Testimony # 739 -- ನೀವು ಕಳಿಸಿಕೊಟ್ಟ ಸಂದೇಶ ಎಷ್ಟು ಬಾರಿ ನೋಡಿದೆ ಅಂದರೆ...
ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻.
ನನ್ನ ಹೆಸರು ಸುಜಾತ..
ನಮ್ಮ ಊರು ಬೆಂಗಳೂರು.
Praise the lord pastor 🙏🏼
ನನ್ನ ಮಗನಿಗೆ ಜ್ವರ ಇದೆ ಅಂತ ನಿಮಗೆ ಹೇಳಿದ್ದೆ ಪಾಸ್ಟರ್.
ಮಕ್ಕಳಿಗೆ ಜ್ವರ ಬಂದರೆ ಏನು ಹುಷಾರಿಲ್ಲ,ಅಂದರೆ ನಾನು ಫಸ್ಟ್ ಅಳುವುದಕ್ಕೆ ಶುರು ಮಾಡುತ್ತಿದ್ದೆ.
ಆದರೆ ನಿನ್ನೆ ಫಸ್ಟ್ ನನ್ನ ಮೈಂಡಿಗೆ ಬಂದಿದ್ದು ನಿಮಗೆ ಹೇಳಬೇಕು ಅಂತ.
ನಿಮಗೆ ಹೇಳಿದ ನಂತರ ನೀವು ಕಳಿಸಿಕೊಟ್ಟ ವಿಡಿಯೋ ಕೇಳಿಸಿಕೊಂಡ ಮೇಲೆ ನಾನು ಅಳಲಿಲ್ಲ ತುಂಬಾ ಧೈರ್ಯವಾಗಿ ಇದ್ದೆ, ನನ್ನ ಮಗ ಹಾಸ್ಪಿಟಲ್ ಗೆ ಹೋದಮೇಲೆ ಡಾಕ್ಟರ್ ಅಡ್ಮಿಟ್ ಆಗಬೇಕು ಅಂತ ಹೇಳಿದರು. ಅದಕ್ಕೆ ನಾನು ಹೋದೆ ನನ್ನ ಮಗ ಮಲಗಿದ್ದನು. ಡಾಕ್ಟರ್ ಹತ್ತಿರ ಕೇಳಿದೆ ಏನಾಗಿದೆ ಅಂತ ಅದಕ್ಕೆ ತುಂಬಾ ಜ್ವರ ಇದೆ. ಹೀಗೆ ಇದ್ದರೆ ಅಡ್ಮಿಟ್ ಮಾಡಬೇಕು ಅಂದರು.
ಅವಾಗ ನಾನು ಮನಸ್ಸಿನಲ್ಲಿ ನಮ್ಮ ದೇವರ ಕಾರ್ಯ ಸ್ಟಾರ್ಟ್ ಆಗಿದೆ ಅಂತ ನನಗೆ ಗೊತ್ತಾಗಿತ್ತು. ನಾನು ಆತ್ಮದಲ್ಲಿ ಸಂತೋಷಪಟ್ಟು ತುಂಬಾ ಆನಂದದಿಂದ ಇಲ್ಲಿ ನನ್ನ ಮಗನ ಹೃದಯದಲ್ಲಿ ದೇವರ ಕಾರ್ಯ ನಡೆಯುತ್ತಾ ಇದೆ. ಅದಕ್ಕೆ ಡಾಕ್ಟರ್ ಗೆ ಹೇಳಿದೆ.
ನಾನು ಮನೆಯಲ್ಲಿ ನೋಡಿಕೊಳ್ಳುತ್ತೇನೆ. ಅಡ್ಮಿಟ್ ಮಾಡೋದು ಬೇಡ ಅಂತ ಮನೆಗೆ ಕರೆದುಕೊಂಡು ಬಂದೆ. ನೀವು ಕಳಿಸಿಕೊಟ್ಟ ಸಂದೇಶ ಎಷ್ಟು ಬಾರಿ ನೋಡಿದೆ ಅಂದರೆ ಅದನ್ನು ನೋಡುತ್ತಾ, ನೋಡುತ್ತಾ, ಅವನಿಗೆ ಜ್ವರ ಕಡಿಮೆ ಆಗಿದೆ ಪಾಸ್ಟರ್.
ಇದು ನನ್ನ ಆತ್ಮದಿಂದ ನನ್ನ ಸಂತೋಷದಿಂದ ಬಂದ ಮೊದಲನೇ ಸಾಕ್ಷಿ.
ಈಗ ಅವನು ನಾರ್ಮಲ್ ಆಗಿದ್ದಾನೆ, ದೇವರು ಅವನಿಗೆ ಪರಿಪೂರ್ಣವಾದ ನಿದ್ರೆಯನ್ನು ಕೂಡ ಕೊಟ್ಟಿದ್ದಾರೆ . ದೇವರು ನಿಮ್ಮ ಮುಖಾಂತರ ಗುಣಪಡಿಸಿದ್ದಾರೆ.
ದೇವರ ನಾಮಕ್ಕೆ ಸ್ತೋತ್ರ ವಾಗಲಿ.🙏🏼
Thank you pastor🙏🏼
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory to God 🙏
ReplyDeleteGlory to God 🔥🔥🔥
ReplyDeleteGlory to God
ReplyDeleteThank you Jesus 🙏 Glory Glory to God 🙏
ReplyDelete