2026 ಜೂನ್ ತಿಂಗಳ ಪ್ರವಾದನೆಯ ವಾಗ್ದಾನ - MONTH ೦F ENLIGHTENMENT
2026 ಜೂನ್ ತಿಂಗಳ ಪ್ರವಾದನೆಯ ವಾಗ್ದಾನ
ಜ್ಞಾನೋದಯದ ತಿಂಗಳು
THE MONTH ೦F ENLIGHTENMENT
ಇದನ್ನು ಓದುತ್ತಿರುವ ಪ್ರೀತಿಯ ಸಹೋದರ ಸಹೋದರಿಯರೇ, ನಾವು ಪ್ರತಿ ತಿಂಗಳ ಮೊದಲನೇ ದಿನ ದೇವರ ವಾಗ್ದಾನಕ್ಕೋಸ್ಕರ ನಾವು ಆಸಕ್ತಿಯಿಂದ ಇದ್ದು, ಪ್ರತಿಯೊಂದು ತಿಂಗಳು ದೇವರು ಕೊಡುವ ವಾಕ್ಯದಂತೆ ಆ ತಿಂಗಳ ಒಂದೊಂದು ದಿನವೂ ನಮ್ಮನ್ನು ದೇವರ ವಾಕ್ಯದ ಆತ್ಮ ನಮ್ಮನ್ನು ನಡೆಸುತ್ತಾ ಇರುವುದಕ್ಕೆ ಸ್ತೋತ್ರ.
ಈ ವರ್ಷ ಜನವರಿ 2026 ದೇವರು ಈ ವರ್ಷಕ್ಕೆ ನಮಗೆ ಕೊಟ್ಟ ವಾಗ್ದಾನ "ಏದೆನ್ ಪುನಃ ಸ್ಥಾಪನೆ" ಆಗಿದೆ. ಎಲ್ಲೆಲ್ಲಿ ಈ ತೊರೆಯು ಹರಿಯುತ್ತದೋ ಅಲ್ಲಲ್ಲಿ ಜೀವ ಉಂಟಾಗುತ್ತಾ ಇದೆ. ಅದರಂತೆಯೇ ಇದುವರೆಗೂ ಒಂದೊಂದು ದಿನವೂ ದೇವರು ನಮ್ಮ ಜೀವಿತದಲ್ಲಿ ಅವರ ಜೀವವನ್ನು ಪ್ರಕಟಿಸುತ್ತಾ ಇದ್ದಾರೆ.ಫೆಬ್ರವರಿ ತಿಂಗಳಲ್ಲಿ ನಮ್ಮನ್ನು ವಾಕ್ಯದ ಮೂಲಕ ನಮ್ಮನ್ನು ಪರಿಪೂರ್ಣ ಮಾಡಿ, "ಸ್ಥಿರಪಡಿಸಿ", ಬಲಪಡಿಸಿ ನಮ್ಮನ್ನು ನೆಲೆಗೊಳಿಸಿದ್ದಾರೆ.
ಮಾರ್ಚ್ ತಿಂಗಳಲ್ಲಿ ಕೃಪೆಯಿಂದಲೇ ನಾವು "ಬೆಳೆಯುವಾಗ" ಪರಲೋಕವೇ ನಮ್ಮನ್ನು ನೋಡಿ ಕೊಂಡಾಡುತ್ತಾ ಇರುತ್ತದೆ.
ಏಪ್ರಿಲ್ ತಿಂಗಳಲ್ಲಿ "ಪುನರುತ್ಥಾನ" ಎನ್ನುವುದು ಯೇಸುವಿಗೆ ನಡೆದ ಒಂದು ಕಾರ್ಯ ಅಲ್ಲ, ಅದು ನಮಗೆ ನಡೆದ ಕಾರ್ಯ. ಆ ತಿಂಗಳು ಪೂರ್ತಿ ದೇವರು ಅದರಂತೆಯೇ ನಡೆಸಿದರು.
ಮೇ ತಿಂಗಳು "ಅದ್ಭುತದ ತಿಂಗಳು". ಯಾವುದು ಮನುಷ್ಯನಿಗೆ ಅಸಾಧ್ಯವಾಗಿದೆಯೋ ದೇವರು ಅದನ್ನು ಮಾಡುತ್ತಾರೆ.
ಅದರಂತೆಯೇ ಈಗ ಜೂನ್ ತಿಂಗಳ ವಾಗ್ದಾನ "ಜ್ಞಾನೋದಯದ ತಿಂಗಳು" {THE MONTH ೦F ENLIGHTENMENT}
ಆಧಾರ ವಾಕ್ಯ:
1 ಸಮುವೇಲನು 14:27
ಯೋನಾತಾನನಿಗೆ ತನ್ನ ತಂದೆಯು ಜನರಿಗೆ ಆಣೆಯಿಟ್ಟು ಹೇಳಿದ್ದು ಗೊತ್ತಿರಲಿಲ್ಲವಾದದರಿಂದ ಅವನು ತನ್ನ ಕೋಲನ್ನು ಜೇನು ತೊಟ್ಟಿಯಲ್ಲಿ ಚುಚ್ಚಿ ಕೈಯಿಂದ ತೆಗೆದು ತಿನ್ನಲು ಅವನ ಕಣ್ಣುಗಳು ಕಳೆಗೊಂಡವು.
ಫಿಲಿಷ್ಠಿಯರೊಂದಿಗೆ ಸೌಲ ಮತ್ತು ಅವನ ಸೈನ್ಯ ಯುದ್ಧ ಮಾಡುತ್ತಿರುವಾಗ, ನಾನು ಪರಿಪೂರ್ಣವಾಗಿ ಶತ್ರುಗಳಿಗೆ ಮುಯ್ಯಿ ತೀರಿಸುವವರೆಗೆನಿಮ್ಮಲ್ಲಿ ಒಬ್ಬನಾದರೂ ಊಟ ಮಾಡಬಾರದು. ಮಾಡಿದವನು ಶಾಪಗ್ರಸ್ತನಾಗಲಿ ಎಂದು ಆಣೆ ಇಟ್ಟಿದ್ದರಿಂದ, ಅವರೆಲ್ಲರೂ ಬಹುವಾಗಿ ಬಳಲಿ ಹೋಗಿದ್ದರು. ಒಬ್ಬನಾದರೂ ಆಹಾರ ಪದಾರ್ಥವನ್ನು ರುಚಿಸಿ ನೋಡಲಿಲ್ಲ, ಜನರೆಲ್ಲರೂ ನೆಲೆಜೇನು ಇರುವ ಕಾಡಿಗೆ ಬಂದರು ಅವರು ಅಲ್ಲಿ ಜೇನು ತುಪ್ಪ ಹರಿಯುವುದನ್ನು ಕಂಡರು ಶಾಪಕ್ಕೆ ಭಯಪಟ್ಟಿದ್ದರಿಂದ ಯಾವನು ಅದನ್ನು ಬಾಯೊಳಗೆ ಹಾಕಲಿಲ್ಲ.
ಯೋನಾತಾನನಿಗೆ ತಂದೆ ತನ್ನ ತಂದೆಯು ಜನರಿಗೆ ಆಣೆ ಇಟ್ಟು ಹೇಳಿದ್ದು ಗೊತ್ತಿರಲಿಲ್ಲವಾದದ್ದರಿಂದ ಅವನು ತನ್ನ ಕೋಲನ್ನು ಜೇನು ತೊಟ್ಟಿಯಲ್ಲಿ ಚುಚ್ಚಿ ಕೈಯಿಂದ ತೆಗೆದು ತಿನ್ನಲು ಅವನ ಕಣ್ಣುಗಳು ಕಳೆಗೊಂಡವು. ಕೂಡಲೇ ಒಬ್ಬನು ಅವನಿಗೆ ಈ ಹೊತ್ತು ಊಟ ಮಾಡುವಂತವರು ಶಾಪಗ್ರಸ್ತರಾಗುವುದರಿಂದ ನಿನ್ನ ತಂದೆ ಆಣೆ ಇಟ್ಟು ಹೇಳಿದ್ದಾನೆ ಎಂದು ತಿಳಿಸಿದನು.
ಕನ್ನಡದಲ್ಲಿ ಪದ ಅವನ ಕಣ್ಣುಗಳು ಕಳೆಗೊಂಡವು.
ನಾನು ಯಾವಾಗಲೂ ನಿಮ್ಮ ಆತ್ಮದ ಕಣ್ಣುಗಳು ತೆರೆಯಲಿ, ನಿಮ್ಮ ಹೃದಯದ ಕಣ್ಣುಗಳು ತೆರೆಯಲಿ, ಈ ಲೋಕಕ್ಕೆ ನಿಮ್ಮ ಕಣ್ಣುಗಳನ್ನು ಮುಚ್ಚಿ, ಪರಲೋಕದಲ್ಲಿರುವ ಆ ಕಾರ್ಯಗಳನ್ನು ನೋಡುವಂತೆ ನಿಮ್ಮ ಕಣ್ಣುಗಳನ್ನು ತೆರೆಯಲಿ ಎಂದು ಹೇಳುತ್ತಿರುತ್ತೇನೆ, ಯಾಕೆಂದರೆ ಈ ಭೂಲೋಕದ ಕಾರ್ಯಗಳನ್ನ ನೋಡುವ ತನಕ ನಿಮ್ಮ ಸಮಸ್ಯೆಗಳು, ಇಕ್ಕಟ್ಟಾದ ಪರಿಸ್ಥಿತಿಗಳೇ ಕಾಣುವಾಗ , ಇನ್ನೊಂದು ಮಂಡಲದಲ್ಲಿ ತಂದೆಯಾದ ದೇವರನ್ನು ನೋಡಕ್ಕೆ ಸಾಧ್ಯವಾಗುತ್ತಿಲ್ಲ. ಅವರ ಜೊತೆ ಒಂದು ಸಂಬಂಧ ಇನ್ನು ಬಲವಾಗಿಲ್ಲ ಎನ್ನುವುದನ್ನು ವ್ಯಕ್ತಪಡಿಸುತ್ತಿದ್ದೇವೆ ಎಂದು ಅರ್ಥ.
ಸೌಲನು ಹೇಳಿದ ಕಟ್ಟಳೆ ಎಲ್ಲರಿಗೂ ಕೇಳಿಸಿತು, ಆದರೆ ಯೋನಾತಾನನಿಗೆ ಮಾತ್ರ ಕೇಳಿಸಲಿಲ್ಲ. ಅವನು ಕೋಲನ್ನು ತೆಗೆದುಕೊಂಡು ಆ ಜೇನು ತೊಟ್ಟಿಯಲ್ಲಿ ಚುಚ್ಚಿ, ತಿಂದ ಕೂಡಲೇ ಅವನ ಕಣ್ಣುಗಳು ಓಪನ್ ಆಯ್ತು, ಅವನ ಕಣ್ಣುಗಳು ಕಳೆಗೊಂಡವು.
ಇದು ಕೇವಲ ಶರೀರದಲ್ಲಿ ನಡೆದ ಒಂದು ಕಾರ್ಯವನ್ನು ತೋರಿಸುತ್ತಿಲ್ಲ, ಆತ್ಮದಲ್ಲಿ ಒಂದು ಕಾರ್ಯ ನಡೆದಿದೆ ಎನ್ನುವುದನ್ನು ವ್ಯಕ್ತಪಡಿಸುತ್ತಿದೆ. ಅದು ಏನೆಂದರೆ ನಿಮ್ಮ ಆತ್ಮದ ಕಣ್ಣುಗಳು ತೆರೆಯುವಾಗ ನೀವು ಈ ಲೋಕದ ಕಾರ್ಯಗಳನ್ನು ನೋಡುವವರಾಗಿರುವುದಿಲ್ಲ, ನೀವು ಆತ್ಮ ಮಂಡಲದಲ್ಲಿರುವ ಕಾರ್ಯಗಳನ್ನು ನೋಡುವವರಾಗಿರುತ್ತೀರಿ.
ಅಲ್ಲಿ ಯುದ್ಧ ನಡೆಯುತ್ತಿದೆ, ಶರೀರ ಪ್ರಕಾರವಾಗಿ ಎಲ್ಲಾ ರೀತಿಯ ಆಯುಧಗಳಿವೆ, ಸೈನ್ಯವಿದೆ, ಆದರೆ ಅಲ್ಲಿ ಯುದ್ಧ ಮಾಡುವ ಬಲವಿಲ್ಲ. ಇದು ಏನನ್ನು ಸೂಚಿಸುತ್ತದೆ ಅಂದರೆ ದೇವರ ವಾಕ್ಯವನ್ನು ಕೇಳಿ ಅನೇಕ ವಿಶ್ವಾಸಿಗಳು ಧಾರ್ಮಿಕವಾಗಿ ಕ್ರಿಸ್ತನನ್ನು ಅನುಸರಿಸುತ್ತಿದ್ದಾರೆ. ಶರೀರದಲ್ಲಿ ಧಾರ್ಮಿಕವಾಗಿ ಕಾರ್ಯಗಳನ್ನು ಮಾಡುವಾಗ ದೇವರನ್ನು ಭಯದಿಂದ ಸೇವಿಸುತ್ತಾರೆ. ಒತ್ತಡದಿಂದ ಇದನ್ನು ಮಾಡಲೇಬೇಕು ಎನ್ನುವ ಕಡ್ಡಾಯದಿಂದ ಮಾಡುತ್ತಾರೆ ಇದು ನಮ್ಮನ್ನು ಆತ್ಮದಲ್ಲಿ ಬಲಪಡಿಸುವುದಿಲ್ಲ, ಆತ್ಮದಲ್ಲಿ ಕುಗ್ಗಿಸುವ ಕಾರ್ಯವಾಗಿದೆ.
ಸೌಲನು, "ನೀವು ಯಾರು ಸಂಜೆವರೆಗೂ ಯಾರು ಏನು ತಿನ್ನಬಾರದು" ಎಂದು ಹೇಳಿದ್ದು ಶರೀರದ ಪ್ರೇರೇಪಣೆಯಿಂದ. ಇದು ದೇವರಿಂದ ಬಂದ ಮಾತಲ್ಲ. ಅವನು ತನ್ನ ಸ್ವಾರ್ಥಕ್ಕಾಗಿ ಈ ರೀತಿ ಹೇಳಿದ್ದರಿಂದ ಎಲ್ಲರೂ ಕುಗ್ಗಿ, ಬಲವಿಲ್ಲದೆ ಹೋದರು.
ದೇವರ ವಾಕ್ಯವನ್ನು ಹೊಂದಿಕೊಳ್ಳುವಾಗ ನಿಮ್ಮ ಶರೀರದ ಕಣ್ಣುಗಳು ಮುಚ್ಚುವಂತೆ ಮಾಡಿ, ದೇವರ ಕಾರ್ಯಗಳಿಗೆ ನಿಮ್ಮ ಕಣ್ಣುಗಳನ್ನು ತೆರೆಯುವಂತೆ ಮಾಡುತ್ತದೆ.
ಇಡೀ ಸೈನ್ಯಕ್ಕೆ ಕೇಳಿಸಿತು ಆದರೆ ಯೋನಾತಾನನಿಗೆ ಮಾತ್ರ ಕೇಳಿಸಲಿಲ್ಲ, ಇದರ ರಹಸ್ಯ ಏನೆಂದರೆ, ದೇವರ ವಾಕ್ಯದೊಂದಿಗೆ ಆತ್ಮದಲ್ಲಿ ಸಂಪರ್ಕದಲ್ಲಿರುವಾಗ ದೇವರ ಉದ್ದೇಶದ ಪ್ರಕಾರ ನಿಮಗೆ ಏನು ಕೇಳಿಸಬೇಕು ಅದನ್ನು ಮಾತ್ರವೇ ಕೇಳಿಸಿಕೊಳ್ಳುತ್ತೀರಿ. ದೇವರ ಕಾರ್ಯಗಳನ್ನು ಬಿಟ್ಟು ಬೇರೆ ಯಾವುದೂ ನಿಮ್ಮ ಕಿವಿಗೆ ಕೇಳಿಸುವುದಿಲ್ಲ.
ಯೇಸುವಿನ ನಾಮದಲ್ಲಿ ಈ ತಿಂಗಳಿನಲ್ಲಿ ಒಂದೊಂದು ದಿನವೂ ಯಾವುದೇ ಬೇಡದೆ ಇರುವ ಶಬ್ದಗಳು, ಸೈತಾನನ ಶಬ್ದಗಳು, ಲೋಕದ ಮಾತುಗಳು ಕೇಳಿಸದಂತೆ, ನಿಮ್ಮ ಕಣ್ಣುಗಳು, ನಿಮ್ಮ ಕಿವಿಗಳು ದೇವರ ವಾಕ್ಯವನ್ನೇ ನೋಡುತ್ತಾ, ವಾಕ್ಯವೇ ನಿಮ್ಮ ಆಧಾರವಾಗಿ, ವಾಕ್ಯದ ಆತ್ಮವೇ ನಿಮ್ಮನ್ನು ನಡೆಸಿ, ದೇವರ ಉದ್ದೇಶದ ಪ್ರಕಾರ ಆ ಫಲವನ್ನು ಅನುಭವಿಸುವಂತೆ ಮಾಡುತ್ತಿದೆ ಎಂದು ಡಿಕ್ಲೇರ್ ಮಾಡುತ್ತಿದ್ದೇನೆ.
ಎರಡನೆಯದಾಗಿ ಅವನು ಕೋಲಿನಿಂದ ಜೇನನ್ನು ಚುಚ್ಚಿದ ಎನ್ನುವುದು ಏನನ್ನು ಸೂಚಿಸುತ್ತದೆ ಅಂದರೆ,
ಕೀರ್ತನೆಗಳು 119:103
ನಿನ್ನ ನುಡಿಗಳು ನನ್ನ ನಾಲಿಗೆಗೆ ಎಷ್ಟೋ ರುಚಿಯಾಗಿವೆ;
ಅವು ನನ್ನ ಬಾಯಿಗೆ ಜೇನುತುಪ್ಪಕ್ಕಿಂತಲೂ ಸಿಹಿಯಾಗಿವೆ.
"ಜೇನು" ಎನ್ನುವ ಶರೀರ ಪ್ರಕಾರದ ಪದಾರ್ಥವನ್ನು ತಿಂದಿದ್ದರಿಂದ ಅವನ ಕಣ್ಣುಗಳು ಕಳೆಗೊಳ್ಳಲಿಲ್ಲ, "ಜೇನು" ಎನ್ನುವುದು ದೇವರ ವಾಕ್ಯವಾಗಿದೆ. "ವಾಕ್ಯ" ಎಂಬುವವರು ಒಬ್ಬ ವ್ಯಕ್ತಿಯಾಗಿದ್ದಾರೆ, ಆ ವ್ಯಕ್ತಿಯೇ "ಯೇಸು"
ಹಾಗಾದರೆ ಅವನು ರುಚಿಸಿ ನೋಡಿದ್ದು ಯೇಸುವನ್ನು.
{ಆಧಾರ ವಚನಗಳು:
ಪ್ರಕಟನೆ 10:10
ಆಗ ನಾನು ಆ ಚಿಕ್ಕ ಸುರುಳಿಯನ್ನು ಆ ದೂತನ ಕೈಯಿಂದ ತೆಗೆದುಕೊಂಡು ತಿಂದುಬಿಟ್ಟೆನು. ಅದು ನನ್ನ ಬಾಯಲ್ಲಿ ಜೇನಿನಂತೆ ಸಿಹಿಯಾಗಿತ್ತು; ಅದನ್ನು ತಿಂದ ಮೇಲೆ ನನ್ನ ಹೊಟ್ಟೆಯು ಕಹಿಯಾಯಿತು.
ಪ್ರವಾದಿ ಯೆರೆಮೀಯನ ಗ್ರಂಥ 15:16
ನನಗೆ ದೊರೆತ ನಿನ್ನ ಮಾತುಗಳನ್ನು ಆಹಾರಮಾಡಿಕೊಂಡೆನು, ನಿನ್ನ ನುಡಿಗಳು ನನಗೆ ಹರ್ಷವೂ ಹೃದಯಾನಂದವೂ ಆದವು; ಸೇನಾಧೀಶ್ವರನಾದ ದೇವರೇ, ಯೆಹೋವನೇ, ನಾನು ನಿನ್ನ ಹೆಸರಿನವನಲ್ಲವೇ!
ಮತ್ತಾಯ 4:4
“ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು ಎಂದು ಬರೆದದೆ” ಅಂದನು.}
ದೇವರ ಪ್ರಸನ್ನತೆಯಲ್ಲಿ ಇರುವುದು, ನಮಗೆ ಪರಿಪೂರ್ಣ ಆನಂದವನ್ನು ಕೊಡುತ್ತದೆ. ಅವರ ಮಾತುಗಳು ಬಂದಕೂಡಲೇ ನನ್ನ ಆತ್ಮಕ್ಕೆ ಬಲ ಉಂಟಾಯಿತು ಅಂತ ವಾಕ್ಯ ಇದೆ. ಅವರ ಮಾತು ಬಂದ ಕೂಡಲೇ ಅವರಉದ್ದೇಶವನ್ನು ನಡೆಸುವಂತೆ ಕಾರ್ಯ ಮಾಡಿತು.
ಶರೀರದ ಬಲದಿಂದ ಅಸಾಧ್ಯವಾಗಿರುವುದು, ಶರೀರ ಜ್ಞಾನಕ್ಕೆಅರ್ಥ ಆಗದೆ ಇರುವುದು, ಶರೀರದ ಪ್ರಯತ್ನದಿಂದ ಅಸಾಧ್ಯವಾಗಿರುವುದು ಆ ವಾಕ್ಯದ ಮೂಲಕ ಸಾಧ್ಯವಾಯಿತು.
ಈ ತಿಂಗಳಲ್ಲಿ ಒಂದೊಂದು ದಿನವೂ ದೇವರ ವಾಕ್ಯಗಳು ಮಹತ್ತಾದ ಆನಂದವನ್ನು, ಸಂತೋಷವನ್ನು, ಸಮಾಧಾನವನ್ನು ತರುತ್ತಿದೆ ಎಂಬುವುದನ್ನು ನಿಮ್ಮ ಆತ್ಮ ಅನುಭವಿಸುವಾಗ, ಅದುಸಿಹಿಯಾಗಿದೆ ಎಂದು ತಿಳಿಯುವಾಗ, ನಿಮ್ಮ ಪರಿಸ್ಥಿತಿಗಳೆಲ್ಲ ತಲೆಕೆಳಗಾಗಿ ಈ ತಿಂಗಳಲ್ಲಿ ಆ ವಾಕ್ಯದ ಆನಂದವನ್ನು ಸಮಾಧಾನವನ್ನು ಸಂತೋಷವನ್ನು ನೀವು ಪರಿಪೂರ್ಣವಾಗಿ, ತೃಪ್ತಿಯಾಗಿ ಅನುಭವಿಸುವಿರಿ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತಿದ್ದೇನೆ.
ಹಾಗಾದರೆ ನಿಮ್ಮಬಾಯಿಗೆ ಸಿಹಿಯಾಗಿತ್ತು ನಿಮ್ಮ ಹೊಟ್ಟೆಗೆ ಕಹಿಯಾಗಿತ್ತು ಅಂದರೆ ಉದಾಹರಣೆಗೆ ಒಬ್ಬ ಸ್ತ್ರೀ ಗರ್ಭಿಣಿಯಾಗಿದ್ದಾಳೆ ಅಂದರೆ ಆ ವಿಷಯ ಸಿಹಿಯಾದದ್ದು, ಆದರೆ ಹೆರಿಗೆಯ ಸಮಯ ಬಂದಾಗ ಇದುವರೆಗೂ ಕಾಣದೇ ಇರುವುದು ಕಾಣುವ ರೂಪದಲ್ಲಿ ಹೊರಗಡೆ ಬರಬೇಕಾದರೆ ಅದರ ನೋವು ವೇದನೆ ಸಾಧಾರಣವಾಗಿರುವುದಿಲ್ಲ, ಅದೇ ರೀತಿ ಯೇಸು ಶಿಲುಬೆಯಲ್ಲಿ ಅನುಭವಿಸಿದ ಕಾರ್ಯಗಳು ಕಹಿಯಾಗಿತ್ತು, ಆದರೆ ಅದನ್ನು ಮಾಡಿ ಮುಗಿಸಿದ ಕೂಡಲೇ ಅವರು ಪ್ರಕಟಿಸಿದ್ದು ಸಿಹಿಯಾದ ಕಾರ್ಯಗಳನ್ನು.
ಇವತ್ತಿಗೂ ಕೂಡ ನಿರಂತರವಾಗಿ, ನಿತ್ಯ ನಿತ್ಯವಾಗಿ ಅನುಭವಿಸುತ್ತಿದ್ದೇವೆ.
ಈ ತಿಂಗಳಿನಲ್ಲಿ ನಾವು ಹೇಳಬೇಕಾದ ಕಾರ್ಯ ನಾನು ಶರೀರ ಪ್ರಕಾರವಾಗಿರುವ ಕಾರ್ಯಗಳನ್ನು, ಇರುವುದನ್ನು ಇರುವ ಹಾಗೆ ನೋಡಿ ತೀರ್ಮಾನ ಮಾಡಿ, ನನ್ನ ಯೋಚನೆಗಳ ಮೂಲಕ, ನನ್ನ ಮಾತಿನ ಮೂಲಕ, ನನ್ನ ಕ್ರಿಯೆಗಳ ಮೂಲಕ ನಡೆಯುವವನು ಆಗಿರುವುದಿಲ್ಲ.
ನಾನು ಯಾವಾಗ ನಿನ್ನ ವಾಕ್ಯವನ್ನು ತಿಂದೆನು, ನನ್ನ ಕಣ್ಣುಗಳು ಕಳೆಗೊಂಡವು, ನನ್ನ ಕಣ್ಣುಗಳು ತೆರೆದವು. ಈಗ ನಿನ್ನನ್ನೇ ನೋಡುತ್ತ, ನಿನ್ನ ಮಾತುಗಳೇ ನನ್ನಲ್ಲಿ ಒಂದಾಗುತ್ತಾ, ಆ ಮಾತುಗಳು ಏನು ಹೇಳುತ್ತಿದೆಯೋ, ಅದರಂತೆಯೇ ನನ್ನ ಯೋಚನೆಗಳು ಇರುವುದಕ್ಕೋಸ್ಕರ ಸ್ತೋತ್ರ. ಅದರಂತೆಯೇ ನನ್ನ ಮಾತುಗಳು ಇರುವುದಕ್ಕೆ ಸ್ತೋತ್ರ. ಅದರಂತೆಯೇ ನನ್ನ ಕ್ರಿಯೆಗಳು ಇರುವುದಕ್ಕೆ ಸ್ತೋತ್ರ.
ಇಂದಿನಿಂದ ನಿಮ್ಮ ಆತ್ಮದ ಕಣ್ಣುಗಳು ತೆರೆಯುವಾಗ, ನಿಮ್ಮ ಒಳಗಿನ ಮನುಷ್ಯ ಬಲವಾಗುವನು. ದೇವರ ಕಾರ್ಯಗಳನ್ನು ಸುಲಭವಾಗಿ ಅರಿತುಕೊಳ್ಳುವನು. ನಿಮ್ಮ ಮೈಂಡ್ ತೀರ್ಮಾನ ಮಾಡುವುದು, ವಿವೇಚಿಸುವುದು, ನಿಮಗೆ ಬರುವ ಐಡಿಯಾಗಳು ಪರಲೋಕದಿಂದ ಬರುವುದು ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ. 🙌
ಇಂದಿನಿಂದ ನಿಮ್ಮನ್ನು ಯಾವ ಶತ್ರು, ಯಾವ ಸೈತಾನನು ವಂಚಿಸುವುದಕ್ಕೆ ಸಾಧ್ಯವಿಲ್ಲ, ಯಾಮಾರಿಸುವುದಕ್ಕೆ ಸಾಧ್ಯವಿಲ್ಲ. ಹಾಗಾದರೆ ಈ ತಿಂಗಳಿನಲ್ಲಿ ಒಂದೊಂದು ದಿನವೂ, ಈ ಸತ್ಯದ ಮೂಲಕ, ನಿಮ್ಮ ಆತ್ಮದ ಕಣ್ಣುಗಳು ತೆರೆದಿರುವುದರಿಂದ, ನಿಮ್ಮ ಕಣ್ಣುಗಳು ಕಳೆಕೊಂಡಿರುವುದರಿಂದ, ಯೇಸುವಿನ ನಾಮದಲ್ಲಿ ಯಾವುದೇ ಸೈತಾನನ ಬಲೆಗೆ ಬೀಳುವುದಿಲ್ಲ, ಯಾವುದೇ ವಂಚನೆಗೆ ಬೀಳುವುದಿಲ್ಲ, ನೀವು ದುಡ್ಡನ್ನು ಕಳೆದುಕೊಳ್ಳುವುದಿಲ್ಲ, ನೀವು ನಷ್ಟವನ್ನು ಅನುಭವಿಸುವುದಿಲ್ಲ, ನಿಮ್ಮನ್ನು ಯಾರು ಯಾಮಾರಿಸುವುದಕ್ಕೆ ಆಗುವುದಿಲ್ಲ.
ಈ ತಿಂಗಳಲ್ಲಿ ಒಂದೊಂದು ದಿನವೂ, ದೇವರ ಮಹಿಮೆ ಎಂತಹದ್ದು ಎಂದು ನಿಮ್ಮ ಕೆಲಸದಲ್ಲಿ, ನಿಮ್ಮ ವ್ಯಾಪಾರದಲ್ಲಿ, ನಿಮ್ಮ ಕುಟುಂಬದಲ್ಲಿ ನಿಮ್ಮ ಮಕ್ಕಳ ಜೀವನದಲ್ಲಿ ಅದನ್ನು ಪರಿಪೂರ್ಣವಾಗಿ, ತೃಪ್ತಿಯಾಗಿ ಅನುಭವಿಸುತ್ತೀರಿ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ 🙌
ಈ ಆತ್ಮದ ಕಣ್ಣು ತೆರೆದಿರುವ ಮೂಲಕ ಒಂದು ದಿನಕ್ಕಿಂತ ಇನ್ನೊಂದು ದಿನ ನಿಮಗೂ, ತಂದೆಯಾದ ದೇವರಿಗೂ, ಯೇಸುಕ್ರಿಸ್ತನ ಮೂಲಕ ಇರುವ ಸಂಬಂಧ ಪವಿತ್ರಾತ್ಮನು ಒಂದೊಂದು ದಿನವೂ ಬಲಪಡಿಸುತ್ತಾನೆ. ದೇವರ ದಯೆ, ದೇವರ ಪ್ರಸನ್ನತೆ, ದೇವರ ಆತ್ಮ ನಿಮ್ಮನ್ನು ಬಲವಾಗಿ ನಡೆಸುತ್ತದೆ. ಒಂದು ದಿನವೂ ದೇವರ ಪ್ರಕಟನೆ ಇಲ್ಲದೆ ನೀವು ನಡೆಯುವುದಿಲ್ಲ.
ಪ್ರಕಟನೆ ಇಲ್ಲದೆ ನೀವು ಮಾಡುವ ಭಕ್ತಿ ಅದು ಧಾರ್ಮಿಕವಾದದ್ದು, ಆದರೆ ಪ್ರಕಟನೆಯಿಂದ ನೀವು ದೇವರ ಸೇವೆ ಮಾಡುವುದು ಅದು ಪರಲೋಕದ ಬಾಗಿಲನ್ನು ತೆರೆದು, ಆ ಫಲಗಳನ್ನು ಹಾಗೆ ಅನುಭವಿಸುವುದು. ಇದರ ಮೂಲಕ ಈ ಭೂಮಿಯಲ್ಲಿ ನೀವು ಜೀವವುಳ್ಳ ಸಾಕ್ಷಿಯಾಗಿ ಇರುತ್ತೀರಿ, ದೇವರ ನಾಮ ಮಹಿಮೆ ಪಡುವುದು, ಪರಲೋಕವೇ ಕೊಂಡಾಡುವುದು ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ 🙌
ಈ ತಿಂಗಳಿನಲ್ಲಿ ಒಂದು ದಿನವೂ ನೀವು ಕನ್ಫ್ಯೂಸ್ ನಲ್ಲಿ ಇರುವುದಿಲ್ಲ. ಭಯದಲ್ಲಿ ಇರುವುದಿಲ್ಲ. ಗೊಂದಲದಲ್ಲಿ ಇರುವುದಿಲ್ಲ. ಒಂದೊಂದು ದಿನವು ದೇವರ ಉದ್ದೇಶದ ಪ್ರಕಾರ ಪರಿಪೂರ್ಣವಾಗಿ, ತೃಪ್ತಿಯಾಗಿ ನಿಮ್ಮನ್ನು ನೋಡುತ್ತಾ ಪರಲೋಕವೇ ಕೊಂಡಾಡುತ್ತದೆ.
ಬೈಬಲ್ ನಲ್ಲಿ ಎಲ್ಲ ಕಡೆ ನೋಡುವಾಗ, ಕೋಲು ಅಧಿಕಾರವನ್ನು ರೆಪ್ರೆಸೆಂಟ್ ಮಾಡುತ್ತದೆ. ಯೋನಾತಾನನು ಆಕಸ್ಮಿಕವಾಗಿ ಕೋಲಿನಿಂದ ಜೇನನ್ನು ಮುಟ್ಟಿಲ್ಲ, ಅವನು ಯೇಸುಕ್ರಿಸ್ತನ ಅಧಿಕಾರದಿಂದ ವಾಕ್ಯವನ್ನು ಮುಟ್ಟುವಾಗಲೆಲ್ಲ, ಅವನ ಕಣ್ಣುಗಳು ತೆರೆದವು. ವಾಕ್ಯವನ್ನು ಅಧಿಕಾರ ಪೂರ್ವಕವಾಗಿ ಅರಿಕೆ ಮಾಡುವಾಗ, ಅಲ್ಲಿ ನೀವು ಪ್ರಕಟನೆಯನ್ನು ಹೊಂದಿಕೊಳ್ಳುತ್ತಿದ್ದೀರಿ. ನಿಮ್ಮ ಆತ್ಮದ ಕಣ್ಣು ತೆರೆಯುವುದು. ಪರಲೋಕವೇ ಕೆಳಗಡೆ ಇಳಿದು ಬರುವುದು.
ಪರಲೋಕದ ಸೈನ್ಯ ನಿಮ್ಮ ಜೊತೆ ಸೇರಿ ಎಂತಹ ದೊಡ್ಡ ಸಮಸ್ಯೆ ಇದ್ದರೂ ಅದನ್ನು ನಿರ್ಮೂಲ ಮಾಡಿ, ದೇವರ ಮಹಿಮೆಯನ್ನು ವ್ಯಕ್ತಪಡಿಸುವ ರೀತಿಯಲ್ಲಿ ದೇವರ ಕಾರ್ಯಗಳು ನಡೆಯುವುದು.
ದೇವರ ವಾಕ್ಯವನ್ನು ಅಧಿಕಾರದಿಂದ ನೀವು ಉಪಯೋಗಿಸುತ್ತಿರೋ, ಆಗ ಆ ವ್ಯಾಕ್ಯಗಳು ನಿಮ್ಮಲ್ಲಿ ಜೀವವಾಗಿ ಎದ್ದು ಬಂದು ಆ ವಾಕ್ಯ ಏನು ಹೇಳುತ್ತಿದೆಯೋ, ಆ ವಾಕ್ಯದಂತೆ ಕಾರ್ಯಗಳು ಮಾಂಸವಾಗುವುದು. ಮುಚ್ಚು ಮರೆಯಾಗಿರುವ ಸತ್ಯಗಳು, ಪ್ರಕಟನೆಗಳು ಕಾಣುವ ರೂಪದಲ್ಲಿ ನಿಮ್ಮಲ್ಲಿ ವ್ಯಕ್ತವಾಗುವುದು. ನಿಮ್ಮಲ್ಲಿ ಪ್ರಕಟವಾಗುವುದು.
ಯೇಸುವಿನ ನಾಮದಲ್ಲಿ ನೀವು ವಾಕ್ಯವನ್ನು ತಿಂದ ಕೂಡಲೇ, ಆ ವ್ಯಾಕ್ಯವನ್ನು ಅಧಿಕಾರ ಪೂರ್ವಕವಾಗಿ ಡಿಕ್ಲೇರ್ ಮಾಡುವಾಗಲೆಲ್ಲ, ಅದು ಸಾಧಾರಣ ಮಾಹಿತಿಯಾಗಿರುವುದಿಲ್ಲ, ಆ ಮಾತು ಅಭಿಷೇಕ ಮಾಡಲ್ಪಟ್ಟು ಆತ್ಮವಾಗಿಯೂ, ಜೀವವಾಗಿಯೂ ಒಂದು ಕಾರ್ಯವನ್ನು ನಿರ್ವಹಿಸುವ ರೀತಿಯಲ್ಲಿ ಆ ವಾಕ್ಯ ನಿಮ್ಮಲ್ಲಿ ಮಾಂಸವಾಗುವುದು. ಆ ವಾಕ್ಯದ ಮಹಿಮೆ, ಬಲ ಸಾಮರ್ಥ್ಯ, ಫಲವನ್ನು ಪರಿಪೂರ್ಣವಾಗಿ ತೃಪ್ತಿಯಾಗಿ ಅನುಭವಿಸುವಿರಿ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ 🙌
ಯೇಸುವಿನ ನಾಮದಲ್ಲಿ ಈ ತಿಂಗಳು ನನ್ನ ಕಣ್ಣುಗಳು ಯಾವಾಗಲೂ ಕಳೆ ಗೊ೦ಡಿರುವುದಕ್ಕಾಗಿ ಸ್ತೋತ್ರ. ಒಂದೊಂದು ದಿನವೂ ನನ್ನಆತ್ಮದ ಕಣ್ಣುಗಳು ತೆರೆದು ಅದರಂತೆ ನಾನು ವಿವೇಚಿಸುವಂತೆ, ನನ್ನ ಯೋಚನೆಗಳು, ಮಾತುಗಳು, ಕ್ರಿಯೆಗಳು ಇರುವಂತೆ ಪವಿತ್ರಾತ್ಮನೇ ನೀವು ನಡೆಸಿದ್ದಕ್ಕಾಗಿ ಸ್ತೋತ್ರ 🙏 ನಾನು ಈ ಲೋಕದ ಕಾರ್ಯಗಳನ್ನು ನೋಡಿ ನಡೆಯುವನಲ್ಲ, ನನ್ನ ಕಣ್ಣುಗಳು ಕಳೆಗೊಂಡಿವೆ.
ನನ್ನ ತಿಳುವಳಿಕೆಯ ಕಣ್ಣುಗಳು, ನನ್ನ ಹೃದಯದ ಕಣ್ಣುಗಳು, ನನ್ನ ಮನಸ್ಸಿನ ಕಣ್ಣುಗಳು ತೆರೆದಿವೆ. ಅದರಿಂದ ನಾನು ಯಾವ ವಾಕ್ಯವನ್ನು ಹೊಂದಿದೆನೋ, ಆ ವಾಕ್ಯದ ಆಲೋಚನೆಯಲ್ಲಿ ನಡೆಯುವುದು. ಆ ವಾಕ್ಯದ ಮಾತುಗಳೇ ನನ್ನ ಬಾಯಲ್ಲಿ ಬರುವುದು. ಆ ವಾಕ್ಯದ ಕ್ರಿಯೆಗಳು ನನ್ನ ಶರೀರದಲ್ಲಿ ಕಾಣಿಸಿಕೊಳ್ಳುವುದು.
ಒಂದೊಂದು ದಿನವೂ ದೇವರ ಉದ್ದೇಶಪೂರ್ವಕವಾಗಿ ನನ್ನ ಜೀವನ ಇರುವುದು ಎಂದು ಹೇಳಿ, ನೀವು ಕೆಲಸಕ್ಕೆ, ವ್ಯಾಪಾರಕ್ಕೆ ಹೋಗುತ್ತೀರಿ, ಮಕ್ಕಳ ಜೀವನದಲ್ಲಿ ಕಾರ್ಯ ಮಾಡುತ್ತಿದ್ದೀರಿ ಎಲ್ಲವೂ ಜಯವಾಗಿರುವುದು. ಸಾಧಾರಣವಾದ ಜಯವಲ್ಲ, ದೇವರ ಮಹತ್ತಾದ ಜಯ.
ಈ ತಿಂಗಳಿನ ದೇವರ ವಾಗ್ದಾನ ನಿಮಗೆ ಬರುವ ಸಮಸ್ಯೆ ನಿಮ್ಮನ್ನು ಕುಗ್ಗಿ ಮೂಲೆಗೆ ಕುಳಿತುಕೊಳ್ಳುವಂತೆ ಅಲ್ಲ, ನಿಮಗೆ ಬರುವ ಸಮಸ್ಯೆಯ ಮಧ್ಯದಲ್ಲಿ ಹೇರಳವಾದ ಆಶೀರ್ವಾದ. ಸಮಸ್ಯೆಯ ಮಧ್ಯದಲ್ಲೇ ಹೆಚ್ಚಳ. ಸಮಸ್ಯೆಯ ಮಧ್ಯದಲ್ಲಿ ನಿಮಗೆ ಪ್ರಮೋಷನ್, ಹೆಚ್ಚಳ. ಎಲ್ಲಾ ಕಡೆ ಕೆಲಸ ಹೋಗುತ್ತಿದೆ ಎನ್ನುವಾಗ, ನಿಮಗೆ ಮಾತ್ರ ಕೆಲಸದ ಮೇಲೆ ಕೆಲಸ. ಲಾಭದ ಮೇಲೆ ಲಾಭ. ಸಮಾಧಾನದ ಮೇಲೆ ಸಮಾಧಾನ. ಸೆಲೆಬ್ರೇಶನ್ ಮೇಲೆ ಸೆಲೆಬ್ರೇಶನ್ ಮಾಡುವವರಾಗಿದ್ದೀರಿ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ 🙌
ಯುದ್ಧದಲ್ಲಿ ಎಷ್ಟು ಸಾವಿರ ಸೈನ್ಯರಿದ್ದರು ಗೊತ್ತಿಲ್ಲ, ಎಲ್ಲರೂ ಆ ಕಟ್ಟಳೆಗೆ ವಿಧೇಯರಾಗಿ, ಮನುಷ್ಯನ ಮಾತನ್ನು ಕೇಳಿ, ಶರೀರ ಪ್ರಕಾರವಾಗಿರುವ ಪರಿಸ್ಥಿತಿಯನ್ನು ಕೇಳಿ ಕುಗ್ಗಿ ವೀಕ್ ಆಗಿ ಮೂಲೆಯಲ್ಲಿದ್ದರು.
ಆದರೆ ಅದರ ಮಧ್ಯದಲ್ಲಿ, ಒಬ್ಬ ಮಾತ್ರ ಜೇನು ಎಂಬುವ ವಾಕ್ಯವನ್ನು ಹೊಂದಿಕೊಂಡು, ಕೋಲು ಎಂಬ ಅಧಿಕಾರದಿಂದ ಅದನ್ನು ತಿಂದ ಕೂಡಲೇ, ಅವನ ಒಳಗಿನ ಮನುಷ್ಯ ಬಲಹೊಂದಿ ಅವನು ಮಾತ್ರ ಯುದ್ಧದಲ್ಲಿ ಬಲವಾಗಿ ಯುದ್ಧ ಮಾಡುತ್ತಿದ್ದನು.
ಅದರಂತೆ ಈ ತಿಂಗಳಿನಲ್ಲಿ ನಿಮ್ಮ ಸುತ್ತಮುತ್ತ ನಡೆಯುವ ಕಾರ್ಯಗಳು ನಿಮ್ಮ ಸಮಾಧಾನವನ್ನು ಕೆಡಿಸುವುದಿಲ್ಲ, ಆದರೆ ನೀವು ಹೊಂದಿಕೊಂಡಿರುವ, ನೀವು ತಿಂದಿರುವ ವಾಕ್ಯ ನಿಮ್ಮನ್ನು ಆತ್ಮದ ಮನುಷ್ಯನನ್ನು ಬಲಪಡಿಸಿ, ಅದರ ಫಲವನ್ನು ಒಂದೊಂದು ದಿನವೂ ಪರಿಪೂರ್ಣವಾಗಿ ಅನುಭವಿಸುವಂತೆ, ಸುತ್ತಮುತ್ತ ಇರುವವರೆಲ್ಲರಿಗೂ, ನೀವು ಆಶೀರ್ವಾದವಾಗಿರುವಂತೆ, ನಿಮ್ಮ ಮೂಲಕ ಕುಗ್ಗಿ ಹೋಗಿರುವವರು ಬಲಹೊಂದುವಂತೆ, ತಿಂಗಳು ದೇವರು ನಿಮ್ಮನ್ನು ಬಲವಾಗಿ ನಡೆಸುತ್ತಾರೆ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ,🙌
ಈ ತಿಂಗಳ ಅರಿಕೆ :
“Father, thank you for enlightening every darkened area of my life.
Thank you for Opening everything that is closed within me.
Thank you for Restoring my hunger, my fire, my vision, and my intimacy with You.
Thank you for my heart burns again with the revelation of Christ.
Every spiritual heaviness is broken in Jesus name.
I reject spiritual exhaustion, fear, and condemnation.
Holy Spirit, Thank you for breathing upon dry places and awakened me again. In Jesus’ name, Amen.”
ತಂದೆಯೇ, ನನ್ನ ಜೀವನದಲ್ಲಿ ಪ್ರತಿಯೊಂದು ಕತ್ತಲೆಯಾದ ಪ್ರದೇಶವನ್ನು ಬೆಳಗಿಸಿದ್ದಕ್ಕಾಗಿ ಸ್ತೋತ್ರ.
ನನ್ನೊಳಗೆ ಮುಚ್ಚಿಹೋಗಿರುವ ಎಲ್ಲವನ್ನೂ ತೆರೆದಿದ್ದಕ್ಕಾಗಿ ಸ್ತೋತ್ರ.
ನನ್ನ ಹಸಿವು, ನನ್ನ ಬೆಂಕಿ, ನನ್ನ ದೃಷ್ಟಿ ಮತ್ತು ನಿಮ್ಮೊಂದಿಗಿನ ನನ್ನ ಅನ್ಯೋನ್ಯತೆಯನ್ನು ಪುನಃಸ್ಥಾಪಿಸಿದ್ದಕ್ಕಾಗಿ ಸ್ತೋತ್ರ.
ಕ್ರಿಸ್ತನ ಬಹಿರಂಗಪಡಿಸುವಿಕೆಯಿಂದ ನನ್ನ ಹೃದಯ ಮತ್ತೆ ಉರಿಯುತ್ತಿರುವುದಕ್ಕಾಗಿ ಸ್ತೋತ್ರ.
ಪ್ರತಿಯೊಂದು ಆಧ್ಯಾತ್ಮಿಕ ಭಾರವು ಯೇಸುವಿನ ನಾಮದಲ್ಲಿ ಮುರಿಯಲ್ಪಟ್ಟಿದೆ.
ನಾನು ಆಧ್ಯಾತ್ಮಿಕ ಬಳಲಿಕೆ, ಭಯ ಮತ್ತು ಖಂಡನೆಯನ್ನು ತಿರಸ್ಕರಿಸುತ್ತೇನೆ.
ಪವಿತ್ರಾತ್ಮನೇ, ಒಣಗಿದ ಸ್ಥಳಗಳಲ್ಲಿ ಉಸಿರಾಡಿಸಿದ್ದಕ್ಕಾಗಿ ಮತ್ತು ನನ್ನನ್ನು ಮತ್ತೆ ಜಾಗೃತಗೊಳಿಸಿದ್ದಕ್ಕಾಗಿ ಸ್ತೋತ್ರ. ಯೇಸುವಿನ ನಾಮದಲ್ಲಿ, ಆಮೆನ್. 🙏🏻
ಪೂರ್ಣ ಸಂದೇಶವನ್ನು ವೀಕ್ಷಿಸಲು ಕ್ಲಿಕ್ ಮಾಡಿ .
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY

Glory Glory Glory to God 🙏
ReplyDeleteGlory glory to Jesus 🙏🏻👏🏻👏🏻🔥🔥🎉🎉🥳🥳
ReplyDeleteಈ ಸಂದೇಶವನ್ನು ಓದಿ ನಮ್ಮ ಕಣ್ಣುಗಳು ಕಳೆಗೊಂಡವು.
ReplyDeleteThank you Pastor 🙏🏻💜🩵