Posts

Showing posts from May, 2026

Testimony # 763 -- ರಿಸೈನ್ ಕ್ಯಾನ್ಸಲ್ ಮಾಡುವಾಗ.....

Image
  ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏    ನನ್ನ ಹೆಸರು: ಹರೀಶ್    ನಮ್ಮ ಊರು: ಮೈಸೂರು ಮೂರು ವರ್ಷದಿಂದ ನನಗೆ ಸ್ಯಾಲರಿ ಹೈಕ್ ಆಗಿರಲಿಲ್ಲ. ಅದಕ್ಕೆ ನಾನು ಕೆಲಸ ಬಿಡಬೇಕು ಎಂದುಕೊಂಡಾಗ, ಅಣ್ಣನ ಸ್ಥಾನದಲ್ಲಿ ಪಾಸ್ಟರ್ ಅವರು ನನಗೆ ಕೊಟ್ಟ ಕೌನ್ಸಿಲಿಂಗ್ ಪವಿತ್ರಾತ್ಮನೇ ಕೊಟ್ಟ ಹಾಗೆ ಇತ್ತು. ರಿಸೈನ್ ಕ್ಯಾನ್ಸಲ್ ಮಾಡುವಾಗ, ಪಾಸ್ಟರ್ ಪ್ರವಾದನೆಯಾಗಿ ಒಂದು ಮಾತು ಹೇಳಿದರು. "ಯಾರಿಗೆ ಸಂಬಳ ಹೈಕ್ಆಗುತ್ತದೆಯೋ ಗೊತ್ತಿಲ್ಲ, ನಿಮಗೆ ಮಾತ್ರ ಆಗಿಯೇ ಆಗುತ್ತದೆ" ಎಂದು ಹೇಳಿದರು.   ಅದೇ ಪ್ರಕಾರ ನನಗೆ ಸ್ಯಾಲರಿ ಹೈಕ್ ಆಗಿದೆ. ದೇವರ ವಾಕ್ಯ ನನ್ನ ಜೀವಿತದಲ್ಲಿ ಕಾರ್ಯನಿರ್ವಹಿಸಿದೆ. ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏 Thank you pastor❤️❤️❤️ ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ! Rev John Ebenezer - Youtube Rev John Ebenezer - Instagram Rev John Ebenezer - Facebook                SCAN FOR THE LOCATION  For Prayer Request WhatsApp: 9880516003 GOOGLE MEET LINK - TO JOIN MORNING PRAYER @6 AM from MONDAY TO FRIDAY Morning Prayer Link-1 -> Google Meet   Morning Prayer Link-2 -> Google Meet  

Testimony # 762 -- ಊಟ ಮಾಡುವುದಕ್ಕೆ ಬಾರದ ಹಾಗೆ......

Image
  ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏    ನನ್ನ ಹೆಸರು: ಲಕ್ಷ್ಮಿ  ನಮ್ಮ ಊರು : ಮೈಸೂರು  ನನಗೆ ಮಂಡಿ ನೋವು ಇತ್ತು. ದಿನಾಲು ಟ್ಯಾಬ್ಲೆಟ್ ತೆಗೆದುಕೊಂಡರೂ ನೋವು ಕಡಿಮೆಯಾಗುತ್ತಿರಲಿಲ್ಲ, ಆದರೆ ಕ್ಯಾಂಪ್  ಮೀಟಿಂಗ್ ಬಂದಾಗಿನಿಂದ ಈಗ ಯಾವುದೇ ನೋವು ಇಲ್ಲ. ನಾನು ಕ್ಯಾಂಪ ಮೀಟಿಂಗ್ ಸಲುವಾಗಿ ರೂಮ್ ಮಾಡಿದ್ದೆ. ರೂಮ್ ಬಾಡಿಗೆ ಕೊಡುವಾಗ, ಅಪ್ಪ ಈ ಹಣವನ್ನು  ಬಾಡಿಗೆ ಕೊಡುವ ಬದಲು ನಿನ್ನ ರಾಜ್ಯಕ್ಕಾಗಿ ಬಿತ್ತಬೇಕು ಎನ್ನುವಾಗ, ದೇವರ ನಾಮಕ್ಕೆ ಸ್ತೋತ್ರ ವಾಗಲಿ ಒಂದೇ ದಿನದ ಬಾಡಿಗೆ ಮಾತ್ರ ತೆಗೆದುಕೊಂಡರು.  ಇನ್ನೊಂದು ದಿನದ ಬಾಡಿಗೆಯನ್ನು ಬೀಜ ಬಿತ್ತುವಂತೆ ದೇವರು ಸಹಾಯ ಮಾಡಿದರು. ನನ್ನ ಪರಿಚಯ ಇರುವವರಿಗೆ ಊಟ ಮಾಡುವುದಕ್ಕೆ ಬಾರದ ಹಾಗೆ ತುಂಬಾ ಗಂಟಲು ನೋವು ಇತ್ತು. ನೀರು ಸಹ ಕುಡಿಯಲು ಬರುತ್ತಿರಲಿಲ್ಲ, ಅಷ್ಟೊಂದು ಗಂಟಲು ನೋವು ಇತ್ತು. ಆಗ ಪಾಸ್ಟರ್ ಹತ್ತಿರ ಪ್ರೇಯರ್ ಮಾಡಿಸಿತು. ಅವರು ಒಂದು ಗ್ಲಾಸ್ ನೀರು ತೆಗೆದುಕೊಳ್ಳಿ, ಇದು ಯೇಸುವಿನ ರಕ್ತ ಎಂದು ಹೇಳಿ ಪ್ರೇಯರ್ ಮಾಡಿದರು.  ಆದರೆ  ಈಗ ಅವರು ತುಂಬಾ ಚೆನ್ನಾಗಿ ಊಟ ಮಾಡುತ್ತಿದ್ದಾರೆ. ಎಲ್ಲಾ ತರಹದ ಆಹಾರವನ್ನು ತೆಗೆದುಕೊಳ್ಳುತ್ತಿದ್ದಾರೆ. ಕ್ಯಾಂಪ್ ಮೀಟಿಂಗ್ ನಲ್ಲಿ ನನಗೆ ಬಂದ ವಾಗ್ದಾನದ ಪ್ರಕಾರ ನನ್ನ ಜೀವಿತದಲ್ಲಿ ಎಲ್ಲವೂ ನೆರವೇರುತ್ತ ಇದೆ. ದೇವರನಾಮಕ್ಕೆ ಸ್ತೋತ್ರ ವಾಗಲಿ 🙏🙏🙏 ಫಾಲೋ ಮಾಡಿ, ಲೈಕ್ ಮಾಡಿ, ಕ...

Testimony # 761 -- ಮದುವೆ ಕ್ಯಾನ್ಸಲ್ ಮಾಡುವಾಗ....

Image
 ದೇವರ ನಾಮಕ್ಕೆ ಸ್ತೋತ್ರವಾಗಲಿ 🙏  ನನ್ನ ಹೆಸರು: ತ್ರಿಜಾ  ನಮ್ಮ ಊರು : ಬೀದರ್    ನನ್ನ ಮಗನ ಮದುವೆ ಮೇ 4 ಫಿಕ್ಸ್ ಆಗಿತ್ತು. ಮದುವೆ ಕಾರ್ಡ್ ಎಲ್ಲವು ತಯಾರಿಯಲ್ಲಿ ಇರುವಾಗ, ನನ್ನ ಮಗ ನನಗೆ ಮದುವೆ ಬೇಡ ಎಂದನು. ಅದಕ್ಕೆ ನಾನು ಅವನೇ ಬೇಡ ಎನ್ನುತ್ತಿರುವಾಗ, ನಾವು ಏನು ಮಾಡಲು ಸಾಧ್ಯವಿಲ್ಲ ಎಂದು ಮದುವೆ ಕ್ಯಾನ್ಸಲ್ ಮಾಡುವಾಗ, ನಮ್ಮ ನಾದಿನಿ ಈ  ಪ್ರೇಯರ್  ಗೆ ಕನೆಕ್ಟ್ ಮಾಡಿದರು. ಪಾಸ್ಟರ್ ಹತ್ತಿರ ಪ್ರೇಯರ್ ಮಾಡಿಸಿದೆ.  ಈ ಪ್ರೇಯರ್ ಗೆ   ಕನೆಕ್ಟ್ ಆದ ಮೂರು ದಿನಗಳಲ್ಲಿ ನನ್ನ ಮಗನ ಮನಸ್ಥಿತಿಯೇ ಬದಲಾಯಿತು.  ನಾನು ಮದುವೆ ಮಾಡಿಕೊಳ್ಳುತ್ತೇನೆ ಎಂದನು. ನನ್ನ ಸಣ್ಣ ಮಗನಿಗೂ ಕೂಡ ಮದುವೆಗೆ ರಜೆ ಕೊಡುತ್ತಿರಲಿಲ್ಲ, ಆಗ ಕೂಡ ಪಾಸ್ಟರ್ ಪ್ರೇಯರ್ ಮಾಡಿದರು. ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏 ಅವನು ಕೂಡ ಮೇ 3 ಕ್ಕೆ ಮದುವೆಗೆ ಬರುವಂತೆ  ದೇವರು ಸಹಾಯ ಮಾಡಿದರು.    ಮದುವೆಯಲ್ಲಿ ಕೂಡ ನಮಗೆ ಏನೇನು ಅಗತ್ಯ ಇದೆಯೋ ಅದನ್ನೆಲ್ಲ ದೇವರು ಒದಗಿಸಿ ಕೊಟ್ಟರು. ಮದುವೆ ತುಂಬಾ ಶಾಂತಿ, ಸಂತೋಷ,ಸಮಾಧಾನ  ಸಂಭ್ರಮದಿಂದ ನಡೆಯಿತು. ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🙏🙏 ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ! Rev John Ebenezer - Youtube Rev John Ebenezer - Instagram Rev John Ebenezer - Facebook  ...

Testimony # 760 -- ನನ್ನ ಮಗಳ ಬಂಗಾರ ಚೈನ್, ಉಂಗುರ ಕಳೆದಿತ್ತು. ......

Image
 ದೇವರ ನಾಮಕ್ಕೆ ಸ್ತೋತ್ರವಾಗಲಿ🙏 ನನ್ನ ಹೆಸರು: ಗಂಗು   ನಮ್ಮ ಊರು :ಬೆಳಗಾವಿ   ನಾನು ಫೆಬ್ರುವರಿ ತಿಂಗಳಿನಿಂದ ಈ ಪ್ರೇಯರ್ ಗೆ ಜಾಯಿನ್ ಆಗುತ್ತಿದ್ದೇನೆ. ಏಪ್ರಿಲ್ 14ರಲ್ಲಿ ನನ್ನ ಮಗಳ ಬಂಗಾರ ಚೈನ್, ಉಂಗುರ ಕಳೆದಿತ್ತು. ನಾನು ಕಷ್ಟಪಟ್ಟು ಮನೆ ಕೆಲಸ ಮಾಡಿ ತೆಗೆದುಕೊಂಡಿದ್ದ ಬಂಗಾರ ಅದು ಎಂದು ತುಂಬಾ ದುಃಖದಿಂದ ಅಳುತ್ತಿದ್ದೆ. ನಾನು ನಮ್ರತಾ  ಸಿಸ್ಟರ್ ಗೆ ಕಾಲ್ ಮಾಡಿ ಹೇಳಿದೆ. ಅವರು ಪ್ರೇಯರ್ ಮಾಡೋಣ ಸಿಗುತ್ತದೆ. ದೇವರು ನಿಮ್ಮನ್ನು ಸಾಕ್ಷಿಯಾಗಿ ನಿಲ್ಲಿಸುತ್ತಾರೆ ಎಂದರು.  ನಮ್ಮ ಮೈದುನನ ಹೆಂಡತಿ ಬೇರೆ ಕಡೆ ಹೋಗಿ ಕೇಳಿಸಿ ನೋಡೋಣ ಗೊತ್ತಾಗುತ್ತದೆ ಎಂದು ಹೇಳುವಾಗ, ನಮ್ರತಾ ಸಿಸ್ಟರ್  "ಯಾರ ಮಾತು ಕೇಳಬೇಡಿ. ದೇವರ ಚಿತ್ತ, ದೇವರ ಉದ್ದೇಶ ಏನು ಇದೆಯೋ ಅದೇ ನೆರವೇರುವುದು" ಎಂದು ಹೇಳುವಾಗ ನಾನು ನಂಬಿಕೆಯಿಂದ ಪ್ರೇಯರ್ ಮಾಡಲು ಶುರು ಮಾಡಿದೆ. ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏    ಇದೇ ತಿಂಗಳು 15ಕ್ಕೆ ಯಾವ ಜಾಗದಲ್ಲಿ ಕಳೆದಿದೆಯೋ ಅದೇ ಜಾಗದಲ್ಲಿ ಸಿಗುವಂತೆ ದೇವರು ಅದ್ಬುತವನ್ನು ಮಾಡಿದ್ದಾರೆ.  ನಮ್ಮ ಮನೆಯಲ್ಲಿ ನಾನು ಒಬ್ಬಳೇ ರಕ್ಷಣೆ ಹೊಂದಿದ್ದೇನೆ. ನಮ್ಮ ಕುಟುಂಬದವರೆಲ್ಲರೂ ರಕ್ಷಣೆಯ ಮಾರ್ಗದಲ್ಲಿ ಬರಬೇಕು ಎಂದು ದಿನಾಲು ಅವರೆಲ್ಲರಿಗೋಸ್ಕರ ಪ್ರೇಯರ್ ಮಾಡುತ್ತೇನೆ. Thank you pastor 🙏 ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್  ಮಾಡಿ...

Testimony # 759 -- ವೈರಲ್ ಇನ್ಫೆಕ್ಷನ್ ಆಗಿದೆ, ನೀವು ಎಲ್ಲಿಗೂ ಹೋಗಬಾರದು.............

Image
  ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏   ನನ್ನ ಹೆಸರು ನಿರೀಕ್ಷಾ   ನಮ್ಮ ಊರು ಬೆಳಗಾವಿ . ಕಳೆದ ವಾರದಲ್ಲಿ ನನಗೆ ಅನಾರೋಗ್ಯ ಇತ್ತು. ಕುತ್ತಿಗೆಯಲ್ಲಿ ಊತ {Swelling } ಬಂದು ತುಂಬಾ ನೋವು ಆಗುತ್ತಿತ್ತು. ಗಂಟಲು ರಿಯಾಕ್ಷನ್ ಆಗಿ ತಿನ್ನಲು ಬಾರದ ಹಾಗೆ ನೋವು ಆಗುತಿತ್ತು. ಆಗ ಡಾಕ್ಟರ್ ಕಡೆ ಹೋದೆ. ಅವರು ವೈರಲ್ ಇನ್ಫೆಕ್ಷನ್ ಆಗಿದೆ, ನೀವು ಎಲ್ಲಿಗೂ ಹೋಗಬಾರದು , ಮತ್ತೊಬ್ಬರಿಗೆ ಹರಡುವ ಚಾನ್ಸ್ ಇದೆ ಎಂದು ಹೇಳಿದರು. ನನಗೆ ಬಹಳ ಬೇಜಾರಾಯಿತು. ಆದರೂ ನಾನು ದೇವರ ಆಲಯಕ್ಕೆ ಹೋಗಿ ಪ್ರೇಯರ್ ಮಾಡಿದೆ. ಮತ್ತೆ ಹಾಸ್ಪಿಟಲ್ ಗೆ ಹೋಗಬೇಕು ಎಂದರೆ ಮೂರು ದಿನಗಳಿಂದ ಹಾಸ್ಪಿಟಲ್ ಓಪನ್ ಇರಲಿಲ್ಲ. ಮತ್ತೆ ಬುಧವಾರ ಹೋದಾಗ ಡಾಕ್ಟರ್ ಕೂಡ ಇರಲಿಲ್ಲ. ಅದಕ್ಕೆ, "ಅಪ್ಪ ನಾನು ಇನ್ನೂ ಮುಂದೆ ಡಾಕ್ಟರ್ ಕಡೆ ಹೋಗುವುದಿಲ್ಲ, ನೀನೇ ಗುಣಪಡಿಸುತ್ತಿ" ಎಂದು ದೇವರಿಗೆ ಒಪ್ಪಿಸಿ ಕೊಟ್ಟೆ. ಮಾರ್ನಿಂಗ್ ಪ್ರೇಯರ್ ದಲ್ಲಿ ಪಾಸ್ಟರ್ ಡಿಕ್ಲೇರ್ ಮಾಡುತ್ತಿದ್ದರು, "ನಿಮ್ಮ ಜೀವನದಲ್ಲಿ ಪುನರುತ್ಥಾನ ಶುರುವಾಗಿದೆ. ಯಾವುದೇ ಮರಣದ ಕಾರ್ಯಗಳು ನಡೆಯುವುದಿಲ್ಲ, ಅನಾರೋಗ್ಯ  ನಿಮ್ಮನ್ನು ಮುಟ್ಟುವುದಿಲ್ಲ" ಎಂದು ಹೇಳುವಾಗ, ಅದನ್ನು ನಾನು ಆತ್ಮದಿಂದ ಹೊಂದಿಕೊಂಡೆ. ಆಗ ಸ್ವಲ್ಪ ನೋವು ಕಡಿಮೆ ಆಯಿತು. ಸಾಯಂಕಾಲ ಪಾಸ್ಟರ್ ಕಡೆ ಪ್ರೇಯರ್ ಮಾಡಿಸಿದೆ. ಅವರು, "ಮುಂಜಾನೆ ಎನ್ನುವುದರಲ್ಲಿ ನಿಮಗೆ ಯಾವ ನೋವು ಇರುವುದಿಲ್ಲ" ಎಂದು ಡಿಕ್ಲೇರ...

2026 ರ ಮೇ ತಿಂಗಳ ಪ್ರವಾದನೆಯ ವಾಗ್ದಾನ

Image
 2026 ರ ಮೇ ತಿಂಗಳ ಪ್ರವಾದನೆಯ ವಾಗ್ದಾನ   ಈ ತಿಂಗಳು ಅದ್ಭುತದ ತಿಂಗಳು  Month of WONDERS  ಇದನ್ನು ಓದುತ್ತಿರುವ ಸಹೋದರ ಸಹೋದರಿಯರನ್ನು ಯೇಸುವಿನ ನಾಮದಲ್ಲಿ ಆಶೀರ್ವದಿಸುತ್ತೇನೆ. ಈ ಸಂದೇಶವನ್ನು ನಾನು ಅರ್ಥಮಾಡಿಕೊಳ್ಳಬೇಕು ಎಂದು ಅರ್ಥ ಅಲ್ಲ. ಯಾವ ಮಾತು ನಿಮ್ಮನ್ನು ಮುಟ್ಟುತ್ತದೋ ಅದನ್ನು ಹಾಗೆ ಸ್ವೀಕರಿಸಿಕೊಳ್ಳಿ , ಒಂದು ಗಂಟೆಯ ಒಂದು ಮೆಸೇಜ್ ನಲ್ಲಿ ಒಂದು ಮಾತು, "ನೀನು ಇನ್ನೊಂದು ದಿನ  ಇರುವ ಹಾಗೆ ಇರುವುದಿಲ್ಲ" ಎನ್ನುವ ಒಂದು ಮಾತು ನಿಮ್ಮನ್ನು ಮುಟ್ಟಿಬಿಟ್ಟರೆ ಸಾಕು. ಒಂದು ತಿಂಗಳೆಲ್ಲ ಆ ಮಾತು ನಿಮ್ಮನ್ನು ನಡೆಸುತ್ತದೆ. ಇವತ್ತು ಈ ಸತ್ಯ ಮಾಹಿತಿಯಾಗಿರುವುದಿಲ್ಲ, ಅದು ಅಭಿಷೇಕ ಮಾಡಲ್ಪಟ್ಟು ಆತ್ಮವೂ ಜೀವವೂ ಆಗಿ ಇರುವುದು ಎಂದು ಯೇಸುವಿನ ನಾಮದಲ್ಲಿ ಘೋಷಿಸುತ್ತೇನೆ.     ಈ ತಿಂಗಳು ದೇವರು ಕೊಡುತ್ತಿರುವ ವಾಗ್ದಾನದ ವಾಕ್ಯ   ಮೀಕ 7:15 ನೀನು ಐಗುಪ್ತದೇಶದೊಳಗಿಂದ ಪಾರಾಗಿ ಬಂದ ಕಾಲದಲ್ಲಿ ನಾನು ತೋರಿಸಿದಂತೆ ಅದ್ಭುತಗಳನ್ನು ತೋರಿಸುವೆನು. ಇಂಥ ಸತ್ಯದಲ್ಲಿ ನಡೆಯುವವರಿಗೆ ಅದ್ಭುತ ಅಂದರೆ ಶರೀರದಲ್ಲಿ ನೋಡಿದ ಮೇಲೆ ಅಲ್ಲ, ಆತ್ಮದಲ್ಲಿ ದೇವರ ವಾಕ್ಯ ಬಂದ ಕೂಡಲೇ ಅನುಭವಿಸುವ ಕುತೂಹಲ ಆನಂದವೇ ಅದ್ಭುತ .  ಅದ್ಭುತ ಅಂದರೆ ಮನುಷ್ಯನ ಜ್ಞಾನದಿಂದ ವಿವರಿಸುವ ಕಾರ್ಯ ಅಲ್ಲ, ಇದನ್ನು ಹೀಗೆ ಮಾಡಿದೆ ಈ ರೀತಿಯಾಗಿ ನಡೆಯಿತು ಎಂದು ವಿವರಿಸುವ ಕಾರ್ಯ ಅಲ್ಲ. ಮನುಷ್ಯನ...