2026 ರ ಮೇ ತಿಂಗಳ ಪ್ರವಾದನೆಯ ವಾಗ್ದಾನ
2026 ರ ಮೇ ತಿಂಗಳ ಪ್ರವಾದನೆಯ ವಾಗ್ದಾನ
ಈ ತಿಂಗಳು ಅದ್ಭುತದ ತಿಂಗಳು
Month of WONDERS
ಇದನ್ನು ಓದುತ್ತಿರುವ ಸಹೋದರ ಸಹೋದರಿಯರನ್ನು ಯೇಸುವಿನ ನಾಮದಲ್ಲಿ ಆಶೀರ್ವದಿಸುತ್ತೇನೆ.
ಈ ಸಂದೇಶವನ್ನು ನಾನು ಅರ್ಥಮಾಡಿಕೊಳ್ಳಬೇಕು ಎಂದು ಅರ್ಥ ಅಲ್ಲ. ಯಾವ ಮಾತು ನಿಮ್ಮನ್ನು ಮುಟ್ಟುತ್ತದೋ ಅದನ್ನು ಹಾಗೆ ಸ್ವೀಕರಿಸಿಕೊಳ್ಳಿ , ಒಂದು ಗಂಟೆಯ ಒಂದು ಮೆಸೇಜ್ ನಲ್ಲಿ ಒಂದು ಮಾತು, "ನೀನು ಇನ್ನೊಂದು ದಿನ ಇರುವ ಹಾಗೆ ಇರುವುದಿಲ್ಲ" ಎನ್ನುವ ಒಂದು ಮಾತು ನಿಮ್ಮನ್ನು ಮುಟ್ಟಿಬಿಟ್ಟರೆ ಸಾಕು. ಒಂದು ತಿಂಗಳೆಲ್ಲ ಆ ಮಾತು ನಿಮ್ಮನ್ನು ನಡೆಸುತ್ತದೆ. ಇವತ್ತು ಈ ಸತ್ಯ ಮಾಹಿತಿಯಾಗಿರುವುದಿಲ್ಲ, ಅದು ಅಭಿಷೇಕ ಮಾಡಲ್ಪಟ್ಟು ಆತ್ಮವೂ ಜೀವವೂ ಆಗಿ ಇರುವುದು ಎಂದು ಯೇಸುವಿನ ನಾಮದಲ್ಲಿ ಘೋಷಿಸುತ್ತೇನೆ.
ಈ ತಿಂಗಳು ದೇವರು ಕೊಡುತ್ತಿರುವ ವಾಗ್ದಾನದ ವಾಕ್ಯ
ಮೀಕ 7:15
ನೀನು ಐಗುಪ್ತದೇಶದೊಳಗಿಂದ ಪಾರಾಗಿ ಬಂದ ಕಾಲದಲ್ಲಿ
ನಾನು ತೋರಿಸಿದಂತೆ ಅದ್ಭುತಗಳನ್ನು ತೋರಿಸುವೆನು.
ಇಂಥ ಸತ್ಯದಲ್ಲಿ ನಡೆಯುವವರಿಗೆ ಅದ್ಭುತ ಅಂದರೆ ಶರೀರದಲ್ಲಿ ನೋಡಿದ ಮೇಲೆ ಅಲ್ಲ, ಆತ್ಮದಲ್ಲಿ ದೇವರ ವಾಕ್ಯ ಬಂದ ಕೂಡಲೇ ಅನುಭವಿಸುವ ಕುತೂಹಲ ಆನಂದವೇ ಅದ್ಭುತ .
ಅದ್ಭುತ ಅಂದರೆ ಮನುಷ್ಯನ ಜ್ಞಾನದಿಂದ ವಿವರಿಸುವ ಕಾರ್ಯ ಅಲ್ಲ, ಇದನ್ನು ಹೀಗೆ ಮಾಡಿದೆ ಈ ರೀತಿಯಾಗಿ ನಡೆಯಿತು ಎಂದು ವಿವರಿಸುವ ಕಾರ್ಯ ಅಲ್ಲ. ಮನುಷ್ಯನ ಬಲದಿಂದ ಮಾಡುವಂಥ ಕಾರ್ಯ ಅಲ್ಲ, ಒಂದೇ ರೀತಿಯಲ್ಲಿ ಪದೇ ಪದೇ ನಡೆಯುವ ಕಾರ್ಯ ಅಲ್ಲ.
ಇಂಥ ಅದ್ಭುತವನ್ನು ದೇವರು ಯಾಕೆ ಮಾಡುತ್ತಾರೆ ?
ಅವರು ಎಷ್ಟು ದೊಡ್ಡವರು, ಎಷ್ಟು ಬಲ ಉಳ್ಳವರು, ಅವರಿಗೆಷ್ಟು ಶಕ್ತಿ ಇದೆ, ಸಾಮರ್ಥ್ಯವಿದೆ ಎನ್ನುವುದನ್ನು ತೋರಿಸುವುದಕ್ಕೆ ಅದ್ಭುತ ಅಲ್ಲ, ನಿನ್ನಿಂದ ಅಸಾಧ್ಯವಾಗಿರುವ ಕಾರ್ಯವನ್ನು ಸಾಧ್ಯಪಡಿಸುವುದಕ್ಕೆ ಅದ್ಭುತ. ನನ್ನನ್ನು ಬಿಟ್ಟು ಬೇರೆ ಒಂದು ನಿನಗೆ ಇರಲಿಕ್ಕೆ ಸಾಧ್ಯವೇ ಇಲ್ಲ ಎನ್ನುವುದೇ ಅದ್ಭುತ. ಇವತ್ತು ಇರುವುದರಲ್ಲಿಯೇ ದೊಡ್ಡ ಅದ್ಭುತ ಏನೆಂದರೆ ನಿಮ್ಮ ಶರೀರದಲ್ಲಿ ಉಸಿರು ಅವರಾಗಿ ಇರುವುದೇ ದೊಡ್ಡ ಅದ್ಭುತ. ಆತನ ಉಸಿರು ನಿಮ್ಮಲ್ಲಿ ಇರದಿದ್ದರೆ ಜೀವಂತವಾಗಿರಲು ಸಾಧ್ಯವೇ ಇಲ್ಲ.
ಈ ಅದ್ಭುತವನ್ನು ಒಂದು ಬೈಬಲ್ ಘಟನೆಯ ಆಧಾರದ ಮೇಲೆ ನೋಡಿಕೊಳ್ಳೋಣ.
ವಿಮೋಚನಕಾಂಡ 14:13-14
ಆದರೆ ಮೋಶೆ ಆ ಜನರಿಗೆ – ನೀವು ಅಂಜಬೇಡಿರಿ; ಸುಮ್ಮನೆ ನಿಂತುಕೊಂಡಿದ್ದು ಯೆಹೋವನು ಈ ಹೊತ್ತು ನಿಮ್ಮನ್ನು ರಕ್ಷಿಸುವ ರೀತಿಯನ್ನು ನೋಡಿರಿ. ನೀವು ಈ ಹೊತ್ತು ನೋಡುವ ಐಗುಪ್ತ್ಯರನ್ನು ಇನ್ನು ಮುಂದೆ ಎಂದಿಗೂ ನೋಡುವದಿಲ್ಲ. ಯೆಹೋವನೇ ನಿಮಗಾಗಿ ಯುದ್ಧಮಾಡುವನು; ನೀವಂತು ಸುಮ್ಮನೇ ಇರ್ರಿ ಎಂದು ಹೇಳಿದನು.
ಈ ಘಟನೆ ನಿಮಗೆಲ್ಲರಿಗೂ ಗೊತ್ತು. ಇಸ್ರೇಲ್ ಜನರು ಐಗುಪ್ತದಲ್ಲಿ ಒಂದು ಗುಲಾಮನ ಹಾಗೆ ಇದ್ದರು. ದೇವರು ಮೋಶೆಯ ಮೂಲಕ ಅವರನ್ನು ಬಿಡಿಸುವುದಕ್ಕೆ ಹೋಗಿ, ಒಂದಷ್ಟು ಕಾರ್ಯಗಳನ್ನು ವಿವರಿಸಿ, ತಿಳಿಸಿ, ಫರೋಹ ರಾಜನ ಹತ್ತಿರ ಮಾತನಾಡಿ ಕೊನೆಯದಾಗಿ ಒಪ್ಪಿಗೆಯನ್ನು ತೆಗೆದುಕೊಂಡು ಹೊರಗಡೆ ಬಂದರು. ಈಗ ಮುಂದೆ ಕೆಂಪು ಸಮುದ್ರ ಇದೆ, ಮುಂದೆ ಹೋಗಲು ದಾರಿ ಇಲ್ಲ, ಹಿಂದೆ ತಿರುಗಿದರೆ ಒಂದು ಸೈನ್ಯವೇ ಇದೆ. ಮುಂದೆಯೂ ಹೋಗಲು ಆಗುವುದಿಲ್ಲ, ಹಿಂದೆಯೂ ಹೋಗಲು ಆಗುವುದಿಲ್ಲ, ಎಡಗಡೆಯೂ ದಾರಿ ಇಲ್ಲ, ಬಲಗಡೆಯೂ ದಾರಿ ಇಲ್ಲ, ಅವರಿಗಿದ್ದ ಒಂದೇ ದಾರಿ ಮೇಲೆ ನೋಡುವುದು. ಅದ್ಭುತ ಅಂದರೆ ಏನು ಎಂದು ವಿವರಿಸುವುದಕ್ಕೋಸ್ಕರ ಈ ಘಟನೆಯನ್ನು ಧ್ಯಾನಿಸೋಣ.
ವಾಕ್ಯ ಹೇಳುತ್ತದೆ ಮನುಷ್ಯನ ಬಲದಿಂದ ಈ ಸಮಸ್ಯೆಯಿಂದ ಹೊರಗೆ ಬರುವುದಕ್ಕೆ ಸಾಧ್ಯವಿಲ್ಲ, ಮನುಷ್ಯನ ಆಲೋಚನೆ, ಯೋಜನೆಯಿಂದ ಬಿಡುಗಡೆ ಮಾಡುವುದಕ್ಕೆ ದಾರಿ ಇಲ್ಲ, ಏನೇ ಯೋಜನೆ ಇರಲಿ, ಉಪಾಯ ಇರಲಿ, ಶರೀರದ ಬಲವಾಗಲಿ ಅವರನ್ನು ರಕ್ಷಿಸುವುದಕ್ಕೆ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿಯಲ್ಲಿಯೇ ದೇವರು ಒಂದು ಮಾತನ್ನು ಹೇಳುತ್ತಿದ್ದಾರೆ.
ವಿಮೋಚನಕಾಂಡ 14:13-14
ಆದರೆ ಮೋಶೆ ಆ ಜನರಿಗೆ – ನೀವು ಅಂಜಬೇಡಿರಿ; ಸುಮ್ಮನೆ ನಿಂತುಕೊಂಡಿದ್ದು ಯೆಹೋವನು ಈ ಹೊತ್ತು ನಿಮ್ಮನ್ನು ರಕ್ಷಿಸುವ ರೀತಿಯನ್ನು ನೋಡಿರಿ. ನೀವು ಈ ಹೊತ್ತು ನೋಡುವ ಐಗುಪ್ತ್ಯರನ್ನು ಇನ್ನು ಮುಂದೆ ಎಂದಿಗೂ ನೋಡುವದಿಲ್ಲ. ಯೆಹೋವನೇ ನಿಮಗಾಗಿ ಯುದ್ಧಮಾಡುವನು; ನೀವಂತು ಸುಮ್ಮನೇ ಇರ್ರಿ ಎಂದು ಹೇಳಿದನು.
ಇದು ಎಂಥಾ ಸಮಸ್ಯೆ ಎಂದರೆ ಮರಣ ಹೊಂದಬೇಕು, ಇಲ್ಲವಾದರೆ ಫರೋಹನು ಹಿಡಿದುಕೊಂಡು ಹೋಗಿ, ಮತ್ತೆ ಗುಲಾಮಗಿರಿಯಲ್ಲಿ ಜೀವಿಸಬೇಕು.
ಅದ್ಭುತ ಎನ್ನುವುದಕ್ಕೆ ಇನ್ನೊಂದು ಅರ್ಥ ಏನೆಂದರೆ,- ನೀವು ಮುಂದೆಯೂ ಹೋಗುವುದಕ್ಕೆ ಆಗುವುದಿಲ್ಲ, ಹಿಂದೆಯೂ ಹೋಗುವುದಕ್ಕೆ ಆಗುವುದಿಲ್ಲ, ಬಲಗಡೆಯೂ ದಾರಿ ಇಲ್ಲ, ಎಡಗಡೆಯೂ ದಾರಿ ಇಲ್ಲದೇ ಇರುವ ಪರಿಸ್ಥಿತಿಯಲ್ಲಿ, ಏನು ಮಾಡಬೇಕೆಂದು ತೋಚದೆ ಇರುವ ಸ್ಥಿತಿಯಲ್ಲಿ, ದೇವರು ಸಮಸ್ಯೆಯ ಮದ್ಯದಲ್ಲಿಯೇ ದೇವರ ಮಹಿಮೆಯನ್ನು ಪ್ರಕಟಿಸುವಾತನಾಗಿದ್ದಾನೆ. ಇದೇ ದೇವರ ಅದ್ಭುತ.
ಶರೀರದ ಜ್ಞಾನಕ್ಕೆ ತಿಳಿಯದೇ ಇರುವ ಪರಿಸ್ಥಿತಿಯಲ್ಲಿ, ನಿನ್ನ ಬಲ ಸಾಕಾಗುತ್ತಿಲ್ಲ, ನಿನ್ನ ಜ್ಞಾನ ಸಾಕಾಗುತ್ತಿಲ್ಲ, ನಿನ್ನ ಸಾಮರ್ಥ್ಯ ಸಾಲುತ್ತಿಲ್ಲ ಎನ್ನುವಾಗ ನಾನು ಇದ್ದೀನಿ ಎಂದು ವ್ಯಕ್ತಪಡಿಸುವುದೇ ಅದ್ಭುತ.
ದೇವರ ಪ್ರಸನ್ನತೆ, ದೇವರ ಮಹಿಮೆ, ದೇವರ ವಾಕ್ಯ ನಮ್ಮನ್ನು ಬಿಡುಗಡೆ ಮಾಡುತ್ತಿದೆ. ಅದ್ಭುತ ಎನ್ನುವುದು ನಿನ್ನಿಂದ ಅಸಾಧ್ಯವಾಗಿರುವ ಪರಿಸ್ಥಿತಿಯಲ್ಲಿ ಅದೇ ಸ್ಥಳದಲ್ಲಿ ತನ್ನ ಮಹಿಮೆಯನ್ನು ಪ್ರಕಟಿಸುವುದೇ ಅದ್ಭುತ.
ಈ ಸತ್ಯವನ್ನು ಕೇಳಿದ ಮೇಲೆ ನಿಮ್ಮಲ್ಲಿ ಇನ್ನೊಂದು ದಿನ ಭಯ ಇರುವುದಿಲ್ಲ ಎಂದು ಘೋಷಿಸುತ್ತೇನೆ. ಭಯವನ್ನು ಉಂಟು ಮಾಡುವ ಯಾವ ಪರಿಸ್ಥಿತಿಯಾಗಲಿ ನಿರ್ಮೂಲವಾಗಿದೆ ಎಂದು ಹೆಸರಿನ ನಾಮದಲ್ಲಿ ಘೋಷಿಸುತ್ತೇನೆ.
ಸಮಸ್ಯೆ ಬರುತ್ತಿದೆ ಅಂದರೆ ಸಮಸ್ಯೆಯಿಂದ ತಪ್ಪಿಸಿಕೊಳ್ಳುವಂತೆ ಮಾಡುವುದಿಲ್ಲ, ಸಮಸ್ಯೆಯನ್ನು ಒಂದು ಬದಿಗೆ ತಳ್ಳುವುದಿಲ್ಲ, ಸಮಸ್ಯೆಯನ್ನು ಮುಚ್ಚಿ ಹಾಕುವುದಿಲ್ಲ, ಸಮಸ್ಯೆಯನ್ನು ಒಡೆದು ಅದನ್ನು ಭಾಗವಾಗಿ ಮಾಡಿ ಆ ಸಮಸ್ಯೆಯ, ಮಧ್ಯದಲ್ಲಿ ದೇವರ ಪ್ರಸನ್ನತೆ, ದೇವರ ಮಹಿಮೆ, ದೇವರ ಜೀವ, ದೇವರ ಬಲ, ಮತ್ತು ದೇವರ ಸಾಮರ್ಥ್ಯ ಎಂದೆಂದಿಗೂ ಪ್ರತಿಯೊಬ್ಬರೂ ಅನುಭವಿಸುವಿರಿ ಎಂದು ಘೋಷಿಸುತ್ತೇನೆ.
ಇವತ್ತಿನ ಅದ್ಭುತದ ವ್ಯಾಖ್ಯಾನ ಏನೆಂದರೆ ಸಮಸ್ಯೆಯಿಂದ ತಪ್ಪಿಸಿಕೊಳ್ಳುವುದಲ್ಲ, ಸಮಸ್ಯೆಯನ್ನು ಒಡೆದು ಸಮಸ್ಯೆಯ ಮಧ್ಯದಲ್ಲಿಯೇ ಜಯವಾಗಿ, ಆಶೀರ್ವಾದವಾಗಿ, ಪರಿಪೂರ್ಣವಾಗಿ, ಮತ್ತು ತೃಪ್ತಿಯಾಗಿ ನೀವು ಅನುಭವಿಸುವ ಜೀವವೇ ಅದ್ಭುತ.
ವಿಮೋಚನಕಾಂಡ 14:8
ಯೆಹೋವನು ಐಗುಪ್ತದೇಶದ ಅರಸನಾದ ಫರೋಹನ ಹೃದಯವನ್ನು ಕಠಿಣಪಡಿಸಿದ್ದದರಿಂದ ಅವನು ಇಸ್ರಾಯೇಲ್ಯರನ್ನು ಬೆನ್ನಟ್ಟಿಹೋದನು. ಇಸ್ರಾಯೇಲ್ಯರು ಅಟ್ಟಹಾಸದಿಂದ ಹೊರಟರು.
ಇಲ್ಲಿ ಒಂದು ಪದ ಇದೆ, ದೇವರು ಫರೋಹನ ಹೃದಯವನ್ನು ಕಠಿಣ ಪಡಿಸಿದನು.
ಸತ್ಯವೇದದಲ್ಲಿ ಎಲ್ಲೆಲ್ಲಿ ದೇವರ ಬಗ್ಗೆ ಕೆಟ್ಟದಾಗಿ ಚಿತ್ರಣವಿದೆಯೋ ಕಠಿಣಪಡಿಸಿದರು, ಸಾಯಿಸಿದರು ಹಾವುಗಳನ್ನು ಬಿಟ್ಟು ಸಾಯಿಸಿದರು , ರೋಗಗಳನ್ನು ಕಳುಹಿಸಿ ಸಾಯಿಸಿದರು, ಈ ರೀತಿ ಮಾತು ಬರುವಾಗ ನಾವು ಅದನ್ನು ಆತ್ಮದಿಂದ ತಿಳಿದುಕೊಳ್ಳಬೇಕು.
ಇದರ ಅರ್ಥ ಫರೋಹನು ತುಂಬಾ ಒಳ್ಳೆಯವನು, ಒಳ್ಳೆಯ ಹೃದಯ ಉಳ್ಳವನು, ಅಂಥ ಒಳ್ಳೆ ಮನುಷ್ಯನನ್ನು ದೇವರು ಕೆಟ್ಟವನಾಗಿ ಮಾಡಿದರು ಆ ರೀತಿಯಾದ ಅರ್ಥ ಅಲ್ಲ.
ವಿಮೋಚನಕಾಂಡ 8:15
ಆದರೆ ಫರೋಹನು ಉಪಶಮನವಾಯಿತೆಂದು ತಿಳಿದಾಗ ತನ್ನ ಹೃದಯವನ್ನು ಮೊಂಡುಮಾಡಿಕೊಂಡನು. ಯೆಹೋವನು ಹೇಳಿದ್ದಂತೆಯೇ ಅವನು ಅವರ ಮಾತನ್ನು ಕೇಳದೆ ಹೋದನು.
ಹೃದಯ ಯಾವಾಗ ಕಠಿಣ ಆಗುತ್ತೆ ?
ಯಾವ ಹೃದಯದಲ್ಲಿ ದೇವರು ವಾಸ ಮಾಡುತ್ತಿಲ್ಲವೋ, ಯಾವ ಹೃದಯ ದೇವರನ್ನು ಒಪ್ಪಿಕೊಳ್ಳುತ್ತಿಲ್ಲವೋ, ಯಾವ ಹೃದಯ ದೇವರ ವಾಕ್ಯವನ್ನು ಸ್ವೀಕಾರ ಮಾಡಿಕೊಳ್ಳುತ್ತಿಲ್ಲವೋ, ಯಾವಾಗ ದೇವರ ವಾಕ್ಯವನ್ನು ನಿರ್ಲಕ್ಷಿಸುತ್ತೇವೋ , ಆವಾಗ ಹೃದಯ ಕಠಿಣ ಆಗುತ್ತದೆ.
ಈಗಾಗಲೇ ಅವನು ದೇವರ ವಾಕ್ಯವನ್ನು ತಿರಸ್ಕರಿಸುವವನಾಗಿದ್ದನು. ದೇವರ ವಾಕ್ಯವನ್ನು ಒಪ್ಪಿಕೊಳ್ಳದೆ, ಅದರಂತೆ ನಡೆಯದೆ, ಅವನ ಹೃದಯವನ್ನು ಕಠಿಣ ಮಾಡಿಕೊಂಡಿದ್ದನು ಎಂದು ವಾಕ್ಯ ಇದೆ. ಅವನ ಹೃದಯ ಕಠಿಣವಾಗಿದ್ದುದರಿಂದ ದೇವರ ಮಹಿಮೆಯನ್ನು, ದೇವರ ಅದ್ಭುತವನ್ನು ವ್ಯಕ್ತಪಡಿಸುವುದಕ್ಕೆ ಉಪಯೋಗಿಸಿಕೊಂಡರು ಎಂದು ಅರ್ಥ. ಎಲ್ಲೆಲ್ಲಾ ದೇವರ ಬಗ್ಗೆ ಕೆಟ್ಟದಾಗಿ ವಿವರಣೆ ಇದೆಯೋ, ಅದೆಲ್ಲ ಕೆಟ್ಟದ್ದನ್ನು ಮಾಡುವುದಕ್ಕೆ ಅಲ್ಲ, ಅದೇ ಕೆಟ್ಟದ್ದರಲ್ಲಿ ದೇವರ ಮಹಿಮೆಯನ್ನು ವ್ಯಕ್ತಪಡಿಸುವುದಕ್ಕಾಗಿ. ದೇವರು ನಿಮಗೆ ತೊಂದರೆಗಳನ್ನು ತರುವವರಲ್ಲ, ಸೈತಾನ ತಂದಿರುವ ತೊಂದರೆಗಳಲ್ಲಿ ತನ್ನ ಮಹಿಮೆಯನ್ನು ವ್ಯಕ್ತಪಡಿಸುವುದು ಅವರ ಸ್ವಭಾವವಾಗಿದೆ.
ಈಗ ಕೆಂಪು ಸಮುದ್ರ ಮುಂದೆ ಇದೆ.
ಮೊದಲನೆಯದಾಗಿ ಸುತ್ತಿಕೊಂಡು ಹೋಗಲು ಏನಾದರೂ ಒಂದು ವ್ಯವಸ್ಥೆ ಮಾಡಬಹುದು,
ಎರಡನೆಯದಾಗಿ ಅಲೋಕಿಕವಾಗಿ ಒಂದು ಹಡಗನ್ನು ತಂದು ಅದರಲ್ಲಿ ತುಂಬಿಸಿ ದಾಟಿಸಬಹುದಾಗಿತ್ತು,
ಮೂರನೇದಾಗಿ ರೆಕ್ಕೆಗಳನ್ನು ಕೊಟ್ಟು ಹಾರಿ ಹೋಗಬಹುದಾಗಿತ್ತು.
ಆದರೆ ಸಮಸ್ಯೆ ಎಲ್ಲಿದೆಯೋ ಅದನ್ನು ಒಡೆದು ಎರಡು ಭಾಗವಾಗಿ ಮಾಡಿ, ಅದರ ಮಧ್ಯದಲ್ಲಿ ನಿನಗೆ ಜಯವನ್ನು ಕೊಡುತ್ತೇನೆ ಎಂದು ದೇವರು ಹೇಳುತ್ತಿದ್ದಾರೆ.
ಯಾರು ಎಂಥ ಪರಿಸ್ಥಿತಿಯಲ್ಲಿದ್ದಾರೆ, ಎಂಥ ಸಾಲದಲ್ಲಿದ್ದಾರೆ, ಎಂಥ ನೋವಿನಲ್ಲಿದ್ದಾರೆ, ಅವರನ್ನು ಸಮಸ್ಯೆಯಿಂದ ತಪ್ಪಿಸಿಕೊಳ್ಳುವಂತೆ ಮಾಡುತ್ತಿಲ್ಲ. ಸಮಸ್ಯೆಯನ್ನು ದಾಟಿ ಹೋಗುತ್ತಿಲ್ಲ, ಸಮಸ್ಯೆಯನ್ನು ನಿರ್ಮೂಲ ಮಾಡಿ, ಅದನ್ನು ಭಾಗವಾಗಿ ಮಾಡಿ, ಸಮಸ್ಯೆಯ ಮಧ್ಯದಲ್ಲಿ ನೀವು ಜಯವಾಗಿ ನಡೆಯುವಂತೆ, ದೇವರ ನಾಮ ಮಹಿಮೆ ಪಡುವಂತೆ ನಡೆಸುತ್ತಾರೆ . ಇದೇ ಅದ್ಭುತ.
ವಿಮೋಚನಕಾಂಡ 14:15-16
ಆಗ ಯೆಹೋವನು ಮೋಶೆಗೆ ಹೇಳಿದ್ದೇನಂದರೆ – ನೀನು ನನಗೆ ಮೊರೆಯಿಡುವದೇನು? ಮುಂದಕ್ಕೆ ಹೊರಡಬೇಕೆಂದು ಇಸ್ರಾಯೇಲ್ಯರಿಗೆ ಹೇಳು. ಮತ್ತು ನೀನು ನಿನ್ನ ಕೋಲನ್ನು ಎತ್ತಿ ಸಮುದ್ರದ ಮೇಲೆ ಕೈಚಾಚಿ ಅದನ್ನು ವಿಭಾಗಿಸು; ಆಗ ಇಸ್ರಾಯೇಲ್ಯರು ಸಮುದ್ರದ ಮಧ್ಯದಲ್ಲಿ ಒಣಗಿದ ನೆಲದ ಮೇಲೆ ನಡೆದುಹೋಗುವರು.
ಸುಮ್ಮನಿರು, ನಾನೇ ಯುದ್ಧವನ್ನು ಮಾಡುವೆನು, ನನ್ನ ರಕ್ಷಣೆಯನ್ನು ನೋಡು ಎಂದು ಹೇಳಿ ಇನ್ನೊಂದು ಕಡೆ ನನ್ನ ಕಡೆ ಏಕೆ ನೋಡುತ್ತಿದ್ದೀಯಾ ಎಂದು ಕೇಳಿದರೆ ಏನು ಅರ್ಥ?.
ಇದರ ಅರ್ಥ ಏನೆಂದರೆ, ದೇವರು ಮಾತಾಡುವಾಗಲೆಲ್ಲ ಶರೀರದ ಮನುಷ್ಯನಿಗೆ ಅಲ್ಲ, ಆತ್ಮದ ಮನುಷ್ಯನಿಗೆ ಮಾತಾಡುತ್ತಾರೆ. ಜನರು ಗಲಿಬಿಲಿಯಲ್ಲಿ, ಗೊಂದಲದಲ್ಲಿ, ಮರಣ ಭಯದಲ್ಲಿ ಏನು ಮಾತಾಡುತ್ತಿದ್ದಾರೆ ಎಂದು ಅವರಿಗೆ ತಿಳಿಯದೆ ಮೋಶೆ ಮುಂದೆ ಕೊರಗುತ್ತಿದ್ದಾರೆ. ಈಗ "ಸುಮ್ಮನಿರು" ಎಂದರೆ ಅದು ಒಳಗಿನ ಮನುಷ್ಯನಿಗೆ.
"ಸುಮ್ಮನಿರು" ಎಂದು ನಿಮ್ಮ ಪ್ರಾಣಕ್ಕೆ ಅಪ್ಪಣೆ ಕೊಡಬೇಕು. ನಿಮ್ಮ ಪ್ರಾಣ, ನಿಮ್ಮ ಹೃದಯ, ನಿಮ್ಮ ಮನಸ್ಸು ಮೊದಲು ಸುಮ್ಮನಿರಲಿಲ್ಲ, ಅಂದರೆ ಎಷ್ಟು ಗಲಿಬಿಲಿಯಲ್ಲಿ, ಗೊಂದಲದಲ್ಲಿ ಇರುತ್ತದೆಯೋ ನೀವು ಸರಿಯಾದ ಕಾರ್ಯಗಳನ್ನು ಮಾಡಿದರೂ ಅದು ತಪ್ಪು ತಪ್ಪಾಗಿ ನಡೆಯುತ್ತದೆ. ಇದೇ ನಿಯಮ .
ಈಗ ಯಾಕೆ ಸುಮ್ಮನೆ ಇದ್ದೀಯಾ, ನಿನ್ನ ಕೈಯಲ್ಲಿರುವ ಕೋಲನ್ನು ಎತ್ತು, ಕೈಯನ್ನು ಚಾಚು ಈಗ ಎರಡು ಭಾಗವಾಗಿ ವಿಭಾಗಿಸು. ನಿಮ್ಮ ಶರೀರದಲ್ಲಿ ಮಾಡುವ ಒಂದು ಕ್ರಿಯೆ ಯಾವಾಗಲೂ ಪ್ರಾಣದ ಪ್ರೇರೇಪಣೆಯಿಂದ ಏನಾಗಿದೆಯೋ ಅದರ ಕೆಲಸವಾಗಿರಬೇಕು.
ಅದ್ಭುತ ಎನ್ನುವುದು ಉಂಟಾಗುವುದು ಯಾವಾಗ ಅಂದರೆ ಸಮಸ್ಯೆಗಿಂತ "ನನ್ನ ದೇವರು ದೊಡ್ಡವರು" ಎನ್ನುವ ನಂಬಿಕೆ, ಒಂದು ನಿಶ್ಚಯ ನಿಮ್ಮೊಳಗಡೆ ಉಂಟಾಗುತ್ತೋ, ಆವಾಗ ಅದ್ಭುತ ನಡೆಯುವುದು.
ನಿನ್ನ ಕೋಲನ್ನು ಎತ್ತು { lift up }
ನಿನ್ನ ಕೈಯನ್ನು ಚಾಚು {stretch out }
ವಿಭಾಗಿಸು {devide it }
ನಂಬಿಕೆ ಇದೆ ಎಂದು ಬಾಯಿಯಿಂದ ಹೇಳುವುದು ಮಾತ್ರವಲ್ಲ, ನಂಬಿಕೆಯನ್ನು ಕ್ರಿಯೆಯಲ್ಲಿ ವ್ಯಕ್ತಪಡಿಸಬೇಕು. ಕೈಯನ್ನು ಎತ್ತುವುದು ಎಂದರೆ ನಾನು, ನನ್ನ ಪರಿಸ್ಥಿತಿ, ನನ್ನ ಸಾಮರ್ಥ್ಯ, ನನ್ನ ಬಲ, ನನ್ನ ಜ್ಞಾನ, ನನಗಿರುವುದೆಲ್ಲದಕ್ಕಿಂತ, ನನ್ನ ದೇವರನ್ನು ಮೇಲಕ್ಕೆ ಎತ್ತುತ್ತೇನೆ. ಅವರ ಅಧಿಕಾರವನ್ನು ಮೇಲಕ್ಕೆತ್ತುತ್ತಿದ್ದೇನೆ. ಅವರ ನಾಮವನ್ನು ಮೇಲೆ ಮಹಿಮೆ ಪಡಿಸುತ್ತಿದ್ದೇನೆ ಎಂದು ಅವರನ್ನು ಮೇಲೆ ಇಡುವುದು.
ನಿಮ್ಮ ಸಮಸ್ಯೆಯ ಮೇಲೆ ದೇವರು ಇರುವಾಗ ಜಯವನ್ನೇ ನೀವು ಅನುಭವಿಸುವುದು ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.
ಪ್ರತಿದಿನ ಮುಂಜಾನೆ ಎದ್ದ ಕೂಡಲೇ ನಿಮ್ಮ ಕೈಯನ್ನು ಎತ್ತಿ, "ಅಪ್ಪ ನನಗಿಂತ ನಿನ್ನನ್ನು ಮೇಲೆ ಇಟ್ಟಿದ್ದೇನೆ. ನನ್ನ ಪರಿಸ್ಥಿತಿಗಿಂತ ನಿನ್ನನ್ನು ಮೇಲೆ ಇಟ್ಟಿದ್ದೇನೆ. ನಾನು ಅನುಭವಿಸುವ ಕಾರ್ಯಗಳಿಗಿಂತ ನಿನ್ನನ್ನು ಮೇಲೆ ಇಟ್ಟಿದ್ದೇನೆ. ನನಗಿರುವ ಜವಾಬ್ದಾರಿಗಳಿಗಿಂತ ನಿನ್ನನ್ನು ಮೇಲೆ ಇಟ್ಟಿದ್ದೇನೆ. ಇವತ್ತು ನಾನು ಮಾಡುವ ಕಾರ್ಯಗಳಿಗಿಂತ ನಿನ್ನನ್ನು ಮೇಲೆ ಇಟ್ಟಿದ್ದೇನೆ" ಎಂದು ಅರಿಕೆ ಮಾಡಿ.
ಯಾವಾಗ ಅಧಿಕಾರದಿಂದ ಮೇಲೆ ಇಟ್ಟಿದ್ದೀರೋ, ಕೈ ಎತ್ತುವುದು ಏನನ್ನು ಸೂಚಿಸುತ್ತದೆ ಅಂದರೆ ನಿಮ್ಮ ಸ್ಥಾನ ಉನ್ನತದಲ್ಲಿ, ನಿಮ್ಮ ಗುರುತು ಕ್ರಿಸ್ತನಲ್ಲಿ, ನಿಮ್ಮ ಅಧಿಕಾರ ಯೇಸುವಿನ ನಾಮದಲ್ಲಿ.
ಕೈ ಚಾಚು ಎನ್ನುವುದರ ಅರ್ಥ ಏನೆಂದರೆ ನಿಮ್ಮ ನಂಬಿಕೆಯನ್ನು ಕ್ರಿಯೆಯಲ್ಲಿ ತೋರಿಸುವುದು. ಕೈ ಚಾಚು ಎಂದು ಹೇಳುವಾಗ ಕನ್ನಡಿಯ ಮುಂದೆ ನಿಂತುಕೊಂಡು ಯಾವ ಪರಿಸ್ಥಿತಿ ನಿಮ್ಮನ್ನು ಕಾಡುತ್ತಾ ಇದೆಯೋ , ಯಾವುದು ಅಸಾಧಾರಣವಾಗಿ ಕಾಣುತ್ತಿದೆಯೋ , ಈಗ ಕೈ ಚಾಚು ಎಂದು ಹೇಳುವಾಗ ನಿಮ್ಮ ಅಧಿಕಾರವನ್ನು, ನಿಮ್ಮ ಗುರುತನ್ನು ನೀವು ಯಾರನ್ನು ಘನಪಡಿಸುತ್ತಿದ್ದೀರೋ ಅವರ ನಾಮದಲ್ಲಿ ನೀವು ನಂಬಿಕೆಯಿಂದ ಕೈ ಚಾಚುವಾಗ ಯಾವ ಸಮಸ್ಯೆ ಇದೆಯೋ ಆ ಸಮಸ್ಯೆ ಎರಡಾಗಿ ಒಡೆದು ಹೋಗಿ ಅದರ ಜಯವನ್ನು ನೀವು ಅನುಭವಿಸುವವರಾಗಿದ್ದೀರಿ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತಿದ್ದೇನೆ.
ಕೈಯನ್ನು ಎತ್ತಿದ.
ಕೋಲನ್ನು ಚಾಚಿದ.
ವಿಭಾಗಿಸಿದ .
ಇದರಲ್ಲಿ ಎರಡು ಕಾರ್ಯಗಳನ್ನು ಮಾತ್ರ ನೀವು ಮಾಡುವುದು, ಮೂರನೇ ಕಾರ್ಯವನ್ನು ದೇವರು ಮಾಡುತ್ತಾರೆ, ದೇವರೇ ಅಲ್ಲಿ ಪ್ರಕಟವಾಗುತ್ತಾರೆ. ನೀವು ಅವರನ್ನು ಮೇಲೆ ಎತ್ತುವಾಗ, ಯಾವಾಗ ನಿಮ್ಮ ಗುರುತು ಆತನಲ್ಲಿ ಇದೆ ಎಂದು ಹೇಳುತ್ತಿದ್ದೀರೋ, ಯಾವಾಗ ಅಧಿಕಾರದಿಂದ, ನಂಬಿಕೆಯಿಂದ ನೀವು ಕೈ ಚಾಚುವಾಗ ಅಲ್ಲಿ ಮೂರನೆಯ ಕಾರ್ಯ ದೇವರ ಮಹಿಮೆ ಒಡೆಯದೇ ಇರುವ ಬಂಡೆಗಳು ಒಡೆದು ಹೋಗುತ್ತವೆ, ತೆರೆಯದೇ ಇರುವ ಬಾಗಿಲು ತೆರೆಯುತ್ತವೆ. ಅಸಾಧಾರಣವಾಗಿರುವುದು ಸಾಧಾರಣವಾಗಿರುತ್ತದೆ. ಯೇಸುವಿನ ನಾಮದಲ್ಲಿ ಇದನ್ನು ಅನುಭವಿಸುವವರಾಗಿದ್ದೀರಿ.
ಪ್ರವಾದನೆಯ ಘೋಷಣೆ :
ಈ ತಿಂಗಳು ಯಾವುದು ನಿಮಗೆ ಅನುಕೂಲವಾಗಿ ಇಲ್ಲವೋ, ಇದು ನಡೆಯಲಿಕ್ಕೆ ಸಾಧ್ಯ ಇಲ್ಲವೋ, ಅದು ತಲೆಕೆಳಗಾಗಿ ನಿಮಗೆ ಅನುಕೂಲವಾಗಿ, ನಿಮಗೆ ಆಶೀರ್ವಾದವಾಗಿ, ನಿಮಗೆ ಜಯವಾಗಿ ನಡೆಯುತ್ತದೆ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತಿದ್ದೇನೆ.
ಯಾವ ಸಮಸ್ಯೆಯ ನಿಮಿತ್ತವಾಗಿ, ಯಾವ ಪರಿಸ್ಥಿತಿಯ ನಿಮಿತ್ತವಾಗಿ ತಡೆಯಾಗುತ್ತಲೇ ಇತ್ತು. ಅದರ ಮಧ್ಯದಲ್ಲಿಯೇ ಈಗ ಎಲ್ಲ ತಡೆಗಳನ್ನು ಒಡೆದು, ದೇವರ ವೇಗದಲ್ಲಿ, ದೇವರ ಸಾಮರ್ಥ್ಯದಲ್ಲಿ, ದೇವರ ಗುಣಮಟ್ಟದಲ್ಲಿ ಆ ಕಾರ್ಯ ನೆರವೇರಿದೆ ಎಂದು ಡಿಕ್ಲೇರ್ ಮಾಡುತ್ತೇನೆ.
ನಷ್ಟವನ್ನು ಅನುಭವಿಸುವವರೆಲ್ಲ ಈ ತಿಂಗಳು ಅದ್ಭುತದ ಮೇಲೆ ಅದ್ಭುತವನ್ನು ಅನುಭವಿಸುವವರಾಗಿದ್ದೀರಿ. ಈ ತಿಂಗಳ ಒಂದೊಂದು ದಿನವೂ ನೀವು ಎಲ್ಲದರಲ್ಲಿಯೂ ಲಾಭವನ್ನೇ ಅನುಭವಿಸುತ್ತಿದ್ದೀರಿ. ಈ ತಿಂಗಳಲ್ಲಿ ಒಂದು ದಿನ ಕೂಡ ನಷ್ಟ ಇರುವುದಿಲ್ಲ, ನಷ್ಟಗಳೆಲ್ಲ ಲಾಭವಾಗ್ತಾ ಇದ್ದಾವೆ ಒಂದು ಡಿಕ್ಲೇರ್ ಮಾಡುತ್ತೇನೆ.
ನೀವು ಎದುರು ನೋಡದೆ ಇರುವ ಕಡೆಯಿಂದ ನಿಮಗೆ ಪೂರೈಕೆ ಬರುತ್ತದೆ, ಎದುರು ನೋಡದೆ ಇರುವ ಕಡೆಯಿಂದ ಸೌಕರ್ಯಗಳು ಬರುವವು, ಎದುರು ನೋಡದೆ ಇರುವ ಕಡೆಯಿಂದ ನಿಮಗೆ ಅನುಕೂಲವಾಗಿರುವ ಕಾರ್ಯಗಳು ನಡೆಯುವುದು ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.
ಸರಿಯಾದ ಸಮಯದಲ್ಲಿ, ಸರಿಯಾದ ಸ್ಥಳದಲ್ಲಿ, ಸರಿಯಾದ ವ್ಯಕ್ತಿಯಿಂದ ಒಂದೊಂದು ದಿನ ಸರಿಯಾದ ಕಾರ್ಯಗಳನ್ನೇ ಅನುಭವಿಸುತ್ತೀರಿ ಎಂದು ನಾನು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.
ನಿಮ್ಮ ಹತ್ತಿರ ಏನಿದೆ ಅದು ಒಂದು ಕೊರತೆಯಾಗುವುದಿಲ್ಲ, ಕಡಿಮೆಯಾಗುವುದಿಲ್ಲ, ಅದನ್ನು ರಕ್ಷಿಸಿ ಅದರಿಂದ ಹೆಚ್ಚಳವನ್ನು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.
ಇದುವರೆಗೂ ತೆರೆಯದೆ ಇರುವ ಬಾಗಿಲು ತೆರೆಯುತ್ತಿದೆ ಎಂದು ಡಿಕ್ಲೇರ್ ಮಾಡುತ್ತೇನೆ.
ಇದುವರೆಗೂ ಬರದೇ ಇರುವ ಅವಕಾಶಗಳು ಇಂದಿನಿಂದ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ಹೆಸರಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.
ನಿಮ್ಮ ಶರೀರದಲ್ಲಿ ಸೈತಾನನು ಅನಾರೋಗ್ಯವನ್ನು ತರುವ ಯೋಜನೆಯಲ್ಲಿರುವಾಗ ಅದರ ಮಧ್ಯದಲ್ಲಿ ದೇವರ ಆರೋಗ್ಯ ಬಂದು ಪರಿಪೂರ್ಣವಾದ ಸ್ವಸ್ಥತೆ, ಪರಿಪೂರ್ಣವಾದ ಆರೋಗ್ಯ, ಪರಿಪೂರ್ಣವಾದ ಬಿಡುಗಡೆಯನ್ನು ಅನುಭವಿಸುತ್ತೀರಿ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.
ಈ ತಿಂಗಳು ಅದ್ಭುತಗಳು ಯಾವ ಹಂತದಲ್ಲಿ ಇರುತ್ತವೆ ಅಂದರೆ ನೀವು ಅನುಭವಿಸುವ ಅದ್ಭುತ ನಿಮ್ಮಲ್ಲಿ ಉಕ್ಕಿ, ತುಂಬಿ, ಹರಿದು, ಬೇರೆಯವರಲ್ಲಿ ಅದ್ಭುತಗಳು ಪ್ರಕಟವಾಗುವಂತೆ ನಿಮ್ಮನ್ನು ದೇವರು ನಡೆಸುತ್ತಿದ್ದಾರೆ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.
ಅದ್ಭುತ ನಿಮಗೆ ಮಾತ್ರ ಅಲ್ಲ, ಅದ್ಭುತ ನಿಮ್ಮ ಮೂಲಕ, ನಿಮ್ಮ ಸುತ್ತಮುತ್ತ, ನಿಮ್ಮ ಮನೆಯಲ್ಲಿ, ನಿಮ್ಮ ಕೆಲಸದಲ್ಲಿ, ನಿಮ್ಮ ಬಿಸಿನೆಸ್ ನಲ್ಲಿ, ನಿಮ್ಮ ವ್ಯಾಪಾರದಲ್ಲಿ, ಎಲ್ಲವೂ ನಿಮ್ಮ ಮೂಲಕ ತುಂಬಿ ಹರಿಯುವ ಅಭಿಷೇಕದ ಮಹಿಮೆಯನ್ನು ಒಬ್ಬೊಬ್ಬರು ಅನುಭವಿಸುವಿರಿ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.
ಹಾಗಾದರೆ ಈ ತಿಂಗಳು ನಿಮ್ಮಲ್ಲಿ ಒಬ್ಬೊಬ್ಬರು ಸಾಧಾರಣವಾದ ಶಕ್ತಿಯನ್ನು ನೋಡುವುದಿಲ್ಲ ದೇವರ ಮಹಾಶಕ್ತಿಯನ್ನು, ಪರಾಕ್ರಮದ ಕಾರ್ಯಗಳನ್ನೇ ನೀವು ಈ ತಿಂಗಳ ಒಂದೊಂದು ದಿನವೂ ಅನುಭವಿಸುವಿರಿ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.
ಈ ತಿಂಗಳ ಅರಿಕೆ :
👉 ಇದು ನಿಮ್ಮ ಅದ್ಭುತಗಳ ತಿಂಗಳು (MONTH OF WONDERS)
• ಕೀಲಿಗಳಿಲ್ಲದೇ ಬಾಗಿಲುಗಳು ತೆರೆಯುವ ಕಾಲ
• ಕೇಳದೇ ಸಹಾಯ ಬರುವ ಕಾಲ
• ವಿಳಂಬದ ಬದಲು ವೇಗ ಬರುವ ಕಾಲ
• ದೇವರು ಪ್ರಕ್ರಿಯೆಯನ್ನು ಮೀರಿ ಕಾರ್ಯ ಮಾಡುವ ಕಾಲ
It is your MONTH OF WONDERS
• Where doors open without keys
• Where help comes without asking
• Where speed replaces delay
• Where God bypasses process
- ಕರ್ತನ ನಾಮದಲ್ಲಿ ನಾನು ಘೋಷಿಸುತ್ತೇನೆ,
ಅಸಾಧ್ಯವಾದ ಬಾಗಿಲುಗಳು ನನ್ನ ಮುಂದೆ ತೆರೆಯಲ್ಪಡುತ್ತಿವೆ.
ಯಾರೂ ತೆರೆಯಲಾರದ ಬಾಗಿಲುಗಳನ್ನು ದೇವರು ತನ್ನ ಬಲಿಷ್ಠ ಕೈಯಿಂದ ತೆರೆಯುತ್ತಾನೆ.
- ನಾನು ಹಠಾತ್ ತಿರುವುಗಳನ್ನು (sudden reversals) ಘೋಷಿಸುತ್ತೇನೆ—
ವಿಳಂಬವಾಗಿದ್ದದ್ದು ವೇಗವಾಗುತ್ತದೆ,
ನಷ್ಟದಂತೆ ಕಂಡದ್ದು ಸ್ಪಷ್ಟ ಜಯವಾಗುತ್ತದೆ.
- ದೈವಿಕ ರಕ್ಷಣೆಯು ನನ್ನನ್ನು ಸುತ್ತುವರೆದಿದೆ ಎಂದು ಘೋಷಿಸುತ್ತೇನೆ—
ಕಾಣುವದಾಗಲಿ ಕಾಣದದ್ದಾಗಲಿ, ತಿಳಿದದ್ದಾಗಲಿ ತಿಳಿಯದದ್ದಾಗಲಿ.
ನನ್ನ ವಿರುದ್ಧ ಹಾಕಿದ ಪ್ರತಿಯೊಂದು ಬಲೆಯೂ ವಿಫಲವಾಗುತ್ತದೆ,
ನಾನು ದೇವರ ಕವಚದಲ್ಲಿ ಸುರಕ್ಷಿತವಾಗಿ ನಡೆಯುತ್ತೇನೆ.
- ಅತೀಮಾನವೀಯ ಶಕ್ತಿ ನನ್ನೊಳಗೆ ಹರಿಯುತ್ತಿದೆ ಎಂದು ಘೋಷಿಸುತ್ತೇನೆ—
ನನ್ನ ಸ್ವಾಭಾವಿಕ ಸಾಮರ್ಥ್ಯವನ್ನು ಮೀರಿ, ನನ್ನ ಮಿತಿಗಳನ್ನು ಮೀರಿ.
- ನಾನು ದಣಿವುದಿಲ್ಲ, ನಾನು ಕುಗ್ಗುವುದಿಲ್ಲ,
ಯಾಕಂದರೆ ದೇವರ ಶಕ್ತಿ ನನ್ನನ್ನು ಹಿಡಿದುಕೊಂಡು ಮುಂದಕ್ಕೆ ನಡೆಸುತ್ತದೆ.
- ಈ ಕಾಲದಲ್ಲಿ, ದೇವರ ಮಹಾ ಕೈ ನನ್ನ ಜೀವನದ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂಬುದರಲ್ಲಿ ನಡೆಯುತ್ತೇನೆ.
ಯೇಸುವಿನ ನಾಮದಲ್ಲಿ, ಆಮೆನ್.
Prophetic Declaration
- I declare in the name of the Lord,
impossible doors are opening before me.
What no man could unlock, God is opening by His mighty hand.
- I declare sudden reversals in every situation—
what was meant for delay is turning into acceleration,
what looked like loss is becoming undeniable victory.
- I declare divine protection surrounds me—
seen and unseen, known and unknown.
Every trap set against me is overturned,
and I walk in safety by the covering of God.
- I declare supernatural strength flows through me—
beyond my natural capacity, beyond my limitations.
- I will not be weary, I will not break,
for the power of God sustains me and carries me through.
- In this season, I walk in the manifestation of
God’s great hand upon my life.
In Jesus’ name, Amen.
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
ÀMEN I received it in my spirit in the mighty name of Jesus Christ 🙏
ReplyDeleteGlory to God 🙏
ReplyDeleteAmen Amen Amen glory to god i agree and receive it in my spirit in the mighty Jesus Christ name Amen 🙏🔥💯❤️🥳
ReplyDeleteYes, ಈ ತಿಂಗಳು ಒಂದೊಂದು ದಿನವೂ ಅದ್ಭುತಗಳು ನಡೆಯುವ ತಿಂಗಳು. 🎉🎉🥳🥳🥳🔥🔥🔥
ReplyDeleteYes Amen I received it in my spirit in the mighty name of Jesus name Amen 🔥🔥🔥
ReplyDeleteAmen I received it🙏🙏🙏🔥
ReplyDelete