Testimony #728 - ನಮ್ಮ ಅಕ್ಕನಿಗೆ ಮೂತ್ರಕೋಶದ ಕಲ್ಲು {ಕಿಡ್ನಿ ಸ್ಟೋನ್ }ಆಗಿದೆ ಆಪರೇಷನ್ ಹೇಳಿದ್ದರು...
ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻 ನನ್ನ ಹೆಸರು ಸಂಗೀತ, ಬೀದರ್ ನಿಂದ, ದೇವರಿಗೆ ಕೋಟಿ ಕೋಟಿ ಸ್ತೋತ್ರ ಈ ತಿಂಗಳಿನ ಎಲ್ಲಾ ವಾಗ್ದಾನಗಳಿಗಾಗಿ ದೇವರಿಗೆ ಮಹಿಮೆ ಉಂಟಾಗಲಿ . ನಮ್ಮ ಅಕ್ಕನಿಗೆ ಮೂತ್ರಕೋಶದ ಕಲ್ಲು {ಕಿಡ್ನಿ ಸ್ಟೋನ್ }ಆಗಿದೆ, ಆಪರೇಷನ್ ಹೇಳಿದ್ದರು, ಆದರೆ ಪಾಸ್ಟರ್ ಗೆ ಕಾಲ್ ಮಾಡಿ ಪ್ರೇಯರ್ ಮಾಡಿಸಿಕೊಂಡಿದ್ದೆ. ಆಪರೇಷನ್ ಆಗೋದಿಲ್ಲ ಎಂದು ನೀವು ಡಿಕ್ಲೇರ್ ಮಾಡಿದ್ದೀರಿ ಪಾಸ್ಟರ್. ಈಗ ನಮ್ಮ ಅಕ್ಕ ಆರಾಮಾಗಿದ್ದರೆ. ಮತ್ತೆ ನಮ್ಮ ಭಾವನವರಿಗೆ ಮೂತ್ರಕೋಶದ ಕಲ್ಲು ಆಗಿದೆ ಎಂದು ಡಾಕ್ಟರ್ ಹೇಳಿದರು. " ಒಬ್ಬ ಶತಾಧಿಪತಿ ಹೇಗೆ ಒಂದು ಮಾತು ಸಾಕು" ಎಂದು ಹೇಳಿದರು ಹಾಗೆ, ನಿಮ್ಮ ಒಂದು ಪ್ರಾರ್ಥನೆಯ ಅವಶ್ಯಕತೆ ನನಗಿದೆ ಎಂದು ಅವರಿಗೆ ಕೇಳಿಕೊಂಡಿದ್ದೆ. ನಮ್ಮ ಭಾವನವರು , " ನೀನು ಪ್ರಾರ್ಥನೆಯನ್ನು ಕೇಳುತ್ತಿಯಲ್ಲ, ಆ ಪಾಸ್ಟರ್ ಗೆ ಹೇಳಿ ಪ್ರೇಯರ್ ಮಾಡಿಸು" ಎಂದು ಹೇಳಿದ್ದರು. ಅದೇ ರೀತಿ ಇಬ್ಬರಿಗೂ ಆರಾಮಾಗಿದೆ ಪಾಸ್ಟರ್ . ನಾನು ಸತ್ಯವನ್ನು ಕೇಳುತ್ತಾ ಆರು ತಿಂಗಳಾಯಿತು. ನನ್ನೊಳಗೆ ಸತ್ಯ ಪ್ರಕಟಣೆಯಾದ ಹಾಗೆ ಇವರಲ್ಲಿಯೂ ಪ್ರಕಟಣೆ ಆಗಲಿ ಎಂದು ಕೇಳುತ್ತಿದ್ದೆ. ಪಾಸ್ಟರ್ ಗೆ ಹೇಳಿದಾಗ ತಕ್ಷಣ ಪ್ರೇಯರ್ ಮಾಡಿದರು. ನಮ್ಮ ಭಾವನವರು, ಬಹಳ ಬಿಜಿ ಇರುತ್ತಾರೆ, ಎಷ್ಟು ಬೇಗ ಪ್...