Testimony # 729 - ನಮ್ಮ ಹೊಲದಲ್ಲಿ ಬೋರ್ ವೆಲ್ ಹೊಡೆಸುವ ಸಲುವಾಗಿ...
ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ಉಂಟಾಗಲಿ. 🙏🏻🙏🏻🙏🏻
ನನ್ನ ಹೆಸರು ಜ್ಯೋತಿ.
ನಮ್ಮ ಊರು ಬಾಗಲಕೋಟ
ನಾವು ನಮ್ಮ ಹೊಲದಲ್ಲಿ ಬೋರ್ ವೆಲ್ ಹೊಡೆಸುವ ಸಲುವಾಗಿ ಪಾಸ್ಟರ್ ಗೆ ಪ್ರೇಯರ್ ಮಾಡಲು ಹೇಳಿದ್ದೆವು, ಅವರು ವಾಟ್ಸಪ್ ನಲ್ಲಿ ವಾಯ್ಸ್ ಮೆಸೇಜ್ ಕಳಿಸಿದ್ದರು, ಮೊಬೈಲ್ ತೆಗೆದುಕೊಂಡು ನಮ್ಮ ಹೊಲವೆಲ್ಲ ಸುತ್ತು ಹೊಡೆದಿದ್ದೆ. ಪ್ರೇಯರ್ ಮಾಡಿದ ನೀರನ್ನು ಹೊಲದಲ್ಲಿ ಎಲ್ಲಾ ಕಡೆ ಚಿಮುಕಿಸಿದ್ದೆ. "ಇದು ನೀರಲ್ಲ, ನಿನ್ನ ರಕ್ತ ಯೇಸಪ್ಪ" ಎಂದು ಎಲ್ಲಾ ಕಡೆ ಸುರಿದಿದ್ದೆ. ನಂತರ ನಾವು ಬೋರ್ ಹಾಕಿಸಿದಾಗ ನೀರು ಹೊಳೆ ಹರಿದ ಹಾಗೆ ಹರಿಯಿತು. ಎರಡು ಜಾಗದಲ್ಲಿ ಎರಡು ಬೋರ್ ವೆಲ್ ಹಾಕಿಸಿದ್ದೆವು. ಎರಡರಲ್ಲಿಯೂ ನೀರು ಬಿದ್ದಿದೆ.
ನಮ್ಮ ಜೀವಿತದಲ್ಲಿ ದೇವರು ಬಹಳ ಅದ್ಭುತವನ್ನು ಮಾಡುತ್ತಿದ್ದಾರೆ.
ದೇವರಿಗೆ ಕೋಟಿ ಕೋಟಿ ಸ್ತೋತ್ರ .
ಇನ್ನೊಂದು ಸಾಕ್ಷಿ ಏನೆಂದರೆ - ನನ್ನ ಮಗಳ ಕುಟುಂಬದಲ್ಲಿ ಗಂಡ ಹೆಂಡತಿಯ ಮಧ್ಯದಲ್ಲಿ ಹೊಂದಾಣಿಕೆ ಇರಲಿಲ್ಲ. "ದೇವರೇ ನಿನ್ನ ಪ್ರೀತಿಯಿಂದ ನನ್ನ ಅಳಿಯನನ್ನು ತುಂಬಿಸು ಅಪ್ಪ" ಎಂದು ಪ್ರಾರ್ಥಿಸಿದೆ. ಈಗ ಅವರಿಬ್ಬರೂ ಆರಾಮವಾಗಿ ಚೆನ್ನಾಗಿ ಇದ್ದಾರೆ. ಈ ರೀತಿಯಲ್ಲಿ ದೇವರು ತುಂಬಾ ಸಹಾಯ ಮಾಡುತ್ತಿದ್ದಾರೆ.
ನಾವು ಯಾವಾಗ ದೇವರಲ್ಲಿ ಬಂದೆವು ಅವಾಗಿನಿಂದಲೂ ದೇವರು ತುಂಬಾ ಚೆನ್ನಾಗಿ ನಮ್ಮನ್ನು ಮತ್ತು ನಮ್ಮ ಜೀವಿತವನ್ನು ನಡೆಸುತ್ತಿದ್ದಾರೆ.
ನನಗೆ ಮೊನ್ನೆ ದಿನ ಎದೆ ನೋವು ಬಂದಿದ್ದರಿಂದ ದವಾಖಾನೆಗೆ ಹೋಗಿದ್ದೆ, ಅಲ್ಲಿ ಡಾಕ್ಟರ್ ನೀನು ಆರಾಮಾಗಿ ಇದ್ದೀಯ, ನಿನಗೇನು ಆಗಿಲ್ಲ ಆರಾಮ ಆಗುತ್ತೆ ಎಂದು ಹೇಳಿ, ಇಂಜೆಕ್ಷನ್ ಮಾಡದೇ, ಮಾತ್ರೆಯನ್ನು ಮಾತ್ರ ಕೊಟ್ಟು, ಕಳುಹಿಸಿದರು.
ದೇವರು ನಮ್ಮನ್ನು ಎಲ್ಲದರಲ್ಲಿಯೂ ಅದ್ಭುತವಾಗಿ ನಡೆಸುತ್ತಿದ್ದಾರೆ.
ಪ್ರತಿದಿನ ನಿಮ್ಮ ವಾಕ್ಯಗಳನ್ನು ಕೇಳುತ್ತೇವೆ. ನೀವು ಹೇಳುವ ಎಲ್ಲಾ ವಾಕ್ಯಗಳು ನಮ್ಮಲ್ಲಿ ಕಾರ್ಯ ಮಾಡುತ್ತಿವೆ.
ಥ್ಯಾಂಕ್ಯೂ ಪಾಸ್ಟರ್. 🙏🏻🙏🏻🙏🏻.
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory glory to Jesus only 🙏🏻
ReplyDeleteAmen Amen glory to god god spirit move mightily
Delete👏🏻👏🏻👏🏻👏🏻🔥🔥🔥
ReplyDeleteThis comment has been removed by the author.
ReplyDeleteGLORY to god 🔥🔥🔥👏👏👏
ReplyDeleteGlory Glory to God 🙏 Thank you JESUS 🙏
ReplyDeleteGlory to God 🔥🔥🔥
ReplyDeleteGlory to God 🙏
ReplyDelete