Testimony # 741 -- ಮೂರು ನರಗಳು ಬ್ಲಾಕ್ ಆಗಿವೆ. ಸ್ಟಂಟ್ ಹಾಕಿಸಲೇಬೇಕು ಎಂದು...
ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻.
ನನ್ನ ಹೆಸರು ಭರಮು..
ನಮ್ಮ ಊರು ಸವದತ್ತಿ..
ನನ್ನ ಸಾಕ್ಷಿ ಏನು ಅಂದರೆ 15 ದಿನಗಳ ಹಿಂದೆ ನಮ್ಮ ತಂದೆಯವರಿಗೆ ಮೈನರ್ ಹಾರ್ಟ್ ಅಟ್ಯಾಕ್ ಆಗಿತ್ತು. ಆಗ ನಾವು ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಮಾಡಿದ್ದೀವಿ. " ಮೂರು ನರಗಳು ಬ್ಲಾಕ್ ಆಗಿವೆ , ಸ್ಟಂಟ್ ಹಾಕಿಸಲೇಬೇಕು" ಎಂದು ಡಾಕ್ಟರ್ ಹೇಳಿದರು..
ಆಗ ಏನು ಮಾಡಬೇಕು? ಎಂದು ಚಿಂತೆಯಲ್ಲಿ ಇರುವಾಗ, ಪಾಸ್ಟರ್ ಗೆ ಫೋನ್ ಮಾಡಿ ಹೇಳಿದೆ, ಅವರು ನನ್ನನ್ನು ಬಲಪಡಿಸಿ, ಪ್ರಾರ್ಥಿಸಿ, "ನಿಮ್ಮ ತಂದೆಯವರಿಗೆ ಚಾಕು ಹಾಕುವುದಿಲ್ಲ, ಏನು ಆಗುವುದಿಲ್ಲ, ಅವರು ಆರಾಮಾಗಿ ಡಿಸ್ಚಾರ್ಜ್ ಆಗುತ್ತಾರೆ" ಎಂದು ಹೇಳಿದರು.
ಮೂರು ರೀತಿಯಾಗಿ ರಕ್ತವನ್ನು ಪರೀಕ್ಷಿಸಿದ್ದರು. ನಿನ್ನೆ ಎಲ್ಲಾ ಬ್ಲಡ್ ರಿಪೋರ್ಟ್ ನಾರ್ಮಲ್ ಆಗಿ ಬಂದಿದೆ. "ಯಾವುದೇ ಸ್ಟಂಟ್ ಹಾಕುವ ಅವಶ್ಯಕತೆ ಇಲ್ಲ. ಬರೀ ಟ್ಯಾಬ್ಲೆಟ್ ಮೇಲೆ ಗುಣವಾಗುತ್ತದೆ." ಎಂದು ಹೇಳಿದರು.
ದೇವ ಮನುಷ್ಯರ ಬಾಯಿಂದ ಬರುವ ಪ್ರತಿಯೊಂದು ಮಾತು ಆತ್ಮವೂ, ಜೀವವೂ ಆಗಿರುವದರಿಂದ ಇಲ್ಲದೇ ಇರುವುದನ್ನು ಇರುವ ಹಾಗೆ ಮಾಡುವುದಕ್ಕೆ ದೇವರು ಶಕ್ತರಾಗಿದ್ದಾರೆ. ಎಂದು ಈ ಸಾಕ್ಷಿಯ ಮುಖಾಂತರ ತಿಳಿಯಿತು.
ದೇವರ ನಾಮಕ್ಕೆ ಮಹಿಮೆ ಉಂಟಾಗಲಿ.🙏🏼
ನಾನು ಕೆಲಸ ಮಾಡುವ ಶುಗರ್ ಫ್ಯಾಕ್ಟರಿಯಲ್ಲಿ ಎಲ್ಲಾ ಡಿಪಾರ್ಟ್ಮೆಂಟ್ ದವರು ಫ್ಯಾಕ್ಟರಿ ಸ್ಟಾರ್ಟ್ ಆಗುವುದಕ್ಕಿಂತ ಮುಂಚೆ ಎಲ್ಲರೂ ಪೂಜೆ, ಹೋಮ ಎಲ್ಲವನ್ನೂ ಮಾಡುತ್ತಾರೆ. ಆದರೆ ನಾನು ದೇವರ ಕೃಪೆಯಿಂದ ಏನನ್ನೂ ಮಾಡದೆ ಇದ್ದರೂ ಎಲ್ಲಾ ಸರಿಯಾಗಿ ನಡೆಯುತ್ತದೆ. ಅದಕ್ಕೆ ಅವರು,- " ನಾವು ಇಷ್ಟೆಲ್ಲಾ ಮಾಡಿದರು ನಮ್ಮ ಸೆಕ್ಷನ್ನಲ್ಲಿ ತೊಂದರೆ ಆಗುತ್ತದೆ. ಆದರೆ ಇವರು ಏನನ್ನೂ ಮಾಡುವುದಿಲ್ಲ, ಒಂದು ರೂಪಾಯಿ ಕೂಡ ಖರ್ಚು ಮಾಡದೆ ಇದ್ದರೂ ಎಲ್ಲಾ ಸರಿಯಾಗಿ ಇರುತ್ತದೆ" ಎಂದು ಹೇಳುತ್ತಾರೆ.
ನಾನು ಈ ಸತ್ಯ ತಿಳಿಯುವುದಕ್ಕಿಂತ ಮುಂಚೆ 24×7 ಮೊಬೈಲಿನಲ್ಲಿಯೇ ಇರಬೇಕಿತ್ತು, ಯಾವಾಗ ಕರೆಯುತ್ತಾರೆ, ಆವಾಗ ಹೋಗಬೇಕಿತ್ತು. ನನಗೆ ನಿದ್ರೆನೂ ಆಗುತ್ತಿರಲಿಲ್ಲ, ಆದರೆ ಈ ಸತ್ಯ ಕೇಳುವಾಗ ನನಗೆ ಯಾವುದೇ ಪ್ರಾಬ್ಲಮ್ ಇಲ್ಲ, ಈಗ ನಾನು ಆರಾಮಾಗಿ ನಿದ್ರೆ ಮಾಡಿ ಎದ್ದು ಕೆಲಸಕ್ಕೆ ಹೋಗುತ್ತೇನೆ.
ದೇವರ ನಾಮಕ್ಕೆ ಸ್ತೋತ್ರ ಉಂಟಾಗಲಿ.🙏🏼🙏🏼🙏🏼
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory to God
ReplyDeleteGlory glory to Jesus 🙏🏻👏🏻👏🏻👏🏻🔥🔥🔥
ReplyDeleteGlory to god 🥳🔥
ReplyDeleteGLORY to god 👏
ReplyDeleteGlory to God 🔥🔥🔥
ReplyDeleteAmen Amen glory to god 🔥🔥👏👏👏👏🙏
ReplyDeleteGlory to god 🙏🙏🔥
ReplyDeleteAmen Glory to God 🙏
ReplyDeleteGlory to God🙌🔥🔥🔥
ReplyDelete