ ಕ್ಷಮಿಸುವುದು.
ನಾನು ದೇವರಿಗೋಸ್ಕರ ಈ ಕಾರ್ಯ ಮಾಡುವುದಕ್ಕೆ ಆಗುತ್ತಿಲ್ಲ ಎಂದು ಕಾರಣ ಹೇಳುವ, ಸಭೆಗೆ ಹೋಗುವುದಕ್ಕೆ ಆಗುತ್ತಿಲ್ಲ, ದೇವರ ಪ್ರಸನ್ನತೆಯಲ್ಲಿ ಇರುವುದಕ್ಕೆ ಆಗುತ್ತಿಲ್ಲ ಎನ್ನುವ ಕಾರ್ಯಗಳು ನಿರ್ಮೂಲ ಆಗಿ ನಿಮ್ಮ ಆಸೆಯೇ ಆತನ ಪ್ರಸನ್ನತೆಯಲ್ಲಿ ಇರುವುದು.
ನಿಮ್ಮ ಆಸೆಯೇ ದೇವರಿಗೋಸ್ಕರ ಕಾರ್ಯ ಮಾಡಬೇಕು ಎನ್ನುವುದು. ನಿಮ್ಮ ಆಸೆಯೇ ದೇವರ ನಾಮವನ್ನು ಮಹಿಮೆ ಪಡಿಸುವುದು. ನೂತನ ಹೃದಯದ ಪ್ರೇರೇಪಣೆಯಿಂದ ಈ ತಿಂಗಳಿನಲ್ಲಿ ಒಂದೊಂದು ದಿನವೂ ಜೀವಿಸುತ್ತೀರಿ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.
ನಿಮ್ಮ ಆತ್ಮ, ನಿಮ್ಮ ಪ್ರಾಣ ನೂತನ ಆತ್ಮದೊಂದಿಗೆ ನೂತನ ಹೃದಯ ಸೇರಿ ಒಂದಾಗಿರುವುದರಿಂದ ಅದರ ಮಹಿಮೆಯನ್ನು ನಿಮ್ಮ ಶರೀರ, ಕುಟುಂಬ, ಮಕ್ಕಳು, ಕೆಲಸ, ಬಿಜಿನೆಸ್ ನೀವು ಕೈ ಇಟ್ಟು ಮಾಡುವ ಕಾರ್ಯಗಳು, ನಿಮ್ಮ ಫೈನಾನ್ಸ್, ನಿಮ್ಮ ಆರೋಗ್ಯ ಎಲ್ಲ ಪುನರುತ್ಥಾನ ಜೀವದ ಫಲಗಳಾಗಿಯೇ ಇರುವುದು.
ನಿನ್ನ ನೂತನ ಹೃದಯದ ಸ್ವಭಾವವನ್ನು ಮಾತ್ರ ವ್ಯಕ್ತಪಡಿಸುತ್ತೇನೆ ಎನ್ನುವಾಗ ಅದರ ಫಲ ರಾಜನ ಸೀಟಿನಲ್ಲಿ ಕೂಡಿಸುತ್ತದೆ. ರಾಜನ ಆಳ್ವಿಕೆ ಮಾಡುತ್ತದೆ, ಸಾಧಾರಣ ಆಳ್ವಿಕೆಯಲ್ಲ, ಆಶೀರ್ವಾದವಾಗಿ, ಜಯವಾಗಿ ಆಳ್ವಿಕೆ ಮಾಡುವ ರೀತಿಯಲ್ಲಿ ನಿಮ್ಮ ಫಲ ಇರುವುದು. ಅದರ ಫಲವನ್ನು ಪರಿಪೂರ್ಣ ಅನುಭವಿಸುತ್ತೀರಿ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ 🙏
ತಿಂಗಳ ಪ್ರವಾದನೆಯ ಅರಿಕೆ :
ಕ್ರಿಸ್ತನೇ ನನ್ನ ಜೀವ
ಪುನರುತ್ಥಾನವು ಭವಿಷ್ಯದಲ್ಲಿಲ್ಲ— ಅದು ಈಗ ನನ್ನೊಳಗೆ ಜೀವಂತವಾಗಿದೆ
ನಾನು ಹೊಸ ಜೀವನದಲ್ಲಿ ನಡೆಯುತ್ತೇನೆ
ನಾನು ಆತ್ಮದ ಪ್ರಕಾರ ಬದುಕುತ್ತೇನೆ, ಮಾಂಸದ ಪ್ರಕಾರ ಅಲ್ಲ
ಪುನರುತ್ಥಾನದ ಜೀವನ ನನ್ನ ದಿನನಿತ್ಯದ ಅನುಭವವಾಗಿದೆ
ರೋಗಕ್ಕೆ ನನ್ನೊಳಗೆ ಸ್ಥಳವಿಲ್ಲ. ನಾನು ದೈವಿಕ ಆರೋಗ್ಯದಲ್ಲಿ ನಡೆಯುತ್ತೇನೆ
ದೇವರ ನಿಯಮವು ನನ್ನ ಹೃದಯದಲ್ಲಿ ಬರೆಯಲ್ಪಟ್ಟಿದೆ.ದೇವರಿಗೆ ಇಷ್ಟವಾದುದನ್ನೇ ನಾನು ಬಯಸುತ್ತೇನೆ
ಯೇಸು ಕ್ರಿಸ್ತನ ಮೂಲಕ ನಾನು ಜೀವನದಲ್ಲಿ ಆಳುತ್ತೇನೆ. ನಾನು ದೈವಿಕ ಅಧಿಕಾರದಲ್ಲಿ ನಡೆಯುತ್ತೇನೆ
ನನ್ನ ಜೀವನದಲ್ಲಿನ ಸತ್ತ ಭಾಗಗಳು ಜೀವಂತವಾಗುತ್ತಿವೆ. ನಾನು ಎಲ್ಲಿಗೆ ಹೋದರೂ ದೇವರ ಜೀವವನ್ನು ಹೊತ್ತುಕೊಂಡು ಹೋಗುತ್ತೇನೆ
ನಾನು ದೇವರ ಆತ್ಮದಿಂದ ಶಕ್ತಿಯುತನಾಗಿದ್ದೇನೆ.
Christ is my life
Resurrection is not in my future— It is alive in me now
I walk in newness of life
I live from the Spirit, not the flesh
Resurrection life is my daily reality
Sickness has no place in me. I walk in divine health
God’s law is written in my heart. I desire what is pleasing to God
I reign in life through Jesus Christ. I walk in divine authority
Every dead area in my life is coming alive. I carry the life of God wherever I go.
I am energized by the Spirit of God
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY

Glory to God 🙏
ReplyDeleteGLORY to god 🔥
ReplyDeleteGlory to Jesus 🙏🏻
ReplyDeletePowerful revelation Pastor 🙏🏻🙏🏻🔥🔥👏🏻👏🏻
Glory to God 🔥🔥🔥
ReplyDeleteGlory to God 🙏🙏🙏
ReplyDeleteGlory to God🙌🔥👏
ReplyDelete