Testimony # 732 - ಒಂದು ಲೆಟರ್ ಕೊಡಬೇಕಮ್ಮ ನೀವು...

 ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻

ನನ್ನ ಹೆಸರು ಕಾಶವ್ವಾ,

ನಮ್ಮ ಊರು ಸವದತ್ತಿ..

 ನನ್ನ ಸಾಕ್ಷಿ ಏನೆಂದರೆ ರವಿವಾರ ಸರ್ ಫೋನ್ ಮಾಡಿ, "ಒಂದು ಲೆಟರ್ ಕೊಡಬೇಕು, ನೀವು ಜನವರಿ 26ಕ್ಕೆ  ಪಂಚಾಯಿತಿಗೆ ಹೋಗಲೇಬೇಕು" ಅಂತ ಹೇಳಿದರು. ನನಗೆ ತುಂಬಾ ಶಾಕ್ ಆಯ್ತು, ಹೇಗೆ ಹೋಗಬೇಕು? ನಾನು ಇವಾಗ ಪ್ರೇಯರ್ ಮುಗಿಸಿ ಬರ್ತಿದ್ದೀನಿ ಅನ್ನುತ್ತಿದ್ದೆ. ನನಗೆ ಐವತ್ತು ಜನರನ್ನು ಕರೆದುಕೊಂಡು ಬಾ ಅಂದಿದ್ದಾರೆ, ನಾನು ಎಲ್ಲಿಂದ ಕರ್ಕೊಂಡು ಹೋಗುವುದು ಅಂತ ಅನ್ನುತ್ತಿದ್ದೆ.  ನಾನು ಕರೆದಾಗ ಬರದೇ ಇದ್ದವರು, ದೇವರು ಅವರನ್ನು ಕರೆದುಕೊಂಡು ಹೋಗಿ ಸಹಿ ಮಾಡುವಂತೆ  ಮಾಡಿದರು. ಯಾವತ್ತೂ ರಿಸಿಪ್ಟ್ ಕೊಟ್ಟಿರಲಿಲ್ಲ. ಆದರೆ ಆವತ್ತು ರಿಸಿಪ್ಟ್  ಕೊಟ್ಟರು. ನನಗೆ ಬಹಳ ಖುಷಿಯಾಯಿತು. ದೇವರು ನಮ್ಮ ಜೊತೆ ಇದ್ದಾನೆ, ದೇವರು ನಮ್ಮನ್ನು ಕೈಬಿಡುವುದಿಲ್ಲ ಅಂತ ಸಂತೋಷದಲ್ಲಿ ಬಂದೆ .

 ದೇವರ ನಾಮಕ್ಕೆ ಸ್ತೋತ್ರ ವಾಗಲಿ .🙏🏼 🙏🏼

 ಮತ್ತೆ ನನಗೆ ನಿನ್ನೆ ಬಹಳ ಜ್ವರ ಬಂದಿತ್ತು ಏನೋ  ಸಂಕಟ, ಎದ್ದು ಕೂತುಕೊಳ್ಳಲು ಆಗುತ್ತಿರಲಿಲ್ಲ , ತಲೆ ತಿರುಗುತ್ತಿತ್ತು, ಬಹಳ ಸುಸ್ತಾಗುತ್ತಿತ್ತು. ಆಗ ಭರತ್ ಅಣ್ಣ ಅವರಿಗೆ ಫೋನ್ ಮಾಡಿದೆ ,  ಅವರು -  "ಸಿಸ್ಟರ್ ತಲೆ ಕೆಡಿಸ್ಕೋಬೇಡಿ, ದೇವರು ಇದ್ದಾರೆ ಏನು ಆಗುವುದಿಲ್ಲ" ಅಂತ ಪ್ರೇಯರ್ ಮಾಡಿದರು. ಆ ಕ್ಷಣ ಅವರ ಜೊತೆ ಮಾತಾಡ್ತಾ ಇರುವಾಗಲೇ  ಎಲ್ಲ ಆರಾಮಾಗಿ,  ನನಗೆ ಗುಣವಾಯಿತು.

 ದೇವರ ನಾಮಕ್ಕೆ  ಸ್ತೋತ್ರವಾಗಲಿ 🙏🏼 🙏🏼

 ನನಗೆ ಓದುವುದಕ್ಕೆ ಬರುತ್ತಿರಲಿಲ್ಲ, ಬೈಬಲ್ ಹೇಗೆ ಓದಬೇಕು ಅಂತ ಗೊತ್ತಿರ್ಲಿಲ್ಲ, ಆಗ ಭರತ್ ಅಣ್ಣ ಒಮ್ಮೆ ನಮ್ಮ ಸಭೆಗೆ ಬಂದಾಗ ಪ್ರೇಯರ್ ಮಾಡುವಾಗ ಜ್ಞಾನೋಕ್ತಿ ಓದಿರಿ ಜ್ಞಾನ ಹೆಚ್ಚಾಗುತ್ತೆ ಅಂದ್ರು. "ದೇವರೇ ನನಗೆ ಓದುವುದಕ್ಕೆ ಬರುವುದಿಲ್ಲ, ಎಲ್ಲಾ ನೀನೇ ಕಲಿಸಿಕೊಡು ಅಪ್ಪ" ಅಂತ ಜ್ಞಾನೋಕ್ತಿ ದಿನಾಲು ಒಂದು ಪ್ಯಾರಾ ಓದುತ್ತಿದ್ದೆ. ಆದರೆ  ಈಗ ದೇವರು  ಅದ್ಭುತವಾಗಿ ಓದುವ ಜ್ಞಾನ ಕೊಟ್ಟಿದ್ದಾರೆ. 

ದೇವರು ನನಗೆ ಸಮಾಧಾನ ಕೊಟ್ಟಿದ್ದಾರೆ, ಯಾವುದಕ್ಕೂ ಯೋಚನೆ ಮಾಡುವುದಿಲ್ಲ, ಅನಾರೋಗ್ಯ ಬಂದರೂ ಒಂದು ಗ್ಲಾಸ್ ನೀರು ತೆಗೆದುಕೊಂಡು ಪ್ರೇಯರ್ ಮಾಡಿ, - "ಅಪ್ಪ ಇದು ನಿನ್ನ ರಕ್ತ" ಅಂತ ಹೇಳಿ ಕುಡಿಯುತ್ತೇನೆ. ಆ ಕ್ಷಣದಲ್ಲಿ ನನಗೆ ಗುಣವಾಗುತ್ತೆ. ದೇವರು ನಮ್ಮನ್ನು ಅದ್ಭುತವಾಗಿ ನಡೆಸುತ್ತಿದ್ದಾರೆ.

 ದೇವರ ನಾಮಕ್ಕೆ ಸ್ತೋತ್ರವಾಗಲಿ.


ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR THE LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY


 

Comments

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)