Testimony # 751 -- ಕೆಲಸ ಇರುತ್ತಿರಲಿಲ್ಲ...
ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏
ನನ್ನ ಹೆಸರು ಭಾಗ್ಯ.
ನಮ್ಮ ಊರು ಮೈಸೂರು.
ನನ್ನ ಗಂಡನಿಗೆ ಕೆಲಸ ಇಲ್ಲ ಎಂದು ಪಾಸ್ಟರ್ ಹತ್ತಿರ ಪ್ರೇಯರ್ ಮಾಡಿಸಿದೆ. ಅವರಿಗೆ ಒಂದು ವಾರ ಕೆಲಸ ಇದ್ದರೆ ಮತ್ತೊಂದು ವಾರ ಕೆಲಸ ಇರುತ್ತಿರಲಿಲ್ಲ, ಆದರೆ ಈಗ, 'ಒಂದು ಕೆಲಸ ಮುಗಿಯುತ್ತದೆ' ಅನ್ನುವಷ್ಟರಲ್ಲಿ ಮತ್ತೊಂದು ಕೆಲಸ ಬರುತ್ತಿದೆ.
ಫಾರಿನ್ಸ್ ಎಲ್ಲಾ, ನಮಗೆ ಇದೇ ತರಹ ಬೇಕು, ಹೀಗೆ ಮಾಡಬೇಕು, ನೀವೇ ಮಾಡಿಕೊಡಬೇಕೆಂದು ಸ್ಕೆಚ್ ಹಾಕುತ್ತಾರಂತೆ. ಸಾಲ ಮಾಡಿ ಮನೆ ಕಟ್ಟಿದ್ದೇವೆ. ಅದಕ್ಕೆ ಏನು ಮಾಡಬೇಕು ಎಂದು ಯೋಚಿಸುತ್ತಿರುವಾಗ, ದೇವರು ಸರಿಯಾದ ಸಮಯಕ್ಕೆ ಹಣ ಒದಗಿಸಿ ಕೊಡುತ್ತಿದ್ದಾರೆ. ನಮ್ಮ ಸಾಲಗಳು ತೀರುತ್ತಾ ಬರುತ್ತಿವೆ..
ನಮ್ಮ ಮನೆಯಲ್ಲಿ ನನಗೆ ನನ್ನ ಗಂಡನಿಗೆ ಪದೇ ಪದೇ ಜಗಳ, ಮುನಿಸು ಕೋಪ, ಮಾತು-ಮಾತಿಗೆ ಜಗಳ ಆಗಿ, ಒಬ್ಬರ ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ, ಆದರೆ ನಿಮ್ಮ ವಾಕ್ಯ ಕೇಳುತ್ತಿರುವಾಗಿನಿಂದ ಈಗ ನಾವು ಸುಖವಾಗಿ, ಸಂತೋಷವಾಗಿ ನೆಮ್ಮದಿಯಿಂದ ಖುಷಿಖುಷಿಯಾಗಿ ಇರುತ್ತೇವೆ.
ನನ್ನ ಮಗಳಿಗೆ ಸ್ಕೂಲ್ ನಿಂದ ಬರುವಾಗ, ತುಂಬಾ ಸುಸ್ತು ಎನ್ನುತ್ತಿದ್ದಳು. ಆಗ ಪಾಸ್ಟರ್ ಕಡೆ ಪ್ರೇಯರ್ ಮಾಡಿಸಿದೆ. ಈಗ ಅವಳಿಗೆ ಯಾವುದೇ ಸುಸ್ತು ಇಲ್ಲ, ತುಂಬಾ ಲವಲವಿಕೆಯಿಂದ ಇರುತ್ತಾಳೆ.
ದೇವರ ನಾಮಕ್ಕೆ ಮಹಿಮೆ ಉಂಟಾಗಲಿ 🙏
Thank you pastor 🙏
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory glory to Jesus 👏🏻👏🏻👏🏻🔥🔥🔥
ReplyDeleteGlory to god 🙏🙏🙏
ReplyDeleteGlory to God 🙏
ReplyDeleteGlory to god 🔥🔥🔥
ReplyDelete