Testimony # 733 - ಆದರೆ ಪಾಸ್ಟರ್ ನಿಮ್ಮ ವಾಕ್ಯ ಕೇಳುವಾಗ...

 

 ದೇವರ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻

ನನ್ನ ಹೆಸರು ಭಾಗ್ಯ. 

ನಮ್ಮ ಊರು ಮೈಸೂರು. 

 ಪಾಸ್ಟರ್ ನಾನು 15 ರಿಂದ 20 ದಿವಸ ಆಯಿತು.  ಪ್ರೇಯರ್ ಗೆ ಜಾಯಿನ್ ಆಗುತ್ತಾ ಇದ್ದು.  ನನಗೆ ತುಂಬಾ ಮನಸ್ಸಿನಲ್ಲಿ ನೋವು ಇರುತ್ತಿತ್ತು. ಒಂಥರಾ ಹೇಳಿಕೊಳ್ಳಲು ಆಗುತ್ತಿರಲಿಲ್ಲ. ನಾನು ದೇವರ ವಾಕ್ಯ ಕೇಳುತ್ತಿರಬೇಕಾದರೆ ತುಂಬಾ ಮನಸ್ಸಿನಲ್ಲಿ ನೋವು . ಅದೇ ಏನು ಅಂತ ಗೊತ್ತಾಗುತ್ತಿರಲಿಲ್ಲ. 

ಆದರೆ ಪಾಸ್ಟರ್ ನಿಮ್ಮ ವಾಕ್ಯ ಕೇಳುವಾಗ ನನಗೆ ಏನೋ ಒಂದು ಸಮಾಧಾನ. ದೇವರು ನನ್ನ ಜೊತೆ ಇದ್ದಾರೆ . ನನ್ನನ್ನು ನಡೆಸುತ್ತಾರೆ ಅನ್ನುವ ಸಮಾಧಾನ.

 ನಮ್ಮ ಮನೆಯಲ್ಲಿ ನಮ್ಮ ಯಜಮಾನರಿಗೆ ಕೆಲಸ ಇಲ್ಲ, ಏನು ಮಾಡಬೇಕು? ಅಂತ  ಎರಡೆರಡು ಆಲೋಚನೆಗಳು ಇದ್ದವು. ಆಗ ನಿಮ್ಮ ವಾಕ್ಯ ಕೇಳುತ್ತಾ ನನಗೆ ಬಲ ಬಂತು ಪಾಸ್ಟರ್.

 ಮತ್ತೆ ನನಗೆ  ಅಜೀರ್ಣ ಆಗಿ ಆಸ್ಪತ್ರೆಗೆ ಹೋಗಿದ್ದೆ. ತುಂಬಾ ಸುಸ್ತು ಮೈ ಕೈ ಎಲ್ಲಾ ತುಂಬಾ ನೋವು, ಎದ್ದು ಕೂತುಕೊಳ್ಳಲು  ಆಗುತ್ತಿರಲಿಲ್ಲ. ಆದರೆ ನಾನು ದೇವರ ವಾಕ್ಯ ಕೇಳಬೇಕು. ನನಗೆ ಕೂತುಕೊಳ್ಳಲು ಆಗದೆ ಇದ್ದರೂ ಮಲಗಿಕೊಂಡೆ ಕೇಳುತ್ತಿದ್ದೆ. ಆದರೂ ಕೂಡ ನಾನು ನಿಮ್ಮ ಪ್ರೇಯರ್ ಒಂದು ದಿನಾನು ಮಿಸ್ ಮಾಡಲೇ ಇಲ್ಲ.

ಪಾಸ್ಟರ್ ಪ್ರೇಯರ್ ಮಾಡುತ್ತಾ ಇದ್ದಾಗ, -- "ಅನಾರೋಗ್ಯದಲ್ಲಿ  ಇರುವರು ಬಿಡುಗಡೆ ಹೊಂದಿದ್ದೀರಾ" ಅಂತ ಡಿಕ್ಲೇರ್ ಮಾಡುತ್ತಿದ್ದರು. ಆಗ ನಾನು,-- " ಅಪ್ಪ ನನಗೆ ತುಂಬಾ ನೋವು ಆಗುತ್ತಿದೆ ಇದರಿಂದ ಬಿಡುಗಡೆ ಕೊಡು" ಅಂತ  ವಾಕ್ಯ ರಿಸಿವ್ ಮಾಡಿಕೊಂಡೆ. ಅಲ್ಲೇ ಒಂದು ಕ್ಷಣದಲ್ಲಿ ನನಗೆ ಬಿಡುಗಡೆ ಆಯಿತು.

ದೇವರ ನಾಮಕ್ಕೆ ಸ್ತೋತ್ರ ಉಂಟಾಗಲಿ🙏🏼 🙏🏼 🙏🏼.

 ದೇವರು ನನ್ನ ಹತ್ತಿರ ಇದ್ದಾರೆ. ಯಾವತ್ತೂ ನನ್ನ ಕೈ ಬಿಡುವುದಿಲ್ಲ, ಅಂತ ನನಗೆ ಬಲ ಬಂತು. 

 ನಮ್ಮ ತಾಯಿಗೂ ಕೂಡ ತುಂಬಾ ಕೈ ನೋವು ಇತ್ತು. ನಮ್ಮ ತಾಯಿಯವರಿಗೆ  ಬಸ್ಸಲ್ಲಿ ಹೋಗುವಾಗ ಬಸ್ ರಾಡು ಕೈ ಮೇಲೆ ಬಿದ್ದು ತುಂಬಾ ನೋವು ಆಗಿತ್ತು. ಕೈ ಮೇಲೆ ಎತ್ತಲಿಕ್ಕೆ ಬರುತ್ತಿರಲಿಲ್ಲ, ಆಗ ಅವರಿಗೂ ಪ್ರೇಯರಿಗೆ ಜಾಯಿನ್‌ ಆಗಿ. ಪಾಸ್ಟರ್ ಚೆನ್ನಾಗಿ ವಾಕ್ಯ ಹೇಳುತ್ತಾರೆ. ಆ ವಾಕ್ಯ ನಮ್ಮನ್ನು ಬಲಪಡಿಸುತ್ತದೆ. ನೀವು ಕೇಳಿ ಮಿಸ್ ಮಾಡ್ಬೇಡಿ ಅಂತ ಹೇಳಿದೆ. ಅವರು ಕೂಡ ಜಾಯಿನ್ ಆಗಿದ್ರು. ಆದರೆ ಅವತ್ತೇ ನನಗೆ ಹೇಗೆ ಗುಣವಾಯಿತೊ ಅವರಿಗೂ ಕೂಡ ಹಾಗೆ ಗುಣವಾಯಿತು.

ದೇವರ ನಾಮಕ್ಕೆ ಸ್ತೋತ್ರ ಉಂಟಾಗಲಿ.🙏🏼 🙏🏼 🙏🏼.


ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR THE LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY


 

Comments

  1. Glory glory to Jesus 🙏🏻👏🏻👏🏻

    ReplyDelete
  2. Yes! ದೇವರು ಪರಿಸ್ಥಿತಿಗಳನ್ನು ಆತನ ಸ್ಟ್ಯಾಂಡರ್ನ ಮೇರೆಗೆ ಬದಲಾಸುವಾತನಾಗಿದ್ದನೆ! ದೇವರ ನಮಕ್ಕೆ ಮಹಿಮೆ!!ಆಮೆನ್!!

    ReplyDelete

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)