Testimony # 743 -- ಈ ವರ್ಷದ ದೇವರ ವಾಗ್ದಾನ ಮಾಡಿದ ಪ್ರಕಾರ...

 ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ.  🙏🏻🙏🏻🙏🏻

 ನನ್ನ ಹೆಸರು ಮಹಿಮ ..

ನಮ್ಮ ಊರು ಬೆಳಗಾವಿ.

 ಈ ವರ್ಷದ ದೇವರ ವಾಗ್ದಾನ ಮಾಡಿದ ಪ್ರಕಾರ ಏದೆನ್ ಪುನಃ ಸ್ಥಾಪನೆಯಾಗಿದೆ. ಈ ವಾಕ್ಯ ನನ್ನ ಜೀವಿತದಲ್ಲಿ ಅದ್ಭುತವಾಗಿ ಕಾರ್ಯ ಮಾಡುತ್ತಿದೆ. 

ನಾನು ವರ್ಕ್ ಪ್ರಾಮ್ ಹೋಮ್ ಎಂದು ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಕಂಪ್ಯೂಟರ್ ಪದೇ ಪದೇ ರಿಪೇರಿಗೆ ಬರುತ್ತಿತ್ತು. ಆದರೆ ದೇವರು ಜನೆವರಿ ತಿಂಗಳಲ್ಲಿ ಹೊಸ ಕಂಪ್ಯೂಟರ್, ಪ್ರಿಂಟರ್ ಮಷೀನ್ ತೆಗೆದುಕೊಳ್ಳುವಂತೆ ಮಾಡಿದ್ದಾರೆ.

ಈ ಫೆಬ್ರುವರಿ ತಿಂಗಳಿನಲ್ಲಿ ನಾನು ಜ್ಯೂಸ್ ಸೆಂಟರ್ ಓಪನ್ ಮಾಡಿದ್ದೇನೆ. ಹಿಂದೆ ಇದೆ ಜ್ಯೂಸ್ ಸೆಂಟರ್ ಇಟ್ಟಿದ್ದಾಗ ನನಗೆ ತುಂಬಾ ನಷ್ಟ ಆಗಿತ್ತು. ಆದರೆ ಈ ಸಲ ನಾನು ಫಸ್ಟ್ ದೇವರಿಗೆ ಕಾಣಿಕೆಯನ್ನು ಎತ್ತಿ ಇಡುವಾಗ ಉಳಿದ ಒಂಬತ್ತು ಭಾಗಗಳು ಆಶೀರ್ವಾದವಾಗುವಂತೆ ದೇವರು ಮಾಡಿದ್ದಾರೆ. ದೇವರು ಅದ್ಭುತವಾಗಿ 9 ದಿನಗಳಲ್ಲಿ 21,000 ಆದಾಯ ಬರುವಂತೆ ಮಾಡಿದ್ದಾರೆ.

ಹತ್ತು ವರ್ಷದಿಂದ ಫ್ರಿಜ್ ತೆಗೆದುಕೊಳ್ಳಬೇಕು ಎಂದಾಗ ಆ ಹಣ ಎಲ್ಲೆಲ್ಲೋ ಖರ್ಚು ಆಗುತ್ತಿತ್ತು. ಆದರೆ ಈ ಸತ್ಯಕ್ಕೆ ಕನೆಕ್ಟ್ ಆಗಿ ಏಳು ತಿಂಗಳು ಆಯಿತು. ಈಗ ಫ್ರಿಜ್  ತೆಗೆದುಕೊಳ್ಳುವಂತೆ ದೇವರು ಸಹಾಯ ಮಾಡಿದ್ದಾರೆ. ನಾವು ಊಹಿಸುವುದಕ್ಕಿಂತಲೂ, ಯೋಚಿಸುವುದಕ್ಕಿಂತಲೂ ಹೆಚ್ಚಾದದನ್ನು ದೇವರು ನಮಗೆ ಕೊಟ್ಟಿದ್ದಾರೆ . 

ನಾವು ಈ ಸತ್ಯದಲ್ಲಿ ನಡೆಯುತ್ತಿರುವಾಗ ಮತ್ತು ದೇವರಲ್ಲಿ ನಾವು ಸ್ಥಿರವಾಗಿ, ಬಲವಾಗಿ, ನೆಲೆಗೊಂಡಿರುವಾಗ ದೇವರು ನಮ್ಮನ್ನು ಅದ್ಭುತವಾಗಿ ನಡೆಸುತ್ತಿದ್ದಾರೆ.

ದೇವರ ನಾಮಕ್ಕೆ ಮಹಿಮೆ ಉಂಟಾಗಲಿ 🙏🏼


ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR THE LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY


 

Comments

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)