Testimony # 760 -- ನನ್ನ ಮಗಳ ಬಂಗಾರ ಚೈನ್, ಉಂಗುರ ಕಳೆದಿತ್ತು. ......
ದೇವರ ನಾಮಕ್ಕೆ ಸ್ತೋತ್ರವಾಗಲಿ🙏
ನನ್ನ ಹೆಸರು: ಗಂಗು
ನಮ್ಮ ಊರು :ಬೆಳಗಾವಿ
ನಾನು ಫೆಬ್ರುವರಿ ತಿಂಗಳಿನಿಂದ ಈ ಪ್ರೇಯರ್ ಗೆ ಜಾಯಿನ್ ಆಗುತ್ತಿದ್ದೇನೆ. ಏಪ್ರಿಲ್ 14ರಲ್ಲಿ ನನ್ನ ಮಗಳ ಬಂಗಾರ ಚೈನ್, ಉಂಗುರ ಕಳೆದಿತ್ತು. ನಾನು ಕಷ್ಟಪಟ್ಟು ಮನೆ ಕೆಲಸ ಮಾಡಿ ತೆಗೆದುಕೊಂಡಿದ್ದ ಬಂಗಾರ ಅದು ಎಂದು ತುಂಬಾ ದುಃಖದಿಂದ ಅಳುತ್ತಿದ್ದೆ. ನಾನು ನಮ್ರತಾ ಸಿಸ್ಟರ್ ಗೆ ಕಾಲ್ ಮಾಡಿ ಹೇಳಿದೆ. ಅವರು ಪ್ರೇಯರ್ ಮಾಡೋಣ ಸಿಗುತ್ತದೆ. ದೇವರು ನಿಮ್ಮನ್ನು ಸಾಕ್ಷಿಯಾಗಿ ನಿಲ್ಲಿಸುತ್ತಾರೆ ಎಂದರು.
ನಮ್ಮ ಮೈದುನನ ಹೆಂಡತಿ ಬೇರೆ ಕಡೆ ಹೋಗಿ ಕೇಳಿಸಿ ನೋಡೋಣ ಗೊತ್ತಾಗುತ್ತದೆ ಎಂದು ಹೇಳುವಾಗ, ನಮ್ರತಾ ಸಿಸ್ಟರ್ "ಯಾರ ಮಾತು ಕೇಳಬೇಡಿ. ದೇವರ ಚಿತ್ತ, ದೇವರ ಉದ್ದೇಶ ಏನು ಇದೆಯೋ ಅದೇ ನೆರವೇರುವುದು" ಎಂದು ಹೇಳುವಾಗ ನಾನು ನಂಬಿಕೆಯಿಂದ ಪ್ರೇಯರ್ ಮಾಡಲು ಶುರು ಮಾಡಿದೆ.
ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏
ಇದೇ ತಿಂಗಳು 15ಕ್ಕೆ ಯಾವ ಜಾಗದಲ್ಲಿ ಕಳೆದಿದೆಯೋ ಅದೇ ಜಾಗದಲ್ಲಿ ಸಿಗುವಂತೆ ದೇವರು ಅದ್ಬುತವನ್ನು ಮಾಡಿದ್ದಾರೆ.
ನಮ್ಮ ಮನೆಯಲ್ಲಿ ನಾನು ಒಬ್ಬಳೇ ರಕ್ಷಣೆ ಹೊಂದಿದ್ದೇನೆ. ನಮ್ಮ ಕುಟುಂಬದವರೆಲ್ಲರೂ ರಕ್ಷಣೆಯ ಮಾರ್ಗದಲ್ಲಿ ಬರಬೇಕು ಎಂದು ದಿನಾಲು ಅವರೆಲ್ಲರಿಗೋಸ್ಕರ ಪ್ರೇಯರ್ ಮಾಡುತ್ತೇನೆ.
Thank you pastor 🙏
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory to God 🔥🔥🔥
ReplyDeleteGLORY to god 👏👏👏🔥🔥🔥
ReplyDeleteGlory glory to Jesus 🙏🏻🙏🏻👏🏻👏🏻
ReplyDeleteGlory to GOD!!🔥🔥🔥
ReplyDeleteGlory to god 🔥🔥
ReplyDelete