Posts

Showing posts from October, 2025

Testimony #703 - ನನ್ನ ಶರೀರದಲ್ಲಿ ತುಂಬಾ ರೋಗಗಳಿದ್ದವು

Image
  ದೇವರ ನಾಮಕ್ಕೆ ಮಹಿಮೆ ಉಂಟಾಗಲಿ. ನನ್ನ ಹೆಸರು ಈರಮ್ಮ.  ನನ್ನ ಶರೀರದಲ್ಲಿ ತುಂಬಾ ರೋಗಗಳಿದ್ದವು, ಒಂದಕ್ಕೆ ಚಿಕಿತ್ಸೆ ತೆಗೆದುಕೊಳ್ಳಲು ಹೋದರೆ ಇನ್ನೊಂದು ಖಾಯಿಲೆ ಕಂಡು ಬರುತ್ತಿತ್ತು. ಗಂಟಲು, ಬೆನ್ನು, ಭುಜದಲ್ಲಿ, ಹೊಟ್ಟೆ, ಗರ್ಭಕೋಶ, ಪಿತ್ತಕೋಶ, ಹೃದಯ ಒಂದೊಂದು ಅಂಗಗಳಲ್ಲಿ ಒಂದೊಂದು ರೀತಿಯ ಸಮಸ್ಯೆ ಇರುತ್ತಿತ್ತು.   ಡಾಕ್ಟರ್ ಮತ್ತು ಜನರು ಹೇಳಿದಾಗ ಸ್ಕ್ಯಾನಿಂಗ್ ಮತ್ತು ಎಂಆರ್ ಐ ಮಾಡಿಸಿಕೊಂಡು ಮೆಡಿಸಿನ್ ತೆಗೆದುಕೊಳ್ಳುತ್ತಿದ್ದೆ.  ಪಾಸ್ಟರ್ ನನಗಾಗಿ ಪ್ರಾರ್ಥಿಸಿದರು ಮತ್ತು ಅವರು ಹೇಳಿದಂತೆ ಗುಣುಗುಟ್ಟುವುದನ್ನು ಬಿಟ್ಟು, ಎಲ್ಲರನ್ನೂ ಕ್ಷಮಿಸಿ, ನನ್ನ ತಪ್ಪುಗಳನ್ನು ಒಪ್ಪಿಕೊಂಡು, ಮನಸ್ಸಿನಲ್ಲಿ ಯಾವ ಕಹಿ ಭಾವನೆಯನ್ನು ಇಟ್ಟುಕೊಳ್ಳದೆ, ಎಲ್ಲರಿಗೂ ಪ್ರಾರ್ಥಿಸುತ್ತಾ, ಎಲ್ಲರನ್ನೂ ಆಶೀರ್ವದಿಸುತ್ತಾ ಪ್ರಾರ್ಥಿಸುತ್ತಿದ್ದೆ. ಪಾಸ್ಟರ್ ಬಿಡುಗಡೆ ಮಾಡುವ ವಾಕ್ಯಗಳನ್ನು ಸ್ವೀಕರಿಸುತ್ತೇನೆ ಮತ್ತು ರವಿವಾರ ಸಂಜೆ ಪಾಸ್ಟರ್ ಅಮ್ಮ ನಡೆಸುವ ಮಹಿಳೆಯರ ಕೂಟದಲ್ಲಿ ಭಾಗವಹಿಸುತ್ತೇನೆ.                ಈಗ ಮೂರು ತಿಂಗಳಿಂದ ಈ ಎಲ್ಲಾ ಕಾಯಿಲೆಗಳು ಮತ್ತೆ ಬಂದಾಗ ಬೆಂಗಳೂರಿನಲ್ಲಿ ಒಂದು ಹಾಸ್ಪಿಟಲ್ ಗೆ ಹೋದೆ, ಅವರು 8 ರಿಂದ 10 ದಿನ ಇಲ್ಲೇ ಇರಬೇಕು ಅಂದರು, ಆದರೆ ಪಾಸ್ಟರ್ ನನಗಾಗಿ ಪ್ರಾರ್ಥಿಸಿ, ಇನ್ನು ಮುಂದೆ ಈ ಶರೀರದಲ್ಲಿ ಯಾವ ಸ್ಕ್ಯಾನಿಂಗ್, ಎಂಆರ್ ಐ...

Testimony #702 - ಕೆಲವು ವರ್ಷಗಳ ಹಿಂದೆ ಎರಡು ಸಲ ನನ್ನ ಕಾಲು ಆಪರೇಷನ್ ಆಗಿತ್ತು

Image
 ನನ್ನ ಹೆಸರು ಅಪ್ಪು,  ದೇವರ ನಾಮಕ್ಕೆ ಮಹಿಮೆ ಉಂಟಾಗಲಿ.   ಕೆಲವು ವರ್ಷಗಳ ಹಿಂದೆ ಎರಡು ಸಲ ನನ್ನ ಕಾಲು ಆಪರೇಷನ್ ಆಗಿತ್ತು, ಈಗ ಎರಡು ವರ್ಷಗಳಿಂದ ಮತ್ತೆ ಪದೇ ಪದೇ ನೋವು ಕಾಣಿಸುತ್ತಿತ್ತು, ಕೀವು ಸೋರುತ್ತಿತ್ತು, ಹೆಚ್ಚು ಹೊತ್ತು ನಿಂತುಕೊಂಡು ಕೆಲಸ ಮಾಡಲು ಆಗುತ್ತಿರಲಿಲ್ಲ, ತುಂಬಾ ಉರಿಯುತ್ತಿತ್ತು, ಸಹಿಸಲು ಅಸಾಧ್ಯವಾದ ನೋವಿನಿಂದ ರಾತ್ರಿಯಲ್ಲಿ ಮಲಗಲು ಸಾಧ್ಯವಾಗುತ್ತಿರಲಿಲ್ಲ.  ಡಾಕ್ಟರ್ ಗೆ ತೋರಿಸುವಾಗ ಅವರು ನೀನು ಅಡ್ಮಿಟ್ ಆಗಬೇಕು ಎಂದು ಹೇಳಿದರು, ಆದರೆ ನಾನು ಪ್ರಾರ್ಥನೆ ಕೂಟವನ್ನು ಮುಗಿಸಿಕೊಂಡು ಹೋಗಬೇಕು ಅಂದುಕೊಂಡೆ. ಅಕ್ಟೋಬರ್ 11 ಮತ್ತು 12 ರಂದು ಬೆಳಗಾವಿಯಲ್ಲಿ ನಡೆದ ಪ್ರವಾದನೆಯ ಸಮ್ಮೇಳನದಲ್ಲಿ ಭಾಗವಹಿಸಿದೆ. ಪಾಸ್ಟರ್ ಬಿಡುಗಡೆ ಮಾಡುವ ಎಲ್ಲಾ ವಾಕ್ಯಗಳನ್ನು ಆಸಕ್ತಿಯಿಂದ ಕೇಳಿದೆ ಮತ್ತು ಹೊಂದಿಕೊಂಡೆ.  ಅದರ ನಿಮಿತ್ತವಾಗಿ ಕಾಲಿನಲ್ಲಿ ಕೀವು ಸೋರುವುದು ನಿಂತುಹೋಗಿ, ನೋವು  ಕ್ರಮೇಣವಾಗಿ ಕಡಿಮೆಯಾಗುತ್ತಾ ಬಂತು. ಈಗ ಯಾವ ನೋವು ಇಲ್ಲದೆ ಪೂರ್ತಿ ಗಾಯ ಒಣಗಿಹೋಗಿದೆ. ಹೊಲದಲ್ಲಿ ಎಷ್ಟೇ ಕೆಲಸ ಮಾಡಿದರೂ ಯಾವ ನೋವೂ ಇಲ್ಲ. Amen 🙏 ನಾನು ಹಾಸ್ಪಿಟಲ್ ಗೆ ಹೋಗಲಿಲ್ಲ, ಯಾವ ಮಾತ್ರೆಯನ್ನು ನುಂಗಲಿಲ್ಲ.  ವಾಕ್ಯದ ಆತ್ಮ ನನ್ನಲ್ಲಿ ಇಂಥ ಅದ್ಭುತವಾದ ಕಾರ್ಯವನ್ನು ಮಾಡಿ ನನ್ನನ್ನು ಸಾಕ್ಷಿಯಾಗಿ ನಿಲ್ಲಿಸಿದ್ದಕ್ಕಾಗಿ ದೇವರಿಗೆ ಕೃತಜ್ಞತೆಯಿಂದ ಕೋಟಿ ಕೋಟಿ ಸ್ತೋತ್ರವನ್ನು ಸಲ್ಲಿಸ...

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

Image
   ನನ್ನ ಹೆಸರು ಸರೋಜಿನಿ, 🙏 ಮೇ ತಿಂಗಳಲ್ಲಿ, ನಮ್ಮ ಅಣ್ಣ ಮಾರ್ನಿಂಗ್ ಪ್ರೇಯರ್ ಲಿಂಕ್  ಕಳಿಸಿದರು.   ಆ ದಿನವೇ ಪಾಸ್ಟರ್ ನನ್ನ ಹೆಸರು ಕರೆದು, ನಿಮ್ಮ ಅನಾರೋಗ್ಯ ಬಿಟ್ಟು ಹೋಗಲಿ, ಯೇಸುವಿನ ನಾಮದಲ್ಲಿ ನಾನು ಆ ಅನಾರೋಗ್ಯವನ್ನು ರದ್ದು ಮಾಡುತ್ತೇನೆ ಎಂದು ಡಿಕ್ಲೇರ್ ಮಾಡಿದರು.     ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು,   ಮೊದಲು ಪಿತ್ತವಾಗಿತ್ತು ಅದರ ಮೂಲಕ ಕಫವಾಯಿತು,  ಅತಿಯಾಗಿ ಕೆಮ್ಮುವಾಗ, ಹಾರ್ಟ್ ಜೋರಾಗಿ ಬಡಿಯುತ್ತಿತ್ತು. ಕೈಕಾಲುಗಳು ಸಹ ನಿಶ್ಯಕ್ತ ಸ್ಥಿತಿಯಲ್ಲಿದ್ದವು, ದೇಹದಲ್ಲಿ ತುಂಬಾ ಕಷ್ಟ ಪಡುತ್ತಿದ್ದೆ.    ಆಸ್ಪತ್ರೆಗೆ ನಾನು ದಿನಾಲು ಹೋಗುತ್ತಿದ್ದೆ, ತಿಂಗಳಿಗೆ ನಾಲ್ಕರಿಂದ ಐದು ಸಾವಿರ ರೂಪಾಯಿ ಖರ್ಚಾಗುತ್ತಿತ್ತು, ಮಾತ್ರೆ ತೆಗೆದುಕೊಂಡಾಗ ಗುಣವಾದೆ ಅನಿಸುವುದು, ಆದರೆ  ಮಾತ್ರೆಯ ಪವರ್ ಮುಗಿದ ನಂತರ ಮತ್ತೆ ಅದೇ ಸಮಸ್ಯೆಯಲ್ಲಿ ಇರುತ್ತಿದ್ದೆ,  ಪಾಸ್ಟರ್ ಡಿಕ್ಲೇರ್ ಮಾಡಿದ ನಂತರ ಎಲ್ಲಾ ಅನಾರೋಗ್ಯವು ಬಿಟ್ಟು ಹೋಗಿ ನಾನು ಆರೋಗ್ಯವಾಗಿ ಇದ್ದೇನೆ, ಪಾಸ್ಟರ್ ಮೂಲಕ ದೇವರು ಮಾಡಿದ ಅದ್ಭುತಕ್ಕಾಗಿ ದೇವರಿಗೆ ಕೋಟಿ ಕೋಟಿ ಸ್ತೋತ್ರ ಸ್ತೋತ್ರ. ನಾನು ಟೀಚರ್ ಕೆಲಸದಲ್ಲಿದ್ದೇನೆ. ಒಬ್ಬರು ನನಗೆ ಪ್ರಮೋಷನ್ ಕೊಡಿಸುತ್ತೇನೆ ಎಂದು ಹೇಳಿ ದುಡ್ಡು ತೆಗೆದುಕೊಂಡರು, ಆದರೆ ಅವರು ಪ್ರಮೋಷನ್ ಮಾಡಲಿಲ್ಲ. ಆದರೆ ನಾನು ಪಾಸ್ಟರ್ ...

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

Image
  ಯೇಸುವಿನ ನಾಮದಲ್ಲಿ ಓದುವ ಪ್ರತಿಯೊಬ್ಬ ಸಹೋದರ  ಮತ್ತು ಸಹೋದರಿಯರ  ಆತ್ಮದ ಕಣ್ಣುಗಳು ತೆರೆಯಲ್ಪಟ್ಟು ನೀವು ಸದಾಕಾಲವೂ ದೇವರ ಆಶೀರ್ವಾದದಲ್ಲಿ ತುಂಬಿ, ತುಳುಕಿ ಮತ್ತು ಹರಿಯುವ ರೀತಿಯಲ್ಲಿ ನಿಮ್ಮ ಜೀವನ ದೇವರ ಉದ್ದೇಶದ ಪ್ರಕಾರ ನಡೆಯಲಿ ಎಂದು ಯೇಸುವಿನ ಹೆಸರಿನಲ್ಲಿ ಅರಿಕೆ ಮಾಡುತ್ತಿದ್ದೇನೆ!   ದೇವರು ಆ ತಿಂಗಳಲ್ಲಿ ಕೊಡುವ ವಾಗ್ದಾನವನ್ನು ಆ ತಿಂಗಳಿನಲ್ಲಿಯೇ ನೆರವೇರಿಸುವವನಾಗಿದ್ದಾನೆ ಮತ್ತು ನಮ್ಮ ಜೀವನದಲ್ಲಿ ಅದೇ ರೀತಿಯಾಗಿ ಮಾಡುತ್ತಾ ಬರುತ್ತಿದ್ದಾನೆ.  ಕಳೆದ 9 ತಿಂಗಳು ಒಂದೊಂದು ತಿಂಗಳಿಗೆ ಒಂದೊಂದು ವಾಗ್ದಾನವನ್ನು ಕೊಟ್ಟು ಆಶೀರ್ವದಿಸಿದ್ದಾನೆ. ವಿಶೇಷವಾಗಿ  ಸೆಪ್ಟೆಂಬರ್ ತಿಂಗಳಲ್ಲಿ ನೀವು ಊಹಿಸುವುದಕ್ಕಿಂತಲೂ ಮತ್ತು ಯೋಚಿಸುವುದಕ್ಕಿಂತಲೂ ಹೆಚ್ಚಾದ ಪಾರ್ಸಲ್ ಗಳು deliver ಆಗಿ, ನೀವು ಎದುರು ನೋಡುವುದಕ್ಕಿಂತಲೂ, ಎದುರು ನೋಡದೆ ಇರುವ ಪಾರ್ಸಲ್ ಗಳು ಬಂದು ಅನೇಕರನ್ನು ಸಾಕ್ಷಿಯಾಗಿ ದೇವರು  ಎಬ್ಬಿಸಿರುವುದಕ್ಕಾಗಿ ದೇವರಿಗೆ ಸ್ತೋತ್ರ.  ಅದೇ ರೀತಿಯಾಗಿ ಈ ತಿಂಗಳು ಇಲ್ಲದ್ದನ್ನು ಕರೆಯುವುದು {The Month of Calling Things that do not Exist!}  ವಾಕ್ಯದ ಭಾಗ :  ರೋಮಾ 4:17 - ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ಮೂಲಪಿತೃವಾಗಿ ನೇವಿುಸಿದ್ದೇನೆಂದು ಶಾಸ್ತ್ರದಲ್ಲಿ ಬರೆದಿರುವ ಪ್ರಕಾರ ಅಬ್ರಹಾಮನು ನಮ್ಮೆಲ್ಲರಿಗೂ ದೇವರ ಸನ್ನಿಧಿಯಲ್ಲಿ ಮೂಲ ...